ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಕೈಗಾರಿಕಾ ಕಾರ್ಮಿಕರಿಗೆ ಪರಿಷ್ಕೃತ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ-ಐಡಬ್ಯೂ) ಬಿಡುಗಡೆ
ನಿರ್ದಿಷ್ಟ ಜನಸಂಖ್ಯೆಯ ಅನುಸಾರ ಸಿಪಿಐ-ಐಡಬ್ಲ್ಯೂ ಸೂಚ್ಯಂಕದಿಂದ ಕಾರ್ಮಿಕರ ಹಿತರಕ್ಷಣೆ: ಕೇಂದ್ರ ಸಚಿವ ಸಂತೋಷ್ ಗಂಗ್ವಾರ್
Posted On:
22 OCT 2020 4:26PM by PIB Bengaluru
ಕೈಗಾರಿಕಾ ಕಾರ್ಮಿಕರಿಗೆ ಸಂಬಂಧಿಸಿದಂತೆ ಪರಿಷ್ಕೃತ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ-ಐಡಬ್ಯೂ) ಬಿಡುಗಡೆ ಮಾಡಿದ್ದು, ಇದರ ಕಾರ್ಮಿಕರ ಹಿತರಕ್ಷಣೆ ಜೊತೆಗೆ ಮುಂಬರುವ ದಿನಗಳಲ್ಲಿ ಕೈಗಾರಿಕಾ ಕಾರ್ಮಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ(ಸ್ವತಂತ್ರ ಹೊಣೆಗಾರಿಕೆ) ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಹೇಳಿದ್ದಾರೆ.
ಸಿಪಿಐ-ಐಡಬ್ಲ್ಯೂ ಮೂಲ ಆಧರಿಸಿದ್ದು, ನಿರ್ದಿಷ್ಟ ಜನಸಂಖ್ಯೆಯ ಇತ್ತೀಚಿನ ಬಳಕೆ ವಿಧಾನವನ್ನು ಪ್ರತಿನಿಧಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಇದು ಕಾರ್ಮಿಕರ ಹಿತರಕ್ಷಣೆಗೆ ನೆರವಾಗಲಿದೆ. ಅಲ್ಲದೆ ಭಾರತೀಯ ಆರ್ಥಿಕತೆಯಲ್ಲಿ ಸೂಕ್ಷ್ಮ ಆರ್ಥಿಕ ಮಾನದಂಡಗಳನ್ನು ಅಳೆಯಲು ಇದು ನೆರವಾಗಲಿದೆ ಎಂದು ಶ್ರೀ ಗಂಗ್ವಾರ್ ಹೇಳಿದರು.
ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೆಚ್ಚು ಹೋಲಿಕೆ ಮಾಡುವಂತೆ ಸಿದ್ಧಪಡಿಸಲಾಗಿದೆ ಎಂದರು.
ಅವರು, ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ, ಹಿರಿಯ ಕಾರ್ಮಿಕ ಮತ್ತು ಉದ್ಯೋಗ ಸಲಹೆಗಾರ ಹಾಗೂ ಕಾರ್ಮಿಕ ಬ್ಯೂರೋದ ಮಹಾನಿರ್ದೇಶಕ ಶ್ರೀ ಡಿಪಿಎಸ್ ನೇಗಿ ಅವರ ಸಮಕ್ಷಮದಲ್ಲಿ 2016ನೇ ಮೂಲವರ್ಷವನ್ನಾಗಿಟ್ಟುಕೊಂಡು ಕೈಗಾರಿಕಾ ಕಾರ್ಮಿಕರಿಗಾಗಿ ಸಿದ್ಧಪಡಿಸಿರುವ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ-ಐಡಬ್ಲ್ಯೂ) ವನ್ನು ಬಿಡುಗಡೆ ಮಾಡಿದರು. ಇದನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಚೇರಿ ಅಡಿ ಬರುವ ಕಾರ್ಮಿಕ ಬ್ಯೂರೋ ನಿರ್ವಹಿಸುತ್ತಿದೆ. ಹೊಸ ಸರಣಿಯ ಮೂಲ ಸಿಪಿಐ-ಐಡಬ್ಲ್ಯೂಗೆ 2016=100 ಆಧರಿಸಿದ್ದು, ಇದು ಹಾಲಿ ಇರುವ 2001=100 ಸರಣಿಯನ್ನು ಬದಲಾಯಿಸಲಿದೆ.
