ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ

ಆಹಾರ ಮತ್ತು ಕೃಷಿ ಸಪ್ತಾಹ 2020 ಉದ್ಘಾಟಿಸಿದ ಶ್ರೀ ನರೇಂದ್ರ ಸಿಂಗ್ ತೋಮರ್

ದೇಶದ ಆಹಾರ ಸಂಸ್ಕರಣಾ ಉದ್ಯಮ ಭಾರತದ ಆಹಾರ ಮಾರುಕಟ್ಟೆಯ ಶೇ.32ರಷ್ಟು ಪಾಲು ಹೊಂದಿದೆ: ಶ್ರೀ ನರೇಂದ್ರ ಸಿಂಗ್ ತೋಮರ್

ಭಾರತ ಉತ್ಕೃಷ್ಟ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಹೊಂದಿದೆ: ಶ್ರೀ ನರೇಂದ್ರ ಸಿಂಗ್ ತೋಮರ್

ಪಿಎಂಎಫ್ಎಂಇ ಯೋಜನೆ ಅಡಿಯಲ್ಲಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ ಸಾಲ ಆಧಾರಿತ ಸಬ್ಸಿಡಿ

Posted On: 16 OCT 2020 3:24PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ, ಆಹಾರ ಸಂಸ್ಕರಣಾ ಉದ್ಯಮ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಇಂದಿನಿಂದ ಅಕ್ಟೋಬರ್ 22ರ ವರೆಗೆ ಆಚರಿಸಲಿರುವ ಭಾರತ – ಅಂತಾರಾಷ್ಟ್ರೀಯ ಆಹಾರ ಮತ್ತು ಕೃಷಿ ಸಪ್ತಾಹವನ್ನು ಉದ್ಘಾಟಿಸಿದರು. ಉದ್ಘಾಟನಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀ ತೋಮರ್ ಅವರು, ದೇಶದ ಆಹಾರ ಸಂಸ್ಕರಣಾ ವಲಯ ಭಾರತ ಶೇ.32ರಷ್ಟು ಆಹಾರ ಮಾರುಕಟ್ಟೆಯನ್ನು ಹೊಂದಿದೆ ಎಂದರು. ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಕೃಷಿ ಮತ್ತು ಆಹಾರ ವಲಯದಲ್ಲಿ ತಂತ್ರಜ್ಞಾನವನ್ನು ಹೆಚ್ಚು ಬಳಕೆ ಮಾಡಿಕೊಳ್ಳಲು ಕೃಷಿ ಮತ್ತು ಆಹಾರ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು. ಇದು 2022ರ ವೇಳೆಗೆ ದೇಶದ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಬೇಕೆಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಾಕಿಕೊಟ್ಟಿರುವ ಗುರಿ ಸಾಧನೆಗೆ ನೆರವಾಗಲಿದೆ ಎಂದು ಹೇಳಿದರು. 

ಕೃಷಿ ಮತ್ತು ಆಹಾರ ವಲಯದಲ್ಲಿ ಬೆಳವಣಿಗೆಯ ಅವಕಾಶಗಳ ಕುರಿತಂತೆ ಮಾತನಾಡಿದ ಶ್ರೀ ತೋಮರ್ ಅವರು, ಭಾರತದ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅತ್ಯಂತ ಉತ್ಕೃಷ್ಟವಾಗಿದೆ ಎಂದು ಹೇಳಿದರು. ಸೂಕ್ತ ಮಾರುಕಟ್ಟೆ ಮತ್ತು ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ಕೃಷಿ ವಲಯದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬಹುದಾಗಿದೆ ಮತ್ತು ಆ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಕೃಷಿಯಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.3.4ರಷ್ಟಿದೆ ಮತ್ತು ಈ ವಲಯ ಕೋವಿಡ್ ಸಂಕಷ್ಟದ ಸಮಯದಲ್ಲೂ ಭಾರತದ ಆರ್ಥಿಕ ಪ್ರಗತಿಗೆ ಭಾರೀ ಕೊಡುಗೆಯನ್ನು ನೀಡಿದೆ ಎಂದು ಹೇಳಿದರು. ಆಹಾರ ಸಂಸ್ಕರಣಾ ಸಚಿವಾಲಯದ ಆಹಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಸಂದರ್ಭದಲ್ಲಿ ‘ಅನ್ನದೇವೋ ಭವ’ ಎಂಬ ಅಭಿಯಾನವನ್ನು ಆರಂಭಿಸಿದೆ. ಆಹಾರದ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಒತ್ತು ನೀಡುವುದಲ್ಲದೆ, ಆಹಾರ ಪೋಲು ಮಾಡುವುದನ್ನು ತಗ್ಗಿಸುವತ್ತಲೂ ಗಮನಹರಿಸಬೇಕಾಗಿದೆ ಎಂದರು.             

