ಹಣಕಾಸು ಸಚಿವಾಲಯ

ಕೇಂದ್ರ ಸರ್ಕಾರದಿಂದ ಸಾಲ ಎತ್ತುವಳಿ


ಜಿಎಸ್ ಟಿ ಪರಿಹಾರಕ್ಕಾಗಿ ಕರ್ನಾಟಕ ಸೇರಿ 16 ರಾಜ್ಯಗಳಿಗೆ ಮೊದಲ ಕಂತಿನಲ್ಲಿ 6,000 ಕೋಟಿ ರೂ. ಬಿಡುಗಡೆ

Posted On: 23 OCT 2020 6:42PM by PIB Bengaluru

ಭಾರತ ಸರ್ಕಾರ 2020-2021ನೇ ಸಾಲಿಗೆ ಜಿಎಸ್ ಟಿ ಪರಿಹಾರದ ಕೊರತೆಯನ್ನು ನೀಗಿಸಲು ವಿಶೇಷ ಯೋಜನೆ ಅಡಿ ಸಾಲವನ್ನು ಸ್ವೀಕರಿಸಿದೆ. ಹಣಕಾಸು ಸಚಿವಾಲಯದ ಜೊತೆ ಸಮನ್ವಯದಿಂದಾಗಿ ಕಂತಿನ ರೂಪದಲ್ಲಿ ಸಾಲ ಪಡೆಯಲು 21 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ಈ ವಿಶೇಷ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದವು.
ಅವುಗಳ ಪೈಕಿ ಐದು ರಾಜ್ಯಗಳು ಜಿಎಸ್ ಟಿ ಪರಿಹಾರದಲ್ಲಿ ಯಾವುದೇ ಕೊರತೆ ಇರಲಿಲ್ಲ. ಇಂದು ಕೇಂದ್ರ ಸರ್ಕಾರ ಸಾಲವನ್ನು ಪಡೆದಿದೆ ಮತ್ತು ಕರ್ನಾಟಕ ಸೇರಿದಂತೆ 16 ರಾಜ್ಯಗಳಾದ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಒಡಿಶಾ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾದ ಕೇಂದ್ರಾಡಳಿತ ಪ್ರದೇಶ ದೆಹಲಿ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಇವುಗಳಿಗೆ ಮೊದಲ ಕಂತಿನಲ್ಲಿ 6,000 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದೆ. 
ಈ ಸಾಲಕ್ಕೆ ಶೇ.5.1ರಷ್ಟು ಬಡ್ಡಿದರವಿರುತ್ತದೆ. ರಾಜ್ಯಗಳಿಗೆ ಪ್ರತಿ ವಾರ 6,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ಉದ್ದೇಶವಿದೆ. ಸಾಲದ ಅವಧಿ 3 ರಿಂದ 5 ವರ್ಷಗಳು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 


***(Release ID: 1667155) Visitor Counter : 200