ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ

320 ಕೋಟಿ ರೂಪಾಯಿ ಮೌಲ್ಯದ 28 ಆಹಾರ ಸಂಸ್ಕರಣಾ ಯೋಜನೆಗಳಿಗೆ ಅನುಮೋದನೆ


10 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶಗಳ ಸೃಷ್ಟಿ: ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್

Posted On: 21 NOV 2020 3:33PM by PIB Bengaluru

ಕೇಂದ್ರ ಆಹಾರ ಸಂಸ್ಕರಣಾ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅಂತರ ಸಚಿವಾಲಯ ಮಂಜೂರಾತಿ ಸಮಿತಿ (.ಎಂ..ಸಿ.) ಸಭೆಯಲ್ಲಿ ಸಿ..ಎಫ್.ಪಿ.ಪಿ.ಸಿ. ಯೋಜನೆ ಅಡಿಯಲ್ಲಿ ಎಂ..ಎಫ್.ಪಿ.. ಬೆಂಬಲಿತ 107.42 ಕೋ.ರೂ.ಗಳ ಅನುದಾನದೊಂದಿಗೆ ಒಟ್ಟು 320.33 ಕೋ.ರೂ.ಗಳ ಮೊತ್ತದ 28 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಯೋಜನೆಗಳು 10 ರಾಜ್ಯಗಳ ವ್ಯಾಪ್ತಿಯಲ್ಲಿದ್ದು ಸುಮಾರು 10,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.

ಅವಶ್ಯಕ ಅನುದಾನಕ್ಕಾಗಿರುವ ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನಾ (ಪಿ.ಎಂ.ಕೆ.ಎಸ್.ವೈ.) ಅಡಿಯಲ್ಲಿ ಆಹಾರ ಸಂಸ್ಕರಣೆ ಮತ್ತು ಕಾಪಿಡುವಿಕೆ ಸಾಮರ್ಥ್ಯಗಳ ಸೃಷ್ಟಿ/ ವಿಸ್ತರಣೆ (ಸಿ..ಎಫ್.ಪಿ.ಪಿ.ಸಿ.) (ಘಟಕ ಯೋಜನೆ)ಗಾಗಿರುವ ಯೋಜನೆಗಳನ್ನು ಪರಿಗಣಿಸಲು .ಎಂ..ಸಿ. ಸಭೆಯು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದಿದ್ದು, ಅದರ ಅಧ್ಯಕ್ಷತೆಯನ್ನು ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ವಹಿಸಿದ್ದರು. ಎಂ..ಎಸ್. ಎಫ್.ಪಿ.. ಶ್ರೀ ರಾಮೇಶ್ವರ ತೇಲಿ ಸಭೆಯಲ್ಲಿ ಉಪಸ್ಥಿತರಿದ್ದರು. ಯೋಜನೆಯ ಪ್ರಮೋಟರುಗಳು ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಸೇರಿದಂತೆ ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಉತ್ತರಾಖಂಡ, ಅಸ್ಸಾಂ, ಮತ್ತು ಮಣಿಪುರ ರಾಜ್ಯಗಳ ವ್ಯಾಪ್ತಿಯಲ್ಲಿ ಅಸ್ತಿತ್ವಕ್ಕೆ ಬರಲಿರುವ 28 ಯೋಜನೆಗಳು ದೈನಿಕ 1237 ಎಂ.ಟಿ. ಸಂಸ್ಕರಣಾ ಸಾಮರ್ಥ್ಯವನ್ನು ಸೃಷ್ಟಿಸಲಿವೆ ಮತ್ತು 48.87 ಕೋಟಿ ರೂ. ಯೋಜನಾ ವೆಚ್ಚದ, ಈಶಾನ್ಯ ರಾಜ್ಯಗಳ 6 ಯೋಜನೆಗಳು 28 ಯೋಜನೆಗಳಲ್ಲಿ ಸೇರಿದ್ದು, ಎಂ..ಎಫ್.ಪಿ.. ಯು 20.35 ಕೋ.ರೂ. ಅನುದಾನದ ಬೆಂಬಲ ನೀಡಲಿದೆ.

***



(Release ID: 1674804) Visitor Counter : 153