ಹಣಕಾಸು ಸಚಿವಾಲಯ

ವಿದೇಶಿ ಬಂಡವಾಳ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗು ಸಾಂಸ್ಥಿಕ ಬಾಂಡ್ ಗಳಿಂದ ಆರ್ಥಿಕ ಪ್ರಗತಿ


• ಎಫ್.ಪಿ.ಐ. ಒಳಹರಿವು 2020ರ ನವೆಂಬರ್ ನಲ್ಲಿ 62,782 ಕೋಟಿ ರೂ.

• 2020-21ನೇ ಹಣಕಾಸು ವರ್ಷದ ಸೆಪ್ಟೆಂಬರ್ 2020ರಲ್ಲಿ, 30,004 ದಶಲಕ್ಷ ಅಮೆರಿಕನ್ ಡಾಲರ್ ತಲುಪಿದ ಎಫ್.ಡಿ.ಐ. ಈಕ್ವಿಟಿ ಒಳಹರಿವು, 2019-20ರ ಅವಧಿಗೆ ಹೋಲಿಸಿದಾಗ ಶೇ. 15 ಹೆಚ್ಚಳ

• ಹಣಕಾಸು ವರ್ಷ 21ರ ಎಚ್ 1ನಲ್ಲಿ ಒಟ್ಟು ಸಾಂಸ್ಥಿಕ ಬಾಂಡ್ ನೀಡಿಕೆ ಮೊತ್ತ 4.43 ಲಕ್ಷ ಕೋಟಿ ರೂ., ಕಳೆದ ವರ್ಷ ಇದೇ ಅವಧಿಯ 3.54 ಲಕ್ಷ ಕೋಟಿಗೆ ಹೋಲಿಸಿದರೆ ಶೇ. 25ರಷ್ಟು ಹೆಚ್ಚಳ

Posted On: 01 DEC 2020 4:32PM by PIB Bengaluru

ಕೋವಿಡ್-19 ಸಾಂಕ್ರಾಮಿಕ ವಿಶ್ವದ ಎಲ್ಲಾ ರಾಷ್ಟ್ರಗಳ ಹೂಡಿಕೆಯ ಪರಿಸರದ ಮೇಲೆ ತೀವ್ರವಾಗಿ ಪರಿಣಾಮ ಬೀರಿದ್ದು, ಇದು ಎಲ್ಲೆಡೆ ಬೇಡಿಕೆ ಮತ್ತು ಪೂರೈಕೆ ಸಮತೋಲನದಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ. ಈ ಅಭೂತಪೂರ್ವ ಆರ್ಥಿಕ ಆಘಾತಕ್ಕೆ ಭಾರತವೂ ಹೊರತಾಗಿಲ್ಲ. ಆದರೂ, ಇಡೀ ವಿಶ್ವ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದರೂ ಭಾರತ ಸರ್ಕಾರದ ನಿರಂತರ ಮತ್ತು ಸಕ್ರಿಯ ಹಸ್ತಕ್ಷೇಪದಿಂದ ಭಾರತೀಯ ಆರ್ಥಿಕತೆಯಲ್ಲಿ ಹೂಡಿಕೆಯ ಮನೋಭಾವವು ಹೆಚ್ಚುತ್ತಿದೆ.

ಭಾರತದ ಪ್ರಗತಿ ಗಾಥೆ ಎಫ್.ಪಿ.ಐ, ಎಫ್.ಡಿ.ಐ ಮತ್ತು ಸಾಂಸ್ಥಿಕ ಬಾಂಡ್ ಮಾರುಕಟ್ಟೆ ಹರಿವಿನ ಪ್ರವೃತ್ತಿಯ ಪ್ರದರ್ಶನದಿಂದ ವಿಸ್ತಾರವಾಗುತ್ತಿದ್ದು, ಇದು ಭಾರತದ ಆರ್ಥಿಕತೆಯ ಬಲ ಮತ್ತು ಸಂಕಲ್ಪದ ಮೇಲೆ ಹೂಡಿಕೆದಾರರಿಗೆ ಇರುವ ನಂಬಿಕೆಯ ಸಂಕೇತವಾಗಿದೆ.

