ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಶೈಕ್ಷಣಿಕ ಸಾಮಗ್ರಿಗಳನ್ನು ಭಾರತೀಯ ಸಂಜ್ಞಾ ಭಾಷೆಗೆ ಪರಿವರ್ತಿಸಲು ಐ.ಎಸ್.ಎಲ್.ಆರ್.ಟಿ.ಸಿ. ಮತ್ತು ಎನ್.ಸಿ.ಇ.ಆರ್.ಟಿ. ನಡುವೆ ಐತಿಹಾಸಿಕ ತಿಳಿವಳಿಕೆ ಒಪ್ಪಂದಕ್ಕೆ ನಾಳೆ ಅಂಕಿತ


Posted On: 05 OCT 2020 6:28PM by PIB Bengaluru

ಶ್ರವಣ ವಿಶೇಷ ಚೇತನ ಮಕ್ಕಳಿಗೆ ಅವರ ಆದ್ಯತೆಯ ಸಂವಹನ ಸ್ವರೂಪದಲ್ಲಿ ಅಂದರೆ ಭಾರತೀಯ ಸಂಜ್ಞಾ ಭಾಷೆಯಲ್ಲಿ ಶೈಕ್ಷಣಿಕ ಸಾಮಗ್ರಿಗಳ ಲಭ್ಯತೆಗಾಗಿ  ಭಾರತೀಯ ಸಂಜ್ಞಾ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರ- ಐಎಸ್‌.ಎಲ್‌.ಆರ್‌.ಟಿಸಿ (ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಡಿಇಪಿಡಬ್ಲ್ಯುಡಿಯ ರಾಷ್ಟ್ರೀಯ ಸಂಸ್ಥೆ) ಮತ್ತು ಎನ್‌.ಸಿಇಆರ್.ಟಿ (ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಸಂಸ್ಥೆ) ನಡುವೆ ಐತಿಹಾಸಿಕ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಈ ತಿಳಿವಳಿಕೆ ಒಪ್ಪಂದಕ್ಕೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ಥಾವರ್ ಚಂದ್ ಗೆಹ್ಲೋಟ್;  ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರ ವರ್ಚುವಲ್ ಉಪಸ್ಥಿತಿಯಲ್ಲಿ  ಆಯಾ ಸಂಸ್ಥೆಗಳ ಪರವಾಗಿ ಡಿಇಪಿಡ್ಬ್ಲುಡಿ ಕಾರ್ಯದರ್ಶಿ ಶ್ರೀಮತಿ ಶಕುಂತಲಾ ಡೋಲಿ ಜಮ್ಲಿನ್ ಮತ್ತು ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ (ಎಸ್.ಇ. ಮತ್ತು ಎಲ್) ಅನಿತಾ ಕರ್ವಾಲ್, ಡಿಇಪಿಡಬ್ಲ್ಯುಡಿಯ ಜಂಟಿ ಕಾರ್ಯದರ್ಶಿ ಮತ್ತು ಐ.ಎಸ್.ಎಲ್.ಆರ್.ಟಿ.ಸಿ.ಯ ನಿರ್ದೇಶಕ  ಡಾ. ಪ್ರಬೋಧ್ ಸೇಠ್, ಹಾಗೂ ಎನ್.ಸಿ.ಇ.ಆರ್.ಟಿ.ಯ ನಿರ್ದೇಶಕ ಪ್ರೊ. ಹೃಷಿಕೇಶ್ ಸೇನಾಪತಿ ಅವರು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಈ ತಿಳಿವಳಿಕೆ ಒಪ್ಪಂದದ ಭಾಗವಾಗಿ, ಶೈಕ್ಷಿಕ ಮುದ್ರಿತ ಸಾಮಗ್ರಿಗಳು ಅಂದರೆ ಎನ್.ಸಿ.ಇ.ಆರ್.