ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

ದಿಲ್ಲಿಹಾತ್, ಪಿತಾಮ್ಪುರದಲ್ಲಿ “ಹುನಾರ್ ಹಾತ್” ಉದ್ಘಾಟಿಸಲಿರುವ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ


“ಸ್ಥಳೀಯತೆಗೆ ಧ್ವನಿಯಾಗಿ” ಧ್ಯೇಯದೊಂದಿಗೆ ನವೆಂಬರ್ 11-22ರವರೆಗೆ ಹುನಾರ್ ಹಾತ್

100ಕ್ಕೂ ಹೆಚ್ಚು ಮಳಿಗೆಗಳು: ಜೇಡಿಮಣ್ಣು, ಲೋಹ , ಮರದ ಮತ್ತು ಸೆಣಬಿನ ಕರಕುಶಲ ಉತ್ಪನ್ನಗಳು ಹುನಾರ್ ಹಾತ್ ನ ಪ್ರಮುಖ ಆಕರ್ಷಣೆ ಹಾಗೂ ವಿಶ್ವಾಸಾರ್ಹ ಬ್ರಾಂಡ್

ಕೊರೊನಾ ಸಾಂಕ್ರಾಮಿಕ : “ಹುನಾರ್ ಹಾತ್”ನಲ್ಲಿ ಸಾಮಾಜಿಕ ಅಂತರ ಮತ್ತು ಕಟ್ಟುನಿಟ್ಟಿನ ಮಾರ್ಗಸೂಚಿಗಳು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ

Posted On: 10 NOV 2020 1:06PM by PIB Bengaluru

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 7 ತಿಂಗಳುಗಳ ಬಿಡುವಿನ ಬಳಿಕ ನವೆಂಬರ್ 11 ರಿಂದ 22ರ ವರೆಗೆ ಹುನಾರ್ ಹಾತ್ ಪುನಾರಂಭವಾಗಲಿದೆ. ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ ಸ್ಥಳೀಯತೆಗೆ ಧ್ವನಿಯಾಗಿ ಧ್ಯೇಯದೊಂದಿಗೆ ಹುನಾರ್ ಹಾತ್ ಅನ್ನು ಪಿತಮ್ ಪುರದ ದೆಹಲಿ ಹಾತ್ ನಲ್ಲಿ ಉದ್ಘಾಟಿಸಲಿದ್ದಾರೆ, ಇದರಲ್ಲಿ ಸೊಗಸಾದ ದೇಶೀಯವಾಗಿ ಜೇಡಿ ಮಣ್ಣಿನಿಂದ, ಲೋಹದಿಂದ ಮತ್ತು ಮರ ಮತ್ತು ಸೆಣಬಿನಿಂದ ಮಾಡಿದ ಕರಕುಶಲ ವಸ್ತುಗಳು ಪ್ರಮುಖ ಆಕರ್ಷಣೆಯಾಗಲಿವೆ.

ಅಪರೂಪದ ಸೊಗಸಾದ ಮಣ್ಣಿನ, ವಿಭಿನ್ನ ಲೋಹಗಳ ಮತ್ತು ಮರದ ಉತ್ಪನ್ನಗಳು, ಬಿದಿರು ಮತ್ತು ಲಾಳಿಕಡ್ಡಿಯಿಂದ ಮಾಡಿದ ಉತ್ಪನ್ನಗಳು, ಮನಸೆಳೆಯುವಂಥ ಮಡಿಕೆ ಕುಡಿಕೆಗಳ ಕಲಾಕೃತಿಗಳು ಪಿತಾಮ್ ಪುರದ ದೆಹಲಿ ಹಾತ್ ನ “ಹುನಾರ್ ಹಾತ್”ನಲ್ಲಿ, 2020ರ ನವೆಂಬರ್ 11ರಿಂದ 22ರವರೆಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ಶ್ರೀ ಮುಖ್ತಾರ್ ಅಬ್ಬಾಸ್ ನಖ್ವಿ ಇಂದು ತಿಳಿಸಿದ್ದಾರೆ.

