ನೀತಿ ಆಯೋಗ

ಆನ್ ಲೈನ್ ವಿವಾದ ಇತ್ಯರ್ಥ (ಓ.ಡಿ.ಆರ್.) ಮೂಲಕ ನ್ಯಾಯದಾನದ ಮುಂದುವರಿದ ಲಭ್ಯತೆಗೆ ತಂತ್ರಜ್ಞಾನ ಬಳಕೆಯ ಆರಂಭಕ್ಕೆ ನೀತಿ ಆಯೋಗ ಮತ್ತು ಪಾಟ್ನಾ ಹೈಕೋರ್ಟ್ ಉಪಕ್ರಮ

Posted On: 08 DEC 2020 6:42PM by PIB Bengaluru

ನೀತಿ ಆಯೋಗವು ಪಾಟ್ನಾ ಹೈಕೋರ್ಟ್ ಸಹಯೋಗದಲ್ಲಿ ಕೋವಿಡೋತ್ತರ ಜಗತ್ತಿನಲ್ಲಿ ತಂತ್ರಜ್ಞಾನ, ಕಾನೂನು ಮತ್ತು ನಾವಿನ್ಯತೆಯ ಬಳಕೆಯ ಮೂಲಕ ಎಲ್ಲರಿಗೂ ಸಮರ್ಥ ಮತ್ತು ನ್ಯಾಯದ ಲಭ್ಯತೆಯ ವಿಶಾಲ ಕಾರ್ಯಕ್ರಮದ ಉದ್ಘಾಟನಾ ಸಭೆಯನ್ನು ಆಯೋಜಿಸಿತ್ತು.

ಓಡಿಆರ್ ಮೇಲೆ ಕೇಂದ್ರೀಕೃತವಾಗಿ ಈ ಸಭೆ 2020ರ ಡಿಸೆಂಬರ್ 7ರಂದು ಭಾರತದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮಾನ್ಯ ನ್ಯಾಯಮೂರ್ತಿ ನವೀನ್ ಸಿನ್ಹ, ಪಾಟ್ನಾ ಹೈಕೋರ್ಟ್ ನ ಮಾನ್ಯ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್, ಬಿಹಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಾನ್ಯ ನ್ಯಾಯಮೂರ್ತಿ ಹೇಮಂತ್ ಶ್ರೀವಾಸ್ತವ, ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಪಾಟ್ನಾ ಹೈಕೋರ್ಟ್ ನ ಮಾನ್ಯ ನ್ಯಾಯಮೂರ್ತಿ ಅಶ್ವಿನಿ ಕುಮಾರ್ ಸಿಂಗ್, ನೀತಿ ಆಯೋಗದ ಸಿಇಓ ಶ್ರೀ ಅಮಿತಾಬ್ ಕಾಂತ್ ಮತ್ತು ಡೊಬೈನ್ ತಜ್ಞರ ಭಾಷಣಗಳೊಂದಿಗೆ ನಡೆಯಿತು.  ಈ ಆನ್ ಲೈನ್ ಸಭೆಯಲ್ಲಿ ಇಡೀ ಬಿಹಾರ ನ್ಯಾಯಾಂಗದ 1000 ಜನರು ಭಾಗಿಯಾಗಿದ್ದರು. ಸಭೆಯಲ್ಲಿ, ಭಾಗವಹಿಸಿದ್ದವರು ಪ್ರತಿಯೊಬ್ಬರಿಗೂ ಸಮಾನ ಮತ್ತು ಪರಿಣಾಮಕಾರಿ ನ್ಯಾಯ ವಿತರಣೆಯನ್ನು ಖಾತರಿಪಡಿಸುವ ಮುಂದಿನ ಹಾದಿಯ ಕುರಿತು ಚರ್ಚಿಸಿದರು.

