ಹಣಕಾಸು ಸಚಿವಾಲಯ
ಸುಧಾರಿತ ಹಣಕಾಸು ನೀತಿ; ರೆಪೊ ದರದಲ್ಲಿ 115 ಬಿಪಿಎಸ್ ಕಡಿತ
ನಿಗದಿತ ವಾಣಿಜ್ಯ ಬ್ಯಾಂಕುಗಳ ಒಟ್ಟು ಅನುತ್ಪಾದಕ ಆಸ್ತಿ ಅನುಪಾತದಲ್ಲಿ ಕುಸಿತ; ಮಾರ್ಚ್ 2020 ರಲ್ಲಿದ್ದ ಶೇ. 8.21 ರಿಂದ ಸೆಪ್ಟೆಂಬರ್ 2020 ರಲ್ಲಿ ಶೇ.7.49ಕ್ಕೆ ಇಳಿಕೆ
ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಬಂಡವಾಳದ ಸುಧಾರಣೆ
Posted On:
29 JAN 2021 3:36PM by PIB Bengaluru
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2020 ರ ಮಾರ್ಚ್ನಿಂದ ವಿತ್ತೀಯ ನೀತಿಯನ್ನು ಗಮನಾರ್ಹವಾಗಿ ಸಡಿಲಿಸಲಾಯಿತು ಮತ್ತು 2020 ರಲ್ಲಿ ಅದ ಹಾಗೆಯೇ ಇತ್ತು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ 2020-21ರ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಇಂದು ಮಂಡಿಸಿದರು.
ಹಣಕಾಸು ನೀತಿ ಪ್ರಸರಣ
ಮಾರ್ಚ್ 2020 ರಿಂದ ರೆಪೊ ದರವನ್ನು 115 ಬಿಪಿಎಸ್ ಕಡಿತಗೊಳಿಸಲಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಮಾರ್ಚ್ 2020 ರಲ್ಲಿ ನಡೆದ ಮೊದಲ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ 75 ಬಿಪಿಎಸ್ ಕಡಿತ ಮತ್ತು ಮೇ 2020 ರಲ್ಲಿ ನಡೆದ ಎರಡನೇ ಸಭೆಯಲ್ಲಿ 40 ಬಿಪಿಎಸ್ ಕಡಿತಗೊಳಿಸಲಾಗಿದೆ. ಅಲ್ಲದೆ, 2020-21 ರಲ್ಲಿ ವ್ಯವಸ್ಥಿತ ಹಣದ ಹರಿವು ಹೆಚ್ಚುವರಿ ಸ್ಥಿತಿಯಲ್ಲಿದ್ದರೆ, ಆರ್ಥಿಕತೆಯಲ್ಲಿ ಹಣದ ಹರಿವು ಪರಿಸ್ಥಿತಿಯನ್ನು ನಿರ್ವಹಿಸಲು ಆರ್ಬಿಐ ವಿವಿಧ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಕ್ರಮಗಳನ್ನು ಕೈಗೊಂಡಿದೆ. ಈ ವರ್ಷ ಪಾಲಿಸಿ ರೆಪೊ ದರಗಳನ್ನು ಠೇವಣಿ ಮತ್ತು ಸಾಲ ದರಗಳಿಗೆ ರವಾನಿಸುವಲ್ಲಿ ಸುಧಾರಣೆಯಾಗಿದೆ, ಇದು ಮಾರ್ಚ್ 2020 ರಿಂದ ನವೆಂಬರ್ 2020 ರವರೆಗೆ ಕ್ರಮವಾಗಿ ಹೊಸ ರೂಪಾಯಿ ಸಾಲಗಳು ಮತ್ತು ಬಾಕಿ ಇರುವ ರೂಪಾಯಿ ಸಾಲಗಳ ಮೇಲಿನ ಸರಾಸರಿ ಸಾಲ ದರದಲ್ಲಿ 94 ಬಿಪಿಎಸ್ ಮತ್ತು 67 ಬಿಪಿಎಸ್ ಕುಸಿತವನ್ನು ಪ್ರತಿಬಿಂಬಿಸುತ್ತದೆ. ಅದೇ ಅವಧಿಯಲ್ಲಿ ಸರಾಸರಿ ದೇಶೀಯ ನಿಗದಿತ ಅವಧಿ ಠೇವಣಿ ದರ 81 ಬಿಪಿಎಸ್ ಇಳಿಕೆಯಾಗಿದೆ.
