ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಕ್ರಮ
प्रविष्टि तिथि:
21 OCT 2020 5:33PM by PIB Bengaluru
ಆಗಸ್ಟ್ 2020ರ ಅಂತ್ಯದಿಂದೀಚೆಗೆ ಈರುಳ್ಳಿ ಚಿಲ್ಲರೆ ಮಾರಾಟ ಬೆಲೆ ಏರಿಕೆಯಾಗಿದ್ದು, ಆದರೂ ಅಕ್ಟೋಬರ್ 18ರ ವರೆಗೆ ಕಳೆದ ವರ್ಷಕ್ಕಿಂತ ಬೆಲೆ ಕಡಿಮೆಯೇ ಇತ್ತು. ಕಳೆದ ಹತ್ತು ದಿನಗಳಿಂದೀಚೆಗೆ ಈರುಳ್ಳಿ ಬೆಲೆ ಏರುಮುಖಿಯಾಗಿದ್ದು, ಭಾರತದಲ್ಲಿ ಸರಾಸರಿ ಪ್ರತಿ ಕೆ.ಜಿ.ಗೆ 11.56 ರೂ. ಪೈಸೆ ಹೆಚ್ಚಾಗಿದ್ದು, ಪ್ರತಿ ಕೆ.ಜಿ. ಈರುಳ್ಳಿ ಬೆಲೆ 51.95 ರೂ. ಆಗಿದ್ದು, ಕಳೆದ ವರ್ಷ ಪ್ರತಿ ಕೆ.ಜಿ. ಬೆಲೆ 46.33 ಇತ್ತು. ಅದಕ್ಕೆ ಹೋಲಿಸಿದರೆ ಈಗ ಶೇ. 12.13ರಷ್ಟು ಹೆಚ್ಚಾಗಿದೆ.
ಸರ್ಕಾರ 14.09.2020ರಂದು ಮುಂಜಾಗ್ರತಾ ಕ್ರಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆಯನ್ನು ಖಾತ್ರಿಪಡಿಸಲು ಈರುಳ್ಳಿ ಆಮದನ್ನು ನಿಷೇಧಿಸಿತ್ತು. ಮುಂಗಾರಿನ ಈರುಳ್ಳಿ ಕಟಾವು ಮಾರುಕಟ್ಟೆಗೆ ಬರುವ ಮುನ್ನವೇ ಈ ಕ್ರಮ ಕೈಗೊಳ್ಳಲಾಗಿತ್ತು. ಸಗಟು ಮಾರಾಟ ದರ ಹೆಚ್ಚಾಗಿದ್ದರೂ ಕೂಡ ಬಹುತೇಕ ಈರುಳ್ಳಿ ಬೆಲೆ ಸ್ಥಿರವಾಗಿದ್ದು, ಈರುಳ್ಳಿ ಹೆಚ್ಚಾಗಿ ಬೆಳೆಯುವ ಜಿಲ್ಲೆಗಳಿರುವ ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಜೊತೆಗೆ ದಾಸ್ತಾನು ಮಾಡಲಾಗಿದ್ದ ಈರುಳ್ಳಿಗೂ ಸ್ವಲ್ಪ ಹಾನಿಯಾಗಿದೆ. ಈ ಹವಾಮಾನದ ಬೆಳವಣಿಗೆಗಳಿಂದಾಗಿ ಈರುಳ್ಳಿ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ.
ಸರ್ಕಾರ 2020ರ ಹಿಂಗಾರು ಹಂಗಾಮಿನಲ್ಲಿ ಈರುಳ್ಳಿಯ ದಾಸ್ತಾನು ಇಟ್ಟಿದೆ ಬೆಲೆಯನ್ನು ಸ್ಥಿರೀಕರಣಗೊಳಿಸಲು 2020ರ ಸೆಪ್ಟೆಂಬರ್ ಮಧ್ಯಭಾಗದ ನಂತರ ಹಂತಹಂತವಾಗಿ ಈರುಳ್ಳಿ ದಾಸ್ತಾನನ್ನು ಮಾರುಕಟ್ಟೆಗೆ ಪ್ರಮುಖ ಮಂಡಿಗಳು, ಬೃಹತ್ ಪ್ರಮಾಣದ ಚಿಲ್ಲರೆ ಮಾರಾಟಗಾರ ಸಂಸ್ಥೆಗಳಾದ ಸಫಲ್, ಕೇಂದ್ರೀಯ ಭಂಡಾರ ಮತ್ತು ಎನ್ ಸಿಸಿಎಫ್ ಮೂಲಕ ಹಾಗೂ ರಾಜ್ಯ ಸರ್ಕಾರಗಳ ಮೂಲಕ ಪೂರೈಕೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಆ ಪೂರೈಕೆ ಪ್ರಮಾಣ ಇನ್ನೂ ಹೆಚ್ಚಾಗಲಿದೆ.