I. ವಿದೇಶಿ ಪೋರ್ಟ್ ಫೋಲಿಯೋ ಬಂಡವಾಳ ಹೂಡಿಕೆ

ಕಳೆದ ಎರಡು ತಿಂಗಳುಗಳು ಅಂದರೆ ಅಕ್ಟೋಬರ್ ಮತ್ತು ನವೆಂಬರ್ 2020ರಲ್ಲಿ, ಎಫ್‌.ಪಿಐ ಒಳಹರಿವು ಗಮನಾರ್ಹವಾಗಿ ಈಕ್ವಿಟಿ ಒಳಹರಿವಿನಿಂದ ಉತ್ತೇಜಿತವಾಗಿದೆ, ಇದರ ಪರಿಣಾಮವಾಗಿ ಭಾರತಕ್ಕೆ ಒಂದು ತಿಂಗಳವರೆಗೆ ಎಫ್‌.ಪಿಐ ಒಳಹರಿವು ಅತ್ಯಧಿಕವಾಗಿದೆ. 2020 ರ ನವೆಂಬರ್ 28 ರಲ್ಲಿದ್ದಂತೆ ಎಫ್‌.ಪಿಐ ಒಳಹರಿವು 62,782 ಕೋಟಿ ರೂ. ಇದರಲ್ಲಿ ಈಕ್ವಿಟಿ ಒಳಹರಿವು 60,358 ಕೋಟಿ ರೂ., ಋಣ ಮತ್ತು ಹೈಬ್ರಿಡ್‌ ನಲ್ಲಿ ಎಫ್‌.ಪಿಐ ನಿವ್ವಳ ಹೂಡಿಕೆ 2,424 ಕೋಟಿ.ರೂ. ಆಗಿತ್ತು.

ಈಕ್ವಿಟಿ ವಿಭಾಗಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಸೆಕ್ಯೂರಿಟಿ ಡೆಪೋಸಿಟರಿ ಲಿ.,ನ ಎಫ್.ಪಿ.ಐ. ದತ್ತಾಂಶ ಲಭ್ಯವಾಗುತ್ತಿರುವ ಅವಧಿಯಿಂದ, ನವೆಂಬರ್ 2020ರಲ್ಲಿ ಒಳಹರಿವಿನ ಹಣ ಅತ್ಯಧಿಕ ಮೊತ್ತವಾಗಿದೆ.

ಎಫ್.ಪಿ.ಐ. ಹರಿವು ಅಲ್ಪ ಚೇತರಿಕೆ ಮತ್ತು ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಿಗೆ ಹೆಚ್ಚು ಸಂವೇದನಶೀಲವೆಂದು ಹೇಳಲಾಗುತ್ತದೆ. ಆದ್ದರಿಂದ ಎಫ್‌.ಪಿಐ ಮಾರ್ಗದ ಮೂಲಕ ಹೂಡಿಕೆಯನ್ನು ನಿವ್ವಳ ಒಳಹರಿವು ಮತ್ತು ಹೊರಹರಿವಿನ ಮೆಟ್ರಿಕ್ ಮೂಲಕ ಅಳೆಯಲಾಗುತ್ತದೆ. ಅಕ್ಟೋಬರ್ ಮತ್ತು ನವೆಂಬರ್ 2020ರಲ್ಲಿ, ಎಫ್‌.ಪಿಐಗಳು ಪ್ರಾಥಮಿಕವಾಗಿ ಭಾರತವು ಒಳಹರಿವು ಕಂಡಿದೆ.