ಬ್ಯಾಂಕಿಂಗ್ ವಲಯ
ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಒಟ್ಟು ಅನುತ್ಪಾದಕ ಸ್ವತ್ತುಗಳ ಅನುಪಾತವು ಮಾರ್ಚ್ 2020 ರ ಅಂತ್ಯದ ವೇಳೆಗೆ ಇದ್ದ ಶೇ 8.21 ರಿಂದ 2020 ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 7.49 ಕ್ಕೆ ಇಳಿದಿದೆ. ಇದನ್ನು ಸಾಂಕ್ರಾಮಿಕ ಕಾರಣದಿಂದ ಸಾಲಗಾರರಿಗೆ ಒದಗಿಸಿದ ಆಸ್ತಿ ವರ್ಗೀಕರಣ ಪರಿಹಾರದ ಜೊತೆಯಲ್ಲಿ ನೋಡಬೇಕಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
ಇದಲ್ಲದೆ, ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳ ಸುಧಾರಣೆಯೊಂದಿಗೆ ನಿಗದಿತ ವಾಣಿಜ್ಯ ಬ್ಯಾಂಕುಗಳ ಬಂಡವಾಳ -ಅಪಾಯದ ಆಸ್ತಿ ಅನುಪಾತವು ಮಾರ್ಚ್ 2020 ಮತ್ತು ಸೆಪ್ಟೆಂಬರ್ 2020 ರ ನಡುವೆ ಶೇ 14.7 ರಿಂದ 15.8 ಕ್ಕೆ ಏರಿದೆ ಎಂದು ಸಮೀಕ್ಷೆ ತಿಳಿಸಿದೆ.
ದಿವಾಳಿ ಮತ್ತು ದಿವಾಳಿತನ ಸಂಹಿತೆ
ಬಜೆಟ್ ಪೂರ್ವ ಸಮೀಕ್ಷೆಯ ಪ್ರಕಾರ, ಐಬಿಸಿ ಮೂಲಕ (ಆರಂಭವಾದಾಗಿನಿಂದ) ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಚೇತರಿಕೆ ಪ್ರಮಾಣವು ಶೇಕಡಾ 45 ಕ್ಕಿಂತ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ, ಯಾವುದೇ ಡೀಫಾಲ್ಟ್ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯನ್ನು (ಸಿಐಆರ್ಪಿ) ಸ್ಥಗಿತಗೊಳಿಸಲಾಗಿದೆ.
ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಸಾಲದ ಬೆಳವಣಿಗೆಯ ಕಾರಣದಿಂದಾಗಿ ನೈಜ ಆರ್ಥಿಕತೆಗೆ ಹಣಕಾಸಿನ ಹರಿವು ನಿರ್ಬಂಧಿತವಾಗಿದೆ ಎಂದು ಸಮೀಕ್ಷೆ ಹೇಳುತ್ತದೆ. ಆರ್ಬಿಐ ಅಡಿಯಲ್ಲಿರುವ ಬ್ಯಾಂಕುಗಳು ರಿವರ್ಸ್ ರೆಪೊ ಅಡಿಯಲ್ಲಿ ದೊಡ್ಡ ಠೇವಣಿಗಳ ಕಡಿಮೆ (ಹೊಂದಾಣಿಕೆಯ) ಹಣದ ಗುಣಕದಿಂದಾಗಿ ಹೆಚ್ಚಿನ ಮೀಸಲು ಹಣದ ಬೆಳವಣಿಗೆಯು ಸಂಪೂರ್ಣ ಹಣ ಪೂರೈಕೆಯಾಗಿ ಬದಲಾಗಲಿಲ್ಲ. ಜನವರಿ 1, 2021 ರ ವೇಳೆಗೆ ಬ್ಯಾಂಕುಗಳ ಸಾಲದ ಬೆಳವಣಿಗೆಯು ಶೇಕಡಾ 6.7 ಕ್ಕೆ ಇಳಿದಿದೆ. 2020-21ರಲ್ಲಿ ಬ್ಯಾಂಕಿಂಗ್ ವಲಯದ ಕ್ರೆಡಿಟ್ ಆಫ್ ಟೇಕ್ ಸಹ ವಿಶಾಲ ಆಧಾರಿತ ಕುಸಿತಕ್ಕೆ ಸಾಕ್ಷಿಯಾಯಿತು.
ನಿಫ್ಟಿ 50 ಮತ್ತು ಎಸ್ ಆ್ಯಂಡ್ ಪಿ ಬಿಎಸ್ಇ ಸೆನ್ಸೆಕ್ಸ್ 2021 ರ ಜನವರಿ 20 ರಂದು ಕ್ರಮವಾಗಿ 14,644.7 ಮತ್ತು 49,792.12 ಕ್ಕೆ ತಲುಪಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
***
(Release ID: 1693855)
Visitor Counter : 304