ಈರುಳ್ಳಿ ಆಮದಿಗೆ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ 21.10.2020ರಿಂದ ಫ್ಯುಮಿಗೇಷನ್ ಮತ್ತು ಹೆಚ್ಚುವರಿ ಫೈಟೋಸ್ಯಾನಟರಿ ಘೋಷಣಾ ಪ್ರಮಾಣಪತ್ರ ಸಲ್ಲಿಕೆ ಷರತ್ತುಗಳಿಂದ ಪ್ಲಾಂಟ್ ಕ್ವಾರಂಟೈನ್ ಆದೇಶ 2003ಯಿಂದ 2020ರ ಡಿಸೆಂಬರ್ 15ರ ವರೆಗೆ ಆಮದಿಗೆ ವಿನಾಯಿತಿ ನೀಡಿದೆ. ವಿದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದ್ದು, ಅವು ಆಯಾ ದೇಶಗಳ ವರ್ತಕರನ್ನು ಸಂಪರ್ಕಿಸಿ, ಭಾರತಕ್ಕೆ ಹೆಚ್ಚಿನ ಪ್ರಮಾಣದ ಈರುಳ್ಳಿ ಆಮದಿಗೆ ಉತ್ತೇಜನ ನೀಡಲಿದ್ದಾರೆ. ಭಾರತೀಯ ಬಂದರುಗಳಿಗೆ ಆಮದಾಗುವ ಈರುಳ್ಳಿ ಕನ್ಸೈನ್ ಮೆಂಟ್ ಗಳಿಗೆ- ಯಾವುದೇ ಫುಮಿಗೇಷನ್ ಮತ್ತು ಸ್ವೀಕೃತಿ ಬೇಕಾಗಿಲ್ಲ. ಪ್ರಮಾಣೀಕೃತ ಸಂಸ್ಕರಣಾದಾರರಿಂದ ಭಾರತವೇ ಅದರ ಫ್ಯುಮಿಗೇಷನ್ ಮಾಡಿಸಲಿದೆ. ಅದರ ಕಾಂಡ ಮತ್ತು ಬಳ್ಳಿ (ಡಿಟಿಲೆಂಚಸ್ ಡಿಪ್ಪಾಸಿ) ಅಥವಾ ಈರುಳ್ಳಿ ಮ್ಯಾಗಟ್ (ಹಿಲಿಮಿಯ ಆಂಟಿಕ್ವಾ)ಗಳನ್ನು ಫ್ಯುಮುಗೇಷನ್ ಮೂಲಕ ಪತ್ತೆ ಹಚ್ಚಿ ತೆಗೆದುಹಾಕಲಾಗುವುದು ಮತ್ತು ಕನ್ಸೈನ್ ಮೆಂಟ್ ಗಳನ್ನು ಹೆಚ್ಚುವರಿ ತಪಾಸಣಾ ಶುಲ್ಕವಿಲ್ಲದೆ ಬಿಡುಗಡೆ ಗೊಳಿಸಲಾಗುವುದು. ಆಮದುದಾರರಿಂದ ಈರುಳ್ಳಿಯನ್ನು ಕೇವಲ ಬಳಕೆಗಾಗಿ ಉಪಯೋಗಿಸಲಾಗುವುದು ಮತ್ತು ಬೀಜಗಳಾಗಿ ಬಳಸುವುದಿಲ್ಲ ಎಂದು ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗುವುದು. ಅಂತಹ ಈರುಳ್ಳಿ ಕನ್ಸೈನ್ ಮೆಂಟ್ ಗಳಿಗೆ ಪಿಕ್ಯೂ ಆದೇಶ 2003ರ ಅನ್ವಯ ಆಮದು ನಿಬಂಧನೆಗೆ ಒಳಪಟ್ಟಂತೆ ನಾಲ್ಕು ಪಟ್ಟು ಹೆಚ್ಚುವರಿ ತಪಾಸಣಾ ಶುಲ್ಕ ವಿಧಿಸಲಾಗುವುದಿಲ್ಲ.
ಅಲ್ಲದೆ ಮುಂಗಾರು ಬೆಳೆಯ 37 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಇದೀಗ ಮಂಡಿಗಳಿಗೆ ಬರಲಾರಂಭಿಸಿದ್ದು, ಇದರಿಂದ ಹೆಚ್ಚುತ್ತಿರುವ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬಂದು ಇಳಿಕೆಯಾಗಲಿದೆ.
***
(रिलीज़ आईडी: 1666651)
आगंतुक पटल : 275