ಹಣಕಾಸು ಸಚಿವಾಲಯ

ಅಸೀಮ್ ಮೂಲಸೌಕರ್ಯ ಹಣಕಾಸು ಸಂಸ್ಥೆ ಮತ್ತು ಎನ್ಐಐಎಫ್ ಮೂಲಸೌಕರ್ಯ ಹಣಕಾಸು ಸಂಸ್ಥೆಯನ್ನು ಒಳಗೊಂಡಿರುವ ಎನ್ಐಐಎಫ್ ಮೂಲಸೌಕರ್ಯ ಸಾಲ ಹಣಕಾಸು ವೇದಿಕೆಗೆ ಬಂಡವಾಳ ಪುನರ್ಧನಕ್ಕೆ ಸಂಪುಟದ ಅನುಮೋದನೆ

Posted On: 25 NOV 2020 3:31PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅಸೀಮ್ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿಮಿಟೆಡ್ (ಎಐಎಫ್ಎಲ್) ಮತ್ತು ಎನ್ಐಐಎಫ್ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿಮಿಟೆಡ್ (ಎನ್ಐಐಎಫ್-ಐಎಫ್ಎಲ್) ಅನ್ನು ಒಳಗೊಂಡ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್ಐಐಎಫ್) ಪ್ರಾಯೋಜಿತ ಎನ್ಐಐಎಫ್ ಸಾಲ ವೇದಿಕೆಗೆ 6000 ಕೋಟಿ ರೂ. ಬಂಡವಾಳ ಪುನರ್ಧನಕ್ಕೆ ಅನುಮೋದನೆ ನೀಡಿದೆ. ಪುನರ್ಧನವು ಕೆಳಗಿನ ಷರತ್ತುಗಳಿಗೆ ಒಳಪಟ್ಟಿರುತ್ತದೆ:

  1. ಪ್ರಸಕ್ತ 2020-21 ಅವಧಿಯಲ್ಲಿ 2,000 ಕೋಟಿ ರೂ. ಮಂಜೂರು ಮಾಡಲಾಗುವುದು. ಆದಾಗ್ಯೂ, ಕೋವಿಡ್19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಮತ್ತು ಸೀಮಿತ ಹಣಕಾಸಿನ ಲಭ್ಯತೆಯ ದೃಷ್ಟಿಯಿಂದ, ಸಾಲ ಹೆಚ್ಚಳಕ್ಕೆ ಸಿದ್ಧತೆ ಮತ್ತು ಬೇಡಿಕೆ ಇದ್ದರೆ ಮಾತ್ರ ಪ್ರಸ್ತಾವಿತ ಮೊತ್ತವನ್ನು ವಿತರಿಸಲಾಗುವುದು.
  2. ದೇಶೀಯ ಮತ್ತು ಜಾಗತಿಕ ಪಿಂಚಣಿ ನಿಧಿಗಳು ಮತ್ತು ಸಾರ್ವಭೌಮ ಸಂಪತ್ತು ನಿಧಿಗಳಿಂದ ಈಕ್ವಿಟಿ ಹೂಡಿಕೆಗಳನ್ನು ತ್ವರಿತವಾಗಿ ಬಳಸಲು ಎನ್ಐಐಎಫ್ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ 2020 ನವೆಂಬರ್ 12 ರಂದು ಆತ್ಮನಿರ್ಭರ್ ಭಾರತ್ 3.0 ಅಡಿಯಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿದ ಹನ್ನೆರಡು ಪ್ರಮುಖ ಕ್ರಮಗಳಲ್ಲಿ ಇದೂ ಒಂದಾಗಿದೆ.

