ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್ 2.0’ - 18 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ

Posted On: 29 NOV 2020 11:50AM by PIB Bengaluru

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಮನದ ಮಾತಿನ ಆರಂಭದಲ್ಲಿಯೇ, ಇಂದು ನಾನು ನಿಮ್ಮೆಲ್ಲರೊಂದಿಗೆ ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಬಯಸುತ್ತೇನೆ. ದೇವಿ ಅನ್ನಪೂರ್ಣೆಯ ಒಂದು ಪುರಾತನ ಪ್ರತಿಮೆ ಕೆನಡಾದಿಂದ ಭಾರತಕ್ಕೆ ಮರಳಿ ಬರುತ್ತಿದೆ ಎಂದು ಕೇಳಿ ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆಯೆನಿಸುತ್ತದೆ. ಮೂರ್ತಿಯನ್ನು ಸುಮಾರು 100 ವರ್ಷಕ್ಕೂ ಹಿಂದೆ 1913 ಆಸುಪಾಸು ವಾರಣಾಸಿಯ ಒಂದು ದೇವಾಲಯದಿಂದ ಕಳ್ಳತನ ಮಾಡಿ ದೇಶದಿಂದ ಹೊರಕ್ಕೆ ರವಾನಿಸಲಾಗಿತ್ತು. ಪುಣ್ಯ ಕಾರ್ಯವನ್ನು ಯಶಸ್ವಿಗೊಳಿಸಲು ಕೈಜೋಡಿಸಿದ ಕೆನಡಾ ಸರ್ಕಾರ ಮತ್ತು ಎಲ್ಲ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಕಾಶಿಯೊಂದಿಗೆ ಮಾತೆ ಅನ್ನಪೂರ್ಣೆಯ ಸಂಬಂಧ ವಿಶೇಷವಾದದ್ದು. ಈಗ ಪ್ರತಿಮೆ ಮರಳಿ ಬರುತ್ತಿರುವುದು ನಮ್ಮೆಲ್ಲರಿಗೂ ನೆಮ್ಮದಿ ತಂದಿದೆ. ತಾಯಿ ಅನ್ನಪೂರ್ಣೆ ಪ್ರತಿಮೆಯಂತೆಯೇ ನಮ್ಮ ಪರಂಪರೆಯ ಅನೇಕ ಬಹುಮೂಲ್ಯ ಸಂಪತ್ತು ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರ ಪಾಲಾಗುತ್ತಲೇ ಇದೆ. ಇಂಥ ಗುಂಪುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇವನ್ನು ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತವೆ. ಈಗ ಇವುಗಳ ಮೇಲೆ ಕಟ್ಟುನಿಟ್ಟು ಹೇರಲಾಗಿದೆ. ನಮ್ಮ ಬಹುಮೂಲ್ಯ ಸಂಪತ್ತನ್ನು ಮರಳಿ ತರಲು ಭಾರತ ತನ್ನ ಪ್ರಯತ್ನಗಳನ್ನು ಹೆಚ್ಚಿಸಿದೆ. ಇಂಥ ಪ್ರಯತ್ನಗಳ ಪರಿಣಾಮ ಕಳೆದ ಕೆಲವು ವರ್ಷಗಳಲ್ಲಿ ಭಾರತ ಹಲವಾರು ಪ್ರತಿಮೆಗಳು ಮತ್ತು ಕಲಾಕೃತಿಗಳನ್ನು ಹಿಂದಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ತಾಯಿ ಅನ್ನಪೂರ್ಣೆಯ ಪ್ರತಿಮೆಯನ್ನು ಹಿಂಪಡೆಯುವಿಕೆ ಜೊತೆಗೆ ಕೆಲ ದಿನಗಳ ಹಿಂದೆಯಷ್ಟೇ ವಿಶ್ವ ಪರಂಪರಾ ಸಪ್ತಾಹ ಆಚರಿಸಿರುವುದು ಕಾಕತಾಳೀಯವೆನಿಸಿದೆ. ವಿಶ್ವ ಪರಂಪರಾ ಸಪ್ತಾಹ, ಸಂಸ್ಕೃತಿ ಪ್ರೀಯರಿಗೆ ಹಿಂದಿನ ಕಾಲಕ್ಕೆ ಹೋಗಲು ಮತ್ತು ಅವುಗಳ ಐತಿಹಾಸಿಕ ಮಹತ್ವದ ಮಜಲುಗಳನ್ನು ಅರಿಯಲು ಒಂದು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಕೊರೊನಾ ಸಾಂಕ್ರಾಮಿಕದ ಹೊರತಾಗಿಯೂ ಬಾರಿ ವಿಶಿಷ್ಟ ರೀತಿಯಲ್ಲಿ ಪರಂಪರಾ ಸಪ್ತಾಹ ಆಚರಿಸಿರುವುದನ್ನು ನಾವು ಕಂಡಿದ್ದೇವೆ. ಸಂಕಷ್ಟದಲ್ಲಿ ಸಂಸ್ಕೃತಿ ಬಹಳ ಉಪಯೋಗಕ್ಕೆ ಬರುತ್ತದೆ. ಇದರಿಂದ ಮುಕ್ತಿ ಹೊಂದಲು ಪ್ರಮುಖ ಪಾತ್ರ ವಹಿಸುತ್ತದೆ. ತಂತ್ರಜ್ಞಾನದ ಮಾಧ್ಯಮದಿಂದಲೂ ಸಂಸ್ಕೃತಿ ಒಂದು ಭಾವನಾತ್ಮಕ ಚೈತನ್ಯದಂತೆ ಕೆಲಸ ಮಾಡುತ್ತದೆ. ಇಂದು ದೇಶದಲ್ಲಿ ಎಷ್ಟೋ ವಸ್ತು ಸಂಗ್ರಹಾಲಯಗಳು ಮತ್ತು ಗ್ರಂಥಾಲಯಗಳು ತಮ್ಮ ಸಂಗ್ರಹವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವಲ್ಲಿ ಕೆಲಸ ಮಾಡುತ್ತಿವೆ. ದೆಹಲಿಯಲ್ಲಿ ನಮ್ಮ ರಾಷ್ಟ್ರೀಯ ಸಂಗ್ರಹಾಲಯ ನಿಟ್ಟಿನಲ್ಲಿ ಪ್ರಶಂಸನೀಯ ಪ್ರಯತ್ನಗಳನ್ನು ಮಾಡಿದೆ. ರಾಷ್ಟ್ರೀಯ ಸಂಗ್ರಹಾಲಯದ ಮೂಲಕ ಸುಮಾರು 10 ವರ್ಚುವಲ್ ಗ್ಯಾಲರಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ತುಂಬಾ ಮಜವಾಗಿದೆಯಲ್ಲವೇ! ಈಗ ನೀವು ಮನೆಯಲ್ಲಿಯೇ ಕುಳಿತು ದೆಹಲಿಯ ರಾಷ್ಟ್ರೀಯ ಸಂಗ್ರಹಾಲಯದ ಗ್ಯಾಲರಿಗಳ ಪ್ರವಾಸ ಕೈಗೊಳ್ಳಬಹುದು. ಇಲ್ಲಿ ಒಂದೆಡೆ ಸಂಸ್ಕೃತಿಯ ಪರಂಪರೆಯನ್ನು ತಂತ್ರಜ್ಞಾನದ ಸಹಾಯದಿಂದ ಹೆಚ್ಚೆಚ್ಚು ಜನರಿಗೆ ತಲುಪಿಸುವುದು ಎಷ್ಟು ಮುಖ್ಯವೋ ಅದೇ ರೀತಿ ಮತ್ತೊಂದೆಡೆ ಇಂತಹ ಅಮೂಲ್ಯ ವಸ್ತುಗಳ ಸಂರಕ್ಷಣೆಗೆ ತಂತ್ರಜ್ಞಾನದ ಬಳಕೆಯೂ ಅಷ್ಟೇ ಮಹತ್ವಪೂರ್ಣವಾಗಿದೆ. ಇತ್ತೀಚೆಗೆ ಒಂದು ಆಸಕ್ತಿಕರ ಪ್ರಾಜೆಕ್ಟ್ ಬಗ್ಗೆ ಓದುತ್ತಿದ್ದೆ. ನಾರ್ವೆಯ ಉತ್ತರದಲ್ಲಿ ಸ್ವಾಲ್ ಬಾರ್ಡ್ ಎಂಬ ಹೆಸರಿನ ದ್ವೀಪವಿದೆ. ದ್ವೀಪದಲ್ಲಿ ಆರ್ಕ್ಟಿಕ್ ವರ್ಲ್ಡ್ ಆರ್ಕೈವ್ ಎಂಬ ಯೋಜನೆಯನ್ನು ರೂಪಿಸಲಾಗಿದೆ. ಯಾವುದೇ ಪ್ರಾಕೃತಿಕ ಅಥವಾ ಮಾನವ ನಿರ್ಮಿತ ವಿಪತ್ತು ಯಾವುದೇ ಪ್ರಭಾವ ಬೀರದಂತೆ ಆರ್ಕೈವ್ ನಲ್ಲಿ ಅಮೂಲ್ಯ ಪರಂಪರಾ ದತ್ತಾಂಶವನ್ನು ಸಂರಕ್ಷಿಸಲಾಗಿದೆ. ಅಜಂತಾ ಗುಹೆಗಳ ಪರಂಪರೆಯನ್ನು ಡಿಜಿಟಲೀಕರಣಗೊಳಿಸಿ ಯೋಜನೆಯಲ್ಲಿ ಸೇರಿಸಲಾಗುತ್ತಿದೆ ಎಂದು ಇತ್ತೀಚೆಗೆ ಮಾಹಿತಿ ಲಭಿಸಿದೆ. ಇದರಲ್ಲಿ ಅಜಂತಾ ಗುಹೆಗಳ ಸಂಪೂರ್ಣ ನೋಟ ಲಭಿಸಲಿದೆ. ಇದರಲ್ಲಿ ಡಿಜಿಟಲೀಕರಣಗೊಳಿಸಿದ ಮತ್ತು ಪುನರುಜ್ಜೀವ ನೀಡಲಾದ ವರ್ಣಚಿತ್ರಗಳ ಜೊತೆಗೆ ಇದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಉಲ್ಲೇಖಗಳು ಲಭ್ಯವಿವೆ. ಸ್ನೇಹಿತರೆ, ಮಹಾಮಾರಿ ಒಂದೆಡೆ ನಮ್ಮ ಕೆಲಸ ಮಾಡುವ ರೀತಿ ನೀತಿಗಳನ್ನು ಬದಲಾಯಿಸಿದ್ದರೆ ಮತ್ತೊಂದೆಡೆ ಪ್ರಕೃತಿಯನ್ನು ಹೊಸ ಬಗೆಯಲ್ಲಿ ಅನುಭವಿಸುವ ಅವಕಾಶವನ್ನೂ ನೀಡಿದೆ. ಪ್ರಕೃತಿಯನ್ನು ನೋಡುವ ನಮ್ಮ ದೃಷ್ಟಿಕೋನ ಕೂಡ ಬದಲಾಗಿದೆ. ಈಗ ನಾವು ಚಳಿಗಾಲಕ್ಕೆ ಕಾಲಿಡುತ್ತಿದ್ದೇವೆ. ನಮಗೆ ಪ್ರಕೃತಿಯ ವಿಭಿನ್ನ ಬಣ್ಣಗಳು ನೋಡಲು ಸಿಗುತ್ತವೆ. ಕೆಲ ದಿನಗಳಿಂದ ಅಂತರ್ಜಾಲದಲ್ಲಿ ಚೆರ್ರಿ ಬ್ಲಾಸಮ್ ಗಳ ಚಿತ್ರಗಳು ವೈರಲ್ ಆಗಿವೆನಾನು ಚೆರ್ರಿ ಬ್ಲಾಸಮ್ ಗಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದಾದರೆ ಜಪಾನಿನ ಪ್ರಸಿದ್ಧ ಪ್ರತೀಕದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನೀವು ಆಲೋಚಿಸುತ್ತಿರಬಹುದು. ಆದರೆ ಹಾಗಿಲ್ಲಇವು ಜಪಾನ್ ಚಿತ್ರಗಳಲ್ಲ. ಇವು ನಮ್ಮ ಮೇಘಾಲಯದ ಶಿಲ್ಲಾಂಗ್ ಚಿತ್ರಗಳಾಗಿವೆ. ಮೇಘಾಲಯದ ಸೌಂದರ್ಯವನ್ನು ಚೆರ್ರಿ ಬ್ಲಾಸಮ್ ಗಳು ಮತ್ತಷ್ಟು ಹೆಚ್ಚಿಸಿವೆ.    

