ಹಣಕಾಸು ಸಚಿವಾಲಯ

ಭಾರತದ ಸಾರ್ವಭೌಮ ಕ್ರೆಡಿಟ್ ರೇಟಿಂಗ್ ಗಳು ಅದರ ಮೂಲ ಅಂಶಗಳನ್ನು ಅಡಕಗೊಳಿಸಿಲ್ಲ: ಆರ್ಥಿಕ ಸಮೀಕ್ಷೆ

ಸಾರ್ವಭೌಮತ್ವದ ಬಾಧ್ಯತೆಗಳನ್ನು ಪೂರೈಸಲು ಅವಶ್ಯವಾಗುವಂತೆ ದೇಶದ ಆಶಯ ಮತ್ತು ಸಾಮರ್ಥ್ಯವನ್ನು ಪ್ರತಿನಿಧಿಸುವಂತೆ ರೇಟಿಂಗ್ ವಿಧಾನವನ್ನು ಇನ್ನಷ್ಟು ಪಾರದರ್ಶಕ ಮತ್ತು ವಸ್ತುನಿಷ್ಟಗೊಳಿಸಬೇಕು: ಸಮೀಕ್ಷೆ

ಮುಂಗಡ ರೇಟಿಂಗ್ ಗೆ ಬದಲು ಬೆಳವಣಿಗೆಗೆ ಆದ್ಯತೆ ನೀಡುವ ಹಣಕಾಸು ನೀತಿಗೆ ಸಮೀಕ್ಷೆ ಕರೆ

Posted On: 29 JAN 2021 3:37PM by PIB Bengaluru

ಸಾರ್ವಭೌಮ (ದೇಶದ ಸಾಲ ಪಡೆಯುವ ಆರ್ಹತೆ ಅಥವಾ ದೇಶದ ಸಾಲ ವಿಶ್ವಾಸಾರ್ಹತೆ) ಮುಂಗಡ ರೇಟಿಂಗ್  ವಿಧಾನವನ್ನು ಹೆಚ್ಚು ಪಾರದರ್ಶಕಗೊಳಿಸಬೇಕು, ವ್ಯಕ್ತಿನಿಷ್ಟೆಯನ್ನು ಕಡಿಮೆ ಮಾಡಿ ಅದು ಆರ್ಥಿಕತೆಯ ಮೂಲತತ್ವಗಳನ್ನು ಪ್ರತಿಫಲಿಸುವಂತೆ ಉತ್ತಮವಾಗಿ ಅನುಷ್ಟಾನ ಮಾಡಬೇಕು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಆರ್ಥಿಕ ಸಮೀಕ್ಷೆ 2020-21ನ್ನು ಮಂಡಿಸಿದರು.

ಚೀನಾ ಮತ್ತು ಭಾರತದ ಪ್ರಕರಣಗಳನ್ನು  ಹೊರತುಪಡಿಸಿದರೆ ವಿಶ್ವದ ಐದನೇ ದೊಡ್ಡ ಆರ್ಥಿಕತೆಯಲ್ಲಿ, ಇತಿಹಾಸದಲ್ಲಿ ಎಂದೂ ಸಾರ್ವಭೌಮ ಮುಂಗಡ ರೇಟಿಂಗ್ ಗಳು ಹೂಡಿಕೆ ಮಟ್ಟದಲ್ಲಿ  (ಬಿ.ಬಿ.ಬಿ.-/ಬಿ.ಎ.ಎ.3) ಇಷ್ಟೊಂದು ಕೆಳಗಿನ ವಲಯದಲ್ಲಿ ಇರಲಿಲ್ಲ. ಆರ್ಥಿಕತೆಯ ಗಾತ್ರವನ್ನು  ಮತ್ತು ಮೂಲಕ ಸಾಲ ಮರುಪಾವತಿ ಸಾಮರ್ಥ್ಯವನ್ನು ಪ್ರತಿನಿಧಿಸುವ ವಿಶ್ವದ ಐದನೇ ಬೃಹತ್ ಆರ್ಥಿಕತೆಯು ಪ್ರಧಾನವಾಗಿ ಎ.ಎ.ಎ.ರೇಟಿಂಗ್ ನಲ್ಲಿರುತ್ತದೆ.