ಓಡಿಆರ್ ಡಿಜಿಟಲ್ ತಂತ್ರಜ್ಞಾನ ಬಳಕೆಯ ಮತ್ತು ಪರ್ಯಾಯ ವಿವಾದ ಇತ್ಯರ್ಥ ಪರಿಹಾರದ ತಂತ್ರಗಳನ್ನು (ಎ.ಡಿ.ಆರ್.) ಅಂದರೆ ಮಾತುಕತೆ, ಸಂಧಾನ ಮತ್ತು ಮಧ್ಯಸ್ಥಿಕೆಯನ್ನು ಒಳಗೊಂಡ ವಿವಾದಗಳ ಅದರಲ್ಲೂ ಸಣ್ಣ ಮತ್ತು ಮಧ್ಯಮ ಗಾತ್ರದ ಪ್ರಕರಣಗಳ ಇತ್ಯರ್ಥದ ಪರಿಹಾರವಾಗಿದೆ. ನ್ಯಾಯಾಂಗದ ಪ್ರಯತ್ನಗಳ ಮೂಲಕ ನ್ಯಾಯಾಲಯಗಳು ಡಿಜಿಟಲೀಕರಣಗೊಳ್ಳುತ್ತಿದ್ದು, ನಿಯಂತ್ರಣ ಮತ್ತು ನಿರ್ಣಯ ಹೆಚ್ಚು ಪರಿಣಾಮಕಾರಿ, ಹೆಚ್ಚಬಹುದಾದ ಮತ್ತು ಸಹಕಾರಿ ಕಾರ್ಯವಿಧಾನಗಳ ತುರ್ತು ಅಗತ್ಯವಿದೆ. ವಿವಾದಗಳನ್ನು ಸಮರ್ಥವಾಗಿ ಮತ್ತು ಕೈಗೆಟಕುವ ರೀತಿಯಲ್ಲಿ ಪರಿಹರಿಸಲು ಒಡಿಆರ್ ಸಹಾಯ ಮಾಡುತ್ತದೆ.

ತಮ್ಮ ಸ್ವಾಗತ ಭಾಷಣದಲ್ಲಿ ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್, "ಈ ಐತಿಹಾಸಿಕ ಸಭೆಯು ಸಹಯೋಗದ ಕಸರತ್ತಿನ ಪ್ರಾರಂಭವಾಗಿದ್ದು, ಸಾಂಕ್ರಾಮಿಕ ನಂತರದ ನಮ್ಮ ಪ್ರತಿಕ್ರಿಯೆಯಲ್ಲಿ ನ್ಯಾಯದ ಸಮರ್ಥ ಮತ್ತು ಕೈಗೆಟುಕುವ ಪ್ರವೇಶದ ಕಡೆಗೆ ತಂತ್ರಜ್ಞಾನದ ಬಳಕೆಯನ್ನು ಪ್ರಾರಂಭಿಸುತ್ತದೆ." "ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ನ್ಯಾಯಾಲಯಗಳು ಎಷ್ಟು ಪ್ರಗತಿಪರ ಮತ್ತು ವಾಸ್ತವಿಕವಾಗಿ ನಾವನ್ಯತೆ ಪಡೆದಿವೆ ಎಂಬುದು ಇತ್ತೀಚಿನ ಅತ್ಯಂತ ಪ್ರೋತ್ಸಾಹದಾಯಕ ಬೆಳವಣಿಗೆಗಳಲ್ಲಿ ಒಂದಾಗಿದೆ" ಎಂದು ಅವರು ಉಲ್ಲೇಖಿಸಿದರು.

