ಹಣಕಾಸು ಸಚಿವಾಲಯ

ಮುಂದೆ ಹೋದಂತೆ ಆಹಾರ ಹಣದುಬ್ಬರ ಇನ್ನಷ್ಟು ನಿರಾಳ, ಒಟ್ಟು ಹಣದುಬ್ಬರ ಮಧ್ಯಮ ಮಟ್ಟದಲ್ಲಿ: ಆರ್ಥಿಕ ಸಮೀಕ್ಷೆ


2020-21 ರಲ್ಲಿ ಚಿಲ್ಲರೆ ಮತ್ತು ಸಗಟು ಹಣದುಬ್ಬರ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗಿವೆ, ಶೀರ್ಷಿಕೆ ಸಿ.ಪಿ.ಐ-ಸಂಯೋಜಿತದೊಂದಿಗೆ ಹೆಚ್ಚಳ, ಮತ್ತು ಡಬ್ಲ್ಯು.ಪಿ.ಐ ಹಣದುಬ್ಬರ ಹಾನಿಕಾರಕವಲ್ಲದ ಮಟ್ಟದಲ್ಲಿದೆ

ಸಿ.ಪಿ.ಸಿ.ಯ ಮೂಲ ವರ್ಷ ಪರಿಷ್ಕರಣೆಗೆ ಸಮೀಕ್ಷೆ ಸಲಹೆ

ದರ ದತ್ತಾಂಶ ಸ್ವೀಕರಿಸುವ ಇ-ಕಾಮರ್ಸ್ ವರ್ಗಾವಣೆಗಳನ್ನು ದರ ಸೂಚ್ಯಂಕಗಳ ನಿರ್ಮಾಣದಲ್ಲಿ ಅಳವಡಿಸಿಕೊಳ್ಳಲು ಶಿಫಾರಸು

Posted On: 29 JAN 2021 3:34PM by PIB Bengaluru

2020-21 ರ ಆರ್ಥಿಕ ಸಮೀಕ್ಷೆಯು,  ಮುಂದೆ ಹೋಗುತ್ತಿದ್ದಂತೆ  ಆಹಾರ ಹಣದುಬ್ಬರ ಇನ್ನಷ್ಟು. ನಿರಾಳವಾಗಿ ಒಟ್ಟಾರೆ ಹಣದುಬ್ಬರ ಮಧ್ಯಮ ಮಟ್ಟದಲ್ಲಿರುತ್ತದೆ ಎಂದು ಹೇಳಿದೆ. ಪೂರೈಕೆ ಕ್ಷೇತ್ರದ ಮೇಲಣ ನಿರ್ಬಂಧಗಳು 2020 ರ ಡಿಸೆಂಬರ್ ತಿಂಗಳಲ್ಲಿ ತೆರವಾಗಿ ಎಲ್ಲವೂ ಅನುಕೂಲಕರ ಆಗಿದ್ದು, ಅವು ಇನ್ನಷ್ಟು ಅನುಕೂಲಕರವಾಗಿ ಮುಂದುವರಿಯುವ ನಿರೀಕ್ಷೆ ಇದೆ. ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಆರ್ಥಿಕ ಸಮೀಕ್ಷೆ 2020-21 ನ್ನು ಮಂಡಿಸಿದರು.

