ಪ್ರಧಾನ ಮಂತ್ರಿಯವರ ಕಛೇರಿ

ಎನ್‌ಎಸ್‌ಜಿ ಸಂಸ್ಥಾಪನಾ ದಿನದ ಅಂಗವಾಗಿ ಸಿಬ್ಬಂದಿಗೆ ಶುಭ ಕೋರಿದ ಪ್ರಧಾನಿ ನರೆಂದ್ರ ಮೋದಿ

प्रविष्टि तिथि: 16 OCT 2020 10:19AM by PIB Bengaluru

ಎನ್ಎಸ್ಜಿ ಸಂಸ್ಥಾಪನಾ ದಿನದ ಅಂಗವಾಗಿ ಎನ್ಎಸ್ಜಿ ಬ್ಲ್ಯಾಕ್ ಕ್ಯಾಟ್ಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಶುಭ ಕೋರಿದ್ದಾರೆ.

"ಎನ್ಎಸ್ಜಿ ಸಂಸ್ಥಾಪನಾ ದಿನದಂದು, ಎನ್ಎಸ್ಜಿ ಬ್ಲ್ಯಾಕ್ ಕ್ಯಾಟ್ಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ಭಾರತದ ಭದ್ರತೆಯಲ್ಲಿ ಎನ್ಎಸ್ಜಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದು ಅತ್ಯಂತ ಧೈರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ. ಭಾರತವನ್ನು ಕ್ಷೇಮವಾಗಿ ಮತ್ತು ಸುರಕ್ಷಿತವಾಗಿಡಲು ಎನ್ಎಸ್ಜಿ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಭಾರತ ಹೆಮ್ಮೆಪಡುತ್ತದೆ", ಎಂದು ಪ್ರಧಾನಿ ಹೇಳಿದ್ದಾರೆ.

***


(रिलीज़ आईडी: 1665133) आगंतुक पटल : 200
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam