ಕಲ್ಲಿದ್ದಲು ಸಚಿವಾಲಯ

ವಾಣಿಜ್ಯ ಉದ್ದೇಶದ ಕಲ್ಲಿದ್ದಲು ಗಣಿ ಹರಾಜಿನ 1ನೇ ದಿನ ಲವಲವಿಕೆಯ ಆರಂಭ

Posted On: 02 NOV 2020 6:24PM by PIB Bengaluru

ಕಲ್ಲಿದ್ದಲು ಮಾರಾಟಕ್ಕಾಗಿ ಕಲ್ಲಿದ್ದಲು ಗಣಿಯ ಮೊದಲ ದಿನದ ಹರಾಜು ಬಿಡ್ ದಾರರ ನಡುವೆ ಬಲಿಷ್ಠ ಮತ್ತು ಆರೋಗ್ಯಪೂರ್ಣ ಸ್ಪರ್ಧೆಯನ್ನು ಕಂಡಿತು. ಕಲ್ಲಿದ್ದಲು ಸಚಿವಾಲಯ 2020ರ ಜೂನ್ 18ರಂದು ವಾಣಿಜ್ಯ ಗಣಿಗಾರಿಕೆಗಾಗಿ ಕಲ್ಲಿದ್ದಲು ಗಣಿ ಹರಾಜಿಗೆ ಚಾಲನೆ ನೀಡಿದ್ದು, ಎರಡು ಹಂತದ ಮುಂಪಡೆಯ ಹರಾಜು ಪ್ರಕ್ರಿಯೆಗೆ ಅನುಗುಣವಾಗಿ (ಆರಂಭಿಕ ಕೊಡುಗೆ ಮತ್ತು ಅಂತಿಮ ಕೊಡುಗೆಯನ್ನು ಒಳಗೊಂಡಂತೆ), ಇದರಲ್ಲಿ ಬಿಡ್ ದಾರರು ಕಾಪು ಬೆಲೆಯ ಶೇಕಡಾವಾರು ಆದಾಯದ ಪಾಲನ್ನು ಬಿಡ್ ಮಾಡಬೇಕಾಗುತ್ತದೆ.

  • ಕಲ್ಲಿದ್ದಲು ಸಚಿವಾಲಯವು ಹರಾಜಿಗಾಗಿ ಹಾಕಿದ ನಿಕ್ಷೇಪಗಳು ವಿವಿಧ ನಿಕ್ಷೇಪಗಳಿಗಾಗಿ ತಮ್ಮ ಬಿಡ್‌ ಗಳನ್ನು ಪ್ರಸ್ತಾಪದಲ್ಲಿ ಸಲ್ಲಿಸಿದ ಬಿಡ್ ದಾರರಿಂದ ವ್ಯಾಪಕ ಆಸಕ್ತಿಯನ್ನು ಪಡೆದುಕೊಂಡಿದೆ.
  • ಸಲ್ಲಿಸಲಾದ ತಾಂತ್ರಿಕ ಬಿಡ್ ಗಳ ಮೌಲ್ಯಮಾಪನ ಮಾಡಿ, ತಾಂತ್ರಿಕವಾಗಿ ಅರ್ಹರಾದ ಬಿಡ್ ದಾರರು ಘೋಷಿಸಲಾಯಿತು. ಇದಕ್ಕೆ ಅನುಗುಣವಾಗಿ ಕಲ್ಲಿದ್ದಲು ಗಣಿಗಳ ಎಲೆಕ್ಟ್ರಾನಿಕ್ ಹರಾಜನ್ನು ಕಲ್ಲಿದ್ದಲು ಸಚಿವಾಲಯ ವಾಣಿಜ್ಯ ಉದ್ದೇಶಕ್ಕಾಗಿ ಇಂದು 11.00 ಗಂಟೆಗೆ ಆರಂಭಿಸಿದೆ.   
  • ಮೊದಲ ದಿನದ ಇ –ಹರಾಜು ಕೆಲವು ಗಣಿಗಳ ಹರಾಜು 3-4 ಗಂಟೆಗಳ ಕಾಲ ನಡೆಯುವ ಮೂಲಕ ಬಲವಾದ ಸ್ಪರ್ಧೆಗೆ ಸಾಕ್ಷಿಯಾಯಿತು.
  • ಇಂದು ಹರಾಜು ಮಾಡಲಾದ ಎಲ್ಲ ಗಣಿಗಳಲ್ಲಿ, ಸ್ವೀಕರಿಸಿದ ಅಂತಿಮ ಪ್ರಸ್ತಾಪವು ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಗಣಿಗಳ ಬಲವಾದ ಬೇಡಿಕೆಯನ್ನು ಸಂಕೇತಿಸುತ್ತದೆ.

ಪ್ರಥಮ ದಿನದ ಫಲಿತಾಂಶ ಈ ಕೆಳಕಂಡಂತಿದೆ:

ಕ್ರ.

ಸಂ

ಗಣಿಯ ಹೆಸರು

ರಾಜ್ಯ

ಪಿ.ಆರ್.ಸಿ. (ಎಂಟಿಪಿಎ)

ಭೌಗೋಳಿಕ

ಮೀಸಲು (ಎಂ.ಟಿ)

ಅಂತಿಮ ಬಿಡ್ ಸಲ್ಲಿಸಿದವರು

ಕಾಪು ದರ (%)

ಅಂತಿಮ ಬೇಡಿಕೆ (%)

ಉತ್ಪತ್ತಿಯಾದ

ವಾರ್ಷಿಕ ಆದಾಯ

 (ರೂ. ಕೋಟಿ.)

1

ತಕಲಿ ಜೆನಾ ಬೆಲ್ಲೋರಾ ಉತ್ತರ, ಮತ್ತು ತಕಲಿ ಜೆನಾ ಬೆಲ್ಲೋರ ದಕ್ಷಿಣ

ಮಹಾರಾಷ್ಟ್ರ

1.50

117.26

ಅರಬಿಂದೋ ರಿಯಾಲಿಟಿ ಮತ್ತು ಮೂಲಸೌಕರ್ಯ ಪ್ರೈ. ಲಿ. /146875

4

30.75

267.16

2

ಉರ್ತಾನ್

ಮಧ್ಯಪ್ರದೇಶ

0.65

55.391

ಜೆಎಂಎಸ್ ಮೈನಿಂಗ್ ಪ್ರೈ. ಲಿ. /147074

4

10.50

124.27

3

ಮರ್ಕಿ ಮಂಗಲಿ II

ಮಹಾರಾಷ್ಟ್ರ

0.30

11.44

ಯಜ್ದನಿ ಇಂಟರ್ ನ್ಯಾಷನಲ್ ಪ್ರೈ. ಲಿ.. / 148341

4

30.75

53.43

4

ರಾಧಿಕಾಪುರ ಪಶ್ಚಿಮ

ಒಡಿಶಾ

6.00

312.04

ವೇದಾಂತ ಲಿಮಿಟೆಡ್ /68522

4

21.00

592.28

5

ಚಕಲಾ

ಜಾರ್ಖಂಡ್

5.30

76.05

ಡಿಂಡಾಲ್ಕೋ ಇಂಡಸ್ಟ್ರೀಸ್ ಲಿ. /64856

4

14.25

519.54

 

***


(Release ID: 1669576) Visitor Counter : 257