ಹಣಕಾಸು ಸಚಿವಾಲಯ
ರಿಯಲ್ ಎಸ್ಟೇಟ್ ಡೆವಲಪರ್ಸ್ ಮತ್ತು ಗೃಹ ಖರೀದಿದಾರರಿಗೆ ಆದಾಯ ತೆರಿಗೆ ಪರಿಹಾರ ಕ್ರಮ
Posted On:
13 NOV 2020 4:17PM by PIB Bengaluru
ಕೇಂದ್ರ ಹಣಕಾಸು ಸಚಿವರು 2020ರ ನವೆಂಬರ್ 12ರಂದು ಆತ್ಮನಿರ್ಭರ ಭಾರತ ಪ್ಯಾಕೇಜ್ 3.0ರ ಭಾಗವಾಗಿ ಪ್ರಕಟಿಸಿದ ರಿಯಲ್ ಎಸ್ಟೇಟ್ ಡೆವಲಪರ್ ಗಳು ಮತ್ತು ಗೃಹ ಖರೀದಿದಾರರಿಗೆ ಕೆಲವು ಆದಾಯ ತೆರಿಗೆ ಪರಿಹಾರ ಕ್ರಮಗಳನ್ನು ನೀಡಲಾಗಿದೆ.
2018ರವರೆಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 43ಸಿಎ ಅಡಿಯಲ್ಲಿ ಘೋಷಿತ ಮೌಲ್ಯಕ್ಕಿಂತ ಸರ್ಕಲ್ ರೇಟ್ (ಮೂಲ ಬೆಲೆ) ಹೆಚ್ಚಾಗಿದ್ದ ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ವರ್ಗಾವಣೆ ವೇಳೆ ಸ್ಟಾಂಪ್ ಶುಲ್ಕ ಮೌಲ್ಯ (ಸರ್ಕಲ್ ರೇಟ್) ದರವನ್ನು ಮಾರಾಟ ವರ್ಗಾವಣೆಗೆ ಪರಿಗಣಿಸಲಾಗುತ್ತಿತ್ತು. ತದನಂತರ ಕಾಯ್ದೆಯ ಸೆಕ್ಷನ್ 56(2)(x) ಅಡಿಯಲ್ಲಿ ಸ್ಟಾಂಪ್ ಶುಲ್ಕದ ಮೌಲ್ಯವನ್ನು ಖರೀದಿದಾರರ ವಿಚಾರದಲ್ಲಿ ಖರೀದಿ ಮೊತ್ತ ಎಂದು ಪರಿಗಣಿಸಲಾಗುತ್ತಿತ್ತು.
ರಿಯಲ್ ಎಸ್ಟೇಟ್ ಡೆವಲಪರ್ ಮತ್ತು ಖರೀದಿದಾರರಿಗೆ ಪರಿಹಾರ ನೀಡುವ ಸಲುವಾಗಿ ಹಣಕಾಸು ಕಾಯ್ದೆ 2018ರ ಅಡಿ ಶೇ.5ರಷ್ಟು ಸೇಫ್ ಹಾರ್ಬರ್ ನೀಡಲಾಗುತ್ತಿದೆ. ಅದರಂತೆ ಸರ್ಕಲ್ ರೇಟ್ ಶೇ.5ಕ್ಕಿಂತ ಹೆಚ್ಚಿದ್ದಾಗ ಮತ್ತು ಮೂಲ ಮಾರಾಟ/ಖರೀದಿ ದರದ ನಡುವೆ ವ್ಯತ್ಯಾಸವಿದ್ದಾಗ ಮಾತ್ರ ಈ ಅಂಶ ಅನ್ವಯವಾಗುತ್ತಿತ್ತು. ಈ ವಿಚಾರದಲ್ಲಿ ಮತ್ತಷ್ಟು ಪರಿಹಾರವನ್ನು ನೀಡುವ ಸಲುವಾಗಿ ಹಣಕಾಸು ಕಾಯ್ದೆ 2020 ಅಡಿಯಲ್ಲಿ ಸುರಕ್ಷಿತ ಪರಿಹಾರದ ಮೊತ್ತವನ್ನು ಶೇ.5 ರಿಂದ ಶೇ.10ಕ್ಕೆ ಹೆಚ್ಚಿಸಲಾಗಿದೆ. ಆದ್ದರಿಂದ ಸದ್ಯ ಸರ್ಕಲ್ ರೇಟ್ ಅನ್ನು ರಿಯಲ್ ಎಸ್ಟೇಟ್ ಡೆವಲಪರ್ಸ್ ಮತ್ತು ಖರೀದಿದಾರರ ಮಾರಾಟ ಮತ್ತು ಖರೀದಿ ಎಂದು ಪರಿಗಣಿಸಲಾಗುವುದು. ಒಪ್ಪಂದ ಮೌಲ್ಯದ ವ್ಯತ್ಯಾಸ ಮತ್ತು ಸರ್ಕಲ್ ರೇಟ್ ಶೇ.10ಕ್ಕಿಂತ ಹೆಚ್ಚಾಗಿದ್ದ ಸಂದರ್ಭದಲ್ಲಿ ಮಾತ್ರ ಇದು ಅನ್ವಯವಾಗಲಿದೆ.
