ಸಂಪುಟ

ಭಾರತದ ಐಸಿಎಐ ಮತ್ತು ಮಲೇಷ್ಯಾದ ಎಂಐಸಿಪಿಎ ನಡುವೆ ಪರಸ್ಪರ ಮಾನ್ಯತಾ ಒಪ್ಪಂದ ಕೇಂದ್ರ ಸಂಪುಟ ಅನುಮೋದನೆ

Posted On: 21 OCT 2020 3:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಮತ್ತು ಮಲೇಷ್ಯಾ ಪ್ರಮಾಣೀಕೃತ ಸಾರ್ವಜನಿಕ ಲೆಕ್ಕಪರಿಶೋಧಕರ ಸಂಸ್ಥೆ (ಎಂಐಸಿಪಿಎ) ನಡುವೆ ಪರಸ್ಪರ ಮಾನ್ಯತೆ ನೀಡುವ ಒಪ್ಪಂದಕ್ಕೆ ಅನುಮೋದನೆ ನೀಡಿತು. ಇದರಿಂದಾಗಿ ಎರಡೂ ಸಂಸ್ಥೆಗಳ ಸೂಕ್ತ ಅರ್ಹತೆಯನ್ನು ಹೊಂದಿರುವ ಸಿ ಎ (ಲೆಕ್ಕಪರಿಶೋಧಕರು-ಚಾರ್ಟೆಡ್ ಅಕೌಂಟೆಂಟ್) ಹಾಲಿ ಇರುವ ಲೆಕ್ಕಪತ್ರ ಪರಿಶೋಧನಾ ಅರ್ಹತೆ ಜೊತೆಗೆ ಸೂಕ್ತ ಅರ್ಹತೆಯನ್ನುಗಳಿಸಿ ಯಾವುದಾದರೂ ಒಂದು ಸಂಸ್ಥೆಯನ್ನು ಸೇರ್ಪಡೆಯಾಗಬಹುದು.

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿ

ಇದರಿಂದಾಗಿ ಐಸಿಎಐ ಮತ್ತು ಎಂಐಸಿಪಿಎ ನಡುವೆ ಪರಸ್ಪರರ ಅರ್ಹತೆಯನ್ನು ನಿರ್ದಿಷ್ಟ ಮಾದರಿಯ ದಾಖಲೆಯ ಮೂಲಕ ಮಾನ್ಯ ಮಾಡುವ ಉದ್ದೇಶಕ್ಕಾಗಿ ಒಂದು ವ್ಯವಸ್ಥೆ ಏರ್ಪಡಲಿದೆ ಮತ್ತು ಸೂಕ್ತ ಅರ್ಹತೆ ಹೊಂದಿರುವ ಸದಸ್ಯರಿಗೆ ಸದಸ್ಯತ್ವವನ್ನು ಯಾವ ಆಧಾರದಲ್ಲಿ ನೀಡಬೇಕು ಎಂಬ ಕುರಿತಂತೆ ನಿರ್ಧಾರವಾಗಲಿದೆ. ಉದ್ದೇಶಿತ ಒಪ್ಪಂದದಿಂದಾಗಿ ತಮ್ಮ ಶೈಕ್ಷಣಿಕ ಅರ್ಹತೆ, ನೈತಿಕ ಮೌಲ್ಯ ಮತ್ತು ಪರೀಕ್ಷೆಗಳು ಹಾಗೂ ಪ್ರಾಯೋಗಿಕ ಅನುಭವದಿಂದಾಗಿ ವೃತ್ತಿಪರ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದಿರುವವರು ಹಾಗೂ ವಾಸ್ತವಿಕ ಅನುಭವದಲ್ಲಿ ಸದಸ್ಯತ್ವ ಪಡೆದಿರುವ ಇಬ್ಬರಿಗೂ ಸದಸ್ಯತ್ವ ಅರ್ಹತೆಗಳನ್ನು ನಿಗದಿಪಡಿಸಲಾಗುವುದು. ಐಸಿಎಐ ಮತ್ತು ಎಂಐಸಿಪಿಎ ಎರಡೂ ಸಂಸ್ಥೆಗಳು ಅರ್ಹತೆ/ಪ್ರವೇಶ ಅಗತ್ಯತೆಗಳು, ನಿರಂತರ ವೃತ್ತಿಪರ ಅಭಿವೃದ್ಧಿ(ಸಿಪಿಡಿ) ನೀತಿ, ವಿನಾಯಿತಿಗಳು ಹಾಗೂ ಇತರೆ ಸಂಬಂಧಿಸಿದ ವಿಚಾರಗಳು ಕುರಿತು ಪರಸ್ಪರ ವಿಷಯ ಹಾಗೂ ಮಾಹಿತಿಯನ್ನು ಹಂಚಿಕೊಳ್ಳಲಿವೆ.

