ಪ್ರಧಾನ ಮಂತ್ರಿಯವರ ಕಛೇರಿ

ಆತ್ಮನಿರ್ಭರ ಭಾರತಕ್ಕಾಗಿ ಸ್ಥಳೀಯ ಉತ್ಪನ್ನ (‘ವೋಕಲ್ ಫಾರ್ ಲೋಕಲ್’) ಜನಪ್ರಿಯಗೊಳಿಸಲು ಸಹಕರಿಸುವಂತೆ ಆಧ್ಯಾತ್ಮಿಕ ನಾಯಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ

Posted On: 16 NOV 2020 4:23PM by PIB Bengaluru

ದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಭಕ್ತಿ ಚಳವಳಿ ಭದ್ರ ಬುನಾದಿ ಹಾಕಿಕೊಟ್ಟಿತ್ತು, ಅಂತೆಯೇ ಇಂದು ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ನಮ್ಮ ದೇಶದ ಎಲ್ಲಾ ಸಂತರು, ಮಹಾತ್ಮರು, ಮಹಂತರು ಮತ್ತು ಆಚಾರ್ಯರು ಭದ್ರ ತಳಹದಿ ಒದಗಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶ್ರೀ ವಿಜಯ ವಲ್ಲಭ್  ಸುರೀಶ್ವರ್ ಜಿ ಮಹಾರಾಜ್ ಜಿನಾಚಾರ್ಯರ 151ನೇ ಜನ್ಮವರ್ಷಾಚರಣೆ ಅಂಗವಾಗಿ ಶಾಂತಿ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು. ಅವರ ಭಾಷಣದ ಪ್ರಮುಖಾಂಶವೆಂದರೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಆರ್ಥಿಕ ಮತ್ತು ಸಾಮಾಜಿಕ-ರಾಜಕೀಯ ತಳಹದಿಯ ಮೇಲೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ತಳಹದಿಗೆ ಒತ್ತು ನೀಡುವಂತೆ ಹಾಗೂ ಆತ್ಮನಿರ್ಭರ ಭಾರತಕ್ಕೆ ಹೆಚ್ಚಿನ ಸದ್ಯ ಆದ್ಯತೆ  ನೀಡುವಂತೆ ಕೋರಿದರು.  

ಸ್ಥಳೀಯ ಉತ್ಪನ್ನಗಳಿಗೆ (ವೋಕಲ್ ಫಾರ್ ಲೋಕಲ್) ಒತ್ತು ನೀಡುವಂತೆ ಪ್ರತಿಪಾದಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಕ್ತಿ ಆಂದೋಲನ’   ತಳಹದಿ ಹಾಕಿತ್ತು. ಇದೀಗ ಸಂತರು, ಮಹಂತರು, ಸಾಧುಗಳು ಮತ್ತು ಆಚಾರ್ಯರಿಂದ ಸ್ಪೂರ್ತಿ ಪಡೆದು ನಾವು ದೇಶದ ಎಲ್ಲ ಭಾಗದ ಎಲ್ಲ ಮೂಲೆಗಳಲ್ಲಿ ಪ್ರಜ್ಞೆ  ಜಾಗೃತವಾಗಿತ್ತು ಮತ್ತು ಅದು ಜಾಗೃತಿ ಹೆಚ್ಚಳಕ್ಕೆ ನೆರವಾಯಿತು. ಪ್ರಜ್ಞೆಯಿಂದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಶ್ರೇಷ್ಠ ಶಕ್ತಿಯನ್ನು ಒದಗಿಸಿತ್ತು ಎಂದು ಪ್ರಧಾನಿ ಹೇಳಿದರು.

ಆತ್ಮನಿರ್ಭರ ಭಾರತ ಉತ್ತೇಜನಕ್ಕೆ ಧಾರ್ಮಿಕ ನಾಯಕರು ಮುಂದಾಗುವಂತೆ ಪ್ರಧಾನಮಂತ್ರಿ ಮನವಿ ಮಾಡಿದರು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಕ್ತಿ ಆಂದೋಲನ ಶಕ್ತಿಯನ್ನು ನೀಡಿತ್ತು ಮತ್ತು ಬಲವರ್ಧನೆ ಮಾಡಿತ್ತು ಎಂದ ಅವರು, ಇಂದು 21ನೇ ಶತಮಾನದಲ್ಲಿ ನಮ್ಮ ಸಂತರು, ಮಹಂತರು ಮತ್ತು ಆಚಾರ್ಯರು, ತ್ಮನಿರ್ಭರ ಭಾರತ ನಿರ್ಮಾಣಕ್ಕೆ ಭದ್ರ ತಳಹದಿಯನ್ನು ಸಿದ್ಧಪಡಿಸಲಿದ್ದಾರೆ ಎಂದರು.  ಆಧ್ಯಾತ್ಮಿಕ ನಾಯಕರು ಯಾವುದೇ ಸಂದರ್ಭದಲ್ಲಿ ತಮ್ಮ ಅನುಯಾಯಿಗಳಿಗೆ ಅಥವಾ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ವೋಕಲ್ ಫಾರ್ ಲೋಕಲ್’’ ಸಂದೇಶವನ್ನು ನಿರಂತರವಾಗಿ ಬೋಧನೆ ಮಾಡಬೇಕು ಎಂದು ಮನವಿ ಮಾಡಿದರು. ಆಧ್ಯಾತ್ಮಿಕ ನಾಯಕರಿಂದ ವೋಕಲ್ ಫಾರ್ ಲೋಕಲ್ (ಸ್ಥಳೀಯ ಉತ್ಪನ್ನಗಳಿಗೆ ಧನಿಯಾಗಿ) ಅಭಿಯಾನ ಬಲವರ್ಧನೆಯಾಗಲಿದೆ ಎಂದರುಸ್ವಾತಂತ್ರ್ಯ ಸಂಗ್ರಾಮದ ವೇಳೆ ದೇಶದಲ್ಲಿ ವಿದ್ಯುತ್ ಸ್ಪರ್ಶ ನೀಡಿದಂತೆ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ರಾಷ್ಟ್ರ ಸ್ಪೂರ್ತಿ ದೊರಕಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

***



(Release ID: 1673223) Visitor Counter : 199