ಪ್ರಧಾನ ಮಂತ್ರಿಯವರ ಕಛೇರಿ

2020 ರ ನವೆಂಬರ್ 12 ರಂದು ಜೆ ಎನ್ ಯು ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಲಿರುವ ಪ್ರಧಾನಿ ಮೋದಿ

Posted On: 10 NOV 2020 12:43PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದ ಅವರ ಪ್ರತಿಮೆಯನ್ನು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ನವೆಂಬರ್ 12 ರಂದು ಸಂಜೆ 6.30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಸಚಿವರೂ ಉಪಸ್ಥಿತರಿರುತ್ತಾರೆ.

ಸ್ವಾಮಿ ವಿವೇಕಾನಂದರ ತತ್ತ್ವ ಮತ್ತು ಧ್ಯೇಯಗಳು ಇಂದಿಗೂ ದೇಶದ ಯುವಕರಿಗೆ ಮಾರ್ಗದರ್ಶಿಯಾಗಿವೆ. ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಅವರಂತಹ ಶ್ರೇಷ್ಠ ವ್ಯಕ್ತಿತ್ವವನ್ನು ಪಡೆದಿದ್ದಕ್ಕಾಗಿ ಭಾರತ ಹೆಮ್ಮೆಪಡುತ್ತದೆ. ಸ್ವಾಮಿ ವಿವೇಕಾನಂದರ ಆದರ್ಶಗಳು ಅವರ ಕಾಲದಂತೆ ಇಂದಿಗೂ ಪ್ರಸ್ತುತವಾಗಿವೆ ಎಂದು ಪ್ರಧಾನಿ ಯಾವಾಗಲೂ ಹೇಳಿತ್ತಿರುತ್ತಾರೆ. ಜನಸಾಮಾನ್ಯರಿಗೆ ಸೇವೆ ಸಲ್ಲಿಸುವುದು ಮತ್ತು ದೇಶದ ಯುವಕರನ್ನು ಸಶಕ್ತರನ್ನಾಗಿಸುವುದು ದೇಶವನ್ನು ಭೌತಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬಲಪಡಿಸುತ್ತದೆ ಮತ್ತು ಜಾಗತಿಕವಾಗಿ ದೇಶದ ಘನತೆಯನ್ನು ಹೆಚ್ಚಿಸುತ್ತದೆ ಎಂದು ಪ್ರಧಾನ ಮಂತ್ರಿಯವರು ಆಗಾಗ ಒತ್ತಿಹೇಳಿತ್ತಾರೆ. ಭಾರತದ ಸಮೃದ್ಧಿ ಮತ್ತು ಶಕ್ತಿಯು ಅದರ ಜನರಲ್ಲಿದೆ. ಆದ್ದರಿಂದ, ಎಲ್ಲರನ್ನೂ ಸಬಲೀಕರಣಗೊಳಿಸುವುದರಿಂದ ಸ್ವಾವಲಂಬಿ ಭಾರತದ ಗುರಿಯನ್ನು ಸಾಧಿಸುವತ್ತ ದೇಶವನ್ನು ಕೊಂಡೊಯ್ಯುತ್ತದೆ.

***



(Release ID: 1671676) Visitor Counter : 207