ಇದಕ್ಕೂ ಮುನ್ನ ಈ ಸರಣಿಗಳು ಕಾರ್ಮಿಕ ಬ್ಯೂರೋ ಸ್ಥಾಪನೆ ನಂತರ 1949;1949 ರಿಂದ 1960; 1960 ರಿಂದ 1982 ಮತ್ತು 1982 ರಿಂದ 2001ರ ವರೆಗೆ ಸರಣಿಗಳನ್ನು ಪರಿಷ್ಕರಿಸಲಾಗಿತ್ತು.
ಕಾರ್ಮಿಕ ಬ್ಯೂರೋ ತನ್ನ ದೃಢತೆ ಮತ್ತು ಗಮನಾರ್ಹ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದರಿಂದಾಗಿ ಸಿಪಿಐ-ಐಡಬ್ಲ್ಯೂನ ಪರಿಷ್ಕೃತ ಸರಣಿ ಬಿಡುಗಡೆಯಾಗುವಂತಾಗಿದೆ ಎಂದರು. ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಕಾರ್ಮಿಕರಿಗೆ ಸಂಬಂಧಿಸಿದ ಎಲ್ಲ ಆಯಾಮಗಳ ದತ್ತಾಂಶ ನೀತಿ ನಿರೂಪಣೆಯಲ್ಲಿ ಅತ್ಯಂತ ಪ್ರಮುಖ ಅಂಶವಾಗಲಿದೆ ಮತ್ತು ಇದು ಕಾರ್ಮಿಕರು ಮತ್ತು ಬೆಲೆ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಕಾರ್ಮಿಕ ಬ್ಯೂರೋದಂತಹ ಸಂಸ್ಥೆ ಇರುವಿಕೆಯನ್ನು ಸಮರ್ಪಿಸುತ್ತದೆ ಎಂದರು. ಮುಂಬರುವ ದಿನಗಳಲ್ಲಿ ದತ್ತಾಂಶದ ಪ್ರಾಮುಖ್ಯತೆ ಹೆಚ್ಚಾಗಲಿದ್ದು, ಭಾರತ ಕಾರ್ಮಿಕ ಆಧಾರಿತ ರಾಷ್ಟ್ರವಾಗಿದೆ. ಕಾರ್ಮಿಕ ಮತ್ತು ಬೆಲೆ ಅಂಕಿ-ಅಂಶಗಳಿಗೆ ಕಾರ್ಮಿಕ ಬ್ಯೂರೋದಂತಹ ನಿರ್ದಿಷ್ಟ ಸಂಸ್ಥೆ ಇರುವುದು ಹೆಚ್ಚಿನ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದರು.
ಕಾರ್ಮಿಕ ಬ್ಯೂರೋ ಎಲ್ಲಾ ವಿಭಾಗದಲ್ಲೂ ಗಮನಾರ್ಹ ಸುಧಾರಣೆಗಳನ್ನು ತರುತ್ತಿದೆ ಎಂದು ಶ್ರೀ ಗಂಗ್ವಾರ್, ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಅದು ಗುಣಮಟ್ಟದ ಕಾರ್ಮಿಕ ಅಂಕಿ-ಅಂಶಗಳನ್ನು ಸಿದ್ಧಪಡಿಸುವಲ್ಲಿ ಶ್ರೀಮಂತ ವೈಭವವನ್ನು ಹೊಂದಿದೆ. ಅದರ ಬೇರುಗಳು 1920ರಲ್ಲಿ ಸ್ಥಾಪನೆಯಾದಾಗಿನಿಂದಲೂ ಕಾಣಬಹುದಾಗಿದೆ. 100 ವರ್ಷಗಳ ಇರುವಿಕೆಯ ನಂತರ ಆ ಸಂಸ್ಥೆಯ ಲೋಗೋ ಬಿಡುಗಡೆ ಮಾಡಲಾಗಿದೆ. ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಇದೀಗ ಕಾರ್ಮಿಕ ಬ್ಯೂರೋ ಹೊಸ ಸರಣಿಯ ಸಿಪಿಐ-ಐಡಬ್ಲ್ಯೂಅನ್ನು ಬಿಡುಗಡೆ ಮಾಡಿದೆ.