        ಆಹಾರ ಸಂಸ್ಕರಣಾ ಉದ್ಯಮ ಸಚಿವಾಲಯದ ಕ್ರಮಗಳ ಬಗ್ಗೆ ವಿವರಿಸಿದ ಅವರು, ಆತ್ಮನಿರ್ಭರ ಭಾರತ ಅಭಿಯಾನದಡಿ ಎಂಒಎಫ್ ಪಿಐ, ಪಿಎಂಎಫ್ಎಂಇ(ಪಿಎಂ- ಸಣ್ಣ ಆಹಾರ ಸಂಸ್ಕರಣಾ ಉದ್ಯಮ ದೃಢೀಕರಣ) ಯೋಜನೆಯನ್ನು ಸುಮಾರು 20,000 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ ಎಂದರು. ಈ ಯೋಜನೆ ಅಡಿ ಸುಮಾರು 2 ಲಕ್ಷ ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ ಸಾಲ ಆಧಾರಿತ ಸಬ್ಸಿಡಿ ಮೂಲಕ ನೆರವು ನೀಡಲಾಗುವುದು ಮತ್ತು ಅದರಡಿ ಸ್ವಸಹಾಯ ಗುಂಪುಗಳು, ರೈತರ ಉತ್ಪನ್ನ ಸಂಸ್ಥೆಗಳು ಮತ್ತು ಗುಡಿ ಕೈಗಾರಿಕೆಗಳನ್ನು ಬೆಂಬಲಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಎಂಒಎಫ್ ಪಿಐ ವಾಣಿಜ್ಯ ಸಚಿವಾಲಯದ ಜೊತೆ ಸೇರಿ, ಸೇವಿಸಲು ಸಿದ್ಧವಾದ ಆಹಾರ ಮತ್ತು ಹಣ್ಣುಗಳು ಹಾಗೂ ತರಕಾರಿಗಳ ಪಟ್ಟಿಯನ್ನು ರಫ್ತು ಮಾರುಕಟ್ಟೆಗಾಗಿ ಸಿದ್ಧಪಡಿಸಿದೆ. ಸರ್ಕಾರ ಆಹಾರ ಉತ್ಪನ್ನಗಳನ್ನು ಬ್ರ್ಯಾಂಡಿಂಗ್ ಮಾಡುವತ್ತ ಮತ್ತು ಮಾರುಕಟ್ಟೆ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಕ್ರಮವನ್ನು ಕೈಗೊಂಡಿದೆ ಎಂದರು.  

       ಆಹಾರ ಸಂಸ್ಕರಣಾ ಉದ್ಯಮ ಸಚಿವಾಲಯ, ಪಿಎಂ ಕಿಸಾನ್ ಸಂಪದ ಯೋಜನೆಯನ್ನು ಆರಂಭಿಸಿದ್ದು, ಅದರಡಿ ತೋಟಗಳಿಂದ ಚಿಲ್ಲರೆ ಮಳಿಗೆಗಳಿಗೆ ಪರಿಣಾಮಕಾರಿ ಪೂರೈಕೆ ಸರಣಿ ನಿರ್ವಹಣೆಗೆ ಆಧುನಿಕ ಮೂಲಸೌಕರ್ಯಗಳನ್ನು ಸೃಷ್ಟಿಸಲಾಗುವುದು ಎಂದು ಶ್ರೀ ತೋಮರ್ ಹೇಳಿದರು. ಎಂ ಎಫ್ ಪಿ ಯೋಜನೆ, ಪಿಎಂಕೆಎಸ್ ವೈ ಯೋಜನೆಯ ಒಂದು ಪ್ರಮುಖ ಭಾಗವಾಗಿದ್ದು, ಅದರ ಉದ್ದೇಶ ಕೃಷಿ ಉತ್ಪನ್ನವನ್ನು ಮಾರುಕಟ್ಟೆ ಜೊತೆ ಸಂಯೋಜಿಸುವುದು ರೈತರು, ಸಂಸ್ಕರಣಾಗಾರರು ಮತ್ತು ಚಿಲ್ಲರೆ ಮಾರಾಟಗಾರರನ್ನು ಒಂದೆಡೆ ಸೇರಿಸುವುದಾಗಿದೆ. ಪ್ರಸ್ತುತ 37 ಎಂಎಫ್ ಪಿ ಗಳಿಗೆ ಅನುಮೋದನೆ ನೀಡಲಾಗಿದೆ. ಆ ಪೈಕಿ 20 ಕಾರ್ಯಾರಂಭ ಮಾಡಿವೆ. ಸಚಿವಾಲಯ ಗ್ರೀನ್ಸ್ ಯೋಜನೆಯ ಕಾರ್ಯಾಚರಣೆಯಡಿ ಟಿಒಪಿಯಿಂದ ಟೋಟಲ್ ವರೆಗೆ ವಿಸ್ತರಣೆಯನ್ನು ಮಾಡಿದೆ. ಈ ಯೋಜನೆ ಅಡಿ ಸಚಿವಾಲಯ ಅರ್ಹ ಬೆಳೆಗಳ ಸಾಗಾಣೆಗೆ ಶೇ.50ರಷ್ಟು ಸಬ್ಸಿಡಿಗಳನ್ನು ಪಡೆದುಕೊಳ್ಳಲಿದೆ. ಅಲ್ಲದೆ ಆರು ತಿಂಗಳವರೆಗೆ ಬಳಕೆ ಕೇಂದ್ರದಿಂದ ಹೆಚ್ಚುವರಿ ಉತ್ಪಾದನಾ ಕ್ಲಸ್ಟರ್ ಗೆ ಪೂರೈಸಲಾಗುವುದು ಅಥವಾ ಅರ್ಹ ಬೆಳೆಗಳಿಗೆ(ಗರಿಷ್ಠ ಮೂರು ತಿಂಗಳ ಅವಧಿಗೆ) ಸೂಕ್ತ ದಾಸ್ತಾನು ಸೌಕರ್ಯ ಬಾಡಿಗೆ ನೀಡಲಾಗುವುದು.