ಸ್ನೇಹಿತರೆ, ತಿಂಗಳು 12 ನವೆಂಬರ್ ನಿಂದ ಡಾಕ್ಟರ್ ಸಲೀಂ ಅಲಿ ಅವರ 125 ನೇ ಜಯಂತಿ ಸಮಾರಂಭ ಆರಂಭಗೊಂಡಿದೆ. ಡಾಕ್ಟರ್ ಸಲೀಂ ಅವರು ಪಕ್ಷಿಗಳ ವಿಶ್ವದಲ್ಲಿ ಪಕ್ಷಿವೀಕ್ಷಣೆ ಕುರಿತು ಗಮನಾರ್ಹ ಕೆಲಸ ಮಾಡಿದ್ದಾರೆ. ವಿಶ್ವದ ಪಕ್ಷಿವೀಕ್ಷಣೆ ಆಸಕ್ತರನ್ನು ಭಾರತದೆಡೆಗೆ ಆಕರ್ಷಿಸುವ ಕೆಲಸವನ್ನೂ ಮಾಡಿದ್ದಾರೆ. ನಾನು ಎಂದಿನಿಂದಲೂ ಪಕ್ಷಿವೀಕ್ಷಣೆ ಆಸಕ್ತರ ಪ್ರಶಂಸಕನಾಗಿದ್ದೇನೆ. ಬಹಳ ಧೈರ್ಯದಿಂದ ಅವರು ತಾಸುಗಟ್ಟಲೆ ಬೆಳಿಗ್ಗೆಯಿಂದ ಸಂಜೆವರೆಗೆ ಪಕ್ಷಿವೀಕ್ಷಣೆ ಮಾಡಬಲ್ಲರು, ಪ್ರಕೃತಿಯ ಅಮೂಲ್ಯ ದೃಶ್ಯಾವಳಿಗಳ ಆನಂದವನ್ನು ಅನುಭವಿಸಬಲ್ಲರು ಮತ್ತು ತಮ್ಮ ಜ್ಞಾನವನ್ನು ನಮ್ಮೆಲ್ಲರಿಗೂ ತಲುಪಿಸುತ್ತಿರುತ್ತಾರೆ. ಭಾರತದಲ್ಲೂ ಬಹಳಷ್ಟು ಪಕ್ಷಿವೀಕ್ಷಣೆ ಸಂಘಗಳು ಸಕ್ರಿಯವಾಗಿವೆ. ನೀವೂ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ. ನನ್ನ ಓಡಾಟದ ಜೀವನದಲ್ಲಿ ನನಗೂ ಕೆಲ ದಿನಗಳ ಹಿಂದೆ ಕೆವಡಿಯಾದಲ್ಲಿ ಪಕ್ಷಿಗಳೊಂದಿಗೆ ಕಾಲ ಕಳೆಯುವ ಬಹಳ ಸ್ಮರಣೀಯ ಅವಕಾಶ ದೊರೆಯಿತು. ಪಕ್ಷಿಗಳೊಂದಿಗೆ ಕಳದೆ ಸಮಯ ನಿಮ್ಮನ್ನು ಪ್ರಕೃತಿಯೊಂದಿಗೆ ಬೆರೆಸುತ್ತದೆ, ಪರಿಸರದ ಬಗ್ಗೆಯೂ ಪ್ರೇರಣೆಯನ್ನು ಜಾಗೃತಗೊಳಿಸುತ್ತದೆ.

ನನ್ನ ಪ್ರಿಯ ದೇಶವಾಸಿಗಳೇ, ಭಾರತದ ಸಂಸ್ಕೃತಿ ಮತ್ತು ಶಾಸ್ತ್ರ ಎಂದೆಂದಿಗೂ ಸಂಪೂರ್ಣ ವಿಶ್ವಕ್ಕೆ ಆಕರ್ಷಣೆಯ ಕೇಂದ್ರವಾಗಿದೆ. ಹಲವಾರು ಜನರು ಇವುಗಳನ್ನು ಅರಸುತ್ತಾ ಭಾರತಕ್ಕೆ ಬಂದಿದ್ದಾರೆ ಮತ್ತು ಎಂದೆಂದಿಗೂ ಇಲ್ಲಿಯವರೇ ಆಗಿ ಉಳಿದಿದ್ದಾರೆ. ಅದರಲ್ಲಿ ಕೆಲವರು ತಮ್ಮ ದೇಶಗಳಿಗೆ ಮರಳಿ ಸಂಸ್ಕೃತಿಯ ಸಂವಹನಕಾರರಾಗಿದ್ದಾರೆ. ನನಗೆ ಜೊನಾಸ್ ಮಸೆಟ್ಟಿಅವರ ಕೆಲಸದ ಬಗ್ಗೆ ಅರಿಯುವ ಅವಕಾಶ ದೊರೆಯಿತು. ಇವರನ್ನು ವಿಶ್ವನಾಥಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಜೊನಾಸ್ ಬ್ರೆಜಿಲ್ ನಲ್ಲಿ ಜನರಿಗೆ ವೇದಾಂತ ಮತ್ತು ಭಗವದ್ಗೀತೆಯ ಪಾಠ ಮಾಡುತ್ತಾರೆ. ಅವರು ವಿಶ್ವವಿದ್ಯಾ ಎಂಬ ಹೆಸರಿನ ಸಂಸ್ಥೆಯ ಸಂಚಾಲಕರಾಗಿದ್ದಾರೆ. ಅದು ರಿಯೋ ಡಿ ಜನೈರೊದಿಂದ ಒಂದು ಗಂಟೆಯ ದೂರದಲ್ಲಿ ಪೆಟ್ರೊಪೋಲಿಸ್ ಬೆಟ್ಟದ ಮೇಲಿದೆ. ಜೊನಾಸ್ ಮೆಕ್ಯಾನಿಕಲ್ ಇಂಜೀನಿಯರಿಂಗ್ ಓದಿ ಶೇರು ಮಾರುಕಟ್ಟೆಯಲ್ಲಿ ತನ್ನದೇ ಕಂಪನಿಯಲ್ಲಿ ಕೆಲಸ ಮಾಡಿದ ನಂತರ, ಅವರ ಧ್ಯಾನ ಭಾರತೀಯ ಸಂಸ್ಕೃತಿ ಮೇಲೆ ಅದರಲ್ಲೂ ವಿಶೇಷವಾಗಿ ವೇದಾಂತದೆಡೆಗೆ ಆಕರ್ಷಿತವಾಯಿತು. ಶೇರು ಪೇಟೆಯಿಂದ ಆಧ್ಯಾತ್ಮಿಕದೆಡೆಗೆ ನಿಜಕ್ಕೂ ಅವರ ಯಾತ್ರೆ ಬಹು ಸುದೀರ್ಘವಾದದ್ದುಜೊನಾಸ್ ಭಾರತದಲ್ಲಿ ವೇದಾಂತ ದರ್ಶನದ ಅಧ್ಯಯನ ಮಾಡಿದರು. 4 ವರ್ಷಗಳವರೆಗೆ ಅವರು ಕೊಯಂಬತ್ತೂರಿನ ಆರ್ಷ ವಿದ್ಯಾ ಗುರುಕುಲದಲ್ಲಿದ್ದರು. ಜೊನಾಸ್ ಅವರ ಮತ್ತೊಂದು ವಿಶೇಷತೆಯಿದೆ. ಅವರು ತಮ್ಮ ಸಂದೇಶವನ್ನು ಪಸರಿಸಲು ತಂತ್ರಜ್ಞಾನ ಬಳಸುತ್ತಿದ್ದಾರೆ. ಅವರು ನಿಯಮಿತವಾಗಿ ಆನ್ ಲೈನ್ ಕಾರ್ಯಕ್ರಮವನ್ನು ನೀಡುತ್ತಾರೆ. ಅವರು ಪ್ರತಿದಿನ ಪಾಡ್ ಕಾಸ್ಟ್ ಮಾಡುತ್ತಾರೆ. ಕಳೆದ 7 ವರ್ಷಗಳಲ್ಲಿ ಜೊನಾಸ್ ಅವರು ವೇದಾಂತದ ಬಗ್ಗೆ ತಮ್ಮ ಉಚಿತ ಮುಕ್ತ ಕೋರ್ಸ್ ಗಳ ಮೂಲಕ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ. ಜೊನಾಸ್ ಒಂದು ದೊಡ್ಡ ಕೆಲಸವನ್ನು ಮಾತ್ರ ಮಾಡುತ್ತಿಲ್ಲ ಜೊತೆಗೆ ಅದನ್ನು ಬಹು ದೊಡ್ಡ ಸಂಖ್ಯೆಯ ಜನರು ಅರ್ಥೈಸಿಕೊಳ್ಳುವ ಭಾಷೆಯಲ್ಲಿ ಮಾಡುತ್ತಿದ್ದಾರೆ. ಜನರಿಗೆ ಕೊರೊನಾ ಮತ್ತು ಕ್ವಾರೆಂಟೈನ್ ಸಮಯದಲ್ಲಿ ವೇದಾಂತ ಹೇಗೆ ಸಹಾಯಮಾಡಬಲ್ಲದು ಎಂಬುದರ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲವಿದೆ. ಮನದ ಮಾತುಮೂಲಕ ನಾನು ಜೊನಾಸ್ ಅವರನ್ನು ಅವರ ಪರಿಶ್ರಮಕ್ಕೆ ಅಭಿನಂದಿಸುತ್ತೇನೆ. ಮತ್ತು ಭವಿಷ್ಯದ ಪ್ರಯತ್ನಗಳಿಗೂ ಶುಭಹಾರೈಸುತ್ತೇನೆ.