ಶ್ರೀ ಅಪೂರ್ವಚಂದ್ರ ಅವರು, ಕಾರ್ಮಿಕ ಬ್ಯೂರೋ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ವೃತ್ತಿಪರರು ಹಾಗೂ ಅಸಂಘಟಿತ ಸಾರಿಗೆ ವಲಯ, ವಲಸೆ ಕಾರ್ಮಿಕರು ಮತ್ತು ಗೃಹ ಕೆಲಸಗಾರರಿಗೆ ಸಂಬಂಧಿಸಿದಂತೆ ಮೂರು ಮುಖ್ಯ ಸಮೀಕ್ಷೆಗಳನ್ನು ಆರಂಭಿಸಿದೆ. ಕಾರ್ಮಿಕ ಬ್ಯೂರೋ ಇತ್ತೀಚೆಗೆ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರೂಪಿಸುವ ಬಹುದೊಡ್ಡ ಕೆಲಸವನ್ನು ಮಾಡಿದೆ. ಕಾರ್ಮಿಕ ಬ್ಯೂರೋಗೆ ಮುಂದಿನ ದಿನಗಳಲ್ಲಿ ಅದರ ಕೆಲಸ ಕಾರ್ಯಗಳಿಗೆ ಸಾಧ್ಯವಾದ ಎಲ್ಲ ನೆರವು ನೀಡಲಾಗುವುದು ಎಂದು ಕಾರ್ಯದರ್ಶಿಗಳು ಭರವಸೆ ನೀಡಿದರು.
“ಕೈಗಾರಿಕಾ ಕಾರ್ಮಿಕರಿಗೆ ಸಂಬಂಧಿಸಿದ ಗ್ರಾಹಕ ಬೆಲೆ ಸೂಚ್ಯಂಕದ ಹೊಸ ಸರಣಿ(ಮೂಲ 2016=100)” ಅತ್ಯಂತ ಪ್ರಮುಖ ಪ್ರಕಟಣೆಯಾಗಿದ್ದು, ಇದು 2016ನೇ ಮೂಲವರ್ಷವನ್ನು ಆಧರಿಸಿ ಸಿಪಿಐ-ಐಡಬ್ಲ್ಯೂ ಹೊಸ ಸರಣಿಯ ಪರಿಕಲ್ಪನೆ, ವ್ಯಾಖ್ಯಾನ ಮತ್ತು ವಿಧಾನಗಳ ಕುರಿತ ಒಳಹುಗಳನ್ನು ಒಳಗೊಂಡಿದೆ. ಇದು ಸಂಶೋಧಕರು, ಶೈಕ್ಷಣಿಕ ತಜ್ಞರು, ವಿದ್ವಾಂಸರು ಮತ್ತು ಸಿಪಿಐ-ಐಡಬ್ಲ್ಯೂಗೆ ಸಂಬಂಧಿಸಿದ ಎಲ್ಲ ಪಾಲುದಾರರಿಗೆ ಅಧ್ಯಯನಕ್ಕೆ ಅತ್ಯಂತ ಉಪಯುಕ್ತವಾಗಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್ಒ), ಸೂಚ್ಯಂಕ ಪರಿಶೀಲನಾ ಸಮಿತಿ(ಐಆರ್ ಸಿ) ಮತ್ತು ರಾಷ್ಟ್ರೀಯ ಸಾಂಖ್ಯಿಕ ಆಯೋಗ(ಎನ್ಎಸ್ ಸಿ) ಶಿಫಾರಸ್ಸಿನಂತೆ ಬೆಲೆ ಸೂಚ್ಯಂಕ ಅಂಕಿಗಳನ್ನು ಹತ್ತು ವರ್ಷಗಳಿಗೆ ಮೀರದಂತೆ ಆಗಿಂದಾಗ್ಗೆ ಪರಿಷ್ಕರಣೆ ಮಾಡಬೇಕು. ಅದರಲ್ಲಿ ಗ್ರಾಹಕರ ಬಳಕೆ ವಿಧಾನದ ಬದಲಾವಣೆಗಳು ಪ್ರತಿಫಲನಗೊಳ್ಳಬೇಕು. ಸಿಪಿಐ-ಐಡಬ್ಲ್ಯೂಅನ್ನು ಐಎಲ್ಒ ಮಾರ್ಗಸೂಚಿಗಳು ಹಾಗೂ ಅಂತಾರಾಷ್ಟ್ರೀಯ ಅತ್ಯುತ್ತಮ ವಿಧಾನಗಳಿಗೆ ಅನುಸಾರ ಸಿದ್ಧಪಡಿಸಲಾಗಿದೆ.