http://static.pib.gov.in/WriteReadData/userfiles/image/image001AAC3.jpg

ದೇಶದ ಪ್ರತಿಯೊಂದು ಮೂಲೆಯಲ್ಲೂ ಸ್ಥಳೀಯ ಉತ್ಪನ್ನಗಳ ಸಾಂಪ್ರದಾಯಿಕ ಮತ್ತು ಪಾರಂಪರಿಕ ಪರಂಪರೆ ಇದೆ ಎಂದು ಶ್ರೀ ನಖ್ವಿ ಹೇಳಿದರು. ಅಳಿವಿನ ಅಂಚಿನಲ್ಲಿದ್ದ ಈ ಪರಂಪರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು “ಸ್ವದೇಶಿ” ಗಾಗಿ ಒತ್ತು ನೀಡಿದ ನಂತರ ವರದಾನವಾಗಿ ಪರಿಣಮಿಸಿತು. "ಸ್ಥಳೀಯತೆಗೆ ಧ್ವನಿ"ಯಾಗಲು ಶ್ರೀ ಮೋದಿ ಪ್ರತಿಪಾದಿಸಿದ ನಂತರ ಭಾರತದ ಸ್ಥಳೀಯ ಉದ್ಯಮಕ್ಕೆ ಭಾರಿ ಉತ್ತೇಜನ ಸಿಕ್ಕಿದೆ. ಈ ಸ್ಥಳೀಯ ಉತ್ಪನ್ನಗಳನ್ನು ತಯಾರಿಕೆಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ "ಸ್ವದೇಶಿ ಉತ್ಪನ್ನಗಳ" ಆಕರ್ಷಕ ಪ್ಯಾಕೇಜಿಂಗ್ ಗಾಗಿ ವಿವಿಧ ಸಂಸ್ಥೆಗಳ ಮೂಲಕ ಸಹಾಯ ವಿಸ್ತರಿಸಲಾಗುತ್ತಿದೆ. ಇದು “ಆತ್ಮ ನಿರ್ಭರ್ ಭಾರತ್” ನ ಧ್ಯೇಯವನ್ನು ಬಲಪಡಿಸುತ್ತಿದೆ ಎಂದರು.

ದೇಶದ ಮೂಲೆ ಮೂಲೆಯಲ್ಲೂ ಮರದ, ಹಿತ್ತಾಳೆ, ಬಿದಿರು, ಗಾಜು, ಬಟ್ಟೆ, ಕಾಗದ, ಜೇಡಿಮಣ್ಣು ಇತ್ಯಾದಿಗಳಿಂದ ತಯಾರಿಸಿದ ಸ್ಥಳೀಯ ಉತ್ಪನ್ನಗಳ ವೈವಿಧ್ಯತೆಯಿಂದ ಕೂಡಿದೆ ಎಂದು ಶ್ರೀ ನಖ್ವಿ ಹೇಳಿದರು. ಸ್ಥಳೀಯವಾಗಿ ಸೊಗಸಾದ ಕರಕುಶಲ ಉತ್ಪನ್ನಗಳನ್ನು ತಯಾರಿಸಲು ಕುಶಲಕರ್ಮಿಗಳಿಗೆ ಅವಕಾಶ ಕಲ್ಪಿಸುತ್ತಿರುವ “ಹುನಾರ್ ಹಾತ್” ಮಾರುಕಟ್ಟೆಯನ್ನೂ ಒದಗಿಸುತ್ತಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಬಳಕೆಯೊಂದಿಗೆ ಜಾಗತಿಕ ಮಾನದಂಡಗಳನ್ನು ಪೂರೈಸುವ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವತ್ತ ಗಮನ ಹರಿಸಲಾಗುತ್ತಿದೆ.