ಇದಲ್ಲದೆ, ಭಾರತದ ಸಾರ್ವಭೌಮ ಮುಂಗಡ ರೇಟಿಂಗ್ ಗಳು ಮೂಲಭೂತ ತತ್ವಗಳನ್ನು ಪ್ರತಿಬಿಂಬಿಸುವುದಿಲ್ಲ. ಸಾರ್ವಭೌಮ ಮುಂಗಡ ರೇಟಿಂಗ್ ಗಳ ಸಮಂಜಸತೆಯಲ್ಲಿ ಭಾರತವು ಹಲವಾರು ಗುಣಮಾನಕಗಳಲ್ಲಿ ಹೊರಭಾಗದಲ್ಲಿದೆ. ಇವುಗಳಲ್ಲಿ ಜಿ.ಡಿ.ಪಿ. ಬೆಳವಣಿಗೆ, ಹಣದುಬ್ಬರ, ಸಾಮಾನ್ಯ ಸರಕಾರಿ ಸಾಲ (ಜಿ.ಡಿ.ಪಿ. ಪ್ರತಿ ಶತದಂತೆ), ಚಾಲ್ತಿ ಖಾತೆ ಶಿಲ್ಕು (ಜಿ.ಡಿ.ಪಿ. ಪ್ರತಿ ಶತದಂತೆ), ಪ್ರಾಥಮಿಕ ಶಿಲ್ಕಿನ ವರ್ತುಲ ರೀತಿಯಲ್ಲಿ ಹೊಂದಾಣಿಕೆ (ಜಿ.ಡಿ.ಪಿ. ಸಾಮರ್ಥ್ಯಕ್ಕೆ ಅನ್ವಯಿಸಿದ ಪ್ರತಿಶತದಂತೆ), ಅಲ್ಪಾವಧಿ ಬಾಹ್ಯ ಸಾಲ( ಮೀಸಲು ಪ್ರತಿಶತ ಅನ್ವಯದಂತೆ) ರಾಜಕೀಯ ಸ್ಥಿರತೆ ಅನ್ವಯಿಸಿ ಮೀಸಲು ಲಭ್ಯತೆ ಅನುಪಾತ, ಕಾನೂನು ಪಾಲನೆ, ಭ್ರಷ್ಟಾಚಾರ ನಿಯಂತ್ರಣ, ಹೂಡಿಕೆದಾರರ ರಕ್ಷಣೆ, ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ, ಮತ್ತು ಸಾರ್ವಭೌಮ ಸಾಲ ಮರುಪಾವತಿಯಾಗದಿರುವ ಹಿನ್ನೆಲೆ ಸೇರಿದೆ. ಈ ಬಾಹ್ಯಸ್ಥಾನ ಮಾನಗಳು ಪ್ರಸಕ್ತ ಅವಧಿಗೆ ಮಾತ್ರವಲ್ಲ ಕಳೆದ ಎರಡು ದಶಕಗಳಲ್ಲಿಯೂ ಸತ್ಯವಾಗಿವೆ.