ಶ್ರೀ ಗಂಗ್ವಾರ್ ಅವರು ಇದೇ ವೇಳೆ 2016ನೇ ಮೂಲವರ್ಷದ ಚೊಚ್ಚಲ ಸೂಚ್ಯಂಕವನ್ನು 2020ರ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡಿದರು. ಈ ಸೂಚ್ಯಂಕದಲ್ಲಿ 88 ಕೇಂದ್ರಗಳು ಮತ್ತು ಅಖಿಲ ಭಾರತದ ಅಂಕಿ-ಅಂಶಗಳು ಒಗ್ಗೂಡಿವೆ. 2020ರ ಸೆಪ್ಟೆಂಬರ್ ತಿಂಗಳ ಅಖಿಲ ಭಾರತ ಸೂಚ್ಯಂಕದಂತೆ 118ನೇ ಮಟ್ಟದಲ್ಲಿದ್ದು, ಹೊಸ ಸರಣಿಯ ಮೂಲ 2001=100ಗೆ ಹೊಸ ಸರಣಿಯಲ್ಲಿ ಮೂಲ 2.88 ಆಗಿದೆ.
ಸಿಪಿಐ-ಐಡಬ್ಲ್ಯೂ(2001=100) ಸರಣಿಗೆ ಬದಲಾಗಿ ಸಿಪಿಐ-ಐಡಬ್ಲ್ಯೂ(2016=100) ಸರಣಿ ಜಾರಿಗೆ ಬರಲಿದೆ. ಹೊಸ ಸರಣಿಯಲ್ಲಿ ಹೆಚ್ಚಿನ ಪ್ರಾತಿನಿಧಿತ್ವ ನೀಡಲಾಗಿದ್ದು, ಅದರಲ್ಲಿ ಕೈಗಾರಿಕಾ ಕಾರ್ಮಿಕರಿಗೆ ಸಂಬಂಧಿಸಿದಂತೆ ಇತ್ತೀಚಿನ ಬಳಕೆ ವಿಧಾನ ಪ್ರತಿಫಲನಗೊಳ್ಳಲಿದೆ.
ಹೊಸ ವಿಧಾನ ಸಿಪಿಐ-ಐಡಬ್ಲ್ಯೂ(2016=100)ಅಡಿಯಲ್ಲಿ ಮಾಡಿರುವ ಪ್ರಮುಖ ಸುಧಾರಣೆಗಳ ಕುರಿತಂತೆ ಶ್ರೀ ಗಂಗ್ವಾರ್ ವಿಸ್ತೃತವಾಗಿ ಈ ಕೆಳಗಿನ ಅಂಶಗಳನ್ನು ವಿವರಿಸಿದರು.
• 2001ನೇ ಸರಣಿಯಲ್ಲಿ 78 ಕೇಂದ್ರಗಳ ವ್ಯಾಪ್ತಿಯನ್ನು ಒಳಗೊಂಡಿತ್ತು, ಇದೀಗ 2016ನೇ ಸರಣಿಯಲ್ಲಿ ಒಟ್ಟು 88 ಕೇಂದ್ರಗಳ ವ್ಯಾಪ್ತಿಯನ್ನು ಒಳಗೊಂಡಿದೆ.
