ಭಾರತದ ಸ್ಪರ್ಧಾ ಆಯೋಗ

ಜಿಯೋ ಪ್ಲಾಟ್ ಫಾರ್ಮ್ಸ್ ಲಿಮಿಟೆಡ್ ನ ಶೇ.7.73 ಈಕ್ವಿಟಿ ಷೇರು ಬಂಡವಾಳವನ್ನು ಗೂಗಲ್ ಇಂಟರ್ ನ್ಯಾಷನಲ್ ಎಲ್.ಎಲ್. ಸಿ ಸ್ವಾಧೀನಪಡಿಸಿಕೊಳ್ಳಲು ಸಿಸಿಐ ಅನುಮೋದನೆ

Posted On: 12 NOV 2020 10:04AM by PIB Bengaluru

ಜಿಯೋ ಪ್ಲಾಟ್ ಫಾರ್ಮ್ಸ್ ಲಿಮಿಟೆಡ್ (ಜೆ.ಪಿ.ಎಲ್) ಶೇ.7.73 ಈಕ್ವಿಟಿ ಷೇರು ಬಂಡವಾಳವನ್ನು ಗೂಗಲ್ ಇಂಟರ್ ನ್ಯಾಷನಲ್ ಎಲ್.ಎಲ್.ಸಿ (ಜಿ..ಎಲ್) ಸ್ವಾಧೀನಪಡಿಸಿಕೊಳ್ಳಲು ಭಾರತದ ಸ್ಪರ್ಧಾ ಆಯೋಗ (ಸಿಸಿಐ) ಸ್ಪರ್ಧಾ ಕಾಯಿದೆ 2020 ಸೆಕ್ಷನ್ 31 (1)ರಡಿ ಅನುಮೋದನೆ ನೀಡಿದೆ.

ಜಿಐಎಲ್ ಗೂಗಲ್ ಎಲ್ಎಲ್.ಸಿ. (ಒಟ್ಟಾರೆಯಾಗಿ ಎಲ್ಲಾ ಗೂಗಲ್ ಎಲ್ಎಲ್.ಸಿ ಅಂಗಸಂಸ್ಥೆಗಳಾದ ಗೂಗಲ್) ಸಂಪೂರ್ಣ ಒಡೆತನದ ಅಂಗ ಸಂಸ್ಥೆಯಾಗಿದೆ. ಗೂಗಲ್ ಎಲ್.ಎಲ್.ಸಿ ಡೆಲವೇರ್ ಸೀಮಿತ ಹೊಣೆಗಾರಿಕೆ ಕಂಪನಿಯಾಗಿದ್ದು, ಆಲ್ಫಾಬೆಟ್ .ಎನ್.ಸಿ. ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಜಿಐಎಲ್ ಒಂದು ಹಿಡುವಳಿ ಕಂಪನಿಯಾಗಿದ್ದು, ಗೂಗಲ್ ಯಾವುದೇ ಉತ್ಪನ್ನಗಳು/ಸೇವೆಗಳನ್ನು ಹೊಂದಿಲ್ಲ/ನಿರ್ವಹಿಸುವುದಿಲ್ಲ.

ಜೆಪಿಎಲ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಂಗಸಂಸ್ಥೆಯಾಗಿದ್ದು, ಅದು ವಿತರಿಸಲಾದ ಬಹುಪಾಲು ಈಕ್ವಿಟಿ ಷೇರು ಬಂಡವಾಳವನ್ನು ಹೊಂದಿದೆ. ಜೆಪಿಎಲ್ ಅದರ ಅಂಗಸಂಸ್ಥೆಗಳೊಂದಿಗೆ ಪ್ರಾಥಮಿಕವಾಗಿ ನಿಸ್ತಂತು, ಮನೆಗಳ ಬ್ರಾಡ್ಬ್ಯಾಂಡ್ ಮತ್ತು ಉದ್ದಿಮೆಗಳ ಬ್ರಾಡ್ಬ್ಯಾಂಡ್ ಸೇವೆಗಳು, ದೂರಸಂಪರ್ಕ ಸೇವೆಗಳು, ಮೊಬೈಲ್ ಅಪ್ಲಿಕೇಶನ್ಗಳು, ವಿವಿಧ ಡಿಜಿಟಲ್ ಪ್ಲಾಟ್ಫಾರ್ಮ್ಗಳು, -ವಾಣಿಜ್ಯ ಘಟಕಗಳಿಗೆ ಬ್ಯಾಕ್-ಎಂಡ್ ತಂತ್ರಜ್ಞಾನ ಸೇವೆಗಳು ಮತ್ತು ಇತರ ವಿವಿಧ ತಂತ್ರಾಂಶ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಡಿಜಿಟಲ್ ಉತ್ಪನ್ನಗಳು / ಸೇವೆಗಳನ್ನು ನೀಡುತ್ತದೆ /ಸೇವೆಗಳನ್ನು ಒದಗಿಸುತ್ತದೆ.

ಆಯೋಗದ ಸವಿವರವಾದ ಆದೇಶ ಹೊರಬೀಳಲಿದೆ.

***



(Release ID: 1672265) Visitor Counter : 204