2020-21 ರಲ್ಲಿ ಚಿಲ್ಲರೆ ಮತ್ತು ಸಗಟು ಹಣದುಬ್ಬರವು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗಿರುವುದು ಕಂಡುಬರುತ್ತದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೀರ್ಷಿಕೆ ಸಿ.ಪಿ.ಐ-ಸಂಯೋಜಿತ (ಸಿ) ಹೆಚ್ಚಳವಾಗಿದ್ದು, ಡಬ್ಲ್ಯು.ಪಿ.ಐ. ಹಣದುಬ್ಬರ ಹಾನಿಕರವಲ್ಲದ ಮಟ್ಟದಲ್ಲಿ  ಉಳಿದಿದೆ. ಒಟ್ಟು ಶೀರ್ಷಿಕೆ ಸಿ.ಪಿ.ಐ. ಹಣದುಬ್ಬರ ಕೋವಿಡ್ ಪ್ರೇರಿತ ಲಾಕ್ ಡೌನ್ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಮಟ್ಟದಲ್ಲಿತ್ತು ಮತ್ತು ಪೂರೈಕೆ ವಲಯದಲ್ಲಿಯ ನಿರ್ಬಂಧಗಳಿಂದಾಗಿ ಆ ಬಳಿಕವೂ ಮುಂದುವರೆದಿತ್ತು. ಹಣದುಬ್ಬರದಲ್ಲಿಯ ಹೆಚ್ಚಳವು ಆಹಾರ ಹಣದುಬ್ಬರದಿಂದಾಗಿದ್ದು ಅದು 2020-21ರಲ್ಲಿ (ಏಪ್ರಿಲ್-ಡಿಸೆಂಬರ್) ನಲ್ಲಿ 9.1 ಶೇಖಡಾಕ್ಕೇರಿತ್ತು. ಕೋವಿಡ್ -19 ನಿರ್ಬಂಧಗಳಿಂದಾಗಿ ಒಟ್ಟಾರೆ ದರ ಹೆಚ್ಚಳ ಕಂಡುಬಂದಿದೆ. ಏಪ್ರಿಲ್ 2020 ರಿಂದ ಹಣದುಬ್ಬರದ ಧನಾತ್ಮಕ ಪರಿಣಾಮ ಸಾಧಾರಣ ಅಂಶವಾಗಿದೆ. ಗ್ರಾಮೀಣ-ನಗರ ಸಿ.ಪಿ.ಐ. ಹಣದುಬ್ಬರ, 2019ರಲ್ಲಿ ಅತ್ಯಂತ ಗರಿಷ್ಟ ಪ್ರಮಾಣದಲ್ಲಿತ್ತು. ಅದು 2019 ರ ನವೆಂಬರ್ ತಿಂಗಳಿನಿಂದ ಕುಸಿಯುತ್ತಾ ಬಂದಿದ್ದು ಅದು 2020ರಲ್ಲಿಯೂ ಮುಂದುವರೆಯಿತು. ರಾಜ್ಯಗಳಲ್ಲಿ/ ಕೇಂದ್ರಾಡಳಿತ ಪ್ರದೇಶಗಳಲ್ಲಿ 2020-21ರ (ಜನವರಿಯಿಂದ ಡಿಸೆಂಬರ್)  ಅವಧಿಯಲ್ಲಿ ಹಣದುಬ್ಬರವು 3.2 ಪ್ರತಿಶತದಿಂದ 11 ಪ್ರತಿಶತದವರೆಗೆ ಇತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು (-)೦.೩ ಪ್ರತಿಶತದಿಂದ ೭.೬ ಪ್ರತಿಶತದಷ್ಟಿತ್ತು. ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ತಟ್ಟೆಗಳ ದರಗಳು 2020ರ ಜನವರಿ-ಮಾರ್ಚ್ ತಿಂಗಳಲ್ಲಿ ಗಣನೀಯವಾಗಿ ಇಳಿಕೆಯಾದವು. ಆದರೆ 2020ರ ಡಿಸೆಂಬರ್ ತಿಂಗಳಲ್ಲಿ ನೆಮ್ಮದಿಯ ಮಟ್ಟಕ್ಕೆ ತಲುಪುವ ಮೊದಲು ಏಪ್ರಿಲ್ ನಿಂದ ನವೆಂಬರ್ ತಿಂಗಳ ನಡುವಿನ ಅವಧಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲಿಯೂ ತೀವ್ರವಾದ ಏರಿಕೆ ದಾಖಲಿಸಿದವು. ಸಿ.ಪಿ.ಸಿ.-ಸಿ.ಯ ನಿಶ್ಚಿಂತೆಯಿಂದಾಗಿ ಊಟದ ತಟ್ಟೆಯ ದರಗಳು ಸಮಾಧಾನಕರವಾಗಿ  ಮುಂದುವರೆಯುವ ನಿರೀಕ್ಷೆ ಇದೆ.  