ರಿಯಲ್ ಎಸ್ಟೇಟ್ ವಲಯದಲ್ಲಿ ಬೇಡಿಕೆ ಉತ್ತೇಜಿಸಲು ಮತ್ತು ರಿಯಲ್ ಎಸ್ಟೇಟ್ ಡೆವಲಪರ್ ಗಳು ಮಾರಾಟವಾಗದೇ ಉಳಿದಿರುವ ತಮ್ಮ ಸ್ವತ್ತುಗಳ ಕಡಿಮೆ ದರದಲ್ಲಿ ಮಾರಾಟಕ್ಕೆ ಅನುಕೂಲವಾಗುವಂತೆ ಮತ್ತು ಗೃಹ ಖರೀದಿದಾರರಿಗೆ ಅನುಕೂಲ ಮಾಡಿಕೊಡಲು 2020ರ ನವೆಂಬರ್ 12ರಿಂದ 2021ರ ಜೂನ್ 30ರ ವರೆಗಿನ ಅವಧಿಗೆ ಸೆಕ್ಷನ್ 43ಸಿಎ ಅನ್ವಯ ಸುರಕ್ಷಿತ ಪರಿಹಾರದ ವಿನಾಯಿತಿಯನ್ನು ಶೇ.10ರಿಂದ ಶೇ.20ಕ್ಕೆ ಹೆಚ್ಚಿಸಲಾಗುವುದು. ಇದು 2 ಕೋಟಿ ರೂ.ವರೆಗಿನ ಮೌಲ್ಯದ ವಸತಿ ಘಟಕಗಳ ಮಾರಾಟಕ್ಕೆ ಮಾತ್ರ ಅನ್ವಯಿಸುತ್ತದೆ. ಅದೇ ರೀತಿ ಸುರಕ್ಷಿತ ಪರಿಹಾರ ಶೇ.10 ರಿಂದ ಶೇ.20ಕ್ಕೆ ಹೆಚ್ಚಳ, ಸೆಕ್ಷನ್ 56(2) (x) ಅಡಿಯಲ್ಲಿ ಬರುವ ವಸತಿ ಘಟಕಗಳಿಗೆ ಮಾತ್ರ ಅನ್ವಯವಾಗುತ್ತದೆ. ಆದ್ದರಿಂದ ಈ ವಹಿವಾಟುಗಳಿಗೆ ಸರ್ಕಲ್ ದರವನ್ನು ಮಾರಾಟ/ಖರೀದಿ ಎಂದು ಪರಿಗಣಿಸಲಾಗುವುದು. ಒಪ್ಪಂದ ಮೌಲ್ಯ ಮತ್ತು ಸರ್ಕಲ್ ರೇಟ್ ಶೇ.20ಕ್ಕಿಂತ ಹೆಚ್ಚಿದ್ದ ಸಂದರ್ಭಗಳಿಗೆ ಇದು ಅನ್ವಯವಾಗುತ್ತದೆ.
ಈ ಕುರಿತಂತೆ ಶಾಸನಾತ್ಮಕ ತಿದ್ದುಪಡಿಗಳನ್ನು ಮುಂದಿನ ದಿನಗಳಲ್ಲಿ ತರಲು ಉದ್ದೇಶಿಸಲಾಗಿದೆ.
***
(Release ID: 1672779)
Visitor Counter : 270