ಸ್ನೇಹಿತರೆ, ಇದೇ ರೀತಿ , ಮತ್ತೊಂದು ಸುದ್ದಿಯ ಮೇಲೂ ನಿಮ್ಮ ಗಮನಹರಿದಿರಬಹುದು. ನ್ಯೂಜಿಲೆಂಡ್ ನಲ್ಲಿ ಅಲ್ಲಿಯ ಹೊಸದಾಗಿ ಆಯ್ಕೆಯಾದ ಎಂ ಪಿ ಡಾ|| ಗೌರವ್ ಶರ್ಮಾ ಅವರು ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಒಂದಾದ ಸಂಸ್ಕೃತ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಒಬ್ಬ ಭಾರತೀಯನಾಗಿ ಭಾರತೀಯ ಸಂಸ್ಕೃತಿಯ ಪ್ರಸಾರ ನಮಗೆಲ್ಲ ಹೆಮ್ಮೆ ತರುತ್ತದೆ. ಮನದ ಮಾತುಮೂಲಕ ನಾನು ಗೌರವ್ ಶರ್ಮಾ  ಅವರಿಗೆ ಶುಭಹಾರೈಸುತ್ತೇನೆ. ಅವರು ನ್ಯೂಜಿಲೆಂಡ್ ಜನತೆಯ ಸೇವೆಯಲ್ಲಿ ಹೊಸ ಅನುಕೂಲಗಳನ್ನು ಕಲ್ಪಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ.                                                 

ನನ್ನ ಪ್ರಿಯ ದೇಶವಾಸಿಗಳೇ, ನಾಳೆ 30 ನವೆಂಬರ್ ನಂದು ನಾವು ಶ್ರೀ ಗುರುನಾನಕ್ ದೇವ್ ಜಿ ಅವರ 551 ನೇ ಪ್ರಕಾಶ ಪರ್ವವನ್ನು ಆಚರಿಸಲಿದ್ದೇವೆ. ಸಂಪೂರ್ಣ ವಿಶ್ವದಲ್ಲಿ ಗುರುನಾನಕ್ ಜಿ ಅವರ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತದೆ.

ವ್ಯಾಂಕೋವರ್ ನಿಂದ ವೆಲ್ಲಿಂಗ್ಟನ್ ವರೆಗೆ, ಸಿಂಗಾಪೂರ್ ದಿಂದ ದಕ್ಷಿಣ ಆಫ್ರಿಕಾವರೆಗೆ ಅವರ ಸಂದೇಶ ಎಲ್ಲೆಡೆ ಕೇಳಿಬರುತ್ತದೆ. ಗುರುಗ್ರಂಥ ಸಾಹೀಬ್ ದಲ್ಲಿ ಹೀಗೆ ಹೇಳಿದೆ – “ಸೇವಕ ಕೊ ಸೇವಾ ಬನ ಆಯಿಅಂದರೆ ಸೇವೆ ಮಾಡುವುದೇ ಸೇವಕನ ಕೆಲಸ. ಕಳೆದ ಕೆಲವು ವರ್ಷಗಳಲ್ಲಿ ಬಹಳಷ್ಟು ಮಹತ್ವದ ಘಟ್ಟಗಳು ಎದುರಾದವು ಮತ್ತು ಒಬ್ಬ ಸೇವಕನಾಗಿ ನನಗೆ ಬಹಳಷ್ಟು ಕೆಲಸ ಮಾಡುವ ಅವಕಾಶ ದೊರೆಯಿತು. ಗುರು ಸಾಹೇಬರು ನಮ್ಮಿಂದ ಸೇವೆಯನ್ನು ಪಡೆದರು. ಗುರುನಾನಕ್ ದೇವ್ ಜಿ ಅವರ 550 ನೇ ಪ್ರಕಾಶ ಪರ್ವ, ಶ್ರೀ ಗುರು ಗೋವಿಂದ್ ಸಿಂಗ್  ಅವರ 350 ನೇ  ಪ್ರಕಾಶ ಪರ್ವ, ಮುಂದಿನ ವರ್ಷ ಶ್ರೀ ಗುರು ತೇಗ್ ಬಹಾದ್ದೂರ್ ಅವರ 400 ನೇ ಪ್ರಕಾಶ ಪರ್ವವೂ ಇದೆ. ಗುರು ಸಾಹೇಬರ ವಿಶೇಷ ಕೃಪೆ ನನ್ನ ಮೇಲಿದೆ, ಅವರು ನನ್ನನ್ನು ತಮ್ಮ ಕಾರ್ಯಗಳಲ್ಲಿ ಬಹಳ ನಿಕಟವಾಗಿದ್ದು ಮಾಡಿಕೊಡುವಂತೆ ಮಾಡಿದ್ದಾರೆ ಎಂದು ನನಗೆ ಭಾಸವಾಗುತ್ತದೆ.