ಪೂರೈಕೆ ವಲಯದಲ್ಲಿಯ ದಿಗ್ಬ್ರಮೆಗಳು ಅದರಲ್ಲೂ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಾರಣದಿಂದ ಉಂಟಾಗಿರುವ ಭಯ ಚಿಲ್ಲರೆ ಹಣದುಬ್ಬರಕ್ಕೆ ಪ್ರಚೋದನೆ ನೀಡಿದೆ. ಆಹಾರ ಪದಾರ್ಥಗಳು ಒಟ್ಟಾರೆ ಹಣದುಬ್ಬರಕ್ಕೆ ಕೊಡುಗೆ ನೀಡಿವೆ. ಡಿಸೆಂಬರ್ ತಿಂಗಳಲ್ಲಿ ಆಹಾರ ಹಣದುಬ್ಬರ ಸಮಾಧಾನಕರ ಸ್ಥಿತಿಗೆ ಬಂದಿದೆ, ಎಲ್ಲಾ ಹಣದುಬ್ಬರ ಒತ್ತಡಗಳು ಇದರಿಂದಾಗಿ ಕಡಿಮೆಯಾಗಿವೆ. ಇನ್ನೊಂದೆಡೆ, ಸುಧಾರಿಸುತ್ತಿರುವ ಬೇಡಿಕೆ ಪರಿಸ್ಥಿತಿಗಳು ಡಬ್ಲ್ಯು.ಪಿ.ಐ. ಹಣದುಬ್ಬರವನ್ನು ಧನಾತ್ಮಕ ವ್ಯಾಪ್ತಿಯೊಳಗೆ ಹಿಡಿದಿಡುವ ಸಾಧ್ಯತೆಗಳಿವೆ. ಉತ್ಪಾದಕರ ದರ ನಿಗದಿ ಅಧಿಕಾರವೂ ಸುಧಾರಣೆಯಾಗುತ್ತಿದೆ. ಆಹಾರ ವಸ್ತುಗಳ ದರಗಳಲ್ಲಿ ಸ್ಥಿರತೆ ತರಲು   ನೀರುಳ್ಳಿ ರಫ್ತಿನ ಮೇಲೆ ನಿರ್ಬಂಧ, ನೀರುಳ್ಳಿ ದಾಸ್ತಾನಿನ ಮೇಲೆ ಮಿತಿಯ ಜಾರಿ ಮತ್ತು ಬೇಳೆ ಕಾಳುಗಳು ಇತ್ಯಾದಿಗಳ ಆಮದು ನಿರ್ಬಂಧಗಳ ಸಡಿಲಿಕೆಯಂತಹ ಕ್ರಮಗಳನ್ನು ಕೈಗೊಂಡಿರುವುದನ್ನು ಸಮೀಕ್ಷೆ ಗಮನಿಸಿದೆ.

