ಪ್ರಧಾನ ಮಂತ್ರಿಯವರ ಕಛೇರಿ

ವೆಸ್ತಾಸ್ ಅಧ್ಯಕ್ಷ ಹಾಗೂ ಸಿಇಓ ಜೊತೆ ಪ್ರಧಾನಮಂತ್ರಿ ಸಂವಾದ

Posted On: 06 OCT 2020 4:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವೆಸ್ತಾಸ್ ಅಧ್ಯಕ್ಷ ಮತ್ತು ಸಿಇಓ ಶ್ರೀ ಹೆನ್ರಿಕ್ ಆಂಡರ್ಸನ್ ಅವರೊಂದಿಗೆ ಪವನ ವಿದ್ಯುತ್ ವಲಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸಂವಾದ ನಡೆಸಿದರು.

ವೆಸ್ತಾಸ್ ಅಧ್ಯಕ್ಷ ಮತ್ತು ಸಿಇಓ ಶ್ರೀ ಹೆನ್ರಿಕ್ ಆಂಡರ್ಸನ್ ಅವರೊಂದಿಗೆ ಒಳನೋಟ ಬೀರುವಂಥ ಮಾತುಕತೆ ನೆಡಸಿದ್ದೇನೆ. ಪವನ ಇಂಧನ ವಲಯಕ್ಕೆ ಸಂಬಂಧಿಸಿದ ಸರಣಿ ವಿಚಾರಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಮುಂದಿನ ಪೀಳಿಗೆಗೆ ಸ್ವಚ್ಛ ಭವಿಷ್ಯವನ್ನು ರೂಪಿಸುವ ಸಲುವಾಗಿ ನವೀಕರಿಸಬಹುದಾದ ಇಂಧನವನ್ನು ಬಳಸಿಕೊಳ್ಳಲು ಭಾರತದ ಕೆಲವು ಪ್ರಯತ್ನಗಳ ಬಗ್ಗೆ ಒತ್ತಿ ಹೇಳಿದ್ದೇನೆ.” ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.

***(Release ID: 1662060) Visitor Counter : 15