“ಹುನಾರ್ ಹಾತ್”ನಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ನಖ್ವಿ ತಿಳಿಸಿದರು. ಅಸ್ಸಾನಂ ಒಣ ಹೂವು, ಆಂಧ್ರಪ್ರದೇಶದ ಪೂಂಚಂಪಲ್ಲಿಯ ಇಕ್ಕತ್; ಬಿಹಾರದ ಮುಂಗಾ ರೇಷ್ಮೆ, ಮಧುಬನಿ ಪ್ರಿಂಟಿಂಗ್ ಮತ್ತು ಕೃತಕ ಆಭರಣ; ಕರ್ನಾಟಕದ ಮರದ ಅಲಂಕಾರಿಕ ಆಟಿಕೆಗಳು; ಮಣಿಪುರದ ಆಟಿಕೆಗಳು; ಉತ್ತರ ಪ್ರದೇಶದ ಮರದ ಮತ್ತು ಗಾಜಿನ ಆಟಿಕೆಗಳು; ದೆಹಲಿಯ ಕ್ಯಾಲಿಗ್ರಫಿ ಚಿತ್ರಕಲೆ; ಗೋವಾದ ಕರಕುಶಲ ಬ್ಲಾಕ್ ಮುದ್ರಣ; ಗುಜರಾತ್ ಮೂಲದ ಅಜ್ರಾಖ್; ಜಮ್ಮು-ಕಾಶ್ಮೀರದ ಪಾಶ್ಮಿನಾ ಶಾಲುಗಳು; ಜಾರ್ಖಂಡ್‌ ನಿಂದ ತುಸ್ಸಾರ್ ರೇಷ್ಮೆ ಮತ್ತು ಲಾಳಿ ಕಡ್ಡಿ ಬಿದಿರಿನ ಉತ್ಪನ್ನಗಳು; ಗಿಡಮೂಲಿಕೆ ಉತ್ಪನ್ನಗಳು, ಬಾಗ್ ಮುದ್ರಣ, ಮಧ್ಯಪ್ರದೇಶದ ಬಾಟಿಕ್; ಮಹಾರಾಷ್ಟ್ರದ ಲಾಳಿಕಡ್ಡಿ ಬಿದಿರಿನ ಉತ್ಪನ್ನಗಳು, ನಾಗಾಲ್ಯಾಂಡ್‌ ನ ಕೈಮಗ್ಗ ಜವಳಿ, ಲೋಹ, ಮಣ್ಣಿನಿಂದ ಮಾಡಿದ ವಿವಿಧ ರಾಜ್ಯಗಳ ಆಟಿಕೆಗಳು, ಇತ್ಯಾದಿಗಳು ಪಿತಂಪುರದ ಹುನಾರ್ ಹಾತ್ ನಲ್ಲ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಲಭ್ಯವಿರುತ್ತವೆ. ಜೊತೆಗೆ ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ದೆಹಲಿ, ಹರಿಯಾಣ ಇತ್ಯಾದಿಗಳ ಸಾಂಪ್ರದಾಯಿಕ ಖಾದ್ಯಗಳ ಸ್ವಾದದ ಅನುಭವವೂ ದೊರಕುತ್ತದೆ.

ಕಳೆದ 5 ವರ್ಷಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಭಾರತೀಯ ಕುಶಲಕರ್ಮಿಗಳು, ಕುಲ ಕಸುಬುದಾರರಿಗೆ, ಪಾಕ ತಜ್ಞರು ಮತ್ತು ಅವರೊಂದಿಗೆ ಸಂಬಂಧ ಹೊಂದಿರುವ ಇತರರಿಗೆ ಉದ್ಯೋಗ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಿರುವ “ಹುನಾರ್ ಹಾತ್” ಜನರ ನಡುವೆ ಜನಪ್ರಿಯವಾಗಿದೆ ಎಂದು ಶ್ರೀ ನಖ್ವಿ ಹೇಳಿದರು. ದೇಶದ ದೂರದ ಪ್ರದೇಶಗಳ ಕುಶಲಕರ್ಮಿಗಳು ಮತ್ತು ಕುಲ ಕಸುಬುದಾರರಿಗೆ ಮಾರುಕಟ್ಟೆ ಮತ್ತು ಅವಕಾಶವನ್ನು ಒದಗಿಸುವ “ಹುನಾರ್ ಹಾತ್” ಅಪರೂಪದ ಸೊಗಸಾದ ಸ್ಥಳೀಯ ಕರಕುಶಲ ಉತ್ಪನ್ನಗಳ ವಿಶ್ವಾಸಾರ್ಹ ಬ್ರಾಂಡ್ ಆಗಿ ಮಾರ್ಪಟ್ಟಿದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ 24ಕ್ಕೂ ಹೆಚ್ಚು ಹುನಾರ್ ಹಾತ್ ಗಳನ್ನು ದೇಶದಾದ್ಯಂತ ಈವರೆಗೆ ಆಯೋಜಿಸಿದ್ದು, ಇಲ್ಲಿ ಲಕ್ಷಾಂತರ ಕುಶಲಕರ್ಮಿಗಳು ಮತ್ತು ಕುಲ ಕಸುಬುದಾರರಿಗೆ ಉದ್ಯೋಗ ಮತ್ತು ಉದ್ಯೋಗಾವಕಾಶಗಳನ್ನು ಹುನಾರ್ ಹಾತ್ ಮೂಲಕ ಒದಗಿಸಿದೆ. ಮುಂಬರುವ ದಿನಗಳಲ್ಲಿ ಹುನಾರ್ ಹಾತ್ ಅನ್ನು ಜೈಪುರ, ಛತ್ತೀಸಗಢ, ಇಂದೋರ್, ಮುಂಬೈ, ಹೈದ್ರಾಬಾದ್, ಲಖನೌ, ದೆಹಲಿಯ ಇಂಡಿಯಾ ಗೇಟ್, ರಾಂಚಿ, ಕೋಟ ಮತ್ತು ಸೂರತ್/ಅಹಮದಾಬಾದ್ ನಲ್ಲಿ ಆಯೋಜಿಸಲಾಗುವುದು.