  14ನೇ ಆವೃತ್ತಿಯ ಕೃಷಿ ಮತ್ತು ಫುಡ್ ಟೆಕ್ ಉದ್ದೇಶಿಸಿ ಮಾತನಾಡಿದ ಶ್ರೀ ತೋಮರ್ ಅವರು, ಕೃಷಿ ಮತ್ತು ಅದರ ಸಂಬಂಧಿ ವಲಯಗಳಲ್ಲಿ ಲಭ್ಯವಿರುವ ಉತ್ಪನ್ನಗಳು, ಸೇವೆಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಇದೊಂದು ಸೂಕ್ತ ವೇದಿಕೆಯಾಗಿದೆ ಎಂದರು. ಪ್ರಸ್ತುತ ಎಲ್ಲ ಭಾಗಿದಾರರು ಇತ್ತೀಚಿನ ತಂತ್ರಜ್ಞಾನಗಳು, ಪರಿಹಾರಗಳಿಂದ ಲಾಭ ಮಾಡಿಕೊಳ್ಳಬೇಕು, ಅದರಿಂದ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿವೆ ಎಂದರು.    

ಸಿಐಐ, ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಮೀನುಗಾರಿಕೆ ಮತ್ತು ಪಶುಸಂಗೋಪನಾ ಸಚಿವಾಲಯ ಹಾಗೂ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ ಮೊದಲ ವರ್ಚುವಲ್ ಸಿಐಐ ಆಗ್ರೋ ಮತ್ತು ಫುಡ್ ಟೆಕ್: ಭಾರತ ಅಂತಾರಾಷ್ಟ್ರೀಯ ಆಹಾರ ಮತ್ತು ಕೃಷಿ ಸಪ್ತಾಹವನ್ನು ಇಂದಿನಿಂದ ಅಕ್ಟೋಬರ್ 22ರ ವರೆಗೆ ಹಮ್ಮಿಕೊಂಡಿದೆ. ಕೃಷಿ ಮತ್ತು ಅದರ ಸಂಬಂಧಿ ವಲಯಗಳಲ್ಲಿ ಭಾಗಿದಾರರಿಗೆ ಅನುಕೂಲ ಒದಗಿಸಿ ಕೊಡುವ ದೃಷ್ಟಿಯಿಂದ ಈ ವರ್ಚುವಲ್ ವೇದಿಕೆಯನ್ನು ಸೃಷ್ಟಿಸಲಾಗಿದೆ. ಸಿಐಐ ಅಧ್ಯಕ್ಷ ಶ್ರೀ ಉದಯ್ ಕೊಟಕ್ ಮತ್ತು ಸಿಐಐ ಉತ್ತರ ಭಾಗದ ಅಧ್ಯಕ್ಷ ಶ್ರೀ ನಿಕಿಲ್ ಸಾಹ್ನಿ ಈ ಸಂದರ್ಭದಲ್ಲಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

***



(Release ID: 1665553) Visitor Counter : 193