ಹಣಕಾಸು ಸಚಿವಾಲಯ
ಜಿ ಎಸ್ ಟಿ ಪರಿಹಾರ ಸೆಸ್ ಕೊರತೆ ನೀಗಿಸಿಕೊಳ್ಳಲು ರಾಜ್ಯಗಳಿಗೆ ವಿಶೇಷ ಅವಕಾಶ
Posted On:
15 OCT 2020 6:05PM by PIB Bengaluru
ಆಯ್ಕೆ-1ರ ಅಡಿಯಲ್ಲಿ ರಾಜ್ಯಗಳಿಗೆ 1.1 ಲಕ್ಷ ಕೋಟಿ ರೂ.ಗಳವರೆಗೆ ಸಾಲ ಪಡೆಯಲು ವಿಶೇಷ ಅವಕಾಶವನ್ನು ನೀಡಲಾಗಿದೆ. ಈ ಮೊತ್ತ ಅದು ಅಥವಾ ಜಿಎಸ್ ಡಿಪಿಯ ಶೇ.0.5ರಷ್ಟು ಹೆಚ್ಚುವರಿಯಾಗಿ ಮುಕ್ತ ಮಾರುಕಟ್ಟೆಯಿಂದ ಸಾಲವನ್ನು ಪಡೆಯಲು ಅನುಮೋದನೆ ನೀಡಲಾಗಿದೆ. ಹಣಕಾಸು ಸಚಿವಾಲಯ ಅಕ್ಟೋಬರ್ 13ರಂದು ಪ್ರಕಟಿಸಿರುವ ಆದೇಶದಲ್ಲಿ ಜಿಎಸ್ ಡಿಪಿಯ ಶೇ.0.5ರಷ್ಟನ್ನು ಒಎಂಬಿಗೆ ಹೆಚ್ಚಳ ಮಾಡಿ, ಅನುಮತಿಸಲಾಗಿದೆ ಮತ್ತು ಅರ್ಹತೆಗೆ ನಿಗದಿಪಡಿಸಲಾಗಿದ್ದ ಕೆಲವು ಸುಧಾರಣಾ ಷರತ್ತುಗಳಿಂದ ವಿನಾಯಿತಿ ನೀಡಲಾಗಿದೆ. ಹೆಚ್ಚುವರಿಯಾಗಿ ಆಯ್ಕೆ-1 ರಲ್ಲಿ ರಾಜ್ಯಗಳು ತಾವು ಬಳಕೆ ಮಾಡಲಿರುವ ಸಾಲದ ಮಿತಿಯನ್ನು ಮುಂದಿನ ಹಣಕಾಸು ವರ್ಷಕ್ಕೆ ಮುಂದುವರಿಸಿಕೊಂಡು ಹೋಗಲು ಅರ್ಹತೆ ನೀಡಲಾಗಿದೆ.
ಈ ವಿಶೇಷ ಅವಕಾಶ ಯೋಜನೆಯಡಿ ಅಂದಾಜು 1.1 ಲಕ್ಷ ಕೋಟಿ ಕೊರತೆ(ಎಲ್ಲಾ ರಾಜ್ಯಗಳು ಒಗ್ಗೂಡಲಿವೆ ಎಂದು ಅಂದಾಜಿಸಿ) ಎದುರಾಗಲಿದ್ದು, ಭಾರತ ಸರ್ಕಾರ ಸೂಕ್ತ ರೀತಿಯಲ್ಲಿ ಕಂತುಗಳಲ್ಲಿ ಸಾಲವನ್ನು ಪಡೆಯಲಿದೆ.
ಸಾಲ ಪಡೆದ ಮೊತ್ತವನ್ನು ರಾಜ್ಯಗಳಿಗೆ ಜಿಎಸ್ ಟಿ ಪರಿಹಾರ ಸೆಸ್ ಬಿಡುಗಡೆಗೆ ಅನುಗುಣವಾಗಿ ಒಂದರ ಹಿಂದೆ ಒಂದು ಸಾಲದ ರೂಪದಲ್ಲಿ ವರ್ಗಾಯಿಸಲಾಗುವುದು.
ಇದರಿಂದಾಗಿ ಭಾರತ ಸರ್ಕಾರದ ವಿತ್ತೀಯ ಕೊರತೆ ಮೇಲೆ ಯಾವುದೇ ರೀತಿಯ ಪರಿಣಾಮಗಳಾಗುವುದಿಲ್ಲ. ಈ ಮೊತ್ತವನ್ನು ರಾಜ್ಯ ಸರ್ಕಾರಗಳ ಬಂಡವಾಳ ಸ್ವೀಕೃತಿ ಹೆಸರಿನಲ್ಲಿ ಲೆಕ್ಕದಲ್ಲಿ ಪ್ರತಿಫಲನಗೊಳ್ಳಲಿದೆ ಮತ್ತು ಅದು ಆಯಾ ರಾಜ್ಯಗಳ ವಿತ್ತೀಯ ಕೊರತೆಗಳನ್ನು ನೀಗಿಸಲು ಆರ್ಥಿಕ ನೆರವು ನೀಡುವ ಭಾಗವಾಗಲಿದೆ.
ಇದರಿಂದಾಗಿ ಬಡ್ಡಿ ದರದಲ್ಲಿ ವ್ಯತ್ಯಾಸಗಳಾಗುವುದು ತಪ್ಪಲಿದೆ. ರಾಜ್ಯಗಳು ವೈಯಕ್ತಿಕವಾಗಿ ತಮ್ಮ ಎಸ್ ಡಿ ಎಲ್ ಗಳಿಗೆ ಅನುಗುಣವಾಗಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಹಾಗೂ ಆಡಳಿತಾತ್ಮಕವಾಗಿ ಇದೊಂದು ಸುಲಭದ ವ್ಯವಸ್ಥೆಯಾಗಲಿದೆ.
ಈ ಕ್ರಮದಿಂದಾಗಿ ಸರ್ಕಾರಗಳ (ರಾಜ್ಯಗಳು ಮತ್ತು ಕೇಂದ್ರ ಸರ್ಕಾರ) ಸಾಮಾನ್ಯ ಸಾಲಗಳು ಹೆಚ್ಚಾಗುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ವಿಶೇಷ ಅವಕಾಶದಡಿ ಪ್ರಯೋಜನ ಪಡೆಯುವ ರಾಜ್ಯಗಳು ಆತ್ಮನಿರ್ಭರ ಪ್ಯಾಕೇಜ್ ಅಡಿಯಲ್ಲಿ ಜಿಎಸ್ ಡಿಪಿಯ ಶೇ.2ರಷ್ಟು ಹೆಚ್ಚುವರಿ(ಶೇ.3 ರಿಂದ ಶೇ.5ಕ್ಕೆ ಹೆಚ್ಚಳ) ಸಾಲ ಪಡೆಯಲು ಅವಕಾಶವಿದ್ದರೂ ಸಹ ರಾಜ್ಯಗಳು ಕಡಿಮೆ ಮೊತ್ತದ ಸಾಲವನ್ನು ಪಡೆಯುವ ನಿರೀಕ್ಷೆ ಇದೆ.
***
(Release ID: 1665067)
Visitor Counter : 245