ಪ್ರಧಾನ ಮಂತ್ರಿಯವರ ಕಛೇರಿ

ಭಾರತ - ವಿಯೆಟ್ನಾಂ ವರ್ಚುವಲ್ ಶೃಂಗಸಭೆಯ (ಡಿಸೆಂಬರ್ 21, 2020) ಒಪ್ಪಂದಗಳು

Posted On: 21 DEC 2020 7:50PM by PIB Bengaluru

ಕ್ರ.ಸಂ.

ದಾಖಲೆಗಳು

ಭಾರತದ ಪರ

ವಿಯೆಟ್ನಾಂ ಪರ

1.

ಶಾಂತಿ, ಏಳಿಗೆ ಮತ್ತು ಜನರಿಗಾಗಿ  ಭಾರತ-ವಿಯೆಟ್ನಾಂ ಜಂಟಿ ಮುನ್ನೋಟ

ಭಾರತ-ವಿಯೆಟ್ನಾಂ ನಡುವಿನ ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಭವಿಷ್ಯದ ಅಭಿವೃದ್ಧಿಗೆ ಮಾರ್ಗದರ್ಶನ ನೀಡಲು, ಅತ್ಯಂತ ಆಳವಾಗಿ ಬೇರೂರಿರುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಬಲವರ್ಧನೆ, ಹಂಚಿಕೆಯ ಮೌಲ್ಯಗಳು ಮತ್ತು ಆಸಕ್ತಿ ಮತ್ತು ಪರಸ್ಪರ ಕಾರ್ಯತಾಂತ್ರಿಕ ವಿಶ್ವಾಸ ಮತ್ತು ಎರಡೂ ರಾಷ್ಟ್ರಗಳ ನಡುವಿನ ಅರ್ಥೈಸುವಿಕೆಗಾಗಿ.

ಪ್ರಧಾನಮಂತ್ರಿಗಳಿಂದ ಒಪ್ಪಿಗೆ

2.

ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಜಾರಿಗೆ 2021-23ನೇ ಅವಧಿಗೆ ಕ್ರಿಯಾ ಯೋಜನೆ

2021-23ನೇ ಸಾಲಿಗೆ ಎರಡೂ ಕಡೆಯಿಂದ “ಶಾಂತಿ, ಸಂಮೃದ್ಧಿ ಮತ್ತು ಜನರಿಗಾಗಿ ಜಂಟಿ ಮುನ್ನೋಟ’’ ಜಾರಿಗೆ ಸಮಗ್ರ ಕ್ರಿಯೆಗಳ ಮೂಲಕ ಕ್ರಮ.  

ಡಾ. ಎಸ್. ಜೈಶಂಕರ್

ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ

ಶ್ರೀ. ಫ್ಹಾಮ್ ಬಿನ್ಹ್ ಮಿನ್ಹ್ ,ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು.

3.

ಭಾರತೀಯ ಉದ್ಯಮ ಸಹಕಾರ ವ್ಯವಸ್ಥೆ ಅನುಷ್ಠಾನಕ್ಕಾಗಿ ಭಾರತದ ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆ ಮತ್ತು ವಿಯೆಟ್ನಾಂನ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ರಕ್ಷಣಾ ಉದ್ಯಮದ ಇಲಾಖೆ ನಡುವೆ ಒಪ್ಪಂದ.

ಎರಡೂ ದೇಶಗಳ ರಕ್ಷಣಾ ಉದ್ಯಮಗಳ ನಡುವೆ ಸಹಕಾರ ಸಂಬಂಧ ಉತ್ತೇಜನಕ್ಕೆ ನೀತಿ ರೂಪಿಸಲು.

ಶ್ರೀ. ಸುರೇಂದ್ರ ಪ್ರಸಾದ್ ಯಾದವ್

ಜಂಟಿ ಕಾರ್ಯದರ್ಶಿ, (ನೌಕಾ ವ್ಯವಸ್ಥೆ)

ಮೇಜರ್ ಜನರಲ್ ಹೊವಾಂಗ್ ಕಿಮ್ ಪುಂಗ್, ನಿರ್ದೇಶಕರು

4.

