ಪ್ರಧಾನ ಮಂತ್ರಿಯವರ ಕಛೇರಿ

ನವೆಂಬರ್ 5 ರಂದು ವರ್ಚುವಲ್ ಜಾಗತಿಕ ಹೂಡಿಕೆದಾರರ ಸಭೆಯ ಅಧ್ಯಕ್ಷತೆ ವಹಿಸಲಿರುವ ಪ್ರಧಾನಮಂತ್ರಿ


ಸಭೆಯಲ್ಲಿ ವಿಶ್ವದಾದ್ಯಂತದ ಉನ್ನತ ಪಿಂಚಣಿ ಮತ್ತು ಸಾರ್ವಭೌಮ ಸಂಪತ್ತು ನಿಧಿಗಳು ಭಾಗಿ

ಭಾರತದಲ್ಲಿ ಅಂತಾರಾಷ್ಟ್ರೀಯ ಹೂಡಿಕೆ ವೃದ್ಧಿಸುವ ಕುರಿತು ಚರ್ಚೆ

Posted On: 03 NOV 2020 5:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020 ನವೆಂಬರ್ 5ರಂದು ಜಾಗತಿಕ ಹೂಡಿಕೆದಾರರ ವರ್ಚುವಲ್ ದುಂಡು ಮೇಜಿನ (ವಿಜಿಐಆರ್) ಸಭೆ ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಿಐಆರ್ ಅನ್ನು ಭಾರತ ಸರ್ಕಾರದ ಹಣಕಾಸು ಸಚಿವಾಲಯ ಮತ್ತು ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ ಆಯೋಜಿಸಿದೆ. ಇದು ಪ್ರಮುಖ ಜಾಗತಿಕ ಸಾಂಸ್ಥಿಕ ಹೂಡಿಕೆದಾರರು, ಭಾರತೀಯ ವಾಣಿಜ್ಯ ಮುಖಂಡರು ಹಾಗೂ ಹಣಕಾಸು ಮಾರುಕಟ್ಟೆ ನಿಯಂತ್ರಕರು ಮತ್ತು ಭಾರತ ಸರ್ಕಾರದ ಉನ್ನತ ನಿರ್ಧಾರ ತೆಗೆದುಕೊಳ್ಳುವವರ ನಡುವಿನ ವಿಶೇಷ ಸಂವಾದವಾಗಲಿದೆ. ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವರು, ಕೇಂದ್ರ ಹಣಕಾಸು ರಾಜ್ಯ ಸಚಿವರು, ಆರ್.ಬಿಐ ಗೌರ್ನರ್ ಮತ್ತು ಇತರ ಗಣ್ಯರು ಭಾಗಿಯಾಗಲಿದ್ದಾರೆ.

ದುಂಡು ಮೇಜಿನ ಸಭೆಯು ನಿರ್ವಹಣೆಯಡಿಯಲ್ಲಿ ಒಟ್ಟು ಸುಮಾರು 6 ಟ್ರಿಲಿಯನ್ ಅಮೆರಿಕನ್ ಡಾಲರ್ಆಸ್ತಿ ಹೊಂದಿರುವ ಇಪ್ಪತ್ತು ಅತಿದೊಡ್ಡ ಪಿಂಚಣಿ ಮತ್ತು ಸಾರ್ವಭೌಮ ಸಂಪತ್ತು ನಿಧಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಜಾಗತಿಕ ಸಾಂಸ್ಥಿಕ ಹೂಡಿಕೆದಾರರು ಅಮೆರಿಕ, ಯುರೋಪ್, ಕೆನಡಾ, ಕೊರಿಯಾ, ಜಪಾನ್, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಮತ್ತು ಸಿಂಗಾಪುರ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ. ಕಾರ್ಯಕ್ರಮ ಪ್ರಮುಖ ನಿಧಿಗಳ ನಿರ್ಣಯ ಕೈಗೊಳ್ಳುವವರ ಅಂದರೆ, ಸಿಇಓಗಳು ಮತ್ತು ಸಿಐಓಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಹೂಡಿಕೆದಾರರಲ್ಲಿ ಕೆಲವರು ಇದೇ ಮೊದಲ ಬಾರಿಗೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಜಾಗತಿಕ ಹೂಡಿಕೆದಾರರ ಹೊರತಾಗಿ, ದುಂಡು ಮೇಜಿನ ಸಭೆಯಲ್ಲಿ ಹಲವು ಭಾರತೀಯ ವಾಣಿಜ್ಯ ನಾಯಕರೂ ಪಾಲ್ಗೊಳ್ಳಲಿದ್ದಾರೆ.

ವಿಜಿಐಆರ್ 2020 ಭಾರತದ ಆರ್ಥಿಕ ಮತ್ತು ಹೂಡಿಕೆ ದೃಷ್ಟಿಕೋನ, ರಚನಾತ್ಮಕ ಸುಧಾರಣೆಗಳು ಮತ್ತು 5 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯ ಹಾದಿಯ ಬಗ್ಗೆ ಸರ್ಕಾರದ ನಿಲುವುಗಳ ಬಗ್ಗೆ ಚರ್ಚಿಸುತ್ತದೆ. ಕಾರ್ಯಕ್ರಮವು ಪ್ರಮುಖ ಜಾಗತಿಕ ಹೂಡಿಕೆದಾರರು ಮತ್ತು ಭಾರತೀಯ ವ್ಯಾಪಾರ ಮುಖಂಡರಿಗೆ ಹಿರಿಯ ನೀತಿ ನಿರೂಪಕರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಭಾರತದಲ್ಲಿ ಅಂತಾರಾಷ್ಟ್ರೀಯ ಹೂಡಿಕೆಗಳ ಬೆಳವಣಿಗೆಯನ್ನು ಹೇಗೆ ವೇಗಗೊಳಿಸುವುದು ಎಂಬುದರ ಕುರಿತು ಚರ್ಚಿಸಲು ಒಂದು ಅವಕಾಶವನ್ನು ಒದಗಿಸುತ್ತದೆ. ಹಣಕಾಸು ವರ್ಷದಲ್ಲಿ ಭಾರತದಲ್ಲಿ ವಿದೇಶಿ ಹೂಡಿಕೆಗಳು ಆರ್ಥಿಕ ವರ್ಷದ ಮೊದಲ ಐದು ತಿಂಗಳುಗಳಲ್ಲಿ ಅತಿ ಹೆಚ್ಚಾಗಿದೆ. ವಿಜಿಐಆರ್ 2020 ಎಲ್ಲಾ ಬಾಧ್ಯಸ್ಥರಿಗೆ ರೂಪಿಸಲಾಗಿರುವ ಬಲವಾದ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಮತ್ತು ತಮ್ಮ ಭಾರತೀಯ ಹೂಡಿಕೆಗಳನ್ನು ಹೆಚ್ಚಿಸಲು ಬಯಸುವ ಅಂತಾರಾಷ್ಟ್ರೀಯ ಸಾಂಸ್ಥಿಕ ಹೂಡಿಕೆದಾರರೊಂದಿಗೆ ಮಾತುಕತೆಯನ್ನು ಹೆಚ್ಚಿಸಲು ಅವಕಾಶವನ್ನು ಒದಗಿಸುತ್ತದೆ.

***(Release ID: 1669847) Visitor Counter : 211