ಪ್ರಧಾನ ಮಂತ್ರಿಯವರ ಕಛೇರಿ

ದೆಹಲಿ ದೊಡ್ಡ ಆರ್ಥಿಕ ರಾಷ್ಟ್ರದ ರಾಜಧಾನಿಯಾಗಿ, 130 ಕೋಟಿ ಜನರ ವ್ಯೂಹಾತ್ಮಕ ಶಕ್ತಿಕೇಂದ್ರವಾಗಿದ್ದು, ಅದರ ಭವ್ಯತೆ ಸ್ಪಷ್ಟವಾಗಿರಬೇಕು:ಪ್ರಧಾನಮಂತ್ರಿ


ದೆಹಲಿಯಲ್ಲಿ 21ನೇ ಶತಮಾನದ ಆಕರ್ಷಣೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ: ಪ್ರಧಾನಮಂತ್ರಿ

Posted On: 28 DEC 2020 2:06PM by PIB Bengaluru

ದೇಶದ ಪ್ರತಿಯೊಂದು ನಗರವೂ ಅದು ದೊಡ್ಡದೇ ಇರಲಿ, ಇಲ್ಲ ಚಿಕ್ಕದೇ ಆಗಿರಲಿ ಅದು ದೇಶದ ಭಾರತದ ಆರ್ಥಿಕತೆಯ ತಾಣವಾಗಿದೆ, ಆದಾಗ್ಯೂ ದೆಹಲಿ ರಾಷ್ಟ್ರೀಯ ರಾಜಧಾನಿಯಾಗಿ 21ನೇ ಶತಮಾನದ ಭವ್ಯತೆಯನ್ನು ಪ್ರತಿಬಿಂಬಿಸಬೇಕು ಮತ್ತು ವಿಶ್ವದಲ್ಲಿ ತನ್ನ ಅಸ್ತಿತ್ವವನ್ನು ಪ್ರತಿಪಾದಿಸಬೇಕು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹೇಳಿದ್ದಾರೆ. ಈ ಹಳೆಯ ನಗರವನ್ನು ಆಧುನೀಕರಿಸಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ದೇಶದ ಪ್ರಪ್ರಥಮ ಚಾಲಕ ರಹಿತ ಮೆಟ್ರೋ ಕಾರ್ಯಾಚರಣೆಯನ್ನು ಉದ್ಘಾಟಿಸಿ, ದೆಹಲಿ ಮೆಟ್ರೋದ ಏರ್ ಪೋರ್ಟ್ ಎಕ್ಸ್ ಪ್ರೆಸ್ ಮಾರ್ಗದಲ್ಲಿ ರಾಷ್ಟ್ರೀಯ ಸಮಾನ ಸಾರಿಗೆ ಕಾರ್ಡ್ ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.  
ತೆರಿಗೆ ರಿಯಾಯಿತಿ ನೀಡುವ ಮೂಲಕ ಸರ್ಕಾರವು ವಿದ್ಯುತ್ ವಾಹನಗಳ ಚಲನಶೀಲತೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ರಾಜಧಾನಿಯ ಹಳೆಯ ಮೂಲಸೌಕರ್ಯಗಳನ್ನು ಆಧುನಿಕ ತಂತ್ರಜ್ಞಾನ ಆಧಾರಿತ ಮೂಲಸೌಕರ್ಯವಾಗಿ ಪರಿವರ್ತಿಸಲಾಗುತ್ತಿದೆ ಎಂದು ಅವರು ಹೇಳಿದರು. ನೂರಾರು ವಸತಿ ಪ್ರದೇಶಗಳನ್ನು ಸಕ್ರಮಗೊಳಿಸುವ ಮೂಲಕ ಮತ್ತು ಹಳೆಯ ಸರ್ಕಾರಿ ಕಟ್ಟಡವನ್ನು ಪರಿಸರ ಸ್ನೇಹಿ ಆಧುನಿಕ ರಚನೆಗಳನ್ನಾಗಿ ಮಾಡುವ ಮೂಲಕ ಕೊಳೆಗೇರಿ ನಿವಾಸಿಗಳಿಗೆ ಉತ್ತಮ ಜೀವನ ಮಟ್ಟ ಒದಗಿಸುವ ಚಿಂತನೆಗಳು ಪ್ರತಿಬಿಂಬಿತವಾಗುತ್ತಿವೆ ಎಂದರು. .
ದೆಹಲಿ ಒಂದು ಹಳೆಯ ಪ್ರವಾಸಿ ತಾಣವಾಗಿರುವುದರಿಂದ ನಗರವನ್ನು 21ನೇ ಶತಮಾನದ ಆಕರ್ಷಣೆಯಾಗಿ ಅಭವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ದೆಹಲಿ ಅಂತಾರಾಷ್ಟ್ರೀಯ ಸಮಾವೇಶ, ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ಪ್ರವಾಸೋದ್ಯಮಗಳಿಗೆ ನೆಚ್ಚಿನ ತಾಣವಾಗಿದ್ದು, ರಾಜಧಾನಿಯ ದ್ವಾರಕಾ ಬಡಾವಣೆಯಲ್ಲಿ ದೇಶದ ಬೃಹತ್ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ ಎಂದರು.  ಅಂತೆಯೇ, ನೂತನ ಸಂಸತ್ ಭವನದ ಕಾಮಗಾರಿಯನ್ನು ಅತಿ ದೊಡ್ಡ ಭಾರತ್ ವಂದನಾ ಉದ್ಯಾನವನದೊಂದಿಗೆ ಪ್ರಾರಂಭಿಸಲಾಗಿದೆ. ಇದು ದೆಹಲಿಯ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡುವುದಲ್ಲದೆ ನಗರದ ಚಿತ್ರಣವನ್ನೂ ಬದಲಾಯಿಸುತ್ತದೆ ಎಂದರು..
ದೇಶದ ಪ್ರಥಮ ಚಾಲಕ ರಹಿತ ಮೆಟ್ರೋ ಕಾರ್ಯಾಚರಣೆ ಮತ್ತು ದೆಹಲಿ ಮೆಟ್ರೋದ ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗದಲ್ಲಿ ರಾಷ್ಟ್ರೀಯ ಸಮಾನ ಸಾರಿಗೆ ಕಾರ್ಡ್ ಸೌಲಭ್ಯವನ್ನು ಪಡೆದ ರಾಜಧಾನಿಯ ನಾಗರಿಕರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, “ದೆಹಲಿಯು ಬೃಹತ್ ಆರ್ಥಿಕ ರಾಷ್ಟ್ರದ ರಾಜಧಾನಿಯಾಗಿದ್ದು, 130 ಕೋಟಿ ಜನರ ವ್ಯೂಹಾತ್ಮಕ ಶಕ್ತಿಯಾಗಿದೆ, ಇದರ ಭವ್ಯತೆ ಸ್ಪಷ್ಟವಾಗಿರಬೇಕು”  ಎಂದು ತಿಳಿಸಿದರು. 

 

 

                          *****                                                  

 


(Release ID: 1684182) Visitor Counter : 213