ವಿಯೆಟ್ನಾಂ ನ್ಹಾ ಟ್ರಾಂಗ್ ನ ರಾಷ್ಟ್ರೀಯ ದೂರಸಂಪರ್ಕ ವಿಶ್ವವಿದ್ಯಾಲಯದಲ್ಲಿನ ಸೇನಾ ಸಾಫ್ಟ್ ವೇರ್ ಪಾರ್ಕ್ ಗೆ 5 ಮಿಲಿಯನ್ ಡಾಲರ್ ಭಾರತೀಯ ಅನುದಾನಕ್ಕಾಗಿ ಹನೋಯ್ ನಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ವಿಯೆಟ್ನಾಂನ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ದೂರಸಂಪರ್ಕ ವಿಶ್ವವಿದ್ಯಾಲಯದ ನಡುವೆ ಒಪ್ಪಂದ


ಸಾಫ್ಟ್ ವೇರ್ ಅಪ್ಲಿಕೇಷನ್ ವಲಯದಲ್ಲಿ ಸೇವೆಗಳು ಮತ್ತು ತರಬೇತಿಗೆ ಅನುಕೂಲವಾಗುವಂತೆ ನ್ಹಾ ಟ್ರಾಂಗ್ ನ ದೂರಸಂಪರ್ಕ ವಿಶ್ವವಿದ್ಯಾಲಯದಲ್ಲಿ ಸೇನಾ ಸಾಫ್ಟ್ ವೇರ್ ಪಾರ್ಕ್ ನಲ್ಲಿ ಐಟಿ ಮೂಲಸೌಕರ್ಯ ಸ್ಥಾಪನೆಗೆ ನೆರವು ನೀಡುವುದು.

ಶ್ರೀ. ಪ್ರಣಯ್ ವರ್ಮ, ವಿಯೆಟ್ನಾಂನಲ್ಲಿನ ಭಾರತದ ರಾಯಭಾರಿ

ಕರ್ನಲ್ ಲಿ. ಕ್ಸುವಾನ್ ಹುಂಗ್ ರೆಕ್ಟರ್

5.

ಭಾರತದಲ್ಲಿನ ವಿಶ್ವಸಂಸ್ಥೆಯ ಶಾಂತಿ ಪಾಲನಾ ಕಾರ್ಯಾಚರಣೆ ಕೇಂದ್ರದ ಮತ್ತು ವಿಯೆಟ್ನಾಂನ ವಿಶ್ವಸಂಸ್ಥೆಯ ಶಾಂತಿ ಪಾಲನಾ ಸಹಕಾರ ಕಾರ್ಯಾಚರಣೆ ಒಪ್ಪಂದ ಅನುಷ್ಠಾನಕ್ಕೆ ವ್ಯವಸ್ಥೆ

ವಿಶ್ವಸಂಸ್ಥೆಯ ಶಾಂತಿ ಪಾಲನಾ ವಲಯದಲ್ಲಿ ಸಹಕಾರ ಅಭಿವೃದ್ಧಿಗೆ ವಿಶೇಷ ಚಟುವಟಿಕೆಗಳನ್ನು ಗುರುತಿಸಲು

ಮೇಜರ್ ಜನರಲ್ ಅನಿಲ್ ಕೆ.ಆರ್. ಕಶೀದ್, ಹೆಚ್ಚುವರಿ ನಿರ್ದೇಶಕರು(ಐಸಿ)

ಮೇಜರ್ ಜನರಲ್ ಹೊವಾಂಗ್ ಕಿಮ್ ಪುಂಗ್, ನಿರ್ದೇಶಕರು

6.

ಭಾರತದ ಅಣು ಇಂಧನ ನಿಯಂತ್ರಣ ಮಂಡಳಿ(ಎಇಆರ್ ಬಿ) ಮತ್ತು ವಿಯೆಟ್ನಾಂನ ರೇಡಿಯೇಷನ್ ಮತ್ತು ಅಣು ಸುರಕ್ಷತಾ ಸಂಸ್ಥೆ(ವಿ ಎ ಆರ್ ಎ ಎನ್ ಎಸ್) ನಡುವೆ

ರೇಡಿಯೇಷನ್ ತಂತ್ರಜ್ಞಾನ ಮತ್ತು ಅಣು ಸುರಕ್ಷತೆ ವಲಯದಲ್ಲಿ ಎರಡೂ ದೇಶಗಳ ನಡುವೆ ನಿಯಂತ್ರಣ ಸಂಸ್ಥೆಗಳ ನಡುವೆ ಪರಸ್ಪರ ಸಹಕಾರಕ್ಕೆ ಉತ್ತೇಜನ ನೀಡುವುದು.