• ದುಡಿಯುವ ವರ್ಗದ ಕುಟುಂಬದ ಆದಾಯ ನಡವಳಿಕೆ ಮತ್ತು ವೆಚ್ಚ ಸಮೀಕ್ಷೆಯ ಮಾದರಿ ಗಾತ್ರವನ್ನು ಬಳಸಿಕೊಳ್ಳಲಾಗಿದ್ದು, ಅದನ್ನು ಆಧರಿಸಿ ನಾನಾ ರೇಖಾಚಿತ್ರಗಳನ್ನು ಬಿಡಿಸಲಾಗಿದ್ದು, 2001ರ ಸರಣಿಯಲ್ಲಿ 41040 ಕುಟುಂಬಗಳಿದ್ದವು. ಇದೀಗ 48384ಕ್ಕೆ ಏರಿಕೆಯಾಗಿವೆ.
• 2001ರ ಸರಣಿಯಲ್ಲಿ 289 ಮಾರುಕಟ್ಟೆ ವ್ಯಾಪ್ತಿಯನ್ನು ಪರಿಗಣಿಸಲಾಗಿದ್ದು, ಇದೀಗ 2016ರ ಸರಣಿಯಲ್ಲಿ 317 ಮಾರುಕಟ್ಟೆಗಳ ವ್ಯಾಪ್ತಿಗೆ ಹೆಚ್ಚಳ ಮಾಡಲಾಗಿದ್ದು, ಆ ಆಯ್ದ ಮಾರುಕಟ್ಟೆಗಳಲ್ಲಿ ಚಿಲ್ಲರೆ ಬೆಲೆ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ.
• 2001ರ ಸರಣಿಯಲ್ಲಿ 392 ವಸ್ತುಗಳನ್ನು ಆಯ್ದುಕೊಳ್ಳಲಾಗಿತ್ತು. ಇದೀಗ ಆ ಸಂಖ್ಯೆಯನ್ನು 463ಕ್ಕೆ ಹೆಚ್ಚಳ ಮಾಡಿ, ಸೂಚ್ಯಂಕ ಬ್ಯಾಸ್ಕೆಟ್ ಅನ್ನು ನೇರವಾಗಿ ಉಳಿಸಿಕೊಳ್ಳಲಾಗಿದೆ.
• 2001ರ ಸರಣಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 25 ಇತ್ತು. 2016ರ ಸರಣಿಯಲ್ಲಿ ಆ ಪ್ರಮಾಣ 28ಕ್ಕೆ ಏರಿಕೆಯಾಗಿದೆ.
• ಹೊಸ ಸರಣಿಯಲ್ಲಿ ತಾಂತ್ರಿಕ ಸಲಹಾ ಸಮಿತಿ(ಟಿಎಸಿ) ನಿರ್ದೇಶನದಂತೆ ಬೆಲೆಗಳು ಮತ್ತು ಜೀವನವೆಚ್ಚ ಅಂಕಿ-ಅಂಶಗಳು(ಎಸ್ ಪಿ ಸಿಎಲ್), ಜಿಯೋಮೆಟ್ರಿಕ್ ಮೀನ್ ಬೇಸಡ್ ಮೆಥೆಡಾಲಜಿ (ಜಿಎಂ ಆಫ್ ಪ್ರೈಸ್ ರಿಲೇಟಿವ್ಸ್) ಅನ್ನು ಬಳಕೆ ಮಾಡಲಾಗಿದ್ದು, 2001ರ ಸರಣಿಯಲ್ಲಿ ಅಂಕ ಗಣಿತವನ್ನು ಬಳಕೆ ಮಾಡಲಾಗಿತ್ತು.