ಅನಗತ್ಯವಾದ, ಸಾಧುವಲ್ಲದ  ಬೆಲೆ ಏರಿಕೆಯನ್ನು ತಡೆಯಲು ಕೈಗೊಂಡ ಕ್ರಮಗಳನ್ನು ಪ್ರಸ್ತಾಪಿಸಿರುವ ಅದು ದರ ಸ್ಥಿರತೆ ನಿಧಿ (ಪಿ.ಎಸ್.ಎಫ್.) ಯೋಜನೆಯನ್ನು ದಕ್ಷತೆಯಿಂದ ಅನುಷ್ಟಾನ ಮಾಡಲಾಗಿರುವುದನ್ನು ಮತ್ತು ಬೇಳೆ ಕಾಳುಗಳ ಬೆಲೆ ಸ್ಥಿರತೆ ತರುವ ಅದರ ಉದ್ದೇಶಗಳನ್ನು ಈಡೇರಿಸುವಲ್ಲಿ ಸಫಲತೆ ದಾಖಲಿಸಿರುವುದನ್ನು ಉಲ್ಲೇಖಿಸಿದೆ. ಇದರಿಂದ ಎಲ್ಲಾ ಫಲಾನುಭವಿಗಳಿಗೆ ಪ್ರಮುಖವಾದ ಪ್ರಯೋಜನಗಳಾಗಿವೆ. ಪೋಷಣಾ ಘಟಕಾಂಶಗಳ ಯೋಜನೆಗಳನ್ನು ಹೊಂದಿರುವ ಅಥವಾ ಆಹಾರ/ ಅಡುಗೆ/ಆತಿಥ್ಯ ಸೇವೆಗಳನ್ನು ಒದಗಿಸುವ ಎಲ್ಲಾ ಸಚಿವಾಲಯಗಳು/ ಇಲಾಖೆಗಳು ಕೇಂದ್ರದ ಕಾಪು ದಾಸ್ತಾನಿನಿಂದ ಬೇಳೆ ಕಾಳುಗಳನ್ನು ಬಳಸುವಂತೆ ಸರಕಾರ ನಿರ್ಧಾರಗಳನ್ನು ಕೈಗೊಂಡಿದೆ. ಬೇಳೆ ಕಾಳುಗಳ ಕಾಪು ದಾಸ್ತಾನು ರಚನೆಯಿಂದ ಬೇಳೆ ಕಾಳುಗಳ ದರವನ್ನು ಮಧ್ಯಮಮಟ್ಟದಲ್ಲಿರಿಸಲು ಸಹಾಯವಾಗುತ್ತದೆ ಮತ್ತು ಕಡಿಮೆ ದರದಿಂದಾಗಿ ಗ್ರಾಹಕರಿಗೆ ಉಳಿತಾಯವಾಗುತ್ತದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅವುಗಳದ್ದೇ ಆದ ರಾಜ್ಯ ಮಟ್ಟದ ಪಿ.ಎಸ್.ಎಫ್. ಗಳನ್ನು ರೂಪಿಸಲು ಉತ್ತೇಜಾನ  ನೀಡಲಾಗುತ್ತಿದೆ ಮತ್ತು ಪಿ.ಎಸ್.ಎಫ್. ಕಾಪು ದಾಸ್ತಾನಿನಿಂದ ಬೇಳೆ ಕಾಳುಗಳನ್ನು ಪಿ.ಎಂ.ಜಿ.ಕೆ.ಎ.ವೈ. ಮತ್ತು ಎ.ಎನ್.ಬಿ. ಪ್ಯಾಕೇಜಿನಡಿಯಲ್ಲಿ ಉಚಿತ ಪೂರೈಕೆಗಳನ್ನು ಮಾಡಲು ಬಳಸಲಾಗುತ್ತದೆ. ಭಾರತ ಸರಕಾರವು ಮಾರುಕಟ್ಟೆ ಮಧ್ಯಪ್ರವೇಶದ ಮೂಲಕ ಸೂಕ್ತ ಬೆಲೆ ಸ್ಥಿರತೆಯನ್ನು ತರಲು ಪಿ.ಎಸ್.ಎಫ್. ಅಡಿಯಲ್ಲಿ  ನೀರುಳ್ಳಿಯ ಕಾಪು ದಾಸ್ತಾನನ್ನು ನಿರ್ವಹಿಸುತ್ತಿದೆ.

