ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ವಿದೇಶ ಪ್ರವಾಸ ಮಾಡುವಾಗ ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿ ನವೀಕರಿಸಲು ಅನುಕೂಲವಾಗುವಂತೆ ಸಾರ್ವಜನಿಕರಿಂದ ಸಲಹೆಗಳ ಆಹ್ವಾನ

ಪ್ರಕಟಣಾ ದಿನಾಂಕ: 10 OCT 2020 12:44PM by PIB Bengaluru

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಿದೇಶದಲ್ಲಿದ್ದಾಗ ನಾಗರಿಕರ ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿ -ಐಡಿಪಿ ಅವಧಿ ಅಂತ್ಯಗೊಂಡಿದ್ದಲ್ಲಿ ಅವರಿಗೆ ಐಡಿಪಿ ನೀಡಲು ಅನುಕೂಲವಾಗುವಂತೆ.  ಕೇಂದ್ರೀಯ ಮೋಟಾರು ವಾಹನ ನಿಯಮ 1989ಕ್ಕೆ ತಿದ್ದುಪಡಿ ತರುವ ಸಂಬಂಧ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಕೋರಿ 2020ರ ಅಕ್ಟೋಬರ್ 7ರಂದು ಜಿಎಸ್.ಆರ್. 624 (ಇ) ಕರಡು ಅಧಿಸೂಚನೆ ಹೊರಡಿಸಿದೆ.

ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ವಿದೇಶಕ್ಕೆ ತೆರಳುವ ಮತ್ತು ವಿದೇಶದಲ್ಲಿರುವ ನಾಗರಿಕರ ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿ ಅವಧಿ ಮುಗಿದಿರುವುದು ಗಮನಕ್ಕೆ ಬಂದಿದೆ ಮತ್ತು ವಿದೇಶದಲ್ಲಿದ್ದಾಗ ಅದರ ನವೀಕರಣಕ್ಕೆ ಯಾವುದೇ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಅಂಥ ನಾಗರಿಕರಿಗೆ ಅವಕಾಶ ಕಲ್ಪಿಸಲು ಸಿಎಂವಿಆರ್ 1989ಕ್ಕೆ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿದೆ. ನಾಗರಿಕರು ಭಾರತೀಯ ಧೂತಾವಾಸ/ ಮಿಷನ್ ಅರ್ಬಾಡ್ ಪೋರ್ಟಲ್ಸ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ನಂತರ ಆ ಅರ್ಜಿಯನ್ನು ಸಂಬಂಧಿತ ಆರ್.ಟಿ.ಓ. ಪರಿಗಣನೆಗಾಗಿ ವಾಹನ್ ಗೆ ರವಾನಿಸಲಾಗುತ್ತದೆ.

ದೇಶದಲ್ಲಿ ಐಡಿಪಿಗೆ ಮನವಿ ಸಲ್ಲಿಸುವ ಸಮಯದಲ್ಲಿ ವೈದ್ಯಕೀಯ ಪ್ರಮಾಣಪತ್ರ ಮತ್ತು ಸಿಂಧುತ್ವದ ವೀಸಾದ ಷರತ್ತುಗಳನ್ನು ತೆಗೆದುಹಾಕುವ ಪ್ರಸ್ತಾಪವನ್ನೂ ಕರಡು ಒಳಗೊಂಡಿದೆ, ಏಕೆಂದರೆ ಅಲ್ಲಿ ಮಾನ್ಯತೆ ಇರುವ ಚಾಲನಾ ಪರವಾನಗಿ ಹೊಂದಿರುವ ನಾಗರಿಕನು ಮತ್ತೊಂದು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಅದೇ ರೀತಿ ಕೆಲವು ದೇಶಗಳಲ್ಲಿ ಆ ದೇಶದಲ್ಲಿ ಇಳಿದ ತರುವಾಯ ವೀಸಾ ನೀಡುವ ಅವಕಾಶವಿದ್ದು, ಅಂಥ ಪ್ರಕರಣಗಳಲ್ಲಿ ಐಡಿಪಿಗೆ ಭಾರತದಲ್ಲಿ ಪ್ರಯಾಣಕ್ಕೆ ಮುನ್ನ ಅರ್ಜಿ ಸಲ್ಲಿಸಿದಾಗ ವೀಸಾ ಲಭ್ಯವಿರುವುದಿಲ್ಲ.

ಪ್ರತಿಕ್ರಿಯೆ/ಸಲಹೆಗಳನ್ನು ಜಂಟಿ ಕಾರ್ಯದರ್ಶಿ (ಎಂ.ವಿ.ಎಲ್., ಐಟಿ ಮತ್ತು ಟೋಲ್), ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಸಾರಿಗೆ ಭವನ, ಸಂಸತ್ ಭವನ ರಸ್ತೆ, ನವದೆಹಲಿ 110001, ಇ-ಮೇಲ್ : jspb-morth[at]gov[dot]in,  ಇವರಿಗೆ ಈ ಅಧಿಸೂಚನೆ ಪ್ರಕಟವಾದ 30 ದಿನಗಳ ಒಳಗೆ ಸಲ್ಲಿಸಬೇಕು.  

***


(ಪ್ರಕಟಣೆ ಐ.ಡಿ.: 1673984) ವಿಸಿಟರ್ ಕೌಂಟರ್ : 169
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Punjabi , Tamil , Telugu , Malayalam