ಗೃಹ ವ್ಯವಹಾರಗಳ ಸಚಿವಾಲಯ
ಸುಭಾಷ್ ಚಂದ್ರ ಬೋಸ್ ಆಪದ್ ಪ್ರಬಂಧನ್ ಪುರಸ್ಕಾರ -2021
Posted On:
23 JAN 2021 5:38PM by PIB Bengaluru
ವಿಪತ್ತು ನಿರ್ವಹಣೆ ವಲಯದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ನೀಡಿದ ಅಮೂಲ್ಯ ಕೊಡುಗೆ ಮತ್ತು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ “ ಸುಭಾಷ್ ಚಂದ್ರ ಬೋಸ್ ಆಪದ್ ಪ್ರಬಂಧನ್ ಪುರಸ್ಕಾರ್ “ ಎಂಬ ರಾಷ್ಟ್ರಮಟ್ಟದ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿ ಸ್ಥಾಪಿಸಿದೆ.
ಪ್ರತಿ ವರ್ಷ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ರಂದು ಪ್ರಶಸ್ತಿ ಪ್ರಕಟಿಸಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾಗುವ ಸಂಸ್ಥೆಗೆ 51 ಲಕ್ಷ ರೂಪಾಯಿ ನಗದು ಮತ್ತು ಪ್ರಮಾಣ ಪತ್ರ ಹಾಗೂ ಪ್ರಶಸ್ತಿಗೆ ಆಯ್ಕೆಯಾಗುವ ವ್ಯಕ್ತಿಗಳಿಗೆ 5 ಲಕ್ಷ ರೂಪಾಯಿ ನಗದು ಮತ್ತು ಪ್ರಮಾಣಪತ್ರ ನೀಡಲಾಗುವುದು.
ಈ ವರ್ಷದ ಪ್ರಶಸ್ತಿಗಾಗಿ 2020ರ ಜುಲೈ 1 ರ ನಂತರ ಅರ್ಜಿಗಳನ್ನು ಸ್ವೀಕರಿಸಲಾಗಿದೆ. 2021ರ ಪ್ರಶಸ್ತಿಗೆ ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾಗಿತ್ತು. ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಒಟ್ಟು 371 ನಾಮಪತ್ರಗಳನ್ನು ಸ್ವೀಕರಿಸಲಾಗಿತ್ತು.
ವಿಪತ್ತು ವಲಯದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗಾಗಿ ಕೊಡಮಾಡುವ 2021ರ ಸಾಲಿನ ಸುಭಾಷ್ ಚಂದ್ರ ಬೋಸ್ ಅಪದ್ ಪ್ರಬಂಧನ್ ಪುರಸ್ಕಾರಕ್ಕೆ [ಸಂಸ್ಥೆಗಳ ವಲಯದಲ್ಲಿ] ಸಸ್ಟೈನಬಲ್ ಎನ್ವೈರ್ನಮೆಂಟ್ ಅಂಡ್ ಎಕಲಾಜಿಕಲ್ ಸೊಸೈಟಿ ಮತ್ತು ಡಾ. ರಾಜೇಂದ್ರ ಕುಮಾರ್ ಭಂಡಾರಿ [ವೈಯಕ್ತಿಕ ವಿಭಾಗದಲ್ಲಿ] ಪ್ರಶಸ್ತಿಗಾಗಿ ಆಯ್ಕೆಯಾಗಿದ್ದಾರೆ.
ಕಳೆದ 2020ರ ಸಾಲಿನ ಪುರಸ್ಕಾರಕ್ಕಾಗಿ ಉತ್ತರಾಖಂಡ್ ಮಿಟಿಗೇಷನ್ ಅಂಡ್ ಮ್ಯಾನೆಜ್ ಮೆಂಟ್ ಸೆಂಟರ್ [ಸಂಸ್ಥೆಗಳ ವಿಭಾಗದಲ್ಲಿ] ಮತ್ತು ಶ್ರೀ ಕುಮಾರ್ ಮುನ್ನನ್ ಸಿಂಗ್ [ವೈಯಕ್ತಿಕ ವಿಭಾಗದಲ್ಲಿ] ಆಯ್ಕೆಯಾಗಿದ್ದಾರೆ.
