ನಾಗರೀಕ ವಿಮಾನಯಾನ ಸಚಿವಾಲಯ

ದೇಶೀಯ ವಿಮಾನಗಳ ಶುಲ್ಕದ ಬ್ಯಾಂಡ್ 2021ರ ಫೆಬ್ರವರಿ 24ರವರೆಗೆ ವಿಸ್ತರಣೆ


2 ಲಕ್ಷಕ್ಕೂ ಅಧಿಕ ಮುಟ್ಟಿದ ನಿತ್ಯದ ಪ್ರಯಾಣಿಕರ ಸಂಚಾರ

Posted On: 05 NOV 2020 6:12PM by PIB Bengaluru

ವಿಮಾನಯಾನ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಾದ ಶುಲ್ಕದ ಬ್ಯಾಂಡ್‌ ಗಳನ್ನು ನಾಗರಿಕ ವಿಮಾನಯಾನ ಸಚಿವಾಲಯವು 2021 ಫೆಬ್ರವರಿ 24ರವರೆಗೆ ವಿಸ್ತರಿಸಿದೆ. ಈ ಶುಲ್ಕ ಬ್ಯಾಂಡ್‌ ಗಳು 2020ರ ಮೇ 21 ರಿಂದ ಜಾರಿಗೆ ಬಂದಿವೆ.

ನಿತ್ಯ ಪ್ರಯಾಣಿಕರ ಸಂಚಾರ 2020ರ ನವೆಂಬರ್ 1ರಂದು 2.05 ಲಕ್ಷ ತಲುಪಿದೆ. 2020ರ ಮೇನಲ್ಲಿ ದೇಶೀಯ ವಿಮಾನಯಾನ ಆರಂಭವಾದ ಬಳಿಕ, ವಿಮಾನಯಾನ ಸಂಸ್ಥೆಗಳು ತಮ್ಮ ಸಾಮಾನ್ಯ ಸಾಮರ್ಥ್ಯದ ಶೇ.33ರಷ್ಟರವರೆಗೆ ಹಾರಾಟ ನಡೆಸಲು (2020ರ ಬೇಸಿಗೆಯ ವೇಳಾಪಟ್ಟಿಯ ರೀತ್ಯ) ಅನುವು ಮಾಡಿಕೊಟ್ಟವು. ಆ ಸಮಯದಲ್ಲಿ, ದೈನಿಕ ಸರಾಸರಿ ಸಂಚಾರ ಸುಮಾರು 30,000ವಾಗಿತ್ತು. ಈ ಮಿತಿಯನ್ನು 2020ರ ಜೂನ್ 26ರಿಂದ ಅನ್ವಯವಾಗುವಂತೆ ಶೇ.45ಕ್ಕೆ ಹೆಚ್ಚಿಸಲಾಯಿತು. ಈ ಮಿತಿಯನ್ನು 2020ರ ಸೆಪ್ಟೆಂಬರ್ 2ರಿಂದ ಅನ್ವಯವಾಗುವಂತೆ ಶೇ.60ಕ್ಕೆ ಪರಿಷ್ಕರಿಸಲಾಯಿತು. ಪ್ರಸ್ತುತ ವಿಮಾನಯಾನ ಸಂಸ್ಥೆಗಳು ತಮ್ಮ ಸಾಮರ್ಥ್ಯದ ಶೇ.60ರಷ್ಟು ಕಾರ್ಯಾಚರಣೆ ಮಾಡಬಹುದಾಗಿದೆ.

ನಾಗರಿಕ ವಿಮಾನಯಾನ ಸಚಿವಾಲಯ ಪ್ರತಿದಿನ ಸಂಚಾರವನ್ನು ಗಮನಿಸುತ್ತಿದೆ, ಮತ್ತು ಈ ಸಂಚಾರದ ಒತ್ತಡ ಪ್ರಯಾಣಿಕರ ಹೆಚ್ಚಳದ ಹಿನ್ನೆಲೆಯಲ್ಲಿ ಹಬ್ಬದ ಋತುವಿನಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದ್ದು, ಗರಿಷ್ಠ ಮಿತಿಯನ್ನು ಮುಂದಿನ ದಿನಗಳಲ್ಲಿ ಸಾಮಾನ್ಯ ಸಾಮರ್ಥ್ಯದ ಶೇ.70-75ಕ್ಕೆ ಪರಿಷ್ಕರಿಸಬಹುದು.

***


(Release ID: 1670434) Visitor Counter : 209