ಪ್ರಧಾನ ಮಂತ್ರಿಯವರ ಕಛೇರಿ

ಇದು ಡಿಜಿಟಲ್ ಕ್ರಾಂತಿಯ ಶತಮಾನ ಮತ್ತು ಹೊಸಯುಗದ ಆವಿಷ್ಕಾರಗಳ ಕಾಲ: ಪ್ರಧಾನಮಂತ್ರಿ ನರೇಂದ್ರ ಮೋದಿ


ಈ ಶತಮಾನವನ್ನು ಏಷ್ಯಾದ ಶತಮಾನವನ್ನಾಗಿ ಮಾಡಲು ಬಿಮ್ ಸ್ಟೆಕ್ ರಾಷ್ಟ್ರಗಳು ನಡುವೆ ಸಹಭಾಗಿತ್ವಕ್ಕೆ ಪ್ರಧಾನಮಂತ್ರಿ ಕರೆ

ಬಿಮ್ ಸ್ಟೆಕ್ ರಾಷ್ಟ್ರಗಳಲ್ಲಿ ನವೋದ್ಯಮಗಳ ಕ್ರಿಯಾಶೀಲ ಶಕ್ತಿಗೆ ಶ್ಲಾಘನೆ

Posted On: 16 JAN 2021 8:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶತಮಾನವನ್ನು ಏಷ್ಯಾದ ಶತಮಾನವನ್ನಾಗಿ ಮಾಡಲು ಬಿಮ್ ಸ್ಟೆಕ್ ರಾಷ್ಟ್ರಗಳು ಒಗ್ಗೂಡಬೇಕಿದೆ. ಇವು ಒಟ್ಟು 5ನೇ ಒಂದರಷ್ಟು ಜನಸಂಖ್ಯೆಯನ್ನು ಹೊಂದಿವೆ ಮತ್ತು ಎಲ್ಲಾ ಒಗ್ಗೂಡಿದರೆ 3.8 ಟ್ರಿಲಿಯನ್ ಡಾಲರ್ ಜಿಡಿಪಿ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದ್ದಾರೆ. ಅವರುಪ್ರಾರಂಭ: ಸ್ಟಾರ್ಟ್ ಅಪ್ ಇಂಡಿಯಾ ಅಂತಾರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಮಾತನಾಡಿದರು.

ಬಿಮ್ ಸ್ಟೆಕ್ ರಾಷ್ಟ್ರಗಳಲ್ಲಿ ಅಂದರೆ ಬಾಂಗ್ಲಾದೇಶ, ಭೂತಾನ್, ಭಾರತ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಗಳಲ್ಲಿ ನವೋದ್ಯಮ ವಲಯ ಅತ್ಯಂತ ಕ್ರಿಯಾಶೀಲ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಶತಮಾನವನ್ನು ಡಿಜಿಟಲ್ ಕ್ರಾಂತಿಯ ಶತಮಾನ ಮತ್ತು ನವಯುಗದ ಆವಿಷ್ಕಾರಗಳ ಶತಮಾನ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಶತಮಾನ ಏಷ್ಯಾದ ಶತಮಾನವಾಗಿದೆ. ಆದ್ದರಿಂದ ಪ್ರದೇಶದ ಭವಿಷ್ಯದ ತಂತ್ರಜ್ಞಾನ ಮತ್ತು ಉದ್ದಿಮೆದಾರರನ್ನು ಒಗ್ಗೂಡಿಸಲು ಇದು ಸಕಾಲ ಎಂದು ಹೇಳಿದರು. ಅದಕ್ಕಾಗಿ ಪ್ರಧಾನಮಂತ್ರಿ ಅವರು, ಏಷ್ಯಾದ ರಾಷ್ಟ್ರಗಳು ಸಹಭಾಗಿತ್ವವನ್ನು ಸಾಧಿಸಬೇಕು ಮತ್ತು ಎಲ್ಲವೂ ಒಟ್ಟಾಗಿ ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎಂದರು. ಹಲವು ಶತಮಾನಗಳಿಂದ ನಮ್ಮಲ್ಲಿ ಸಂಸ್ಕೃತಿ, ನಾಗರಿಕತೆ ಹಾಗೂ ಪರಂಪರೆ ಮತ್ತು ಸಂಬಂಧಗಳ ಹಂಚಿಕೆಯಾಗಿದೆ. ನಾವು ನಮ್ಮ ಚಿಂತನೆ, ಆದರ್ಶಗಳು ಮತ್ತು ಒಳ್ಳೆಯ ಸಂಗತಿಗಳನ್ನು ಹಂಚಿಕೊಳ್ಳುತ್ತೇವೆ. ಆದ್ದರಿಂದ ನಾವು ನಮ್ಮ ಯಶಸ್ಸನ್ನು ಸಹ ಹಂಚಿಕೊಳ್ಳಬೇಕಿದೆ. ಹೊಣೆಗಾರಿಕೆ ಸ್ವಾಭಾವಿಕವಾಗಿಯೇ ಬಿಮ್ ಸ್ಟೆಕ್ ರಾಷ್ಟ್ರಗಳ ಮೇಲಿದೆ. ಏಕೆಂದರೆ ನಾವು ಒಟ್ಟು ಜನಸಂಖ್ಯೆಯ ಐದನೇ ಒಂದರಷ್ಟಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು.