ಎನ್ಐಐಎಫ್ ಕಾರ್ಯತಂತ್ರದ ಅವಕಾಶಗಳ ನಿಧಿ (ಎನ್ಐಐಎಫ್ ಎಸ್ಒಎಫ್) ಯು ಎನ್ಬಿಎಫ್ಸಿ ಮೂಲ ಸೌಕರ್ಯ ಸಾಲ ನಿಧಿ ಮತ್ತು ಎನ್ಬಿಎಫ್ಸಿ ಮೂಲಸೌಕರ್ಯ ಹಣಕಾಸು ಕಂಪನಿಯನ್ನು ಒಳಗೊಂಡಿರುವ ಸಾಲ ವೇದಿಕೆಯನ್ನು ಸ್ಥಾಪಿಸಿದೆ. ಎನ್ಐಐಎಫ್ ತನ್ನ ಎನ್ಐಐಎಫ್ ಎಸ್ಒಎಫ್ ಮೂಲಕ ಎರಡೂ ಕಂಪನಿಗಳಲ್ಲಿ ಹೆಚ್ಚಿನ ಪಾಲು ಹೊಂದಿದ್ದು, ಈಗಾಗಲೇ ಪ್ಲ್ಯಾಟ್ಫಾರ್ಮ್ನಾದ್ಯಂತ 1,899 ಕೋಟಿ ರೂ. ಹೂಡಿಕೆ ಮಾಡಿದೆ. ಎನ್ಐಐಎಫ್ ಹೂಡಿಕೆ ಮಾಡಲಾಗಿರುವ ಸ್ಟ್ರಾಟೆಜಿಕ್ ಆಪರ್ಚುನಿಟೀಸ್ ಫಂಡ್ (ಎಸ್ಒಎಫ್ ಫಂಡ್) ಇತರ ಸೂಕ್ತ ಹೂಡಿಕೆಯ ಅವಕಾಶಗಳಲ್ಲಿ ಹೂಡಿಕೆ ಮಾಡುವುದರ ಜೊತೆಗೆ ಎರಡು ಕಂಪನಿಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ. ಪ್ರಸ್ತುತ ಪ್ರಸ್ತಾಪವು ಮೂಲಸೌಕರ್ಯ ಸಾಲ ಹಣಕಾಸು ವಲಯದಲ್ಲಿ ಎರಡು ಘಟಕಗಳ ಸಾಮರ್ಥ್ಯ ಮತ್ತು ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಲು ಭಾರತ ಸರ್ಕಾರದ ನೇರ ಹೂಡಿಕೆಯನ್ನು ಬಯಸುತ್ತದೆ. ಅಂತರರಾಷ್ಟ್ರೀಯ ಇಕ್ವಿಟಿಯನ್ನು ಹೆಚ್ಚಿಸುವ ವೇದಿಕೆಯ ಪ್ರಯತ್ನಗಳಿಗೆ ಇದು ಸಹಕಾರಿಯಾಗಲಿದೆ. ಈಗಾಗಲೇ ಇರುವ ಎನ್ಐಐಎಫ್ ಎಸ್ಒಎಫ್ ಪುನರ್ಧನನವಲ್ಲದೇ, ಸರ್ಕಾರದ ಹೊಸ ಬಂಡವಾಳ ಪುನರ್ಧನ ಮತ್ತು ಖಾಸಗಿ ವಲಯದ ಸಂಭಾವ್ಯ ಈಕ್ವಿಟಿ ಭಾಗವಹಿಸುವಿಕೆಯೊಂದಿಗೆ, ಸಾಲ ವೇದಿಕೆಯು 2025 ವೇಳೆಗೆ ಯೋಜನೆಗಳಿಗೆ 1,10,000 ಕೋಟಿ ರೂ. ಸಾಲದ ಬೆಂಬಲವನ್ನು ವಿಸ್ತರಿಸಲು ಸಾಕಷ್ಟು ಸಂಪನ್ಮೂಲಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ.

