ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ದಿವ್ಯಾಂಗರ ವಾಹನಗಳಿಗೆ ಸಂಬಂಧಿಸಿದಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ವಿವಿಧ ವಿನಾಯಿತಿ/ ಸೌಲಭ್ಯ/ ಪರಿಹಾರ ವಿಸ್ತರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಲಹೆ

Posted On: 13 NOV 2020 5:22PM by PIB Bengaluru

ದಿವ್ಯಾಂಗ ಜನರಿಗೆ ಹೆಚ್ಚಿನ ಸೌಕರ್ಯ ಒದಗಿಸುವ ಸಲುವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿರುವ  ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ದಿವ್ಯಾಂಗ್ ಜನರ ಒಡೆತನದ ವಾಹನಗಳಿಗೆ ಅಮಾನ್ಯ ಜೋಡಣೆ ವಾಹನಗಳಿಗೆ ಸಂಬಂಧಿಸಿದಂತೆ ರಾಜ್ಯಗಳುಕೇಂದ್ರಾಡಳಿತ ಪ್ರದೇಶಗಳು ಒದಗಿಸುವ ವಿವಿಧ ವಿನಾಯಿತಿಗಳು/ ಸೌಲಭ್ಯ/ ಪರಿಹಾರವನ್ನು ವಿಸ್ತರಿಸಲು ತಿಳಿಸಿದೆ.

ಸಚಿವಾಲಯವು ಹಿಂದೆ ಸಿಎಂವಿಆರ್ 1989 ನಮೂನೆ 20 ತಿದ್ದುಪಡಿಗಾಗಿ 2020 ಅಕ್ಟೋಬರ್ 22ರಂದು ಜಿ.ಎಸ್.ಆರ್. 661 ()ಯನ್ನು ಹೊರಡಿಸಿತ್ತು. ಮೂಲಕ ಜಿಎಸ್ಟಿ ಪ್ರಯೋಜನ ಮತ್ತು ಇತರ ರಿಯಾಯಿತಿಗಳನ್ನು ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ದಿವ್ಯಾಂಗ ಜನರಿಗೆ (ವಿಶೇಷ ಚೇತನರಿಗೆ) ಮೋಟಾರು ವಾಹನ ಖರೀದಿಸಲು/ ವಾಹನಗಳ ಮಾಲೀಕತ್ವ/ ಕಾರ್ಯಾಚರಣೆಯನ್ನು ಮಾಡಲು, ಮಾಲೀಕತ್ವದ ಪ್ರಕಾರವನ್ನು ಸೇರಿಸುವ ಮೂಲಕ ಸುಗಮಗೊಳಿಸಲಾಗಿತ್ತು. ತಿದ್ದುಪಡಿಗಳೊಂದಿಗೆ, ಇಂಥ ಮಾಲಿಕತ್ವದ ವಿವರಗಳು ಸೂಕ್ತವಾಗಿ ಬಿಂಬಿತವಾಗಿ ದಿವ್ಯಾಂಗ ಜನರು ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ.

***



(Release ID: 1672708) Visitor Counter : 149