2021ರ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆಯಾದವರು ವಿಪತ್ತು ನಿರ್ವಹಣೆ ವಿಭಾಗದಲ್ಲಿ ಸಲ್ಲಿಸಿರುವ ಸೇವೆ ಈ ರೀತಿ ಇದೆ.
• ಸಸ್ಟೈನಬಲ್ ಎನ್ವೈರ್ನಮೆಂಟ್ ಅಂಡ್ ಎಕಲಾಜಿಕಲ್ ಸೊಸೈಟಿ [ಎಸ್.ಇ.ಇ.ಡಿ.ಎಸ್] ವಿಪತ್ತುಗಳನ್ನು ನಿಭಾಯಿಸುವ ವಿಧಾನದ ಬಗ್ಗೆ ಸಮುದಾಯದಲ್ಲಿ ಸ್ಥಿತಿಸ್ಥಾಪಕತ್ವ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ವಿಪತ್ತುಗಳನ್ನು ಎದುರಿಸಲು ಸೂಕ್ತ ಸಿದ್ಧತೆ, ಪ್ರತಿಕ್ರಿಯೆ ಮತ್ತು ಪುನರ್ವವಸತಿ ಕಲ್ಪಿಸುವ, ಸ್ಥಳೀಯವಾಗಿ ವಿಪತ್ತು ನಿರ್ವಹಣೆಗೆ ಸಾಮರ್ಥ್ಯ ವೃದ್ದಿಸುವ ಮತ್ತು ವಿವಿಧ ರಾಜ್ಯಗಳಲ್ಲಿ ವಿಪತ್ತಿನಿಂದ ಸಮುದಾಯದ ಮೇಲಾಗುವ ಅಪಾಯವನ್ನು ತಗ್ಗಿಸುವ ಕಾರ್ಯದಲ್ಲಿ ನಿರತವಾಗಿದೆ. ತಮ್ಮ ಕಾರ್ಯಯೋಜನೆ ಕುರಿತು ಆಳವಾದ ಮಾಹಿತಿ, ಸ್ಥಳೀಯ ನಾಯಕರಲ್ಲಿ ಅಸಾಧಾರಣ ಸಾಮರ್ಥ್ಯ ರೂಪಿಸುವ, ಹೊರಗಿಡಲಾದ ಸಮುದಾಯಗಳನ್ನು ಸೇರಿಸಿ ದೊಡ್ಡಮಟ್ಟದ ಕಾರ್ಯಕ್ರಮಗಳನ್ನು ಎಸ್.ಇ.ಇ.ಡಿ.ಎಸ್ ಸಂಸ್ಥೆ ನಡೆಸುತ್ತಿದೆ. ಸ್ಥಳೀಯ ನಾಯಕರು ಹೊಸತನದ ಸಾಮರ್ಥ್ಯ ಹೊಂದಿರುತ್ತಾರೆ ಮತ್ತು ಸ್ಥಳೀಯ ವ್ಯವಸ್ಥೆಗಳು ಮತ್ತು ರಾಜಕೀಯ ಮತ್ತು ಸಂಸ್ಕೃತಿಯ ಬಗ್ಗೆ ಬಲವಾದ ತಿಳುವಳಿಕೆ ಹೊಂದಿರುತ್ತಾರೆ. ಸ್ಥಳೀಯ ನಾಯಕರ ಮಹತ್ವಕ್ಕೆ ಮಾನ್ಯತೆ ನೀಡಿ ಅವರನ್ನು ಸಸ್ಟೈನಬಲ್ ಎನ್ವೈರ್ನಮೆಂಟ್ ಅಂಡ್ ಎಕಲಾಜಿಕಲ್ ಸೊಸೈಟಿ [ಎಸ್.ಇ.ಇ.ಡಿ.ಎಸ್] ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಅವರ ಸಮುದಾಯಗಳಲ್ಲಿ ದೌರ್ಬಲ್ಯವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಎಸ್.ಇ.ಇ.ಡಿ.ಎಸ್ ಸಂಸ್ಥೆ ಹಲವು ರಾಜ್ಯಗಳಲ್ಲಿ ಶಾಲೆಗಳ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ನಾಯಕರು ಮತ್ತು ಶಿಕ್ಷಕರನ್ನು ಬಳಸಿಕೊಂಡು ತನ್ನದೇ ಸಮುದಾಯದಲ್ಲಿ ವಿಪತ್ತು ಕುರಿತು ಅಪಾಯ ಕಡಿಮೆ ಮಾಡುವ ಕುರಿತು ಅರಿವು ಮೂಡಿಸುತ್ತಿದೆ. ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ಕಾರ್ಯಕ್ರಮಗಳ ಜಂಟಿ ಅನುಷ್ಠಾನಕ್ಕಾಗಿ ಜಿಲ್ಲಾ ಅಧಿಕಾರಿಗಳು ಮತ್ತು ಸಮುದಾಯಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ಕಲ್ಯಾಣ ಸಂಘಗಳು, ಮಾರುಕಟ್ಟೆ, ವ್ಯಾಪಾರಿ ಸಂಘಗಳು ಮತ್ತು ಸ್ಥಳೀಯ ಗುಂಪುಗಳ ಪ್ರತಿನಿಧಿಗಳನ್ನು ಒಳಗೊಂಡ ನಾಗರಿಕ ವೇದಿಕೆಯನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಭೂಕಂಪ ಸಂಭವಿಸಿದ [ 2001, 2005, 2015] ಸಂದರ್ಭದಲ್ಲಿ ಎಸ್.ಇ.ಇ.ಡಿ.ಎಸ್ ಸಂಸ್ಥೆ ವಿಪತ್ತು ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದೆ. ಭೂಕಂಪ ನಿರೋಧಕ ಕಟ್ಟಡಗಳ ನಿರ್ಮಾಣಗಾರ ಗುಂಪನ್ನು ಸಜ್ಜುಗೊಳಿಸಿದೆ. ಹಲವು ರಾಜ್ಯಗಳಲ್ಲಿ ತುರ್ತುಪರಿಸ್ಥಿತಿ ನಿಭಾಯಿಸಲು ರಾಯಭಾರಿಗಳಾಗಿ ಪರಿವರ್ತನೆಗೊಂಡಿದೆ. ವಿಪತ್ತುಗಳನ್ನು ಎದುರಿಸಲು ಸೀಡ್ಸ್ ಸಂಸ್ಥೆ ಪೂರ್ವಸಿದ್ಧತೆ ಮತ್ತು ಪ್ರತಿಕ್ರಿಯೆಗಾಗಿ ಎಐ ಎಂಬ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುತ್ತಿದೆ ಮತ್ತು ಸಂಬಂಧಿತ ಸಮುದಾಯಗಳನ್ನು ರಕ್ಷಿಸಲು ತೀರ್ಮಾನ ಕೈಗೊಳ್ಳುವ ಸಾಮರ್ಥ್ಯವನ್ನು ರೂಢಿಸಿಕೊಂಡಿದೆ.
• ನಿರ್ದಿಷ್ಟವಾಗಿ ಭೂ ಕುಸಿತ, ಭೂ ಸಂಬಂಧಿತ ಅಪಾಯಗಳನ್ನು ಎದುರಿಸುವ ಕುರಿತು ವೈಜ್ಞಾನಿಕ ಅಧ್ಯಯನದಲ್ಲಿ ಆಧಾರ ಸ್ಥಂಭವಾಗಿರುವವರಲ್ಲಿ ಡಾ. ರಾಜೇಂದ್ರ ಕುಮಾರ್ ಭಂಡಾರಿ ಪ್ರಮುಖರಾಗಿದ್ದಾರೆ. ಭೂ ಕುಸಿತ ಕುರಿತು ಮೊಟ್ಟಮೊದಲ ಸಿ.ಎಸ್.ಐ.