ಅನುಷ್ಠಾನ ಮತ್ತು ಗುರಿ:

.        ಎಐಎಫ್ಎಲ್ ಮುಖ್ಯವಾಗಿ ಒಂದು ವರ್ಷಕ್ಕಿಂತ ಕಡಿಮೆ ಕಾರ್ಯಾಚರಣೆಯನ್ನು ಹೊಂದಿರುವ ನಿರ್ಮಾಣ / ಗ್ರೀನ್ಫೀಲ್ಡ್ / ಬ್ರೌನ್ಫೀಲ್ಡ್ ಸ್ವತ್ತುಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಎನ್ಐಐಎಫ್ ಇನ್ಫ್ರಾಸ್ಟ್ರಕ್ಚರ್ ಡೆಟ್ ಫೈನಾನ್ಸಿಂಗ್ ಪ್ಲಾಟ್ಫಾರ್ಮ್ ತನ್ನದೇ ಆದ ಆಂತರಿಕ ಮೌಲ್ಯಮಾಪನ ವ್ಯವಸ್ಥೆಯನ್ನು ಹೊಂದಿರುತ್ತದೆ, ಇದು ಹಣವನ್ನು ತ್ವರಿತವಾಗಿ ನಿಯೋಜಿಸಲು ಅನುವು ಮಾಡಿಕೊಡುತ್ತದೆ.

ಬಿ.        ಎನ್ಐಐಎಫ್ ಐಎಫ್ಎಲ್ (ಎನ್ಬಿಎಫ್ಸಿ-ಐಡಿಎಫ್) ಕಾರ್ಯಾಚರಣಾ ಸ್ವತ್ತುಗಳ ಟೇಕ್- ಔಟ್ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ವೆಚ್ಚದ ಬ್ಯಾಂಕ್ ಹಣಕಾಸಿನ ಬದಲಿಗೆ ಅಗ್ಗದ ಐಡಿಎಫ್ ಹಣಕಾಸು ಒದಗಿಸುವ ಮೂಲಕ ಮೂಲಸೌಕರ್ಯ ಹೂಡಿಕೆದಾರರಿಗೆ ಇದು ನೆರವಾಗುತ್ತದೆ. ಮುಂದಿನ 5 ವರ್ಷಗಳಲ್ಲಿ (ಎನ್ಐಪಿ ಯೋಜನೆ ಅವಧಿ), ಎನ್ಐಐಎಫ್ ಮೂಲಸೌಕರ್ಯ ಸಾಲ ಹಣಕಾಸು ವೇದಿಕೆಯು, 100,000 ಕೋಟಿ ರೂ. ಮೌಲ್ಯದ ಮೂಲಸೌಕರ್ಯ ನಿರ್ಮಾಣ ಯೋಜನೆಗಳಿಗೆ ಬೆಂಬಲ ಒದಗಿಸುತ್ತದೆ.

ಸಿ.        ಮುಂದಿನ ಕೆಲವು ವರ್ಷಗಳಲ್ಲಿ ಪ್ಲ್ಯಾಟ್ಫಾರ್ಮ್ಗೆ ಬಾಹ್ಯ ದೀರ್ಘಕಾಲೀನ ಇಕ್ವಿಟಿ ಕ್ಯಾಪಿಟಲ್ ಮತ್ತು ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಂದ ಸಾಲ ಸಂಗ್ರಹದ ಅಗತ್ಯವಿರುತ್ತದೆ, ಇದು ಕೇಂದ್ರ ಸರ್ಕಾರದ ಪ್ರಸ್ತಾವಿತ ಬಂಡವಾಳ ಪುನರ್ಧನವಾದ 6,000 ಕೋಟಿ ರೂ. ಗಳಿಗಿಂತ 14 -18 ಪಟ್ಟು ಹೆಚ್ಚಾಗಿರುತ್ತದೆ.