ಸ್ನೇಹಿತರೆ, ನಿಮಗೆ ಕಛ್ ನಲ್ಲಿ ಲಖಪತ್ ಗುರುದ್ವಾರ ಸಾಹೀಬ್  ಎಂಬ ಒಂದು ಗುರುದ್ವಾರ ಇದೆಯೆಂದು ನಿಮಗೆ ಗೊತ್ತೆ? ಶ್ರೀ ಗುರುನಾನಕ್ ಜಿ ಅವರು ತಮ್ಮ ಬೇಸರದ ಸಮಯದಲ್ಲಿ ಲಖಪತ್ ಗುರುದ್ವಾರ ಸಾಹೀಬ್ ನಲ್ಲಿ ತಂಗಿದ್ದರು. 2001 ಭೂಕಂಪದಲ್ಲಿ   ಗುರುದ್ವಾರಕ್ಕೂ ಹಾನಿಯಾಗಿತ್ತು. ಗುರು ಸಾಹೇಬರ ಕೃಪೆಯಿಂದಲೇ ಇದರ ಜೀರ್ಣೋದ್ಧಾರವನ್ನು ಖಚಿತಪಡಿಸಲು ನನ್ನಿಂದ ಸಾಧ್ಯವಾಯಿತು. ಗುರುದ್ವಾರ ದುರಸ್ಥಿಯನ್ನು ಮಾತ್ರ ಮಾಡುವುದಲ್ಲದೇ ಅದರ ಗೌರವ ಮತ್ತು ಭವ್ಯತೆ ಮರುಕಳಿಸುವಂತೆ ಮಾಡಲಾಯಿತು. ನಮ್ಮೆಲ್ಲರಿಗೂ ಗುರು ಸಾಹೇಬರ ಆಶೀರ್ವಾದವೂ ದೊರೆಯಿತು. 2004 ರಲ್ಲಿ ಯುನೆಸ್ಕೋ ಏಷ್ಯಾ ಪೆಸಿಫಿಕ್ ಪಾರಂಪರಿಕ ಪ್ರಶಸ್ತಿಗಳಲ್ಲಿ ಲಖಪತ್ ಗುರುದ್ವಾರ ಸಂರಕ್ಷಣೆಯ ಪ್ರಯತ್ನಗಳಿಗಾಗಿ ಅವಾರ್ಡ್ ಆಫ್ ಡಿಸ್ಟಿಂಕ್ಷನ್ ಪ್ರಶಸ್ತಿ ನೀಡಲಾಯಿತುಪ್ರಶಸ್ತಿಯನ್ನು ನೀಡಿದ ತೀರ್ಪುಗಾರರು ಜೀರ್ಣೋದ್ಧಾರ ಸಮಯದಲ್ಲಿ ಶಿಲ್ಪಕಲೆಯ ಸೂಕ್ಷ್ಮ ಅಂಶಗಳತ್ತ ಕೂಡಾ ಗಮನಹರಿಸಲಾಗಿದೆ ಎಂಬುದನ್ನು ಮನಗಂಡರು. ಗುರುದ್ವಾರದ ಪುನರ್ ನಿರ್ಮಾಣ ಕಾರ್ಯದಲ್ಲಿ ಸಿಖ್ ಸಮುದಾಯದವರು ಸಕ್ರಿಯವಾಗಿ ಭಾಗವಹಿಸುವುದಲ್ಲದೆ ಅವರ ಮಾರ್ಗದರ್ಶನದಲ್ಲೇ ಕಾರ್ಯವನ್ನು ಪೂರ್ತಿಗೊಳಿಸಲಾಯಿತು ಎಂಬುದನ್ನು ತೀರ್ಪುಗಾರರು ಗಮನಿಸಿದರು. ನಾನು ಮುಖ್ಯಮಂತ್ರಿಯೂ ಆಗಿರಲಿಲ್ಲ, ಆಗಲೂ ನನಗೆ ಲಖಪತ್ ಗುರುದ್ವಾರಕ್ಕೆ ಹೋಗುವ ಅವಕಾಶ ಲಭಿಸಿತ್ತು. ನನಗೆ ಅಲ್ಲಿಗೆ ಹೋಗಿ ಅನಂತ ಶಕ್ತಿ ಲಭಿಸಿತ್ತು. ಗುರುದ್ವಾರಕ್ಕೆ ಹೋಗಿ ಎಲ್ಲರೂ ಧನ್ಯತಾಭಾವವನ್ನು ಹೊಂದುತ್ತಾರೆ. ಗುರು ಸಾಹೇಬರು ನನ್ನಿಂದ ನಿರಂತರ ಸೇವೆ ಸ್ವೀಕರಿಸುತ್ತಿದ್ದಾರೆ ಎಂಬ ವಿಷಯಕ್ಕೆ ನಾನು ಬಹಳ ಕೃತಜ್ಞನಾಗಿದ್ದೇನೆ. ಕಳೆದ ವರ್ಷ ನವೆಂಬರ್ ನಲ್ಲಿ ಕರ್ತಾರ್ ಪುರ್ ಸಾಹೀಬ್ ಕಾರಿಡಾರ್ ತೆರೆದದ್ದು ಬಹಳ ಐತಿಹಾಸಿಕವಾಗಿತ್ತು. ವಿಷಯವನ್ನು ನಾನು ಜೀವನಪೂರ್ತಿ ನನ್ನ ಹೃದಯದಲ್ಲಿ ಜೋಪಾನವಾಗಿರಿಸುತ್ತೇನೆನಮಗೆ ಶ್ರೀ ದರ್ಬಾರ್ ಸಾಹೇಬರ ಸೇವೆಗೆ ಮತ್ತೊಂದು ಅವಕಾಶ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ವಿದೇಶದಲ್ಲಿ ನೆಲೆಸಿರುವ ನಮ್ಮ ಸಿಖ್ ಸೋದರ ಸೋದರಿಯರು ಈಗ ದರ್ಬಾರ್ ಸಾಹೀಬ್ ಅವರ ಸೇವೆಗೆ ದೇಣಿಗೆ ನೀಡಲು ಈಗ ಮತ್ತಷ್ಟು ಸುಲಭವಾಗಿದೆ. ನಡೆಯಿಂದ ವಿಶ್ವಾದ್ಯಂತದ ಭಕ್ತಸಮೂಹ ದರ್ಬಾರ್ ಸಾಹೇಬರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಸ್ನೇಹಿತರೆ, ಲಂಗರ್ ಪರಂಪರೆಯನ್ನು ಆರಂಭಿಸಿದವರು ಗುರುನಾನಕ್ ಜಿ ಅವರೇ ಆಗಿದ್ದಾರೆ ಮತ್ತು ಇಂದು ವಿಶ್ವಾದ್ಯಂತ ಸಿಖ್ ಸಮುದಾಯದವರು ಕೊರೊನಾದ ಸಮಯದಲ್ಲಿ ಜನರಿಗೆ ಊಟ ಮಾಡಿಸುವ ಪರಂಪರೆಯನ್ನು ಹೇಗೆ ಮುಂದುವರೆಸಿದ್ದಾರೆ, ಮಾನವ ಜನಾಂಗದ ಸೇವೆಗೈದಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಪರಂಪರೆ ನಮಗೆಲ್ಲರಿಗೂ ಸದಾ ಪ್ರೇರಣಾತ್ಮಕ ಕೆಲಸ ಮಾಡುತ್ತದೆ. ನಾವೆಲ್ಲರೂ ಸೇವಕರಂತೆ ಕೆಲಸ ಮಾಡುತ್ತಲೇ ಇರೋಣ ಎಂಬುದು ನನ್ನ ಇಚ್ಛೆಯಾಗಿದೆ. ಗುರು ಸಾಹೇಬರು ನನ್ನಿಂದ ಮತ್ತು ದೇಶ ಬಾಂಧವರಿಂದ ಹೀಗೆ ಸೇವೆಯನ್ನು ಸ್ವೀಕರಿಸುತ್ತಿರಲಿ. ಮತ್ತೊಮ್ಮೆ ಗುರುನಾನಕ್ ಜಯಂತಿ ಸಂದರ್ಭದಲ್ಲಿ ನನ್ನ ಅನಂತ ಶುಭಾಷಯಗಳು.            

ನನ್ನ ಪ್ರಿಯ ದೇಶವಾಸಿಗಳೇ, ಕಳೆದ ದಿನಗಳಲ್ಲಿ ದೇಶಾದ್ಯಂತದ ಹಲವಾರು ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೆ, ಅವರ ಶೈಕ್ಷಣಿಕ ಪಯಣದ ಮಹತ್ವಪೂರ್ಣ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶ ದೊರೆಯಿತು. ತಂತ್ರಜ್ಞಾನ ಬಳಸಿ ನಾನು ಐಐಟಿ ಗುವಾಹಾಟಿ, ಐಐಟಿ ದೆಹಲಿ, ಗಾಂಧಿನಗರದ ದೀನ್ ದಯಾಳ್ ಪೆಟ್ರೋಲಿಯಂ ವಿಶ್ವ ವಿದ್ಯಾಲಯ, ದೆಹಲಿಯಯ ಜೆ ಎನ್ ಯು, ಮೈಸೂರು ವಿಶ್ವ ವಿದ್ಯಾಲಯ ಮತ್ತು ಲಖನೌ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಯಿತು. ದೇಶದ ಯುವಜನತೆಯೊಂದಿಗೆ ಇರುವುದು ಬಹಳ ಉತ್ಸಾಹ ಮತ್ತು ಚೈತನ್ಯ ತುಂಬುವಂಥದ್ದಾಗಿದೆವಿಶ್ವ ವಿದ್ಯಾಲಯದ ಪರಿಸರ ಒಂದು ರೀತಿಯಲ್ಲಿ ಪುಟ್ಟ ಭಾರತವಿದ್ದಂತೆ. ಒಂದೆಡೆ ಆವರಣದಲ್ಲಿ ಭಾರತದ ವೈವಿಧ್ಯತೆಯ ದರ್ಶನವಾದರೆ ಮತ್ತೊಂದೆಡೆ ನವ ಭಾರತಕ್ಕೆ ದೊಡ್ಡ ದೊಡ್ಡ ಬದಲಾವಣೆಗಳ ಒಲವು ಕಾಣಿಸುತ್ತದೆ. ಕೊರೊನಾಗಿಂತ ಮೊದಲು ಯಾವುದೇ ಸಂಸ್ಥೆಯ ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ಭಾಗವಹಿಸಿದಾಗ, ಸುತ್ತಮುತ್ತಲ ಶಾಲೆಗಳ ಬಡ ಮಕ್ಕಳಿಗೆ ಸಮಾರಂಭಕ್ಕೆ ಆಹ್ವಾನಿಸಿ ಎಂದು ಆಗ್ರಹಿಸುತ್ತಿದ್ದೆ. ಮಕ್ಕಳು ಸಮಾರಂಭದಲ್ಲಿ ನನ್ನ ವಿಶೇಷ ಅತಿಥಿಗಳಾಗಿ ಆಗಮಿಸುತ್ತಿದ್ದರು. ಒಂದು ಪುಟ್ಟ ಮಗು ಭವ್ಯ ಸಮಾರಂಭದಲ್ಲಿ ಯುವಕರು ಡಾಕ್ಟರ್, ಇಂಜಿನೀಯರ್, ವಿಜ್ಞಾನಿಯಾಗುವುದನ್ನು ನೋಡಿದಾಗ, ಒಬ್ಬರು ಪದಕ ಸ್ವೀಕರಿಸುವುದನ್ನು ನೋಡಿದಾಗ ಅವನಲ್ಲಿ ಹೊಸ ಕನಸುಗಳು ಜಾಗೃತಗೊಳ್ಳುತ್ತವೆ! ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಹೆಚ್ಚುತ್ತದೆ. ಸಂಕಲ್ಪದ ಪ್ರೇರಣೆ ಲಭಿಸುತ್ತದೆ

ಸ್ನೇಹಿತರೆ, ಇದರ ಹೊರತಾಗಿಯೂ ಮತ್ತೊಂದು ವಿಷಯ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಯಾರು, ಸಂಸ್ಥೆಗಳಿಗೆ ತನ್ನ  ಹಳೆಯ ವಿದ್ಯಾರ್ಥಿಗಳೊಂದಿಗೆ ನಿಯಮಿತ ಸಂಪರ್ಕದ ವ್ಯವಸ್ಥೆಯನ್ನು ಅದು ಹೊಂದಿದೆಯೇ, ಅವರ ಹಳೆಯ ವಿದ್ಯಾರ್ಥಿಗಳ ಜಾಲ ಎಷ್ಟು ಸಕ್ರೀಯವಾಗಿದೆ ಎಂದು  ತಿಳಿದುಕೊಳ್ಳುವಲ್ಲಿ ನನಗೆ ಸದಾ ಆಸಕ್ತಿಯಿರುತ್ತದೆ

