ಪ್ರಧಾನ ಮಂತ್ರಿಯವರ ಕಛೇರಿ
ನಾಳೆ ಮೂರು ನಗರಗಳ ಲಸಿಕೆ ಉತ್ಪಾದನಾ ಸೌಲಭ್ಯಗಳಿಗೆ ಪ್ರಧಾನಿ ಭೇಟಿ
Posted On:
27 NOV 2020 4:36PM by PIB Bengaluru
ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ವೈಯಕ್ತಿಕವಾಗಿ ಪರಿಶೀಲಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಮೂರು ನಗರಗಳಿಗೆ ಭೇಟಿ ನೀಡಲಿದ್ದಾರೆ. ಅವರು ಅಹಮದಾಬಾದ್‌ನ ಝೈಡಸ್ ಬಯೋಟೆಕ್ ಪಾರ್ಕ್, ಹೈದರಾಬಾದ್‌ನ ಭಾರತ್ ಬಯೋಟೆಕ್ ಮತ್ತು ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಭೇಟಿ ನೀಡಲಿದ್ದಾರೆ.
ಕೋವಿಡ್-19 ವಿರುದ್ಧದ ಸಮರದಲ್ಲಿ ಭಾರತವು ನಿರ್ಣಾಯಕ ಹಂತಕ್ಕೆ ಪ್ರವೇಶಿಸುತ್ತಿರುವುದರಿಂದ, ಪ್ರಧಾನಮಂತ್ರಿಯವರ ಈ ಲಸಿಕೆ ಉತ್ಪಾದನಾ ಸೌಲಭ್ಯಗಳ ಭೇಟಿ ಮತ್ತು ವಿಜ್ಞಾನಿಗಳೊಂದಿಗಿನ ಚರ್ಚೆಗಳು ದೇಶದ ನಾಗರಿಕರಿಗೆ ಲಸಿಕೆ ಹಾಕುವ ಪ್ರಯತ್ನದ ಸಿದ್ಧತೆಗಳು, ಸವಾಲುಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಮೊದಲ ಹಂತದ ದೃಷ್ಟಿಕೋನವನ್ನು ಪಡೆಯಲು ಸಹಾಯ ಮಾಡುತ್ತದೆ.
***
(Release ID: 1676919)
Visitor Counter : 229
Read this release in:
Tamil
,
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Telugu
,
Malayalam