ಡಿ.        ಮೂಲಸೌಕರ್ಯ ಸಾಲ ಹಣಕಾಸು ವೇದಿಕೆಯಲ್ಲಿ ದೇಶೀಯ ಮತ್ತು ಜಾಗತಿಕ ಪಿಂಚಣಿ, ವಿಮೆ ಮತ್ತು ಸಾರ್ವಭೌಮ ಸಂಪತ್ತು ನಿಧಿಗಳಿಂದ ಈಕ್ವಿಟಿ ಹೂಡಿಕೆಗಳನ್ನು ಹೆಚ್ಚಿಸಲು ಎನ್ಐಐಎಫ್ ಸರ್ಕಾರದ ಈಕ್ವಿಟಿ ಹೂಡಿಕೆಗಳನ್ನು ಬಳಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತದೆ.

ವೆಚ್ಚ:

ಎರಡು ಹಣಕಾಸು ವರ್ಷಗಳಲ್ಲಿ, ಅಂದರೆ 2020-21 ಮತ್ತು 2021-22ರಲ್ಲಿ ಎನ್ಐಐಎಫ್ ಸಾಲ ವೇದಿಕೆಯಲ್ಲಿ 6,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುವುದು.

ಪರಿಣಾಮ:

ಎನ್ಐಐಎಫ್ ಮೂಲಸೌಕರ್ಯ ಸಾಲ ಹಣಕಾಸು ವೇದಿಕೆಯು ಮುಂದಿನ 5 ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರಕ್ಕೆ ಸುಮಾರು 1 ಲಕ್ಷ ಕೋಟಿ ರೂ. ಕೊಡುಗೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ರಾಷ್ಟ್ರೀಯ ಮೂಲಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಇದು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಕ್ರಿಯೆಯು ಮೂಲಸೌಕರ್ಯ ಯೋಜನೆಗಳ ಬ್ಯಾಂಕುಗಳ ಪಾತ್ರವನ್ನು ಕಡಿಮೆ ಮಾಡಲು ಮತ್ತು ಹೊಸ ಗ್ರೀನ್ ಫೀಲ್ಡ್ ಯೋಜನೆಗಳಿಗೆ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಮೂಲಸೌಕರ್ಯ ವಲಯದಲ್ಲಿ ಐಡಿಎಫ್ / ಟೇಕ್- ಔಟ್ ಹಣಕಾಸು ವ್ಯವಸ್ಥೆಯು ಮೂಲಸೌಕರ್ಯ ಸ್ವತ್ತುಗಳ ದ್ರವ್ಯತೆಯನ್ನು ಹೆಚ್ಚಿಸಲು ಮತ್ತು ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಭಾರತದಲ್ಲಿ, ಎಸ್ಪಿವಿಗಳ ಮೂಲಕ ಮೂಲಸೌಕರ್ಯ ಯೋಜನೆಗಳನ್ನು ಅಉನುಷ್ಠಾನಗೊಳಿಸಲಾಗುತ್ತದೆ. ಎಸ್ಪಿವಿಗಳು ನಿರ್ಮಾಣ ಪೂರ್ಣಗೊಂಡ ನಂತರವೂ ಸ್ವತಂತ್ರವಾಗಿ ಹೂಡಿಕೆ ದರ್ಜೆಯ ರೇಟಿಂಗ್ ಪಡೆಯುವುದು ಸವಾಲಿನ ಸಂಗತಿಯಾಗಿದೆ. ಸಾಲ ವೇದಿಕೆಯು ಬಾಂಡ್ ಮಾರುಕಟ್ಟೆಯಿಂದ ಸಾಲವನ್ನು ಹೆಚ್ಚಿಸುತ್ತದೆ ಮತ್ತು ವಿಶ್ವಾಸಾರ್ಹ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಎಐಎಫ್ಎಲ್ ಅನ್ನು ಕೇರ್ ರೇಟಿಂಗ್ಸ್ ಎಎ ಎಂದು ರೇಟ್ ಮಾಡಿದೆ ಮತ್ತು ಎನ್ಐಎಫ್-ಐಎಫ್ಎಲ್ ಅನ್ನು ಕೇರ್ ರೇಟಿಂಗ್ಸ್ ಮತ್ತು ಸಿ ಆರ್ ಎಎಎ ಎಂದು ರೇಟ್ ಮಾಡಿದೆ. ಬಾಂಡ್ ಹೂಡಿಕೆದಾರರು ಬ್ಯಾಂಕುಗಳಿಗಿಂತ ಕಡಿಮೆ ಲಾಭವನ್ನು ಬಯಸುತ್ತಾರೆ, ಆದರೆ ತಮ್ಮದೇ ಆದ ಅಪಾಯ ನಿರ್ವಹಣಾ ಮಾರ್ಗಸೂಚಿಗಳನ್ನು ಪೂರೈಸಲು ಎಎಎ / ಎಎ ರೇಟಿಂಗ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಪಿಂಚಣಿ ಮತ್ತು ವಿಮಾ ನಿಧಿಗಳು ಸೇರಿದಂತೆ ದೀರ್ಘಾವಧಿಯ ಬಾಂಡ್ ಹೂಡಿಕೆದಾರರು ಸಾಮಾನ್ಯವಾಗಿ ಎಎಎ ದರದ ಬಾಂಡ್ಗಳಲ್ಲಿ ಹೂಡಿಕೆ ಮಾಡುತ್ತಾರೆ.