ಭಾಗದ ಯುವ ಜನರಲ್ಲಿ ಒರಟುತನ, ಶಕ್ತಿ ಮತ್ತು ಕಾತುರ ಹೆಚ್ಚಿದೆ. ಅವುಗಳಿಂದ ಹೊಸ ಸಾಧ್ಯತೆಗಳನ್ನು ಕಾಣುತ್ತಿದ್ದೇನೆ ಎಂದು ಪ್ರಧಾನಮಂತ್ರಿ ಹೇಳಿದರು. ಆದ್ದರಿಂದ 2018ರಲ್ಲಿ ನಡೆದ ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ನಾನು ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಸಹಭಾಗಿತ್ವಕ್ಕೆ ಕರೆ ನೀಡಿದ್ದೆ ಮತ್ತು ಬಿಮ್ ಸ್ಟೆಕ್ ಸ್ಟಾರ್ಟ್ ಅಪ್ ಸಮಾವೇಶವನ್ನು ನಡೆಸಬೇಕೆಂದು ಪ್ರಸ್ತಾಪಿಸಿದ್ದೆ ಎಂದರು. ಇಂದು ಪಣವನ್ನು ಈಡೇರಿಸುವ ನಿಟ್ಟಿನಲ್ಲಿ ಭಾರತೀಯ ಅಂತಾರಾಷ್ಟ್ರೀಯ ನವೋದ್ಯಮ ಶೃಂಗಸಭೆ ಆಯೋಜಿಸಿರುವುದು ಒಂದು ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರದೇಶದ ರಾಷ್ಟ್ರಗಳ ನಡುವೆ ಸಂಪರ್ಕ ಮತ್ತು ವಾಣಿಜ್ಯ ಸಂಬಂಧಗಳ ವೃದ್ಧಿಗೆ ಸದ್ಯ ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದು ಸ್ಥೂಲವಿವರಣೆಯನ್ನು ನೀಡಿದರು. ಅವರು, ಬಿಮ್ ಸ್ಟೆಕ್ ರಾಷ್ಟ್ರಗಳ ಸಚಿವರು, ಡಿಜಿಟಲ್ ಸಂಪರ್ಕ ಉತ್ತೇಜನಕ್ಕೆ 2018ರಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅಂತೆಯೇ ರಕ್ಷಣಾ, ವಿಪತ್ತು ನಿರ್ವಹಣೆ, ಬಾಹ್ಯಾಕಾಶ, ಕೃಷಿ ಮತ್ತು ವ್ಯಾಪಾರ ವಲಯ ಸೇರಿದಂತೆ ಇತರೆ ವಲಯಗಳಲ್ಲೂ ಸಹಭಾಗಿತ್ವ ಸಾಧಿಸಲಾಗುತ್ತಿದೆ ಎಂದರು. “ ವಲಯಗಳಲ್ಲಿ ಇಂತಹ ಬಲಿಷ್ಠ ಸಂಬಂಧಗಳಿಂದಾಗಿ ನಮ್ಮ ನವೋದ್ಯಮಗಳಿಗೆ ತಮ್ಮ ಮೌಲ್ಯ ಸೃಷ್ಟಿ ಚಕ್ರವನ್ನು ಮುನ್ನಡೆಸಲು ಸಹಾಯಕವಾಗಲಿದೆ. ಜೊತೆಗೆ ಮೂಲಸೌಕರ್ಯ, ಕೃಷಿ ಮತ್ತು ವಾಣಿಜ್ಯ ವಲಯಗಳಲ್ಲಿನ ಸಂಬಂಧ ಮತ್ತಷ್ಟು ಆಳವಾಗಿ ಬೇರೂರಲು ಸಾಧ್ಯವಾಗಲಿದೆ. ಇದರಿಂದ ನಮ್ಮ ನವೋದ್ಯಮಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಹಾಗೂ ಅವುಗಳಿಂದ ವಲಯಗಳಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

***



(Release ID: 1689894) Visitor Counter : 103