ನನ್ನಯುವ ಮಿತ್ರರೇ, ನೀವು ಎಲ್ಲಿಯವರೆಗೆ ಒಂದು ಸಂಸ್ಥೆಯಲ್ಲಿ ಓದುತ್ತೀರೋ ಅಲ್ಲಿಯವರೆಗೆ ನೀವು ಸಂಸ್ಥೆಯ ವಿದ್ಯಾರ್ಥಿಗಳಾಗಿರುತ್ತೀರಿ, ಆದರೆ, ಅಲ್ಲಿಯ ಅಲುಮಿನಿ ಆಗಿ ನೀವು ಜೀವನವಿಡಿ ಇರಬಹುದಾಗಿದೆ. ಶಾಲೆ ಕಾಲೇಜುಗಳಿಂದ ಹೊರಬಂದ ನಂತರ ಎರಡು ವಿಷಯಗಳು ಎಂದಿಗೂ ಮುಗಿಯುವದಿಲ್ಲ- ಮೊದಲನೆಯದು, ನಿಮ್ಮ ಶಿಕ್ಷಣದ ಪ್ರಭಾವ ಮತ್ತು ಎರಡನೆಯದು, ನಿಮ್ಮ ನಿಮ್ಮದೇ ಆದ ಸ್ಕೂಲು, ಕಾಲೇಜಿನೊಂದಿಗೆ ಸಂಬಂಧ. ನೀವು ಅಲುಮಿನಿ ಜೊತೆ ಯಾವಾಗ ಮಾತನಾಡುತ್ತೀರೋ, ಆಗ, ಸ್ಕೂಲು, ಕಾಲೇಜಿನ ದಿನಗಳ ತಮ್ಮ ನೆನಪುಗಳು, ಪುಸ್ತಕಗಳು, ಅಧ್ಯಯನಕ್ಕಿಂತ ಹೆಚ್ಚು ಕ್ಯಾಂಪಸ್ ನಲ್ಲಿ ಸಮಯ ಹೇಗೆ ಕಳೆದಿರಿ ಎಂಬುದು, ಗೆಳೆಯರೊಂದಿಗೆ ಕಳೆದ ಕ್ಷಣಗಳು ಅದರಲ್ಲಿ ಅಡಗಿರುತ್ತವೆ. ಇವೇ ನೆನಪುಗಳೊಂದಿಗೆ ತಮ್ಮ ಸಂಸ್ಥೆಗೆ ಏನಾದರೊಂದು ಮಾಡಬೇಕೆನ್ನುವ ಭಾವನೆ ಹುಟ್ಟುತ್ತದೆ. ಎಲ್ಲಿ ನಿಮ್ಮ ವ್ಯಕ್ತಿತ್ವದ ವಿಕಾಸವಾಗಿದೆಯೋ, ಸ್ಥಳವನ್ನು ಒಂದಿಷ್ಟು ವಿಕಾಸ ಮಾಡುವುದರಿಂದ ಸಿಗುವ ಸಂತಸ ಮತ್ತೆಲ್ಲಿಂದ ಸಿಕ್ಕೀತು? ನಾನು ಅಂತಹ ಕೆಲವು ಪ್ರಯತ್ನಗಳ ಬಗ್ಗೆ ಓದಿದ್ದೇನೆ, ಅಲ್ಲಿ ಪೂರ್ವ ವಿದ್ಯಾರ್ಥಿಗಳು ತಮ್ಮ ಹಳೆಯ ಸಂಸ್ಥೆಗಳಿಗೆ ತಾ ಮುಂದು-ನಾ ಮುಂದೆ ಎಂದು ಕೊಡುಗೆ ನೀಡಿದ್ದಾರೆ. ಇಂದು ಅಲುಮಿನಿ ಇದಕ್ಕೆ ಸಂಬಂಧಿಸಿದಂತೆ ಬಹಳ ಸಕ್ರಿಯವಾಗಿವೆ. ಐಐಟಿ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗಳಿಗೆ ಕಾನ್ಫರನ್ಸ ಸೆಂಟರ್ಗಳು, ಮ್ಯಾನೇಜ್ಮೆಂಟ್ ಸೆಂಟರ್ಗಳು, ಇನ್ ಕ್ಯುಬೇಶನ್ ಸೆಂಟರ್ಗಳು ಹೀಗೆ  ವಿವಿಧ ವ್ಯವಸ್ಥೆಗಳನ್ನು ಸ್ವತ: ಮಾಡಿಸಿ ಕೊಟ್ಟಿದ್ದಾರೆ. ಎಲ್ಲ ಪ್ರಯತ್ನಗಳು ವರ್ತಮಾನದ ವಿದ್ಯಾರ್ಥಿಗಳಿಗೆ ಲರ್ನಿಂಗ್ ಎಕ್ಸಪೀರಿಯನ್ಸನ್ನು ಹೆಚ್ಚಿಸುತ್ತವೆ. ಐಐಟಿ ದಿಲ್ಲಿಯು ಒಂದು ಎಂಡೋಮೆಂಟ್ ಫಂಡನ್ನು ಪ್ರಾರಂಭಿಸಿದೆ, ಇದೊಂದು ಉತ್ತಮ ವಿಚಾರವಾಗಿದೆ. ವಿಶ್ವದ ಹೆಸರಾಂತ ವಿಶ್ವವಿದ್ಯಾಲಯಗಳಲ್ಲಿ ತರಹದ ಎಂಡೋಮೆಂಟ್ಗಳನ್ನು ಮಾಡುವ ಸಂಸ್ಕೃತಿಯಿದೆ, ಅವು ವಿದ್ಯಾರ್ಥಿಗಳಿಗೆ ಸಹಾಯ ಒದಗಿಸುತ್ತವೆ. ಭಾರತೀಯ ವಿಶ್ವವಿದ್ಯಾಲಯಗಳು ಸಂಸ್ಕೃತಿಯನ್ನು ತಮ್ಮ ಅಧೀನ ಸಂಸ್ಥೆಗಳೊಂದಿಗೆ ಬೆಳೆಸಿಕೊಳ್ಳಲು ಸಮರ್ಥವಾಗಿವೆಯೆಂದು ನನಗನಿಸುತ್ತದೆ.

ಯಾವಾಗ ಸ್ವಲ್ಪ ಮರಳಿಸಬೇಕೆಂಬ ಮಾತು ಬರುತ್ತದೆಯೋ ಯಾವುದೂ ಸಣ್ಣದು-ದೊಡ್ಡದೆಂದು ಬರುವುದಿಲ್ಲ. ಸಣ್ಣಕಿಂತ ಸಣ್ಣ ಸಹಾಯವೂ ಪ್ರಮುಖವಾಗುತ್ತದೆ. ಪ್ರತಿಯೊಂದು ಪ್ರಯತ್ನವೂ ಮಹತ್ವಪೂರ್ಣವಾದುದಾಗುತ್ತದೆ. ಸಾಮಾನ್ಯವಾಗಿ ಪೂರ್ವ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗಳಿಗೆ ತಂತ್ರಜ್ಞಾನ ಉನ್ನತೀಕರಣಕ್ಕಾಗಿ, ಕಟ್ಟಡ ನಿರ್ಮಿಸಲು, ಪ್ರಶಸ್ತಿಗಳು ಮತ್ತು ವಿದ್ಯಾರ್ಥಿ ವೇತನಗಳನ್ನು ನೀಡಲು, ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಬಹಳ ಪ್ರಮುಖ ಪಾತ್ರವಹಿಸುತ್ತವೆ. ಕೆಲವು ಸ್ಕೂಲುಗಳ ಹಳೇ ವಿದ್ಯಾರ್ಥಿಗಳ ಸಂಘಟನೆಗಳು ಮೆಂಟರ್ಶಿಪ್ ಕಾರ್ಯಕ್ರಮ ಆರಂಭಿಸಿವೆ. ಇದರಲ್ಲಿಅವರು ಬೇರೆ-ಬೇರೆ ಬ್ಯಾಚ್ಗಳ ವಿದ್ಯಾರ್ಥಿಗಳನ್ನು ಗೈಡ್ ಮಾಡುತ್ತಾರೆ, ಅದರೊಂದಿಗೆನೇ ಶಿಕ್ಷಣದ ನಿರೀಕ್ಷೆಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಹಲವಾರು ಸ್ಕೂಲುಗಳಲ್ಲಿ ಅದರಲ್ಲಿಯೂ ಬೋರ್ಡಿಂಗ್ ಸ್ಕೂಲುಗಳಲ್ಲಿ ಅಲುಮಿನಿ ಸಂಘಗಳು ಬಹಳ ಸ್ಟ್ರಾಂಗ್ ಆಗಿವೆ. ಅವು ಆಟೋಟ ಸ್ಪರ್ಧೆ ಮತ್ತು ಸಮುದಾಯ ಸೇವೆ ನಂತಹ ಚಟುವಟಿಕೆಗಳನ್ನು ಆಯೋಜನೆ ಮಾಡುತ್ತವೆ. ನಾನು ಪೂರ್ವ ವಿದ್ಯಾರ್ಥಿಗಳಿಗೆ ಆಗ್ರಹಿಸುವುದೇನಂದರೆ, ಯಾವ ಸಂಸ್ಥೆಯಲ್ಲಿ ಅವರು ಓದಿರುತ್ತಾರೋ ಅವುಗಳೊಂದಿಗೆ ತಮ್ಮ ಸಂಬಂಧ ಗಟ್ಟಿಗೊಳಿಸಿಕೊಳ್ಳಿರಿ. ಅದು ಸ್ಕೂಲೇ ಆಗಿರಲಿ, ಕಾಲೇಜೇ ಆಗಿರಲಿ ಇಲ್ಲವೆ ವಿಶ್ವವಿದ್ಯಾಲಯವೇ ಆಗಿರಲಿ. ಸಂಸ್ಥೆಗಳಿಗೂ ನನ್ನ ಆಗ್ರಹ ಏನೆಂದರೆ ಅಲುಮಿನಿ ಎಂಗೇಜ್ಮೆಂಟ್ ಮಾಡಲು ಹೊಸ ಹೊಸ ವಿಧಾನಗಳ ಮೂಲಕ ಕೆಲಸ ಮಾಡಿರಿ. ಕ್ರಿಯೇಟಿವ್ ಪ್ಲಾಟ್ಫಾರ್ಮಗಳನ್ನು ವಿಕಾಸಗೊಳಿಸಿ ಅದರಿಂದ ಅಲುಮಿನಿ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದಾಗಿದೆ. ಕೇವಲ ದೊಡ್ಡ ಕಾಲೇಜು, ವಿಶ್ವವಿದ್ಯಾಲಯಗಳಷ್ಟೇ ಅಲ್ಲ, ಹಳ್ಳಿಗಳ ಶಾಲೆಗಳು ಕೂಡ ಸಶಕ್ತ ಕ್ರೀಯಾಶೀಲ ಚಟುವಟಿಕೆಗಳಿಂದ ಕೂಡಿದ ಅಮೂಲ್ಯ ಜಾಲ ಹೊಂದಿದವುಗಳಾಗಿರಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ, ನೇ ಡಿಸೆಂಬರ್ರಂದು  ಶ್ರೀ ಅರವಿಂದರ ಪುಣ್ಯತಿಥಿಯಿದೆ. ಶ್ರೀ ಅರವಿಂದರನ್ನು ನಾವು ಓದಿದಷ್ಟು ಆಳವಾದ ಜ್ಞಾನ ನಮಗೆ ಸಿಗುತ್ತಲೇ ಹೋಗುತ್ತದೆ. ನನ್ನ ಯುವ ಮಿತ್ರರು ಶ್ರೀ ಅರವಿಂದರನ್ನು ಎಷ್ಟು ತಿಳಿದುಕೊಳ್ಳುತ್ತಾರೋ ಅಷ್ಟೇ ತಮ್ಮನ್ನು ತಾವು ಅರಿತುಕೊಳ್ಳುತ್ತಾರೆ. ಸ್ವತ: ಸಮೃದ್ಧರಾಗುತ್ತಾರೆ. ಜೀವನದ ಯಾವ ಭಾವ, ಅವಸ್ಥೆಯಲ್ಲಿ ತಾವು ಇದ್ದೀರೋ, ಯಾವ ಸಂಕಲ್ಪವನ್ನು ಸಿದ್ಧಗೊಳಿಸಲು ತಾವು ಪ್ರಯತ್ನದಲ್ಲಿದ್ದೀರೋ ಅವುಗಳ ಮಧ್ಯೆ ತಾವು ಯಾವಾಗಲೂ ಶ್ರೀ ಅರವಿಂದರು ನಿಮಗೆ ಹೊಸ ಪ್ರೇರಣೆ ನೀಡುತ್ತಿದ್ದಾರೆಂದೇ ಭಾವಿಸುವಿರಿ, ಒಂದು ಹೊಸ ಮಾರ್ಗ ತೋರಿಸಿತ್ತಿದ್ದಾರೆಂದು ಅರಿಯುವಿರಿ. ಉದಾಹರಣೆಗೆ, ಇಂದು ನಾವು ಯಾವ ವೋಕಲ್ ಫಾರ್ ವೋಕಲ್ ಅಭಿಯಾನದೊಂದಿಗೆ ಮುಂದೆ ಸಾಗುತ್ತಿದ್ದೇವೆಯೋ ಅಲ್ಲಿ ಶ್ರೀ ಅರವಿಂದರ ಸ್ವದೇಶೀ ದರ್ಶನ ನಮಗೆ ಮಾರ್ಗ ತೋರಿಸುತ್ತದೆ. ಬಂಗಾಳಿಯಲ್ಲಿ ಒಂದು ಬಹಳ ಪ್ರಭಾವಿ ಕವಿತೆಯಿದೆ.