ಹೊಸ ಸರಣಿಯಲ್ಲಿ ಗುಂಪು ಹಂತದ ತೂಕವನ್ನು ಹಿಂದಿನ ಸರಣಿಗಳಿಗೆ(1982 ಮತ್ತು 2001) ಹೋಲಿಸಿದರೆ ಬದಲಾಯಿಸಲಾಗಿದೆ. ಆಹಾರ ಮತ್ತು ಪಾನೀಯಗಳ ಸೇವನೆ ತೂಕ ಕ್ರಮೇಣ ಇಳಿಮುಖವಾಗಿ ಇತರೆ ಗುಂಪಿನ ತೂಕ(ಆರೋಗ್ಯ, ಶಿಕ್ಷಣ ಮತ್ತು ಮನರಂಜನೆ, ಸಾರಿಗೆ ಮತ್ತು ಸಂವಹನ, ವೈಯಕ್ತಿಕ ಆರೈಕೆ ಮತ್ತು ಪರಿಣಾಮಗಳು, ಗೃಹೋಪಯೋಗಿ ಸರಕು ಮತ್ತು ಸೇವೆಗಳು)ಗಳಿಗೆ 2016ರ ಹೊಸ ಸರಣಿಯಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ. ಕಾಲಾನುಕ್ರಮೇಣ ವಸತಿಗುಂಪಿನ ತೂಕದಲ್ಲೂ ಭಾರೀ ಹೆಚ್ಚಳವಾಗಿದೆ.
2020ರ ಸೆಪ್ಟೆಂಬರ್ ತಿಂಗಳ ಗುಂಪುವಾರು ಸೂಚ್ಯಂಕ ವಸತಿ ಗುಂಪಿಗೆ 113 ಅಂಕ ಇದ್ದದ್ದು, ಹೊಸ ಸರಣಿಯಲ್ಲಿ ಪಾನ್, ಸುಪಾರಿ, ತಂಬಾಕು ಮತ್ತು ಉತ್ಕರ್ಷಣ ನಿರೋಧಕಗಳ ಗುಂಪಿನಲ್ಲಿ 132 ಅಂಕಗಳಿಗೇರಿದೆ.
ಕಾರ್ಮಿಕ ಬ್ಯೂರೋದ ಮಹಾನಿರ್ದೇಶಕ ಶ್ರೀ ಡಿ.ಪಿ.ಎಸ್. ನೇಗಿ ಅವರು, ಹಳೆಯ ಸರಣಿ ಸಿಪಿಐ-ಐಡಬ್ಲ್ಯೂ(2001=100)ಗೆ ಹೋಲಿಸಿದರೆ ಹೊಸ ಸರಣಿ(2016=100)ನಲ್ಲಿ 2.88ರಷ್ಟು ಹೆಚ್ಚಾಗಿದೆ. ಎರಡೂ ಸರಣಿಗಳಲ್ಲೂ 65 ಸಾಮಾನ್ಯ ಕೇಂದ್ರಗಳಿದ್ದು, ಆ ಸಾಮಾನ್ಯ ಕೇಂದ್ರಗಳ ಸಂಯೋಜನಾ ಅಂಶ 2.38 ದೂಮ-ದೂಮ ತಿನ್ಸುಕಿಯಾದಿಂದ 3.60 ನಾಗ್ಪುರದವರೆಗೆ.
ಕೈಗಾರಿಕಾ ಕಾರ್ಮಿಕರಿಗಾಗಿ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಸಂಖ್ಯೆಯನ್ನು 2020ರ ಸೆಪ್ಟೆಂಬರ್ ಗೆ ಬಿಡುಗಡೆ ಮಾಡಲಾಗಿದ್ದು, ಅದಕ್ಕೆ ಮೂಲ 2016=100 ಆಗಿದೆ. ಈ ಚೊಚ್ಚಲ ಸೂಚ್ಯಂಕದಲ್ಲಿ ಹೊಸ ಸರಣಿಗೆ 2001=100 ಆಗಿದೆ.
ಹೊಸ ಸರಣಿಯಲ್ಲಿ ಭವಿಷ್ಯಕ್ಕೆ ಭಾರೀ ದೊಡ್ಡ ವ್ಯಾಪ್ತಿ ವಿಸ್ತಾರಗೊಳ್ಳಲಿದೆ. ಇಂದಿನ ಸರಣಿಯಲ್ಲಿ 78 ಕೇಂದ್ರಗಳಿಗೆ ಇದ್ದದ್ದು, ಇದರಲ್ಲಿ 88 ಕೇಂದ್ರಗಳ ವ್ಯಾಪ್ತಿ ಒಳಗೊಂಡಿದೆ. ಮಾರುಕಟ್ಟೆಗಳ ಸಂಖ್ಯೆ ಕೂಡ ಹಿಂದೆ 289 ಮಾರುಕಟ್ಟೆಗಳು ಮತ್ತು 392 ಉತ್ಪನ್ನಗಳಿಗೆ ಇದ್ದದ್ದು, ಇದೀಗ 317 ಮಾರುಕಟ್ಟೆಗಳು ಹಾಗೂ 463 ಉತ್ಪನ್ನಗಳಿಗೆ ಏರಿಕೆಯಾಗಿದ್ದು, ಅದು ಇತ್ತೀಚಿನ ಗ್ರಾಹಕ ಬಳಕೆಯನ್ನು ಪ್ರತಿಬಿಂಬಿಸುತ್ತದೆ.