ಪಾಟ್ನಾ ಹೈಕೋರ್ಟ್‌ ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಅವರು ತಮ್ಮ ಭಾಷಣದಲ್ಲಿ “ಪಾಟ್ನಾ ಹೈಕೋರ್ಟ್‌ ನ ಎಲ್ಲಾ ಅಧಿಕಾರಿಗಳು ನ್ಯಾಯ ದಾನದಲ್ಲಿ ಪರಿವರ್ತನೆ ತರಲು ಈ ವರ್ಷದ ಮಾರ್ಚ್‌ ನಿಂದ ಪ್ರತಿಜ್ಞೆ ಮಾಡಿದ್ದಾರೆ. ನಾವು ಅತ್ಯಂತ ಹಳೆಯ ಬಾಕಿ ಪ್ರಕರಣಗಳೊಂದಿಗೆ ವ್ಯವಹರಿಸುತ್ತಿದ್ದು  ಹೊಸ ಪ್ರಕರಣಗಳೂ ಸೃಷ್ಟಿಯಾಗುತ್ತಿವೆ. ಈ ಸವಾಲನ್ನು ಎದುರಿಸಲು ಮನಸ್ಸಿನ ಭಾರಿ ಪರಿವರ್ತನೆಯ ಅಗತ್ಯವಿದೆ. ಪರಿಹಾರವನ್ನು ಕಂಡುಕೊಳ್ಳುವ ಯೋಜನೆಯನ್ನು ರೂಪಿಸಲು ಮತ್ತು ನ್ಯಾಯ ಪರಿಣಾಮಕಾರಿ ಮತ್ತು ತ್ವರಿತವಾಗಿ ದೊರಕುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ನೀತಿ ಆಯೋಗದೊಂದಿಗೆ ಕೆಲಸ ಮಾಡುತ್ತೇವೆ.”

ಭಾರತದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಮಾನ್ಯ  ನ್ಯಾಯಮೂರ್ತಿ ನವೀನ್ ಸಿನ್ಹಾ  ತಮ್ಮ ವಿಶೇಷ ಭಾಷಣದಲ್ಲಿ, “ನ್ಯಾಯ ವ್ಯವಸ್ಥೆಯು ಇಂದು ನಾವೀನ್ಯತೆ ಮತ್ತು ತಂತ್ರಜ್ಞಾನ ಎರಡನ್ನೂ ಸಂಯೋಜಿಸುತ್ತಿದೆ. ಪಾಟ್ನಾ ಹೈಕೋರ್ಟ್ ತಂತ್ರಜ್ಞಾನದ ಏಕೀಕರಣಕ್ಕೆ ಮುಂಚೂಣಿಯಲ್ಲಿದೆ. ಭಾರತದಲ್ಲಿ ಆನ್‌ ಲೈನ್ ವಿವಾದ ಇತ್ಯರ್ಥ ಪರಿಹಾರಕ್ಕೆ ಪಾಟ್ನಾ ಹೈಕೋರ್ಟ್ ಮುಂದಾಳತ್ವವನ್ನು ವಹಿಸುವುದನ್ನು ನೋಡಲು ನಾನು ಬಯಸುತ್ತೇನೆ.” ಎಂದರು.  "ಎಲ್ಲಾ ಹೊಸ ಬಾಧ್ಯಸ್ಥರಿಗೆ ತರಬೇತಿ ನೀಡಲಾಗಿದೆ ಮತ್ತು ಅವರು ಈ ಹೊಸ ಸಹಜತೆಗೆ ಸಿದ್ಧವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಮುಂದಿನ ಮಾರ್ಗವಾಗಿ ಸಹಯೋಗಿ ಮಾರ್ಗವನ್ನು ಕೈಗೊಳ್ಳುವ ಮೂಲಕ ಎಲ್ಲರಿಗೂ ನ್ಯಾಯ ವಿತರಣೆಯನ್ನು ಖಾತ್ರಿಪಡಿಸುವಲ್ಲಿ ಯಶಸ್ವಿಯಾಗಬಹುದು.” ಎಂದೂ ಹೇಳಿದರು.