ಛುಯಿಶುತೊ ಪಾಯಮಾಂತೋ ಆಶೇ ತುಂಗ ಹೋತೆ

ದಿಯ ಶಲಾಯಿ ಕಾಠೀ, ತಾವು ಆಶೇ ಪೋತೆ

ಪ್ರೊ ದೀಪ್ತಿ ಜಾಲಿತೆಖೆತೆ, ಶುತೆ, ಜೆತೆ

ಕಿಛುತೆ ಲೋಕ ನಾಯ ಶಾಧೀನ.

ಅಂದರೆ, ನಮ್ಮಲ್ಲೀಗ ಸೂಜಿಯಂದ ಹಿಡಿದು ಬೆಂಕಿಪೊಟ್ಟಣದವರೆಗೂ ವಿದೇಶೀ ಹಡಗುಗಳಿಂದ ಬರುತ್ತವೆ. ಉಣ್ಣಲು, ಕುಡಿಯಲು, ಮಲಗಲು ಯಾವುದೇ ವಿಷಯ ತೆಗೆದುಕೊಳ್ಳಿ ಜನರು ಸ್ವತಂತ್ರರಾಗಿಲ್ಲ.

ಅವರು ಹೇಳುತ್ತಲೂ ಇದ್ದರು, ಸ್ವದೇಶಿಯ ಅರ್ಥ ಏನೆಂದರೆ, ನಮ್ಮ ಭಾರತೀಯ ಕೆಲಸಗಾರರಿಂದ, ಕುಶಲಕರ್ಮಿಗಳಿಂದ ನಿರ್ಮಿಸಿದ ವಸ್ತುಗಳಿಗೆ ಪ್ರಥಮ ಆದ್ಯತೆ ನೀಡಬೇಕುಹಾಗಿದ್ದರೂ, ಶ್ರೀ ಅರವಿಂದರು ವಿದೇಶಿಗರಿಂದ ಕಲಿಯಲು ಎಂದೂ ವಿರೋಧಿಸಲಿಲ್ಲ. ಎಲ್ಲಿ ಹೊಸತನವಿದೆಯೋ ಅಲ್ಲಿಂದ ನಾವು ಕಲಿಯೋಣ, ನಮ್ಮ ದೇಶಕ್ಕೆ ಒಳಿತಾಗುವುದಾದರೆ ಅದಕ್ಕೆ ನಾವು ಸಹಕರಿಸೋಣ ಮತ್ತು ಪ್ರೋತ್ಸಾಹಿಸೋಣ. ಇದೇ ಆತ್ಮನಿರ್ಭರ ಭಾರತದಲ್ಲಿ ವೋಕಲ್ ಫಾರ್ ಲೋಕಲ್ಮಂತ್ರದ ಭಾವನೆಯಾಗಿದೆ. ಮುಖ್ಯವಾಗಿ, ಸ್ವದೇಶಿ ತಮ್ಮದಾಗಿಸುವುದರೊಂದಿಗೆ ಅವರು ಏನನ್ನು ಹೇಳಿದರು ಅದನ್ನು ಇಂದು ದೇಶದ ಪ್ರತಿಯೊಬ್ಬ ನಾಗರಿಕನು ಓದಬೇಕಾಗಿದೆ. ಮಿತ್ರರೆ, ಇದೇ ರೀತಿ ಶಿಕ್ಷಣದ ಬಗ್ಗೆಯೂ ಶ್ರೀ ಅರವಿಂದರ ವಿಚಾರಗಳು ಬಹಳ ಸ್ಪಷ್ಟವಾಗಿದ್ದವು. ಅವರ ಪ್ರಕಾರ ಶಿಕ್ಷಣ, ಕೇವಲ ಪುಸ್ತಕದ ಜ್ಞಾನ, ಪದವಿ ಅಥವಾ ನೌಕರಿ ಪಡೆಯುವುದು ಮಾತ್ರ ಸೀಮಿತವಾಗಿರಲಿಲ್ಲ. ಅರವಿಂದರು ಹೇಳುತ್ತಿದ್ದುದೇನಂದರೆ ನಮ್ಮ ರಾಷ್ಟ್ರೀಯ ಶಿಕ್ಷಣವು, ನಮ್ಮ ಯುವ ಪೀಳಿಗೆಯ ಮನಸ್ಸಿಗೆ ಮತ್ತು ಮೆದುಳಿಗೆ ತರಬೇತಿ ನೀಡುವಂತಾಗಬೇಕು. ಅಂದರೆ, ಮೆದುಳಿನಿಂದ ವೈಜ್ಞಾನಿಕ ವಿಕಾಸ ಮತ್ತು ಮನಸ್ಸಿನಿಂದ ಭಾರತೀಯ ಭಾವನೆಗಳೂ ಇರಬೇಕು. ಆಗಲೇ ಒಬ್ಬ ಯುವಕ ದೇಶದ ಒಳ್ಳೆಯ ನಾಗರಿಕನಾಗಬಲ್ಲ. ಶ್ರೀ ಅರವಿಂದರು ರಾಷ್ಟ್ರೀಯ ಶಿಕ್ಷಣವನ್ನು ಕುರಿತು ಏನು ಹೇಳಿದ್ದಾರೆ, ಏನನ್ನು ಅಪೇಕ್ಷ್ಷಿಸಿದ್ದರೋ ಅದನ್ನು ಇಂದು ದೇಶವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪೂರ್ಣಗೊಳಿಸುತ್ತಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದವುಗಳೊಂದಿಗೆ ಹೊಸ ಆಯಾಮ ಸೇರಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾಡಲಾದ ಕೃಷಿ ಸುಧಾರಣೆಗಳಲ್ಲಿ ರೈತರಿಗೆ ಹೊಸ ಸಾಧ್ಯತೆಗಳ ಬಾಗಿಲು ತೆರೆದಿರಿಸಿದೆ. ಹಲವು ವರ್ಷಗಳಿಂದ ರೈತರ ಬೇಡಿಕೆಯೇನಿತ್ತು, ಅವರ ಬೇಡಿಕೆಗಳನ್ನು ಪೂರ್ಣಗೊಳಿಸಲು ಒಂದಲ್ಲ ಒಂದು ಹಂತದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಆಶ್ವಾಸನೆಯನ್ನು ನೀಡಿದ್ದವು, ಬೇಡಿಕೆಗಳು ಈಡೇರಿವೆ. ತುಂಬಾ ವಿಚಾರ-ವಿಮರ್ಶೆಯ ನಂತರ ಭಾರತದ ಸಂಸತ್ತು ಕೃಷಿ ಸುಧಾರಣೆಗಳಿಗೆ ಒಂದು ಕಾನೂನಿನ ರೂಪ ನೀಡಿದೆ. ಸುಧಾರಣೆಗಳಿಂದ ಕೇವಲ ರೈತರ ಹಲವು ಬಂಧನಗಳಿಂದ ಮುಕ್ತವಾಗುವುದಲ್ಲದೆ ಅವರಿಗೆ ಹಲವು ಅಧಿಕಾರಗಳು ಲಭಿಸಿವೆ, ಹೊಸ ಅವಕಾಶಗಳು ಲಭಿಸಿವೆ. ಅಧಿಕಾರಗಳು ಬಹಳ ಕಡಿಮೆ ಸಮಯದಲ್ಲಿ ರೈತರ ಸಂಕಟಗಳನ್ನು ಕಡಿಮೆಗೊಳಿಸಲು ಪ್ರಾರಂಭಿಸಿವೆ. ಮಹಾರಾಷ್ಟ್ರದ ಧುಳೆ ಜಿಲ್ಲೆಯ ರೈತ ಜಿತೆಂದ್ರ ಭೋಯಿ ಅವರು ಹೊಸ ಕೃಷಿ ಕಾನೂನುಗಳನ್ನು ಹೇಗೆ ಉಪಯೋಗಿಸಿಕೊಂಡರು ಎಂಬುದನ್ನು ನೀವೂ ತಿಳಿದುಕೊಳ್ಳಬೇಕು. ಜಿತೇಂದ್ರ ಭೋಯಿ ಅವರು ಮೆಕ್ಕೆಜೋಳ ಬೆಳೆದಿದ್ದರು. ಅದಕ್ಕೆ ಒಳ್ಳೆ ಬೆಲೆ ಸಿಗಲು