ಸಾರ್ವಭೌಮ ಮುಂಗಡ ರೇಟಿಂಗ್ ಬದಲಾವಣೆಯ ಪರಿಣಾಮಗಳು

ಭಾರತದ ಮೂಲಭೂತ ತತ್ವಗಳನ್ನು ರೇಟಿಂಗ್ ಅಳವಡಿಸಿಕೊಳ್ಳದ ಕಾರಣದಿಂದ, ಸಮೀಕ್ಷೆಯು ಸೆನ್ಸೆಕ್ಸ್ ಮರುಸ್ಥಾಪನೆ, ವಿದೇಶೀ ವಿನಿಮಯ ದರ ಮತ್ತು ಸರಕಾರಿ ಸೆಕ್ಯುರಿಟಿಗಳ ಆದಾಯಗಳಂತಹ ಆಯ್ದ ಸೂಚ್ಯಂಕಗಳ ಮೇಲೆ ಸಾರ್ವಭೌಮ ಮುಂಗಡ ರೇಟಿಂಗ್ ಬದಲಾವಣೆಗಳ ಹಿಂದಿನ ಕಂತುಗಳಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮಗಳು ಉಂಟಾಗದಿರುವುದನ್ನು ಉಲ್ಲೇಖಿಸಿದೆ. ಅದು ಬೃಹತ್ ಆರ್ಥಿಕತೆ ಸೂಚ್ಯಂಕಗಳ ಮೇಲೆ ಯಾವುದೇ ಅಥವಾ ದುರ್ಬಲವಾದಂತಹ ಸಂಬಂಧವನ್ನು ಹೊಂದಿಲ್ಲದಿರುವುದರ ಬಗ್ಗೆಯೂ ಗಮನ ಸೆಳೆದಿದೆ.

ಆದಾಗ್ಯೂ, ಸಾರ್ವಭೌಮ ಮುಂಗಡ ರೇಟಿಂಗ್ ಗಳು ವೃತ್ತಾಕಾರಪರವಾಗಿದ್ದು, ಮತ್ತು ಅವು ಅಭಿವೃದ್ಧಿಶೀಲ ರಾಷ್ಟ್ರಗಳ ಮುಂಗಡ ಎಫ್.ಪಿ.ಐ. ಹರಿವು, ಈಕ್ವಿಟಿಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಹಾನಿಯನ್ನುಂಟು ಮಾಡಿ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸುತ್ತವೆ. ಆದುದರಿಂದ, ಎಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳೂ ಪಕ್ಷಪಾತವನ್ನು ಮತ್ತು ಸಾರ್ವಭೌಮ ಮುಂಗಡ ರೇಟಿಂಗ್ ವಿಧಾನದಲ್ಲಿ ಅಡಕವಾಗಿರುವ ವ್ಯಕ್ತಿನಿಷ್ಟೆಯನ್ನು ವಿವಾರಿಸಲು ಒಗ್ಗೂಡಬೇಕು ಮತ್ತು ಹೆಚ್ಚು ಪಾರದರ್ಶಕತೆಯನ್ನು ತರಬೇಕು ಎಂದು ಅದು ಕರೆ ನೀಡಿದೆ. ಭಾರತವು ಜಿ-20ರಲ್ಲಿ ಮುಂಗಡ ರೇಟಿಂಗ್ ವೃತಾಕಾರ  ಪರ ವಿಷಯವನ್ನು ಈಗಾಗಲೇ ಪ್ರಸ್ತಾಪಿಸಿದೆ.

ಮರುಪಾವತಿಯ ಇಚ್ಛೆ ಮತ್ತು ಸಾಮರ್ಥ್ಯವನ್ನು ಸಾರ್ವಭೌಮ ಮುಂಗಡ ರೇಟಿಂಗ್ ಪ್ರತಿಬಿಂಬಿಸುವ ಅಗತ್ಯವಿದೆ.

ಮುಂಗಡ ರೇಟಿಂಗ್ ಗಳು ಸಾಲ ಮರುಪಾವತಿ ಮಾಡದಿರುವ ಸಾಧ್ಯತೆಯನ್ನು ಪಟ್ಟಿ ಮಾಡುತ್ತವೆ ಮತ್ತು  ಮೂಲಕ ಸಾಲಗಾರರು ಅದರ ನಿಬಂಧನೆಗಳನ್ನು ಪೂರೈಸಲು ಸಾಮರ್ಥ್ಯ್ವನ್ನು ಹೊಂದಿದ್ದಾರೆಯೇ, ಮರುಪಾವತಿ ಇಚ್ಛೆಯನ್ನು ಹೊಂದಿದ್ದಾರೆಯೇ ಎಂಬುದನ್ನು ಪರಿಗಣಿಸುತ್ತವೆ. ಸಮೀಕ್ಷೆಯು ಭಾರತವು ಸಾಲ ಮರುಪಾವತಿಯ ಇಚ್ಛೆಯನ್ನು ತನ್ನ ಶೂನ್ಯ ಸಾರ್ವಭೌಮ ಪಾವತಿ ಬಾಕಿ ಇತಿಹಾಸದೊಂದಿಗೆ ಪ್ರಶ್ನಾತೀತವಾಗಿ ಶ್ರುತಪಡಿಸಿದೆ ಎಂಬುದನ್ನೂ ತೋರಿಸಿದೆ.

