ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಜಮ್ಮು ಮತ್ತು ಕಾಶ್ಮೀರ ಕುಂದುಕೊರತೆ ವ್ಯವಸ್ಥೆಯನ್ನು ಕೇಂದ್ರೀಯ ಕುಂದುಕೊರತೆ ಪೋರ್ಟಲ್ ನೊಂದಿಗೆ ಸಂಯೋಜಿಸಲಾಗಿದೆ: ಡಾ. ಜಿತೇಂದ್ರ ಸಿಂಗ್

Posted On: 23 OCT 2020 7:24PM by PIB Bengaluru

ಜಮ್ಮು ಮತ್ತು ಕಾಶ್ಮೀರ ಕುಂದುಕೊರತೆ ವ್ಯವಸ್ಥೆಯನ್ನು ಕೇಂದ್ರೀಯ ಕುಂದುಕೊರತೆ ಪೋರ್ಟಲ್ ಜೊತೆಗೆ ಕ್ರೋಡೀಕರಿಸಲಾಗಿದ್ದು, ಇದೇ ಮೊದಲ ಬಾರಿಗೆ ಭಾರತದ ಕೇಂದ್ರಾಡಳಿತ ಪ್ರದೇಶವೊಂದರ ಜಿಲ್ಲಾ ಮಟ್ಟದ ಕುಂದುಕೊರತೆ ಕಚೇರಿಯನ್ನು ಕೇಂದ್ರ ಸರ್ಕಾರದ ಸಿಪಿಜಿಆರ್.ಎ.ಎಂ.ಎಸ್. (ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ನಿಗಾ ವ್ಯವಸ್ಥೆ)ಯೊಂದಿಗೆ ಸಂಯೋಜಿಸಲಾಗಿದೆ  ಎಂದು ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ ಖಾತೆ ರಾಜ್ಯ ಸಚಿವ (ಡಿ.ಓ.ಎನ್.ಇ.ಆರ್.) (ಸ್ವತಂತ್ರ ನಿರ್ವಹಣೆ), ಎಂ.ಓ.ಎಸ್. ಪಿ.ಎಂ.ಓ., ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಂದು ತಿಳಿಸಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಪ್ರಯತ್ನವಾಗಿ, ಕೇಂದ್ರ ಸಿಬ್ಬಂದಿ ಸಚಿವಾಲಯದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ (ಡಿಎಆರ್.ಪಿಜಿ.) ಇಲಾಖೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರದ ಸಹಯೋಗದಲ್ಲಿ ಆನ್ ಲೈನ್ ಕುಂದುಕೊರತೆ ಪರಿಹಾರ ಕುಂದುಕೊರತೆ ಪೋರ್ಟಲ್ ಸ್ಥಾಪನೆ ಮತ್ತು ವಿಸ್ತರಣೆ ಮಾಡಲು ಸಹಕರಿಸಿದೆ. 
ಮೂರು ತಿಂಗಳುಗಳ ಕಾಲ ಸರಣಿ ಸಮಾಲೋಚನೆಗಳ ನಂತರ, ಜಮ್ಮು ಮತ್ತು ಕಾಶ್ಮೀರ ಸಂಯೋಜಿತ ಕುಂದುಕೊರತೆ ಪರಿಹಾರ ಮತ್ತು ನಿಗಾ ವ್ಯವಸ್ಥೆ (ಜೆಕೆ –ಐಜಿಆರ್.ಎ.ಎಂ.ಎಸ್.)ಯನ್ನು  ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಜಿಲ್ಲಾ ಮಟ್ಟದ ಕಚೇರಿಗಳೊಂದಿಗೆ ಮತ್ತು ಕೇಂದ್ರೀಯ ಪೋರ್ಟಲ್ ನೊಂದಿಗೆ ಸಂಯೋಜಿಸಲಾಗಿದೆ. 
ಭಾರತ ಸರ್ಕಾರದ ಸಾರ್ವಜನಿಕ ಕುಂದುಕೊರತೆ ಇಲಾಖೆ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಸರ್ಕಾರದ ಸಹಯೋಗದೊಂದಿಗೆ ಜಿಲ್ಲೆಗಳಲ್ಲಿ ಪ್ರಾಯೋಗಿಕ ಹಂತದ ಅನುಷ್ಠಾನ ಮತ್ತು ಅವುಗಳನ್ನು ಕೇಂದ್ರ ಸರ್ಕಾರದ ಪೋರ್ಟಲ್ ಸಿಪಿಜಿಆರ್.ಎ.ಎಂ.ಎಸ್. ನೊಂದಿಗೆ ಸಂಯೋಜಿಸಿದೆ ಎಂದು  ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಜಿಲ್ಲಾ ಪೋರ್ಟಲ್ ಅನ್ನು ರಾಜ್ಯದೊಂದಿಗೆ ಮತ್ತು ಅದನ್ನು ರಾಷ್ಟ್ರೀಯ ಪೋರ್ಟಲ್ ನೊಂದಿಗೆ ಸಂಯೋಜಿಸುವ ಮೊದಲ ಪ್ರಯೋಗದ ಯಶೋಗಾಥೆ ಎಂದು ವಿವರಿಸಿದ ಡಾ.ಜಿತೇಂದ್ರ ಸಿಂಗ್, ಈ ಕಾರ್ಯವಿಧಾನವನ್ನು ಇತರ ರಾಜ್ಯಗಳು ಮತ್ತು ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಅನುಕರಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.


<><><>


(Release ID: 1667162) Visitor Counter : 150