ಆರ್- ಸೆಂಟ್ರಲ್ ಬಿಲ್ಡಿಂಗ್ ರೀಸರ್ಚ್ ಇನ್ಸ್ಟಿಟ್ಯೂಟ್ ಆರಂಭಿಸಿದ್ದಾರೆ. ಇತರೆ ಮೂರು ಕೇಂದ್ರಗಳು ಸಹ ಇವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವರು ಭಾರತದಲ್ಲಿನ ವಿಪತ್ತುಗಳ ಕುರಿತು ಅಧ‍್ಯಯನ ನಡೆಸುತ್ತಿದ್ದಾರೆ. ಡಾ. ರಾಜೇಂದ್ರ ಕುಮಾರ್ ಭಂಡಾರಿ ಅವರು ಭೂಮಿಯ ಮೇಲೆ ಪೆನಟ್ರೇಟಿಂಗ್ ರಡಾರ್ ತಂತ್ರಜ್ಞಾನ, ಜಿಯೋಟೆಕ್ನಿಕಲ್ ಡಿಜಿಟಲ್ ಸಿಸ್ಟಮ್, ಕಂಪಿಸುವ ಪೈಜೋಮೀಟರ್ ಗಳು, ಲೇಸರ್ ಪಾರ್ಟಿಕಲ್ ವಿಶ್ಲೇಷಣೆ ಮಾಡಿರುವ ಜತೆಗೆ ಭೂಕುಸಿತದ ಆರಂಭಿಕ ಹಂತದ ಎಚ್ಚರಿಕೆ ಕುರಿತು ಆಳವಾದ ಅಧ್ಯಯನ ಮಾಡಿದ್ದಾರೆ. ಮಾನವನ ವಾಸಸ್ಥಳ ಮತ್ತು ಹೆದ್ದಾರಿಗಳ ನಡುವೆ ಇರುವ ಸಂಪರ್ಕ, ವೈಜ್ಞಾನಿಕ ತನಿಖೆ. ಹೀಗೆ ಹಲವು ಆಯಾಮಗಳಲ್ಲಿಇವರು ತಮ್ಮನ್ನು ತೊಡಗಿಸಿಕೊಂಡಿ್ದ್ದಾರೆ. ಪರ್ವತ ಶ್ರೇಣಿಗಳಲ್ಲಿ ಆಳವಾದ ಒಳಚರಂಡಿ, ಭೂಮಿ ಕೊರೆಯುವ ಮೂಲಕ ಭೂ ಕುಸಿತ ಸರಿಪಡಿಸುವ ಮೊದಲ ಜಾಗತಿಕ ಉದಾಹರಣೆಯನ್ನು ಇವರು ನೀಡಿದ್ದಾರೆ. ಬಿಲ್ಡಿಂಗ್ ಮೆಟಿರಿಯಲ್ಸ್ ಅಂಡ್ ಟೆಕ್ನಾಲಜಿ ಪ್ರಮೋಷನ್ ಕೌನ್ಸಿಲ್ [ಬಿ.ಎಂ.ಟಿ.ಪಿ.ಸಿ] ಮೂಲಕ ಲ್ಯಾಂಡ್ ಸ್ಲೈಡ್ ಹಜಾರ್ಡ್ ಅಟ್ಲಾಸ್ ಆಫ್ ಇಂಡಿಯಾ ಕೃತಿಯನ್ನು ಡಾ. ರಾಜೇಂದ್ರ ಕುಮಾರ್ ಭಂಡಾರಿ ಹೊರ ತಂದಿದ್ದಾರೆ. ರಾಷ್ಟ್ರೀಯ ವಿಪತ್ತು ಜ್ಞಾನ ಜಾಲಕ್ಕಾಗಿ ಇವರು ಕಳೆದ 2001 ರ ಅಕ್ಟೋಬರ್ ನಲ್ಲಿ ಸಲ್ಲಿಸಿದ ಶಿಫಾರಸ್ಸುಗಳ ಸಹ ಅತ್ಯಂತ ಮಹತ್ವದ್ದಾಗಿದೆ. ಭೂ ಕುಸಿತ ವಿಪತ್ತು ತಗ್ಗಿಸುವ ಕುರಿತು ಕ್ರಿಯಾತ್ಮಕ ಶಿಫಾರಸ್ಸುಗಳನ್ನು ನೀಡಲು ಇವರು ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್ [ಐ.ಎನ್.ಐ.ಇ] ವೇದಿಕೆಯ ನೇತೃತ್ವ ವಹಿಸಿದ್ದರು. ವಿದ್ಯಾರ್ಥಿಗಳಿಗೆ ವಿಪತ್ತು ಶಿಕ್ಷಣವನ್ನು ಜನಪ್ರಿಯಗೊಳಿಸಲು ಡಾ. ರಾಜೇಂದ್ರ ಕುಮಾರ್ ಭಂಡಾರಿ ಅವರು ಪುಸ್ತಕಗಳನ್ನು ಬರೆದಿದ್ದಾರೆ.
*****
(Release ID: 1691715)
Visitor Counter : 261