ಈಕ್ವಿಟಿ ವಿಭಾಗದಲ್ಲಿ ಇಲ್ಲಿಯವರೆಗೆ ಯಾವುದೇ ಹಿಮ್ಮುಖವಾಗದ ಧನಾತ್ಮಕ ನಿವ್ವಳ ಹರಿವಿನ ಜಾತ್ಯತೀತ ಪ್ರವೃತ್ತಿ ಕಂಡುಬಂದಿದೆ. ಒಟ್ಟು ಎಫ್‌.ಪಿಐ ಹೂಡಿಕೆಯಲ್ಲಿ ಅತಿ ಹೆಚ್ಚು ಒಳಹರಿವು ನವೆಂಬರ್ 12 ರಂದು ಒಂದೇ ದಿನದ ಗರಿಷ್ಠ 11,056 ಕೋಟಿ ರೂ. ಕಂಡುಬಂದಿದೆ.

https://ci5.googleusercontent.com/proxy/Y1TBFHW6GkZOfGdNe5Xyb-qbTfx0b9dJCCm_eN5XOlPdcuuUUBdBueiJVD6muvbuvWG0i44WsfkQbmtGV1p3Gk8A2iYuQUGHB-E_hpvVg6JHf0sIygEYJAqiAA=s0-d-e1-ft#https://static.pib.gov.in/WriteReadData/userfiles/image/image001JR8P.png

ಮೂಲ:ಎನ್.ಎಸ್.ಡಿ.ಎಲ್., *2020 ನವೆಂಬರ್ 28ರಲ್ಲಿದ್ದಂತೆ

II. ವಿದೇಶಿ ನೇರ ಬಂಡವಾಳ ಹೂಡಿಕೆ

2020-21ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ, 2020 ರಿಂದ ಸೆಪ್ಟೆಂಬರ್, 2020) ಒಟ್ಟು ವಿದೇಶಿ ನೇರ ಹೂಡಿಕೆಗಳು (ಎಫ್‌.ಡಿಐ) 28,102 ದಶಲಕ್ಷ ಅಮೆರಿಕನ್ ಡಾಲರ್ ಆಗಿದ್ದು, ಅದರಲ್ಲಿ ಎಫ್‌.ಡಿಐ ಇಕ್ವಿಟಿ ಒಳಹರಿವು 23,441 ದಶಲಕ್ಷ ಅಮೆರಿಕನ್ ಡಾಲರ್ ಅಥವಾ 174,793 ಕೋಟಿ ರೂ.ಆಗಿದೆ. ಇದರೊಂದಿಗೆ 2020-21ರ ಸೆಪ್ಟೆಂಬರ್ 2020 ರವರೆಗೆ ಎಫ್‌.ಡಿಐ ಇಕ್ವಿಟಿ ಒಳಹರಿವನ್ನು 30,004 ದಶಲಕ್ಷ ಅಮೆರಿಕನ್ ಡಾಲರ್ ಆಗುತ್ತದೆ, ಇದು 2019-20ರ ಇದೇ ಅವಧಿಗೆ ಹೋಲಿಸಿದರೆ ಶೇ.15 ಹೆಚ್ಚಳವಾಗಿದೆ.

ರೂಪಾಯಿ ಲೆಕ್ಕದಲ್ಲಿ, 224,613 ಕೋಟಿ ರೂ.ಗಳ ಎಫ್‌.ಡಿಐ ಇಕ್ವಿಟಿ ಒಳಹರಿವು ಕಳೆದ ವರ್ಷಕ್ಕಿಂತ ಶೇ.23ರಷ್ಟು ಹೆಚ್ಚಾಗಿದೆ. ಆಗಸ್ಟ್, 2020 ದೇಶದಲ್ಲಿ 17,487 ದಶಲಕ್ಷ ಅಮೆರಿಕನ್ ಡಾಲರ್ ಎಫ್.ಡಿ.ಐ ಈಕ್ವಿಟಿ ಒಳಹರಿವಿನ ಮಹತ್ವದ ತಿಂಗಳಾಗಿದೆ. ಎಫ್‌.ಡಿಐ ಈಕ್ವಿಟಿ ಒಳಹರಿವು ಮತ್ತು ಭಾರತಕ್ಕೆ ಒಟ್ಟು ಎಫ್‌.ಡಿಐ ಒಳಹರಿವು ಎರಡೂ ವರ್ಷಗಳಲ್ಲಿ ಏರಿಕೆಯನ್ನು ಕಂಡಿದೆ, ಕಳೆದ ಆರು ವರ್ಷಗಳಲ್ಲಿ ಅತಿ ಹೆಚ್ಚು ಎಫ್‌.ಡಿಐ ವರ್ಷ 2019-20 ಆಗಿದೆ. ಎಫ್‌,ಡಿಐ ನೀತಿ ಸುಧಾರಣೆಗಳು, ಹೂಡಿಕೆ ಸುಗಮವಾಗಿಸಲು ಮತ್ತು ವ್ಯವಹಾರವನ್ನು ಸುಗಮಗೊಳಿಸುವ ರಂಗಗಳಲ್ಲಿ ಸರ್ಕಾರ ಕೈಗೊಂಡ ಕ್ರಮಗಳು ದೇಶಕ್ಕೆ ಎಫ್‌.ಡಿಐ ಒಳಹರಿವು ಹೆಚ್ಚಾಗಲು ಕಾರಣವಾಗಿದೆ.