ಈ ಹುನಾರ್ ಹಾತ್ ಗಳು ವರ್ಚುವಲ್ ಆಗಿಯೂ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಶ್ರೀ ನಖ್ವಿ ಹೇಳಿದರು.

ಈ ಬಾರಿ, ಜನರು ಹುನಾರ್ ಹಾತ್ ನಲ್ಲಿನ ಕುಶಲಕರ್ಮಿಗಳ ಉತ್ಪನ್ನಗಳನ್ನು ಡಿಜಿಟಲ್ ಮೂಲಕ ಮತ್ತು ಆನ್ ಲೈನ್ http://hunarhaat.org ನಲ್ಲಿ ಸಹ ಲಭ್ಯವಾಗುವಂತೆ ಮಾಡಲಾಗಿದೆ. ಕೇಂದ್ರ ಅಲ್ಪ ಸಂಖ್ಯಾತರ ವ್ಯವಹಾರಗಳ ಸಚಿವಾಲಯ ಈ ಕರಕುಶಲಕರ್ಮಿಗಳು ಮತ್ತು ಅವರ ದೇಶೀಯ ಉತ್ಪನ್ನಗಳನ್ನು ಜಿಇಎಂ (ಸರ್ಕಾರಿ ಇ ಮಾರುಕಟ್ಟೆ ತಾಣ)ದಲ್ಲಿ ನೋಂದಾಯಿಸಿವೆ.

ಕೊರೊನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ವ್ಯಕ್ತಿಗತ ಅಂತರ ಮತ್ತು ಇತರ ಮಾರ್ಗಸೂಚಿಗಳನ್ನು ಹುನಾರ್ ಹಾತ್ ನಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಶ್ರೀ ನಖ್ವಿ ಹೇಳಿದರು. ಮತ್ತೆ ಹುನಾರ್ ಹಾತ್ ಆಯೋಜಿಸುತ್ತಿರುವ ಬಗ್ಗೆ ದೇಶದಾದ್ಯಂತದ ಲಕ್ಷಾಂತರ ಕರಕುಶಲ ಕರ್ಮಿಗಳು ಮತ್ತು ಕುಲಕಸುಬುದಾರರು ಹರ್ಷಭರಿತರಾಗಿದ್ದಾರೆ ಮತ್ತು ಸಂತೋಷಗೊಂಡಿದ್ದಾರೆ ಎಂದು ಸಚಿವರು ವಿವರಿಸಿದರು.

http://static.pib.gov.in/WriteReadData/userfiles/image/image002SE5D.jpghttp://static.pib.gov.in/WriteReadData/userfiles/image/image003KJJF.jpg

******



(Release ID: 1671728) Visitor Counter : 322