ಸಮೀಕ್ಷೆಯು ದರಗಳ ಮೇಲ್ಮುಖ ಚಲನೆಯನ್ನು ನಿಯಂತ್ರಿಸಲು ಅಲ್ಪ-ಕಾಲಾವಧಿಯ ಕ್ರಮಗಳನ್ನು ಕೈಗೊಳ್ಳುವುದಲ್ಲದೆ, ಮಧ್ಯಮ ಮತ್ತು ಧೀರ್ಘಾವಧಿ ಕ್ರಮಗಳನ್ನು –ಉತ್ಪಾದನಾ ಕೇಂದ್ರಗಳಲ್ಲಿ ಶೀತಲೀಕರಣ ಸೌಲಭ್ಯಗಳು ಲಭ್ಯವಾಗುವಂತಹ ವಿಕೇಂದ್ರೀಕರಣ ಕ್ರಮಗಳನ್ನು ಕೈಗೊಳ್ಳಬಹುದೆಂದು ಸಲಹೆ ಮಾಡಿದೆ. ಉತ್ತಮ ದಾಸ್ತಾನು ತಳಿಗಳು, ರಸಗೊಬ್ಬರಗಳ ನ್ಯಾಯೋಚಿತ ಬಳಕೆ, ಸಕಾಲದಲ್ಲಿ ನೀರಾವರಿ ಮತ್ತು ಕೊಯಿಲೋತ್ತರ ತಂತ್ರಜ್ಞಾನ ದಾಸ್ತಾನು ಮಾಡಲಾಗುವ ನೀರುಳ್ಳಿಯಲ್ಲಿ ನಷ್ಟ ಕಡಿಮೆ ಮಾಡಲು ಅವಶ್ಯ ಎಂದೂ ಸಮೀಕ್ಷೆ ಹೇಳಿದೆ. ನೀರುಳ್ಳಿಯ ಕಾಪು ದಾಸ್ತಾನು ನೀತಿಯ ಮರುವಿಮರ್ಶೆ ಅಗತ್ಯ ಎಂದೂ ಅದು ಹೇಳಿದೆ. ಹಾಳಾಗುವಿಕೆಯನ್ನು ತಡೆಯಲು, ದಕ್ಷ ನಿರ್ವಹಣೆ ಮತ್ತು ಸಕಾಲದಲ್ಲಿ ಬಿಡುಗಡೆಯ ಖಾತ್ರಿಯನ್ನೂ ಒಳಗೊಂಡ ವ್ಯವಸ್ಥೆಯ ಅಗತ್ಯವನ್ನು ಸಮೀಕ್ಷೆಯು ಪ್ರತಿಪಾದಿಸಿದೆ. 

ಆಮದು ನೀತಿಯಲ್ಲಿ ದೃಢತೆಯನ್ನು ತರುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಅದು ಸಲಹೆ ಮಾಡಿದೆ. ಖಾದ್ಯ ತೈಲಗಳ ಆಮದಿನ ಮೇಲೆ ಅವಲಂಬನೆ ಹೆಚ್ಚಳದಿಂದಾಗಿ ಆಮದು ದರಗಳಲ್ಲಿ ಮತ್ತು ಆಮದಿನಲ್ಲಿ ಏರುಪೇರುಗಳಾಗಿ ದೇಶೀಯ ಖಾದ್ಯ ತೈಲ ಮಾರುಕಟ್ಟೆಯಲ್ಲಿ ಉತ್ಪಾದನೆ ಮತ್ತು ದರಗಳ ಮೇಲೆ ಪರಿಣಾಮವುಂಟಾಗುತ್ತದೆ, ಖಾದ್ಯ ತೈಲಗಳು ಮತ್ತು ಬೇಳೆ ಕಾಳುಗಳ ಆಮದು ನೀತಿಯಲ್ಲಿ ಪದೇ ಪದೇ ಬದಲಾವಣೆಗಳಾಗುವುದರಿಂದ ರೈತರು/ಉತ್ಪಾದಕರಲ್ಲಿ ಗೊಂದಲಗಳುಂಟಾಗುತ್ತವೆ