ಒಟ್ಟು ಎಫ್.ಡಿ.. ಹರಿವು (ದಶಲಕ್ಷ ಅಮೆರಿಕನ್ ಡಾಲರ್ ಗಳಲ್ಲಿ)

ವರ್ಷ (ಹಣಕಾಸು)

ಎಫ್.ಡಿ.. ಈಕ್ವಿಟಿ ಒಳ ಹರಿವು

ಒಟ್ಟು ಎಫ್.ಡಿ.. ಹರಿವು

2014-15

29737

45148

2015-16

40001

55559

2016-17

43478

60220

2017-18 (P)

44857

60974

2018-19 (P)

44366

62001

2019-20 (P)

49977

74390

 

ಮೂಲ: ಡಿಪಿಐಐಟಿ

III. ಬಾಂಡ್ ಮಾರುಕಟ್ಟೆ

ಹಣಕಾಸು ವರ್ಷ 21ರ ಎಚ್.1ರಲ್ಲಿ ಒಟ್ಟು ಸಾಂಸ್ಥಿಕ ಬಾಂಡ್ ನೀಡಿಕೆಯ ಮೊತ್ತ 4.43 ಲಕ್ಷ ಕೋಟಿಯಾಗಿದ್ದು, ಕಳೆದ ವರ್ಷ ಇದೇ ಅವಧಿಯ 3.54 ಲಕ್ಷ ರೂ.ಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚಳವಾಗಿದೆ. ಸರ್ಕಾರದ ಸೆಕ್ಯೂರಿಟಿಗಳೊಂದಿಗೆ ಕಿರಿದಾಗುವ ಹರಡುವಿಕೆಯು ಸಾಂಸ್ಥಿಕ ಬಾಂಡ್‌ ಗಳ ಸುಧಾರಿತ ಅಪಾಯದ ಗ್ರಹಿಕೆಗೆ ಸಾಕ್ಷಿಯಾಗಿದೆ. ಜೊತೆಗೆ, ಆರ್‌.ಬಿಐನ ಹಣಕಾಸು ಸರಾಗಗೊಳಿಸುವಿಕೆ ಮತ್ತು ಹಣ ಪೂರಣದ ಹಿನ್ನಲೆಯಲ್ಲಿ ಸರ್ಕಾರ ಮತ್ತು ಸಾಂಸ್ಥಿಕ ಸಂಸ್ಥೆ ಎರಡಕ್ಕೂ ನಿಧಿಯ ವೆಚ್ಚವು ಸಾಧಾರಣವಾಗಿದ್ದು, ಇದರಿಂದಾಗಿ ಸಾಲ ಮಾರುಕಟ್ಟೆಗಳ ವಿವಿಧ ವಿಭಾಗಗಳಲ್ಲಿ ಇಳುವರಿಯನ್ನು ತಗ್ಗಿಸುತ್ತದೆ.

***

 


(Release ID: 1677412) Visitor Counter : 1027