ವ್ಯಾಪಾರಿಗಳಿಗೆ ಮಾರಲು ಸಿದ್ಧರಾಗಿದ್ದರು. ಬೆಳೆಯ ಒಟ್ಟು ಬೆಲೆ ಸುಮಾರು ಮೂರು ಲಕ್ಷ ಮೂವತ್ತೆರಡು ಸಾವಿರ ಎಂದು ನಿಗದಿಪಡಿಸಲಾಯಿತು. ಜಿತೇಂದ್ರ ಭೋಯಿ ಅವರಿಗೆ ಇದಕ್ಕೆ ಮುಂಗಡವಾಗಿ ಇಪ್ಪತ್ತೈದು ಸಾವಿರ ರೂಪಾಯಿ ನೀಡಲಾಗಿತ್ತು. ಉಳಿದ ಹಣವನ್ನು ಮುಂದಿನ ಹದಿನೈದು ದಿನಗಳ ಒಳಗೆ ನೀಡಲು ಮಾತಾಗಿತ್ತು. ಮುಂದೆ ವಿಪರೀತ ಪರಿಸ್ಥಿತಿ ನಿರ್ಮಾಣವಾದ ಕಾರಣ ಅವರಿಗೆ ಬಾಕಿ ಮೊತ್ತ ಬರಲಿಲ್ಲ. ರೈತರಿಂದ ಬೆಳೆದ ಬೆಳೆಯನ್ನು ಖರೀದಿಸುವುದು ತಿಂಗಳುಗಟ್ಟಲೇ ಅವರಿಗೆ ಹಣ ಕೊಡದೇ ಇರುವುದು. ಹೀಗೆ ಸಾಮಾನ್ಯವಾಗಿ ಮೆಕ್ಕೆಜೋಳ ಬೆಳೆದ ರೈತರಿಗೆಲ್ಲ ಮಾಡುವ ಪರಂಪರೆ ಬೆಳೆದು ಬಂದಿತ್ತು. ಅದೇ ರೀತಿ ಜಿತೇಂದ್ರ ಅವರ ಪೇಮೆಂಟ್ ನಾಲ್ಕು ತಿಂಗಳವರೆಗೆ ಆಗಲೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಸೆಪ್ಟೆಂಬರ್ನಲ್ಲಿ ಜಾರಿಯಾದ ಕೃಷಿ ಕಾನೂನು ಅವರಿಗೆ ಸಹಾಯಕ್ಕೆ ಬಂದಿತು. ಕಾನೂನಿನ ಪ್ರಕಾರ ಬೆಳೆಯನ್ನು ಖರೀದಿಸಿದವರು ಖರೀದಿ ಮಾಡಿದ ಮೂರು ದಿನಗಳಲ್ಲಿಯೇ ಎಲ್ಲ ಪೇಮೆಂಟ್ ಮಾಡಬೇಕು. ಒಂದು ವೇಳೆ ಪೇಮೆಂಟ್ ಆಗದೇ ಹೋದರೆ ರೈತನು ದೂರು ನೀಡಬಹುದಾಗಿದೆ. ಕಾನೂನಿನಲ್ಲಿ ಇನ್ನೊಂದು ಮಹತ್ವಪೂರ್ಣ ಮಾತಿದೆ, ಕಾನೂನಿನ ಅನುಸಾರ ಕ್ಷೇತ್ರದ ಎಸ್ಡಿಎಂ ನವರು ದೂರು ದಾಖಲಾದ ಒಂದು ತಿಂಗಳೊಳಗಾಗಿ ಅದನ್ನು ಬಗೆಹರಿಸಬೇಕೆಂಬ ನಿಯಮವಿದೆ. ಈಗ, ಇಂತಹ ಒಂದು ಕಾನೂನು ನಮ್ಮ ರೈತ ಸಹೋದರರಿಗೆ  ದೊರಕಿರಬೇಕಾದರೆ ಅವರ ಸಮಸ್ಯೆಗೆ ಪರಿಹಾರ ದೊರಕಲೇಬೇಕು. ಅವರು ದೂರು ನೀಡಿದಲ್ಲಿ ಅದರ ಫಲವಾಗಿ ಕೆಲವೇ ದಿನಗಳಲ್ಲಿ ಅವರ ಬಾಕಿ ಮೊತ್ತವನ್ನು ನೀಡಲಾಯಿತು. ಅಂದರೆ ಇಲ್ಲಿ ಕಾನೂನಿನ ಸರಿಯಾದ ಹಾಗೂ ಪೂರ್ತಿ ತಿಳುವಳಿಕೆ ಇಲ್ಲಿ ಜಿತೇಂದ್ರ ಅವರ ಶಕ್ತಿಯಾಯಿತು. ಕ್ಷೇತ್ರ ಯಾವುದೇ ಆಗಲಿ ಎಲ್ಲ ಬಗೆಯ ಭ್ರಮೆ ಮತ್ತು ಸುಳ್ಳು ಸುದ್ದಿಗಳಿಂದ ದೂರವಿದ್ದು, ಸರಿಯಾದ ತಿಳುವಳಿಕೆ ಪಡೆದು ಮುನ್ನಡೆದರೆ ಪ್ರತಿಯೊಬ್ಬ ವ್ಯಕ್ತಿಗೆ ಬಹಳ ಸಹಾಯಕವಾಗುತ್ತದೆ. ರೈತರಲ್ಲಿ ತಿಳುವಳಿಕೆ ಮೂಡಿಸಲು ಇಂತಹುದೇ ಒಂದು ಕಾರ್ಯಕ್ರಮ ಮಾಡಲಾಗುತ್ತಿದೆ. ರಾಜಸ್ಥಾನದ ಬಾರಾಂ ಜಿಲ್ಲೆಯಲ್ಲಿ ಮೊಹಮ್ಮದ ಅಸ್ಲಮ ಅವರಿಂದ ನಡೆಯುತ್ತಿದೆ. ಇವರು ಒಂದು ರೈತರ ಉತ್ಪಾದಕ ಸಂಘದ ಸಿಈಓ ಕೂಡಾ ಆಗಿದ್ದಾರೆ. ಹೌದು, ತಾವು ಸರಿಯಾಗಿ ಕೇಳಿಸಿಕೊಂಡಿರಿ, ರೈತ ಉತ್ಪಾದನಾ ಸಂಘದ ಸಿಈಓದೊಡ್ಡ ದೊಡ್ಡ ಕಂಪನಿಗಳ ಸಿಈಓ ಗಳಿಗೆ ಇದನ್ನು ಕೇಳಿ ಖುಷಿಯಾಗಬಹುದು, ಇನ್ನು ಮುಂದೆ ದೇಶದ ದೂರದೂರುಗಳಲ್ಲಿ ವಾಸಿಸುವ ಕೆಲಸ ಮಾಡುವ ರೈತ ಸಂಘಗಳಲ್ಲಿಯೂ ಕೂಡಾ ಸಿಈಓ ಆಗುತ್ತಿದ್ದಾರೆ ಎಂಬುದನ್ನು ಕೇಳಿ ಸಂತೋಷವಾಗುತ್ತದೆ. ಅಲ್ಲದೆ, ಮಿತ್ರರೇ, ಮೊಹಮ್ಮದ ಅಸ್ಲಮ ಅವರು ತಮ್ಮ ಕ್ಷೇತ್ರದ ಹಲವವಾರು ರೈತರನ್ನು ಸೇರಿಸಿಕೊಂಡು ಒಂದು ವಾಟ್ಸಪ್ ಗ್ರುಪ್ ಮಾಡಿಕೊಂಡಿದ್ದಾರೆ. ಗ್ರುಪ್ನಲ್ಲಿ ಅವರು ಪ್ರತಿ ದಿನ ಸಮೀಪದ ಯಾವ ಯಾವ ಮಾರುಕಟ್ಟೆಗಳಲ್ಲಿ  ಬೆಳೆಗಳ ದರದ ಬಗ್ಗೆ, ಯಾವ ದರದಲ್ಲಿ ಸಾಮಾನುಗಳನ್ನು ಖರೀದಿಸುತ್ತಿದ್ದಾರೆ ಎಂಬ ಬಗ್ಗೆ ತಿಳುವಳಿಕೆಯನ್ನು ರೈತರಿಗೆ ನೀಡುತ್ತಾರೆ. ಸ್ವತ: ಎಫ್ಪಿಓ ಅವರೂ ರೈತರ ಬೆಳೆ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಆದ್ದರಿಂದ ಅವರ ಪ್ರಯತ್ನದ ಫಲವಾಗಿ ಇಂದು ರೈತರಿಗೆ ನಿರ್ಣಯ ತೆಗೆದುಕೊಳ್ಳಲು ಸಹಾಯವಾಗುತ್ತಿದೆ.

