ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
2020-21 ಮುಂಗಾರು ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ಆಹಾರ ಧಾನ್ಯಗಳ ಖರೀದಿ ಪ್ರಕ್ರಿಯೆ
Posted On:
18 OCT 2020 4:41PM by PIB Bengaluru
ಕೇಂದ್ರ ಸರ್ಕಾರ 2020-21ನೇ ಸಾಲಿನ ಮುಂಗಾರು ಮಾರುಕಟ್ಟೆ ಹಂಗಾಮು (ಕೆಎಂಎಸ್) ಈಗಾಗಲೇ ಆರಂಭವಾಗಿದ್ದು, ದೇಶದ ಕೃಷಿಕ ಸಮುದಾಯ ಬೆಳೆದಿರುವ ಆಹಾರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಪ್ರಕ್ರಿಯೆ ಮುಂದುವರಿಸಿದೆ. ಹಿಂದಿನ ವರ್ಷಗಳಲ್ಲಿ ಸರ್ಕಾರ, ರೈತರ ಆಹಾರ ಉತ್ಪನ್ನಗಳನ್ನು ಖರೀದಿಸಿದಂತೆ ಈ ವರ್ಷವೂ ಪ್ರಕ್ರಿಯೆ ಮುಂದುವರಿಸಿದೆ.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತಮಿಳುನಾಡು, ಉತ್ತರಾಖಂಡ, ಚಂಡೀಗಢ, ಕೇರಳ ಮತ್ತು ಜಮ್ಮು-ಕಾಶ್ಮೀರ ಸೇರಿದಂತೆ ಭತ್ತವನ್ನು ಅಧಿಕವಾಗಿ ಬೆಳೆಯಲಾಗುವ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭತ್ತ ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. 17.10.2020ರ ತನಕ ಸುಮಾರು 7.38 ಲಕ್ಷ ರೈತರಿಂದ 84.46 ಮೆಟ್ರಿಕ್ ಟನ್ ಭತ್ತ ಖರೀದಿ ಮಾಡಲಾಗಿದೆ.
ಭತ್ತ (17.10.20)
ಖರೀದಿ ಪ್ರಮಾಣ(ಮೆಟ್ರಿಕ್ ಟನ್ ನಲ್ಲಿ) - 8446711
ಕನಿಷ್ಠ ಬೆಂಬಲ ಬೆಲೆ ಮೌಲ್ಯ(ಲಕ್ಷ ರೂ.ಗಳಲ್ಲಿ) - 1594739
ಪ್ರಯೋಜನ ಲಭಿಸಿರುವ ರೈತರ ಸಂಖ್ಯೆ - 738489
|

|
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಸ್ತಾವನೆ ಆಧರಿಸಿ, ಕೇಂದ್ರ ಸರ್ಕಾರವು 41.67 ಲಕ್ಷ ಮೆಟ್ರಿಕ್ ಟನ್ ಬೇಳೆಕಾಳುಗಳು ಮತ್ತು ತೈಲ (ಎಣ್ಣೆ) ಬೀಜಗಳ ಖರೀದಿಗೆ ಅನುಮತಿ ನೀಡಿದೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ ರಾಜ್ಯಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಬೇಳೆಕಾಳುಗಳು ಮತ್ತು ಎಣ್ಣೆಬೀಜಗಳ ಖರೀದಿಗೆ ಅನುಮೋದನೆ ನೀಡಿದೆ. ಜತೆಗೆ, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ 1.23 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೂ ಅನುಮತಿ ನೀಡಿದೆ. ಜತೆಗೆ, ಇತರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಸ್ತಾವನೆ ಆಧರಿಸಿ, ಕನಿಷ್ಠ ಬೆಂಬಲ ಯೋಜನೆ ಅಡಿ ಬೇಳೆಕಾಳುಗಳು, ಎಣ್ಣೆ ಬೀಜಗಳು ಮತ್ತು ಕೊಬ್ಬರಿ ಖರೀದಿಗೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 2020-21ನೇ ಸಾಲಿಗೆ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಯಂತೆ ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೋಂದಾಯಿತ ರೈತರಿಂದ ನೇರವಾಗಿ ಆಹಾರಧಾನ್ಯಗಳನ್ನು ಖರೀದಿಸಲಿವೆ.