ಭಾರತದಲ್ಲಿ ಬಾಂಡ್ ಮಾರುಕಟ್ಟೆಯ ಮೂಲಸೌಕರ್ಯ ಹಣಕಾಸು ಮತ್ತು ಅಭಿವೃದ್ಧಿಯಲ್ಲಿ ಉತ್ತಮ ಬಂಡವಾಳ, ಉತ್ತಮ-ಧನಸಹಾಯ ಮತ್ತು ಉತ್ತಮ ಆಡಳಿತ ಇರುವವ ಎನ್ಐಐಎಫ್ ಸಾಲ ವೇದಿಕೆಯು, ಬಾಂಡ್ ಮಾರುಕಟ್ಟೆಗಳು ಮತ್ತು ಮೂಲಸೌಕರ್ಯ ಯೋಜನೆಗಳ ನಡುವೆ ಎಎಎ / ಎಎ-ರೇಟೆಡ್ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹಿನ್ನೆಲೆ:

ರಾಷ್ಟ್ರೀಯ ಮೂಲಸೌಕರ್ಯ ವೇದಿಕೆ (ಎನ್ಐಪಿ) ಪ್ರಕಾರ, ಮುಂದಿನ 5 ವರ್ಷಗಳಲ್ಲಿ ವಿವಿಧ ಉಪ ವಲಯಗಳಲ್ಲಿ ಮೂಲಸೌಕರ್ಯ ಕ್ಷೇತ್ರದ ಹೂಡಿಕೆಯನ್ನು 111 ಲಕ್ಷ ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದು ಸಾಲ ಹಣಕಾಸಿನ ಅಗತ್ಯವನ್ನು ಸೃಷ್ಟಿಸುತ್ತದೆ. ಯೋಜನೆಗಳಿಗೆ ಕನಿಷ್ಠ 60 ರಿಂದ 70 ಲಕ್ಷ ಕೋಟಿ ರೂ. ಸಾಲ ಹಣಕಾಸು ಬೇಕಾಗುತ್ತದೆ. ಇದಕ್ಕೆ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್ಐಐಎಫ್) ಯಂತಹ ಉತ್ತಮ ಬಂಡವಾಳ ಹೊಂದಿರುವ ವಿಶೇಷ ಮೂಲಸೌಕರ್ಯ ಕೇಂದ್ರಿತ ಹಣಕಾಸು ಸಂಸ್ಥೆಗಳು ಬೇಕಾಗುತ್ತವೆ.

***



(Release ID: 1675674) Visitor Counter : 236