ಸಿ.ಪಿ.ಐ. ಹಣದುಬ್ಬರದ ಮೇಲಣ ಪೂರ್ಣ ಗಮನ ನಾಲ್ಕು ಕಾರಣಗಳಿಗಾಗಿ ಸೂಕ್ತ ಅಲ್ಲ ಎಂದು ಸಮೀಕ್ಷೆಯು ಅಭಿಪ್ರಾಯಪಟ್ಟಿದೆ. ಮೊದಲನೆಯದಾಗಿ ಆಹಾರ ಹಣದುಬ್ಬರವು ಸಿ.ಪಿ.ಐ-ಸಿಗೆ ಗಣನೀಯವಾದ ಕಾಣಿಕೆಯನ್ನು ನೀಡುತ್ತದೆ ಮತು ಅದು ಪೂರೈಕೆ ಭಾಗದ ಅಂಶಗಳಿಂದ ನಿರ್ಧಾರಿತವಾಗುತ್ತದೆ.ಎರಡನೆಯದಾಗಿ ಹಣಕಾಸು ನೀತಿಗೆ ಅದು ಶೀರ್ಷಿಕೆ ಗುರಿಯಾಗಿರುವುದರಿಂದ ಸಿ.ಪಿ.ಸಿ.-ಸಿ.ಯ ಬದಲಾವಣೆಗಳು ಹಣದುಬ್ಬರ ಸಂಭಾವ್ಯತೆಗಳಿಗೆ ಆಧಾರ  ಕೊಡುತ್ತವೆ. ಆಹಾರ ಹಣದುಬ್ಬರಕ್ಕೆ ಕಾರಣವಾಗುವ ಸಿ.ಪಿ.ಐ.-ಸಿ.ಯು ಪೂರೈಕೆ ಸಂಬಂಧಿ ಅಂಶಗಳಿಂದ ನಿರ್ಧರಿಸಲ್ಪಡುತ್ತದಾದರೂ ಅದರ ಮೇಲೆ ಈ ಅಂಶವೂ ಪರಿಣಾಮ ಬೀರುತ್ತದೆ. ಮೂರನೇಯದಾಗಿ ಆಹಾರ ಹಣದುಬ್ಬರಕ್ಕೆ ಸಂಬಂಧಿಸಿದ ಹಲವಾರು ಘಟಕಾಂಶಗಳು  ಆಹಾರ ಮತ್ತು ಪಾನೀಯ ಗುಂಪಿನ ವ್ಯಾಪಕ ಏರು ಪೇರುಗಳ ಕಾರಣದಿಂದಾಗಿ ಅಸ್ಥಿರವಾಗಿರುತ್ತವೆ.ಮತ್ತು ಕೊನೆಯದಾಗಿ, ಅಹಾರ ಹಣದುಬ್ಬರ ಒಟ್ಟಾರೆ ಸಿ.ಪಿ.ಸಿ.-ಸಿ ಹಣದುಬ್ಬರವನ್ನು,  ಆಹಾರ ವಸ್ತುಗಳ ಸೂಚ್ಯಂಕದಲ್ಲಿ ತುಲನಾತ್ಮಕವಾಗಿ ಹೆಚ್ಚಿನ ಆದ್ಯತೆ ಇರುವ ಕಾರಣಕ್ಕಾಗಿ ಚಾಲನಾಸ್ಥಿತಿಯಲ್ಲಿರಿಸುತ್ತದೆ. ಆಹಾರ ಅಭ್ಯಾಸಗಳು 2011-12 ರಿಂದ ಕಳೆದೊಂದು ದಶಕದಲ್ಲಿ ಪರಿಷ್ಕರಣೆಗೊಂಡಿರುವುದರಿಂದ, ಸಿ.ಪಿ.ಐ.ಗೆ ಅದು ಮೂಲ ವರ್ಷವಾಗಿದೆ, ಆದರೆ ಅದು ಸೂಚ್ಯಂಕದಲ್ಲಿ ಪ್ರತಿಬಿಂಬಿತವಾಗಿಲ್ಲ. ಆದುದರಿಂದ ಸಿ.ಪಿ.ಐ.ಯ ಮೂಲ ವರ್ಷವನ್ನು ಈ ಮಾಪನ ದೋಷವನ್ನು ತಡೆಯುವುದಕ್ಕಾಗಿ ಪರಿಷ್ಕರಿಸಬೇಕಾಗಿದೆ. ಆಹಾರಾಭ್ಯಾಸಗಳ ಬದಲಾವಣೆಗಳಿಂದುಂಟಾಗಿರುವ ಮಾಪನ ದೋಷ ನಿವಾರಣೆಗಾಗಿ ಈ ಕ್ರಮ ಅನುಸರಿಸಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಗಾಗಿ  ಮೂಲ ಹಣದುಬ್ಬರದಲ್ಲಿ ಹೆಚ್ಚಿನ ಗಮನ ಅವಶ್ಯವಾಗಿದೆ.