ಹಿಂದಿನಂತೆ ಹೊಸ ಸರಣಿಯಲ್ಲಿ ಅದೇ ಸಮೀಕ್ಷೆಯ ಮೂಲವರ್ಷ ಮತ್ತು ಬೆಲೆ ಮೂಲವನ್ನು ಇಟ್ಟುಕೊಂಡಿರುವುದು ಪ್ರಮುಖ ಸುಧಾರಣೆಯಾಗಿದೆ. ಹಿಂದೆಂದೂ ಮಾಡಿರದ ರೀತಿ ನಾಲ್ಕೇ ವರ್ಷಗಳ ಅತ್ಯಲ್ಪ ಅವಧಿಯಲ್ಲಿ ಅದನ್ನು ಬಿಡುಗಡೆ ಮಾಡಲಾಗಿದೆ.
ಬೆಲೆ ಅಂಕಿ-ಅಂಶಗಳ ಕುರಿತ ತಾಂತ್ರಿಕ ಸಲಹಾ ಸಮಿತಿ ಮತ್ತು ಜೀವನವೆಚ್ಚ(ಟಿಎಸಿ ಮತ್ತು ಎಸ್ ಪಿಸಿಎಲ್) ಹೊಸ ಸರಣಿಯನ್ನು ಅನುಮೋದಿಸಿವೆ.
ಸಿಪಿಐ-ಐಡಬ್ಲ್ಯೂ ಅತ್ಯಂತ ಪ್ರಮುಖ ಬೆಲೆ ಅಂಕಿ-ಅಂಶಗಳಾಗಿದ್ದು, ಅದು ಹಣಕಾಸಿನ ಸ್ಥಿತಿಗತಿಯ ಮೇಲೆ ಪರಿಣಾಮ ಬೀರಲಿದೆ. ಇದನ್ನು ಮುಖ್ಯವಾಗಿ ಸರ್ಕಾರಿ ನೌಕರರು ಮತ್ತು ಕೈಗಾರಿಕಾ ವಲಯದಲ್ಲಿ ದುಡಿಯುತ್ತಿರುವವರ ತುಟ್ಟಿಭತ್ಯೆ ನಿಯಂತ್ರಣಕ್ಕೆ ಬಳಕೆ ಮಾಡಲಾಗುವುದು. ಅಲ್ಲದೆ ಇದನ್ನು ಚಿಲ್ಲರೆ ಬೆಲೆಗಳ ಹಣದುಬ್ಬರ ಅಳೆಯಲು ಮತ್ತು ಅಧಿಸೂಚಿತ ಉದ್ಯೋಗಗಳಲ್ಲಿನ ಕಾರ್ಮಿಕರ ಕನಿಷ್ಠ ವೇತನ ನಿಗದಿ ಮತ್ತು ಪರಿಷ್ಕರಣೆಗೂ ಸಹ ಬಳಕೆ ಮಾಡಲಾಗುವುದು.
2020ರ ಅಕ್ಟೋಬರ್ ತಿಂಗಳ ಮುಂದಿನ ಸಿಪಿಐ-ಐಡಬ್ಲ್ಯೂಅನ್ನು 2020ರ ನವೆಂಬರ್ 27ರಂದು ಶುಕ್ರವಾರ ಬಿಡುಗಡೆ ಮಾಡಲಾಗುವುದು. ಅದು ಕಚೇರಿಯ ವೆಬ್ ಸೈಟ್ www.labourbureaunew.gov.in ನಲ್ಲಿ ಲಭ್ಯ.
***
(Release ID: 1666898)
Visitor Counter : 373