ಭಾರತದ ಸಾಲ ಮರುಪಾವತಿ ಸಾಮರ್ಥ್ಯವನ್ನು ದೇಶದ ಅತ್ಯಲ್ಪ ವಿದೇಶೀ ಕರೆನ್ಸಿ ಹೆಸರಿನ  ಸಾಲದ ಮೇಲೆ ನಿರ್ಣಯಿಸುವುದಕ್ಕೆ ಬದಲು ಅದರ ವಿದೇಶೀ ವಿನಿಮಯ ಮೀಸಲು ಗಾತ್ರವನ್ನು ಅನುಲಕ್ಷಿಸಿ ಮೌಲ್ಯಮಾಪನ ಮಾಡಬೇಕು.ಅದರಿಂದ ಖಾಸಗಿ ವಲಯದ ಅಲ್ಪಾವಧಿ ಸಾಲವನ್ನು ಮತ್ತು ಭಾರತದ ಸಾರ್ವಭೌಮ ಮತ್ತು ಸಾರ್ವಭೌಮೇತರ ಬಾಹ್ಯ ಸಾಲವನ್ನು ಪಾವತಿ ಮಾಡಲು ಸಾಧ್ಯವಿದೆ. ಭಾರತದ ಸಾರ್ವಭೌಮ ಬಾಹ್ಯ ಸಾಲವು 2020 ರ ಸೆಪ್ಟೆಂಬರ್ ತಿಂಗಳ ವೇಳೆಗೆ ಜಿ.ಡಿ.ಪಿ. ಪ್ರತಿಶತದನ್ವಯ ಬರೇ ನಾಲ್ಕು ಪ್ರತಿಶತದಷ್ಟಿದೆ.

ಸಮೀಕ್ಷೆಯು ಭಾರತದ ವಿದೇಶೀ ವಿನಿಮಯ ಮೀಸಲು ಹೆಚ್ಚುವರಿಯಾಗಿ 2.8 ಗುಣಮಟ್ಟ ಉಲ್ಲಂಘನೆ ಋಣಾತ್ಮಕ ಭಾರವನ್ನು ತಾಳಿಕೊಳ್ಳಬಲ್ಲುದು, ಅಂದರೆ ಅಲ್ಪ ಕಾಲಾವಧಿ ಸಾಲ ಮರುಪಾವತಿ ಬಳಿಕ ಉದ್ಭವಿಸಬಹುದಾದ ಪರಿಸ್ಥಿತಿಯ ಸಂಭಾವ್ಯತೆಯು  0.1 ಪ್ರತಿಶತಕ್ಕಿಂತಲೂ ಕಡಿಮೆ. ಮತ್ತು , ಭಾರತದ ವಿದೇಶೀ ವಿನಿಮಯ ಮೀಸಲು 2021 ರ ಜನವರಿ 15 ರಂದು 584.24 ಬಿಲಿಯನ್ ಅಮೆರಿಕನ್ ಡಾಲರುಗಳಷ್ಟಿದೆ. ಇದು ಭಾರತದ ಬಾಹ್ಯ ಸಾಲ (ಖಾಸಗಿ ವಲಯದ ಸಾಲವೂ ಸಹಿತ)  2020 ರ ಸೆಪ್ಟೆಂಬರ್ ನಲ್ಲಿ ಇದ್ದ 556.2 ಬಿಲಿಯನ್ ಅಮೆರಿಕನ್ ಡಾಲರುಗಳಿಗಿಂತ ಹೆಚ್ಚು ಇದೆ. ಖಾಸಗಿ ವಲಯದ ರಪ್ತು ಆದಾಯ, ಭಾರತದ ಬೃಹತ್ ವಿದೇಶೀ ವಿನಿಮಯ  ಮೀಸಲುಗಳನ್ನು ಪರಿಗಣಿಸಿದರೆ ವಾಸ್ತವವಾಗಿ ಅದರ ಅಲ್ಪ ಕಾಲಾವಧಿ ಸಾಲವನ್ನು ಮರು ಪಾವತಿ ಮಾಡುವ ಸಾಮರ್ಥ್ಯವನ್ನು ಕೀಳಂದಾಜು ಮಾಡಿರುವುದನ್ನು ತೋರಿಸುತ್ತದೆ. ಸಾಂಸ್ಥಿಕ ಹಣಕಾಸು ರೂಢಿಯಲ್ಲಿ ಹೇಳುವುದಾದರೆ, ಭಾರತವು ಋಣಾತ್ಮಕ ಸಾಲ ಹೊಂದಿರುವುದು ಕಂಡು ಬರುತ್ತದೆ, ಮತ್ತು ಅದು ಸಾಲ ಮರುಪಾವತಿ ಮಾಡದಿರುವ ಸಾಧ್ಯತೆ ವ್ಯಾಖ್ಯೆಯನ್ವಯ ಶೂನ್ಯವಾಗಿರುತ್ತದೆ.