ಶ್ರೀ. ಜಿ. ನಾಗಶ್ವರ್ ರಾವ್, ಅಧ್ಯಕ್ಷರು

ಪ್ರೊ. ನುಯೇನ್  ತುವಾನ್ ಖೈ, ಮಹಾ ನಿರ್ದೇಶಕರು

7.

ಸಿಎಸ್ಐಆರ್-ಭಾರತೀಯ ಪೆಟ್ರೋಲಿಯಂ ಸಂಸ್ಥೆ ಮತ್ತು ವಿಯೆಟ್ನಾಂ ಪೆಟ್ರೋಲಿಯಂ ಸಂಸ್ಥೆಗಳ ನಡುವೆ ಒಡಂಬಡಿಕೆ


ಪೆಟ್ರೋಲಿಯಂ ಸಂಶೋಧನೆ ಮತ್ತು ತರಬೇತಿ ಕಾರ್ಯದಲ್ಲಿ ಸಹಕಾರಕ್ಕೆ ಉತ್ತೇಜನ ನೀಡುವುದು. 

ಡಾ. ಅಂಜನ್ ರಾಯ್, ನಿರ್ದೇಶಕರು

ಶ್ರೀ ನುಯಾನ್ ಅನ್ಹಡುಯೋ, ನಿರ್ದೇಶಕರು 

8.

ಭಾರತದ ಟಾಟಾ ಸ್ಮಾರಕ ಕೇಂದ್ರ ಹಾಗೂ ವಿಯೆಟ್ನಾಂನ ರಾಷ್ಟ್ರೀಯ ಕ್ಯಾನ್ಸರ್ ಆಸ್ಪತ್ರೆ ನಡುವೆ ಒಡಂಬಡಿಕೆ

ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಮತ್ತು ಪತ್ತೆಗೆ ಸಹಭಾಗಿತ್ವ, ಆರೋಗ್ಯ ರಕ್ಷಣಾ ಸೇವೆಗಳು, ವೈಜ್ಞಾನಿಕ ಸಂಶೋಧನೆ ಮತ್ತು ತರಬೇತಿ ವಲಯಗಳಲ್ಲಿ ಪರಸ್ಪರ ವಿನಿಮಯವನ್ನು ಉತ್ತೇಜಿಸುವುದು.

ಡಾ. ರಾಜೇಂದ್ರ ಎ. ಬದವೆ, ನಿರ್ದೇಶಕರು

ಶ್ರೀ ಲೆ ವ್ಯಾನ್ ಕ್ವಾಂಗ್,

ನಿರ್ದೇಶಕರು

9.

ಭಾರತದ ರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಯೆಟ್ನಾಂನ ಶುದ್ಧ ಇಂಧನ ಒಕ್ಕೂಟದ ನಡುವೆ ಒಡಂಬಡಿಕೆ
ಸೌರ ವಿದ್ಯುತ್ ಉದ್ಯಮಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ವಿಯೆಟ್ನಾಂ ನಡುವೆ ಜ್ಞಾನ, ಉತ್ತಮ ಪದ್ಧತಿಗಳು, ಮಾಹಿತಿ ವಿನಿಮಯಕ್ಕೆ ಉತ್ತೇಜನ ನೀಡುವುದು ಮತ್ತು ಭಾರತ-ವಿಯೆಟ್ನಾಂ ನಡುವೆ ಸೌರ ವಿದ್ಯುತ್ ಉತ್ತೇಜನಕ್ಕೆ ಹೊಸ ವಾಣಿಜ್ಯ ಅವಕಾಶಗಳ ಅನ್ವೇಷಣೆ.