ಸ್ನೇಹಿತರೆ, ಜಾಗರೂಕತೆಯಿದ್ದಲ್ಲಿ ಜೀವಂತಿಕೆಯಿದೆ. ಶ್ರೀ ವಿರೇಂದ್ರ ಯಾದವ್ ಅವರು ತಮ್ಮ ಜಾಗರೂಕತೆಯಿಂದ ಸಾವಿರಾರು ಜನರ ಜೀವನದ ಮೇಲೆ ಪ್ರಭಾವ ಬೀರಿದ ಒಬ್ಬ ಕೃಷಿ ಉದ್ಯಮಿ. ವಿರೇಂದ್ರ ಯಾದವ್ ಅವರು ಹಿಂದೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದರು. 2 ವರ್ಷಗಳ ಹಿಂದೆ ಅವರು ಭಾರತಕ್ಕೆ ಬಂದಿದ್ದಾರೆ ಮತ್ತು ಈಗ ಹರಿಯಾಣದ ಕೈಥಲ್ ನಲ್ಲಿ ಇದ್ದಾರೆ. ಇತರರಂತೆ ಕೃಷಿಯಲ್ಲಿ ಕೃಷಿ ತ್ಯಾಜ್ಯ ಅವರಿಗೆ ಒಂದು ದೊಡ್ಡ ಸಮಸ್ಯೆಯಾಗಿತ್ತು. ಇದಕ್ಕೆ ಪರಿಹಾರ ಹುಡುಕುವ ಕೆಲಸ ವ್ಯಾಪಕವಾಗಿ ನಡೆದಿದೆ. ಆದರೆ, ಇಂದು ಮನದ ಮಾತಿನಲ್ಲಿ ನಾನು ವಿರೇಂದ್ರ ಜಿ ಅವರ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸುತ್ತಿದ್ದೇನೆ ಏಕೆಂದರೆ ಅವರ ಪ್ರಯತ್ನ ವಿಭಿನ್ನವಾಗಿದೆ. ಒಂದು ಹೊಸ ಮಾರ್ಗವನ್ನು ತೋರಿಸುತ್ತಿದೆ. ತ್ಯಾಜ್ಯ ಸಮಸ್ಯೆಯ ಪರಿಹಾರಕ್ಕೆ ವಿರೇಂದ್ರ ಅ಻ವರು ಒಣ ಹುಲ್ಲಿನ ಮೂಟೆಯನ್ನು ಕಟ್ಟುವಂಥ ಸ್ಟ್ರಾ ಬೇಲರ್ ಯಂತ್ರವನ್ನು ಖರೀದಿಸಿದರು. ಇದಕ್ಕಾಗಿ ಅವರಿಗೆ ಕೃಷಿ ಇಲಾಖೆಯಿಂದ ಆರ್ಥಿಕ ಸಹಾಯವೂ ಲಭಿಸಿತು. ಯಂತ್ರದಿಂದ ಅವರು ಒಣ ಹುಲ್ಲಿನ ಬ್ಲಾಕ್ ಗಳನ್ನು ತಯಾರಿಸಲಾರಂಭಿಸಿದರು. ಬ್ಲಾಕ್ ಗಳನ್ನು ತಯಾರಿಸಿದ ನಂತರ ತ್ಯಾಜ್ಯವನ್ನು ಪೇಪರ್ ಮಿಲ್ ಗಳು ಮತ್ತು ಆಗ್ರೊ ಎನರ್ಜಿ ಘಟಕಗಳಿಗೆ ಮಾರಾಟ ಮಾಡಿದರು. ವಿರೇಂದ್ರ ಻ಅವರು ತ್ಯಾಜ್ಯದಿಂದ ಕೇವಲ 2 ವರ್ಷಗಳಲ್ಲಿ ಒಂದೂವರೆ ಕೋಟಿಗಿಂತ ಹೆಚ್ಚು ವ್ಯಾಪಾರ ಮಾಡಿದ್ದಾರೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಅದರಲ್ಲೂ ಸುಮಾರು 50 ಲಕ್ಷದಷ್ಟು ಲಾಭಗಳಿಸಿದ್ದಾರೆ. ಯಾರ ಹೊಲಗಳಿಂದ ತ್ಯಾಜ್ಯವನ್ನು ಸಂಗ್ರಹಿಸುತ್ತಾರೋ ರೈತರಿಗೂ ಇದರ ಲಾಭವಾಗುತ್ತಿದೆ. ನಾವು ಕಸದಿಂದ ರಸ ಎಂಬುದನ್ನು ಬಹಳ ಕೇಳಿದ್ದೇವೆ. ಆದರೆ ತ್ಯಾಜ್ಯಕ್ಕೆ ಪರಿಹಾರ ಒದಗಿಸಿ ಹಣ ಮತ್ತು ಪುಣ್ಯ ಎರಡನ್ನೂ ಗಳಿಸುವ ಒಂದು ಉತ್ತಮ ಉದಾಹರಣೆ ಇದಾಗಿದೆ. ನನ್ನ ಯುವಜನತೆಯೇ, ವಿಶೇಷವಾಗಿ ಕೃಷಿ ಅಧ್ಯಯನ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ - ನಿಮ್ಮ ಸುತ್ತಮುತ್ತ ಗ್ರಾಮಗಳಲ್ಲಿರುವ ರೈತರಿಗೆ ಆಧುನಿಕ ಕೃಷಿ ಬಗ್ಗೆ ಮತ್ತು ಪ್ರಸಕ್ತ ಕೃಷಿ ಸುಧಾರಣೆ ಬಗ್ಗೆ ಖಂಡಿತ ತಿಳಿಸಿ ಎಂದು ಆಗ್ರಹಿಸುತ್ತೇನೆ. ಹೀಗೆ ಮಾಡುವ ಮೂಲಕ ನೀವು ದೇಶದಲ್ಲಾಗುತ್ತಿರುವ ಬಹುದೊಡ್ಡ ಬದಲಾವಣೆಯ ಭಾಗವಾಗುತ್ತೀರಿ.

ನನ್ನ ಪ್ರಿಯ ದೇಶಬಾಂಧವರೆ,

ಮನದ ಮಾತುನಲ್ಲಿ ನಾವು ಬೇರೆ ಬೇರೆ, ವಿಭಿನ್ನ ವಿಷಯಗಳ ಕುರಿತು ನಾವು ಚರ್ಚಿಸುತ್ತೇವೆ. ಆದರೆ ನಾವು ಸಂತೋಷದಿಂದ ಸ್ಮರಿಸಿಕೊಳ್ಳಲು ಬಯಸದ ಇಂಥ ಒಂದು ವಿಷಯಕ್ಕೆ ಒಂದು ವರ್ಷ ತುಂಬುತ್ತಿದೆ. ವಿಶ್ವಕ್ಕೆ ಕೊರೊನಾದ ಮೊದಲ ಸೋಂಕಿನ ಪ್ರಕರಣದ ಬಗ್ಗೆ ತಿಳಿದು ಸುಮಾರು ಒಂದು ವರ್ಷವಾಗುತ್ತಿದೆ. ಅಂದಿನಿಂದ ಇಲ್ಲಿವರೆಗೆ ಸಂಪೂರ್ಣ ವಿಶ್ವ ಻ಅನೇಕ ಏರಿಳಿತಗಳನ್ನು ಕಂಡಿದೆ. ಲಾಕ್ ಡೌನ್ ನಿಂದ ಹೊರಬಂದು ಈಗ ಲಸಿಕೆ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಕೊರೊನಾ ಕುರಿತು ಯಾವುದೇ ಬಗೆಯ ನಿರ್ಲಕ್ಷ ಈಗಲೂ ಅಪಾಯಕಾರಿಕೊರೊನಾ ವಿರುದ್ಧದ ನಮ್ಮ ಸಮರವನ್ನು ಈಗಲೂ ಧೃಡವಾಗಿ ಮುಂದುವರಿಸಬೇಕಿದೆ.

ಸ್ನೇಹಿತರೆ, ಕೆಲ ದಿನಗಳ ನಂತರ ಡಿಸೆಂಬರ್ 6 ಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿಯಿದೆ. ಅಂದು ಬಾಬಾ ಸಾಹೇಬ್ ಅವರಿಗೆ ಶೃದ್ಧಾಂಜಲಿ ಅರ್ಪಿಸುವುದುರ ಜೊತೆಗೆ, ದೇಶದ ಬಗೆಗಿನ ನಮ್ಮ ಸಂಕಲ್ಪಗಳನ್ನು ಹಾಗೂ ಸಂವಿಧಾನ ಒಬ್ಬ ನಾಗರಿಕನಾಗಿ ನಮಗೆ ನೀಡಿದ ಕರ್ತವ್ಯಗಳನ್ನು ನಿಭಾಯಿಸುವುದನ್ನು ಪುನರುಚ್ಛರಿಸಬೇಕಿದೆ. ದೇಶದ ಹೆಚ್ಚಿನ ಭಾಗದಲ್ಲಿ ಚಳಿ ಹೆಚ್ಚುತ್ತಿದೆ. ಬಹಳಷ್ಟು ಸ್ಥಳಗಳಲ್ಲಿ ಹಿಮ ಬೀಳುತ್ತಿದೆ. ಋತುವಿನಲ್ಲಿ ನಮಗೆ ಕುಟುಂಬದ ಮಕ್ಕಳು ಮತ್ತು ಹಿರಿಯರ, ರೋಗಿಗಳ ಬಗ್ಗೆ ವಿಶೇಷ ಗಮನಹರಿಸಬೇಕಿದೆ. ಸ್ವತಃ ಕೂಡಾ ಎಚ್ಚರವಹಿಸಬೇಕು. ಜನರು ನೆರೆಹೊರೆಯಲ್ಲಿ ಅವಶ್ಯಕತೆಯಿರುವವರ ಬಗ್ಗೆಯೂ ಚಿಂತಿಸುವುದನ್ನು ಕಂಡು, ಬೆಚ್ಚನೆಯ ಬಟ್ಟೆಗಳನ್ನು ನೀಡಿ ಅವರಿಗೆ ಸಹಾಯ ಮಾಡುವುದನ್ನು ಕಂಡು ನನಗೆ ಸಂತೋಷವಾಗುತ್ತದೆ. ನಿಸ್ಸಹಾಯಕ ಜಾನುವ಻ರುಗಳಿಗೂ ಚಳಿ ಬಹಳ ಕಷ್ಟಗಳನ್ನು ತಂದೊಡ್ಡುತ್ತದೆ. ಅವುಗಳ ಸಹಾಯಕ್ಕೂ ಬಹಳಷ್ಟು ಜನ ಮುಂದೆ ಬರುತ್ತಾರೆ. ನಮ್ಮ ಯುವಜನತೆ ಇಂಥ ಕೆಲಸಗಳಲ್ಲಿ ಬಹಳ ಹುರುಪಿನಿಂದ ಸಕ್ರೀಯವಾಗಿ ಪಾಲ್ಗೊಳ್ಳುತ್ತಾರೆ. ಸ್ನೇಹಿತರೆ ಮುಂದಿನ ಮನದ ಮಾತಿನಲ್ಲಿನಾವು ಭೇಟಿಯಾದಾಗ 2020 ವರ್ಷ ಮುಕ್ತಾಯದ ಹಂತದಲ್ಲಿರುತ್ತದೆ. ಹೊಸ ಆಶಯಗಳು, ಹೊಸ ವಿಶ್ವಾಸದೊಂದಿಗೆ ನಾವು ಮುಂದೆ ಸಾಗೋಣ. ಏನೇ ಸಲಹೆಗಳಿದ್ದರೆ, ಹೊಸ ವಿಚಾರಗಳಿದ್ದರೆ ಖಂಡಿತ ನನಗೆ ತಲುಪಿಸುತ್ತಲೇ ಇರಿ. ನಿಮ್ಮೆಲ್ಲರಿಗೂ ಅನಂತ ಶುಭಹಾರೈಕೆಗಳು. ನೀವೆಲ್ಲರೂ ಆರೋಗ್ಯದಿಂದಿರಿ, ದೇಶಕ್ಕಾಗಿ ಸೇವೆ ಸಲ್ಲಿಸಿ. ಅನಂತ ಻ನಂತ ಧನ್ಯವಾದಗಳು.

***


(Release ID: 1676937) Visitor Counter : 290