ಸಭೆಯಲ್ಲಿ ನೀತಿ ಆಯೋಗದ ನ್ಯಾಯ ಪ್ರವೇಶದ ಓಎಸ್.ಡಿ ಮತ್ತು ಮುಖ್ಯಸ್ಥರಾದ ಶ್ರೀ ದೇಶ್ ಗೌರವ್ ಸೆಖ್ರಿ,  ಗೌರವಾನ್ವಿತ ನ್ಯಾಯಮೂರ್ತಿ (ನಿವೃತ್ತ) ಎ.ಕೆ. ಸಿಕ್ರಿ ಅಧ್ಯಕ್ಷತೆಯಲ್ಲಿ ಭಾರತದಲ್ಲಿ ಓಡಿಆರ್.ಗಾಗಿ ಕ್ರಿಯಾ ಯೋಜನೆಯನ್ನು ರೂಪಿಸುವ ಕರಡು ವರದಿಯನ್ನು ಪ್ರಸ್ತುತ ಪಡಿಸಿದರು.  ಶ್ರೀಮತಿ ದೀಪಿಕಾ ಕಿನ್ಹಾಳ್ ಜಲ್ದಿ ತಂಡದ ಮುಖ್ಯಸ್ಥೆ, ಓಡಿಆರ್ ನಿಂದ ಭಾರತದ ಜನರಿಗೆ ಆಗುವ ಪ್ರಯೋಜನ ಮತ್ತು ಅದರ ಕಲ್ಪನೆಯ ಬಗ್ಗೆ ವಿವರಿಸಿದರು. ಮಧ್ಯಸ್ಥಿಕೆದಾರ ಮತ್ತು ವಿವಾದಗಳ ಆನ್ ಲೈನ್ ಪರಿಹಾರ ಕೇಂದ್ರದ ಸಹ ಸಂಸ್ಥಾಪಕ ಶ್ರೀ ವಿಕಾಸ್ ಮಹೇಂದ್ರ ತಂತ್ರಜ್ಞಾನ ಸೇವೆಗಳ ವಿಸ್ತರಣೆಯನ್ನು ಓಡಿಆರ್ ನ ವಿಸ್ತೃತ ಸೇವಾ ನೀಡಿಕೆದಾರರು  ಭಾರತದಲ್ಲಿ ಆರಂಭಿಸಿದ ಕುರಿತಂತೆ ತಮ್ಮ ಪ್ರಾತ್ಯಕ್ಷಿಕೆಯಲ್ಲಿ ವಿವರಿಸಿದರು.  ಸಮಾದ ಸಹ ಸಂಸ್ಥಾಪಕಿ ಶ್ರೀಮತಿ ಅಕ್ಷತಾ ಅಶೋಕ್ ಇ-ಲೋಕ್ ಅದಾಲತ್ ಆಯೋಜನೆಗಾಗಿ ವಿವಿಧ ರಾಜ್ಯಗಳೊಂದಿಗಿನ ಸಹಯೋಗದ ತಮ್ಮ ಅನುಭವ ಹಂಚಿಕೊಂಡು, 65,000 ಕ್ಕೂ ಅಧಿಕ ಪ್ರಕರಣಗಳು ಇದರಲ್ಲಿ ದಾಖಲಾಗಿದ್ದು, 39,898ಕ್ಕೂ ಹೆಚ್ಚು ಪ್ರಕರಣ ಇತ್ಯರ್ಥವಾದವು ಎಂದು ವಿವರಿಸಿದರು.

ಉದ್ಘಾಟನಾ ಸಭೆಯು ಒಡಿಆರ್ ಒದಗಿಸುವ ಅವಕಾಶವನ್ನು ಅಪಾರವಾಗಿ ಗುರುತಿಸಿತು. ನೀತಿ ಆಯೋಗದ ಸಿಇಒ, ಅವರು ಮಾನ್ಯ ನ್ಯಾಯಮೂರ್ತಿಗಳಿಗೆ, ವಿಶೇಷ ಭಾಷಣ ಮಾಡಿದ್ದಕ್ಕಾಗಿ ವಿಶೇಷವಾಗಿ ನ್ಯಾಯಮೂರ್ತಿ ನವೀನ್ ಸಿನ್ಹಾ ಅವರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಕೊನೆಯದಾಗಿ ಅವರು ಪ್ರಗತಿಪರ ಮತ್ತು ದೂರದರ್ಶಿತ್ವದ ದೃಷ್ಟಿಕೋನಕ್ಕಾಗಿ ಮಾನ್ಯ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸರಣಿಯ ಎರಡನೇ ಸಭೆ ಶೀಘ್ರವೇ ನಡೆಯಲಿದೆ.

***



(Release ID: 1679212) Visitor Counter : 157