ಕೇಂದ್ರ ಕೃಷಿ ಸಚಿವಾಲಯ ನೋಡಲ್ ಏಜೆನ್ಸಿಗಳ ಮೂಲಕ ಈವರೆಗೆ 723.79 ಮೆಟ್ರಿಕ್ ಟನ್ ಹೆಸರುಕಾಳು ಮತ್ತು ಉದ್ದಿನಬೇಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ 5.21 ಕೋಟಿ ರೂ.ಗೆ ಖರೀದಿಸಲಾಗಿದೆ. ಇದರಿಂದ ತಮಿಳುನಾಡು, ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯದ 681 ರೈತರಿಗೆ ಪ್ರಯೋಜನ ಲಭಿಸಿದೆ. ಅಂತೆಯೇ, ಕರ್ನಾಟಕ ಮತ್ತು ತಮಿಳುನಾಡಿನ 3,961 ತೆಂಗು ಬೆಳೆಗಾರರಿಂದ 52.40 ಕೋಟಿ ರೂ. ಮೊತ್ತದ 5089 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲಾಗಿದೆ. ಆದರೆ, ಕೊಬ್ಬರಿ ಮತ್ತು ಉದ್ದಿನಕಾಳು ದರಗಳು ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ಮಟ್ಟದಲ್ಲಿವೆ. ಹಾಗಾಗಿ, ಈ ಉತ್ಪನ್ನಗಳನ್ನು ಹೆಚ್ಚಾಗಿ ಬೆಳೆಯುವ ರಾಜ್ಯಗಳಲ್ಲಿ ಆಯಾ ರಾಜ್ಯಗಳು ಖರೀದಿ ಪ್ರಕ್ರಿಯೆ ಆರಂಭಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿವೆ.
ಹೆಸರುಕಾಳು ಮತ್ತು ಉದ್ದಿನಕಾಳು (17.10.2020)
ಖರೀದಿ ಪ್ರಮಾಣ (ಮೆಟ್ರಿಕ್ ಟನ್ ನಲ್ಲಿ) - 723.79
ಕನಿಷ್ಠ ಬೆಂಬಲ ಬೆಲೆ ಮೌಲ್ಯ (ಲಕ್ಷ ರೂ.ನಲ್ಲಿ) - 521
ಪ್ರಯೋಜನ ಪಡೆದ ರೈತರ ಸಂಖ್ಯೆ - 681
ಕೊಬ್ಬರಿ (17.10.2020)
ಖರೀದಿ ಪ್ರಮಾಣ(ಮೆಟ್ರಿಕ್ ಟನ್ ನಲ್ಲಿ) - 5089
ಕನಿಷ್ಠ ಬೆಂಬಲ ಬೆಲೆ ಮೌಲ್ಯ(ಲಕ್ಷ ರೂ.ನಲ್ಲಿ) - 5240
ಪ್ರಯೋಜನ ಪಡೆದ ರೈತರ ಸಂಖ್ಯೆ - 3961
ಮುಂಗಾರು ಹಂಗಾಮು ಮಾರುಕಟ್ಟೆ 2020-21ನೇ ಸಾಲಿನ ಹತ್ತಿಬೀಜ ಖರೀದಿ ಪ್ರಕ್ರಿಯೆ 2020 ಅಕ್ಟೋಬರ್ 1ರಿಂದಲೇ ಆರಂಭವಾಗಿದೆ. ಭಾರತೀಯ ಹತ್ತಿ ನಿಗಮ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ 17.10.2020ರ ತನಕ ಒಟ್ಟು 165369 ಬೇಲ್ ಹತ್ತಿಯನ್ನು 46697.86 ಲಕ್ಷ ರೂ.ಗೆ ಖರೀದಿಸಿದೆ. ಇದರಿಂದ 32,994 ಹತ್ತಿ ಬೆಳೆಗಾರರಿಗೆ ಪ್ರಯೋಜನ ಲಭಿಸಿದೆ.

|
ಹತ್ತಿ ಬೀಜಗಳು(17.10.2020)
ಖರೀದಿ ಪ್ರಮಾಣ(ಮೆಟ್ರಿಕ್ ಟನ್ ನಲ್ಲಿ) - 165369
ಕನಿಷ್ಠ ಬೆಂಬಲ ಬೆಲೆ ಮೌಲ್ಯ(ಲಕ್ಷ ರೂ.ನಲ್ಲಿ) – 46697.86
ಪ್ರಯೋಜನ ಪಡೆದ ರೈತರ ಸಂಖ್ಯೆ – 32994
|
***
(Release ID: 1665761)
Visitor Counter : 288