ಇ-ವಾಣಿಜ್ಯ ವಹಿವಾಟಿನಲ್ಲಿ ಗಮನಾರ್ಹ ಹೆಚ್ಚಳವಾಗಿರುವುದರಿಂದ ಇ-ವಾಣಿಜ್ಯ ವರ್ಗಾವಣೆಯ ದರ ದತ್ತಾಂಶ ಹಿಡಿದಿಡುವ ಹೊಸ ಮೂಲಗಳನ್ನು ದರ ಸೂಚ್ಯಂಕಗಳ ನಿರ್ಮಾಣದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಮೀಕ್ಷೆಯು ಹೇಳಿದೆ. ಈ ವರ್ಷದಲ್ಲಿ, ಸರಕಾರವು ಕೈಗೆಟಕುವ ದರದಲ್ಲಿ ಕೋವಿಡ್ -19 ಚಿಕಿತ್ಸೆಗೆ ನಿರ್ಣಾಯಕ ಔಷಧಿಗಳು  ಲಭ್ಯವಾಗುವಂತೆ ಮಾಡುವಲ್ಲಿ  ಹಲವಾರು ಕ್ರಮಗಳನ್ನು ಕೈಗೊಂಡಿದೆ. ನೀರುಳ್ಳಿ ರಫ್ತಿಗೆ ನಿರ್ಬಂಧ, ನೀರುಳ್ಳಿ ದಾಸ್ತಾನು ಮಿತಿ ಜಾರಿ, ಬೇಳೆ ಕಾಳುಗಳ ಆಮದು ಮೇಲಣ ನಿರ್ಬಂಧಗಳ ಸಡಿಲಿಕೆ ಇತ್ಯಾದಿ ಸಹಿತ  ಸೂಕ್ಷ್ಮ ಆಹಾರ ವಸ್ತುಗಳ ಬೆಲೆ ಸ್ಥಿರತೆಗೆ ಕ್ರಮಗಳನ್ನು ಕೈಗೊಂಡಿದೆ. ಪದೇ ಪದೇ ಖಾದ್ಯ ತೈಲ ಮತ್ತು ಬೇಳೆ ಕಾಳುಗಳ ಆಮದಿಗೆ ಸಂಬಂಧಿಸಿದ ಆಮದು ನೀತಿಗಳಲ್ಲಿ ಬದಲಾವಣೆಗಳಾಗುತ್ತಿರುವುದರಿಂದ ಗೊಂದಲ ಮತ್ತು ವಿಳಂಬಗಳಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಆಹಾರ ವಸ್ತುಗಳ ಆಮದಿಗೆ ಸಂಬಂಧಿಸಿ ನೀತಿಯಲ್ಲಿ ಸ್ಪಷ್ಟತೆ ಮತ್ತು ದೃಢತೆ, ಮತ್ತು ಗಮನ ಅವಶ್ಯವಾಗಿದೆ. ತರಕಾರಿ ಹಣದುಬ್ಬರ ನಿಭಾಯಿಸಲು ಸೂಕ್ತ ಕಾಪು ದಾಸ್ತಾನು ನೀತಿಗಳ ಪರಿಷ್ಕರಣೆ ಅವಶ್ಯವಾಗಿದೆ. ಪೂರೈಕೆ ಭಾಗದಲ್ಲಿಯ ಅವ್ಯವಸ್ಥೆಗಳನ್ನು ನಿವಾರಿಸಲು  ತರಕಾರಿಗಳು, ಆಹಾರ ವಸ್ತುಗಳ ಹಣದುಬ್ಬರದ ಕಾಲ ಸಂಬಂಧಿ ಕಾರಣಗಳನ್ನು, ಸಿ.ಪಿ.ಐ. –ಸಿ ಮತ್ತು ಹಣದುಬ್ಬರ ನಿರೀಕ್ಷೆಗಳನ್ನು ಮುಂಗಾಣ್ಕೆ ಮಾಡುವುದಕ್ಕಾಗಿ ದಾಸ್ತಾನಿನ ಸಕಾಲಿಕ ಬಿಡುಗಡೆ ಹಾಗು ಹಾಳಾಗುವಿಕೆಯನ್ನು ತಡೆಯಲು ಸೂಕ್ತ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಬೇಕಾದ ಅಗತ್ಯವಿದೆ ಎಂದೂ ಸಮೀಕ್ಷೆ ಅಭಿಪ್ರಾಯಪಟ್ಟಿದೆ.

***


(Release ID: 1693848) Visitor Counter : 264