ಸಾರ್ವಭೌಮ ಮುಂಗಡಕ್ಕೆ ಸಂಬಂಧಿಸಿ ಕನಿಷ್ಟ ಎರಡು ದಶಕಗಳಿಂದ ವ್ಯವಸ್ಥಿತವಾಗಿ ಪಕ್ಷಪಾತದ ಮತ್ತು ಕೀಳಂದಾಜಿನ ಮೌಲ್ಯಮಾಪನ ಮಾಡಲಾಗುತ್ತಿದೆ ಎಂಬುದಕ್ಕೆ ಸಮೀಕ್ಷೆಯು ಸಾಕ್ಷಾಧಾರಗಳನ್ನು ಒದಗಿಸಿದೆ. ಸಾರ್ವಭೌಮ ಮುಂಗಡ ರೇಟಿಂಗ್ ಗಳಲ್ಲ್ಲಿ ಅದರಲ್ಲೂ ವಿಶೇಷವಾಗಿ ಕೆಳ ಮಟ್ಟದ ರೇಟಿಂಗ್ ಇರುವ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳನ್ನು ಹೊಂದಿರುವ ದೇಶಗಳ ವಿರುದ್ಧ ಪಕ್ಷಪಾತ ಮತ್ತು ವ್ಯಕ್ತಿನಿಷ್ಟೆಯನ್ನು ಅನುಸರಿಸಿರುವುದರ ಬಗ್ಗೆ ಬೃಹತ್ ಪ್ರಮಾಣದ ಶೈಕ್ಷಣಿಕ ಸಾಹಿತ್ಯವನ್ನು ಒದಗಿಸಿ ಸಮೀಕ್ಷೆಯು ತನ್ನ ಫಲಿತಗಳನ್ನು ಸ್ಥಿರಗೊಳಿಸಿದೆ.

ಮೇಲಿನ ಕಾರಣಗಳಿಗಾಗಿ, ಆರ್ಥಿಕ ಸಮೀಕ್ಷೆಯು ಭಾರತದ ಆರ್ಥಿಕ ನೀತಿಯನ್ನು ಪಕ್ಷಪಾತ ಮತ್ತು ವೈಯಕ್ತಿಕ ರೇಟಿಂಗ್ ಆಧಾರದಲ್ಲಿ ಪ್ರತಿಬಂಧಿಸಬಾರದು; ಬದಲು ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟಿರಬೇಕು, ಗುರುದೇವ್ ರಬೀಂದ್ರನಾಥ ಟ್ಯಾಗೋರ್ ಅವರ ಭಾವನೆಯಾಗಿರುವ ಭಯ ಮುಕ್ತ ಮನಸ್ಸನ್ನು ಪ್ರತಿಬಿಂಬಿಸುವಂತಿರಬೇಕು ಎಂದು ಸಲಹೆ ಮಾಡಿದೆ. 

***(Release ID: 1693846) Visitor Counter : 10