ಶ್ರೀ ಪ್ರಣವ್ ಆರ್. ಮೆಹ್ತಾ, ಅಧ್ಯಕ್ಷರು

ಶ್ರೀ ದಾವೊ ಡು ಡುವಾಂಗ್, ಅಧ್ಯಕ್ಷರು

ಮಾಡಲಾಗಿರುವ ಘೋಷಣೆಗಳು:

1. ಭಾರತ ಸರ್ಕಾರದಿಂದ ವಿಯೆಟ್ನಾಂಗೆ 100 ಮಿಲಿಯನ್ ಅಮೆರಿಕನ್ ಡಾಲರ್ ರಕ್ಷಣಾ ಸಾಲವನ್ನು ವಿಸ್ತರಿಸಲಾಗಿದ್ದು, ಅದರಡಿ ವಿಯೆಟ್ನಾಂ ಗಡಿ ರಕ್ಷಣಾ ಕಮಾಂಡ್ ಗೆ ಹೈಸ್ಪೀಡ್ ಗಾರ್ಡ್ ಹಡಗು(ಎಚ್ಎಸ್ ಜಿಬಿ) ಉತ್ಪಾದನಾ ಯೋಜನೆ ಅನುಷ್ಠಾನ; ಒಂದು ಸಂಪೂರ್ಣ ಸಿದ್ಧವಾದ ಎಚ್ಎಸ್ ಜಿಬಿಯನ್ನು ವಿಯೆಟ್ನಾಂಗೆ ಹಸ್ತಾಂತರಿಸುವುದು; ಭಾರತದಲ್ಲಿ ಎರಡು ಎಚ್ಎಸ್ ಜಿಬಿಗಳ ಉತ್ಪಾದನೆ ಆರಂಭಿಸುವುದು  ಮತ್ತು ವಿಯೆಟ್ನಾಂನಲ್ಲಿ 7 ಎಚ್ಎಸ್ ಜಿಬಿಗಳ ಉತ್ಪಾದನೆಗೆ ಚಾಲನೆ ನೀಡುವುದು.  
2.
ವಿಯೆಟ್ನಾಂನ ನಿನ್ಹ ತುಹಾನ್ ಪ್ರಾಂತ್ಯದಲ್ಲಿ ಸ್ಥಳೀಯ ಸಮುದಾಯದ ಅಭಿವೃದ್ಧಿಗೆ ಭಾರತದ 1.5 ಮಿಲಿಯನ್ ಡಾಲರ್ ಆರ್ಥಿಕ ನೆರವಿನೊಂದಿಗೆ ಪೂರ್ಣಗೊಳಿಸಿರುವ ಏಳು ಅಭಿವೃದ್ಧಿ ಯೋಜನೆಗಳನ್ನು ಹಸ್ತಾಂತರಿಸುವುದು.   
3. 2021-2022ನೇ ಹಣಕಾಸು ವರ್ಷದಿಂದ ಆರಂಭವಾಗುವಂತೆ ವಾರ್ಷಿಕ ತ್ವರಿತ ಪರಿಣಾಮ ಬೀರುವ ಯೋಜನೆಗಳು(ಕ್ಯೂಐಪಿಎಸ್)ಗಳ ಸಂಖ್ಯೆಯನ್ನು 5 ರಿಂದ 10ಕ್ಕೆ ಹೆಚ್ಚಿಸುವುದು.

4. ವಿಯೆಟ್ನಾಂನಲ್ಲಿ ಪಾರಂಪರಿಕ ಸಂರಕ್ಷಣೆಗಾಗಿ ಮೂರು ಹೊಸ ಅಭಿವೃದ್ಧಿ ಪಾಲುದಾರಿಕೆ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು (ಮೈ ಸನ್ ದೇವಾಲಯದಲ್ಲಿ ಎಫ್ ಬ್ಲಾಕ್ ಅಭಿವೃದ್ಧಿ; ಕ್ವಾಂಗ್ ನಮ್ ಪ್ರಾಂತ್ಯದಲ್ಲಿ ಡಾಂಗ್ ಡುವಾಂಗ್ ಬೌದ್ಧರ  ಸ್ಮಾರಕ ಅಭಿವೃದ್ಧಿ ಮತ್ತು ಫು ಎನ್ ಪ್ರಾಂತ್ಯದಲ್ಲಿ ನಹಾನ್ ಛಾಮ್ ಗೋಪುರ ಅಭಿವೃದ್ಧಿ ಕಾರ್ಯ)
5. ಭಾರತ-ವಿಯೆಟ್ನಾಂ ನಾಗರಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ವಿಶ್ವಕೋಶವನ್ನು ಸಿದ್ಧಪಡಿಸುವ ದ್ವಿಪಕ್ಷೀಯ ಯೋಜನೆಯನ್ನು ಆರಂಭಿಸುವುದು.

***


(Release ID: 1682622) Visitor Counter : 165