ಪ್ರಮುಖ ಪರಿಣಾಮ:

ಐಸಿಎಐ ಏಷ್ಯಾ ಫೆಸಿಫಿಕ್ ಪ್ರಾಂತ್ಯದ ಇತರೆ ಸಂಸ್ಥೆಗಳ ಜೊತೆ ದ್ವಿಪಕ್ಷೀಯ ಸಹಕಾರ ಸಂಬಂಧ ಸ್ಥಾಪನೆಯನ್ನು ಬಯಸಿದೆ ಮತ್ತು ಅದಕ್ಕಾಗಿ ಎಂಐಸಿಪಿಎ ಜೊತೆ ಒಡಂಬಡಿಕೆಗೆ ಸಹಿ ಹಾಕಲು ಉದ್ದೇಶಿಸಿದೆ. ಇಂದಿನ ಜಾಗತಿಕ ಸನ್ನಿವೇಶದಲ್ಲಿ ವೃತ್ತಿಯಲ್ಲಿ ಎದುರಾಗುವ ಹೊಸ ಸವಾಲುಗಳನ್ನು ಹತ್ತಿಕ್ಕುವಲ್ಲಿ ನಾಯಕತ್ವ ಪಾತ್ರವನ್ನು ವಹಿಸುವ ಅವಕಾಶ ಎರಡು ಲೆಕ್ಕಪರಿಶೋಧನಾ ಸಂಸ್ಥೆಗಳಿಗೆ ದೊರಕಲಿದೆ. ಎರಡು ನಿಯಂತ್ರಣ ಸಂಸ್ಥೆಗಳ ನಡುವೆ ಔಪಚಾರಿಕ ವ್ಯವಸ್ಥೆಯಿಂದಾಗಿ ಅವುಗಳ ವ್ಯಾಪ್ತಿ ಮತ್ತು ವಿಸ್ತಾರ ವೃದ್ಧಿಯಾಗುವುದಲ್ಲದೆ, ಸಂಬಂಧಿಸಿದ ಸಮುದಾಯದ ನಡುವೆ ವ್ಯಾಪಕವಾಗಿ ಸ್ವೀಕಾರವಾಗಲಿವೆ ಹಾಗೂ ಇದರಿಂದ ವೃತ್ತಿಪರ ಅವಕಾಶಗಳು ವೃದ್ಧಿಯಾಗಲಿವೆ.

ಹಿನ್ನೆಲೆ

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಇದು ‘‘ಲೆಕ್ಕ ಪರಿಶೋಧಕರ ಕಾಯ್ದೆ 1949’’ ಅಡಿ ಸ್ಥಾಪನೆಯಾಗಿದ್ದು, ಅದು ಭಾರತದಲ್ಲಿ ಲೆಕ್ಕ ಪರಿಶೋಧಕರ ವೃತ್ತಿಯನ್ನು ನಿಯಂತ್ರಿಸುತ್ತದೆ. ಮಲೇಷ್ಯಾದ ಪ್ರಮಾಣೀಕೃತ ಸಾರ್ವಜನಿಕ ಲೆಕ್ಕಾಧಿಕಾರಿಗಳ ಸಂಸ್ಥೆ 1965 ಕಂಪನಿಗಳ ಕಾಯ್ದೆ ಅನ್ವಯ ಮಲೇಷ್ಯಾದಲ್ಲಿ ಒಂದು ಕಂಪನಿಯಾಗಿ ಸ್ಥಾಪನೆಯಾಗಿ ಕಾರ್ಯ ನಿರ್ವಹಿಸುತ್ತಿದೆ.

***


(Release ID: 1666430) Visitor Counter : 202