ಟಿ. ಪಠ್ಯಪುಸ್ತಕಗಳು, ಶಿಕ್ಷಕರ ಕೈಪಿಡಿ ಮತ್ತು ಇತರ ಪೂರಕ ಸಾಮಗ್ರಿಗಳು ಮತ್ತು ತರಗತಿ 1ರಿಂದ 12ನೇ ತರಗತಿವರೆಗಿನ ಎಲ್ಲ ವಿಷಯಗಳ ಹಿಂದಿ ಮತ್ತು ಇಂಗ್ಲಿಷ್  ಸಂಪನ್ಮೂಲಗಳನ್ನು ಭಾರತೀಯ ಸಂಜ್ಞಾ ಭಾಷೆಗೆ ಡಿಜಿಟಲ್ ಐತಿಹಾಸಿಕ ಹೆಜ್ಜೆಯಾಗಿದೆ. ಭಾರತೀಯ ಸಂಜ್ಞಾ ಭಾಷೆಯಲ್ಲಿ ಎನ್‌.ಸಿಇಆರ್‌.ಟಿ ಪಠ್ಯಪುಸ್ತಕಗಳ ಲಭ್ಯತೆಯು ಒಂದು ಐತಿಹಾಸಿಕ ಹೆಜ್ಜೆಯಾಗಿದ್ದು, ಈಗ ಶ್ರವಣ ವಿಶೇಷ ಚೇತನ ಮಕ್ಕಳಿಗೆ ಭಾರತೀಯ ಸಂಜ್ಞಾ ಭಾಷೆಯಲ್ಲಿ ಶೈಕ್ಷಣಿಕ ಸಂಪನ್ಮೂಲಗಳ ಪ್ರವೇಶ ಖಚಿತಪಡಿಸುತ್ತದೆ ಮತ್ತು ಇದು ಶ್ರವಣ ವಿಶೇಷ ಚೇತನ ಮಕ್ಕಳಿಗೆ, ಬೋಧಕರಿಗೆ, ಶಿಕ್ಷಕರಿಗೆ ಉಪಯುಕ್ತ ಮತ್ತು ಹೆಚ್ಚು ಅಗತ್ಯವಿರುವ ಸಂಪನ್ಮೂಲವಾಗಿದೆ. ಶಿಕ್ಷಣತಜ್ಞರು, ಪೋಷಕರು ಮತ್ತು ಶ್ರವಣ ವಿಶೇಷ ಚೇತನ ಸಮುದಾಯ, ದೇಶದ ಶ್ರವಣ ವಿಶೇಷ ಚೇತನ ಮಕ್ಕಳ ಶಿಕ್ಷಣದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಇದು ನೂತನ ಶಿಕ್ಷಣ ನೀತಿ (ಎನ್.ಇ.ಪಿ.) 2020ಯಲ್ಲಿ ಉಲ್ಲೇಖಿಸಿರುವಂತೆ ಭಾರತೀಯ ಸಂಜ್ಞಾ ಭಾಷೆಯಲ್ಲಿ ಶಿಕ್ಷಣದ ಗುಣಮಟ್ಟವನ್ನೂ ಖಾತ್ರಿ ಪಡಿಸುತ್ತದೆ.
ಭಾರತೀಯ ಸಂಜ್ಞಾ ಭಾಷೆ ಸಂಶೋಧನೆ ಮತ್ತು ತರಬೇತಿ ಕೇಂದ್ರವು (ಐ.ಎಸ್.ಎಲ್.ಆರ್.ಟಿ.ಸಿ.) ಎಂ.ಎಸ್.ಜೆಇಯ ಡಿಇಪಿಡ್ಲ್ಯುಡಿಯ ಒಂದು ಸ್ವಾಯತ್ತ ರಾಷ್ಟ್ರೀಯ ಸಂಸ್ಥೆಯಾಗಿದ್ದು, ಭಾರತೀಯ ಸಂಜ್ಞಾ ಭಾಷೆಯನ್ನು ಜನಪ್ರಿಯಗೊಳಿಸಲು ಮಾನವಶಕ್ತಿಯ ಅಭಿವೃದ್ಧಿ, ಬೋಧನೆ ಮತ್ತು ಭಆರತೀಯ ಸಂಜ್ಞಾ ಭಾಷೆಯಲ್ಲಿ ಸಂಸೋಧನೆ ನಡೆಸುವುದಕ್ಕೆ ಸಮರ್ಪಿತವಾಗಿದೆ. 
ಎನ್.ಸಿ.ಇ.ಆರ್.ಟಿ., ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯ ಸ್ವಾಯತ್ತ ಸಂಸ್ಥೆಯಾಗಿದ್ದು, ಶಾಲಾ ಶಿಕ್ಷಣದಲ್ಲಿ ಗುಣಾತ್ಮಕ ಸುಧಾರಣೆಯ ಖಾತ್ರಿಯ ಜವಾಬ್ದಾರಿಯನ್ನು ನಿರ್ವಹಿಸುತ್ತದೆ ಮತ್ತು ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆ ಪ್ರೋತ್ಸಾಹಿಸುತ್ತದೆ. ಮಾದರಿ ಪಠ್ಯಪುಸ್ತಕಗಳು, ಪೂರಕ ಸಾಮಗ್ರಿಗಳು, ಸುದ್ದಿಪತ್ರಗಳು, ನಿಯತಕಾಲಿಕಗಳನ್ನು ತಯಾರಿಸಿ ಪ್ರಕಟಿಸಿ ಮತ್ತು ಶೈಕ್ಷಣಿಕ ಕಿಟ್‌ ಗಳು, ಬಹು ಮಾಧ್ಯಮ ಡಿಜಿಟಲ್ ವಸ್ತುಗಳು ಇತ್ಯಾದಿಗಳನ್ನು ಅಭಿವೃದ್ಧಿಪಡಿಸುತ್ತದೆ. ನವೀನ ಶೈಕ್ಷಣಿಕ ತಂತ್ರಗಳು ಮತ್ತು ಅಭ್ಯಾಸಗಳನ್ನು ಅಭಿವೃದ್ಧಿಪಡಿಸಿ ಮತ್ತು ಪ್ರಸಾರ ಮಾಡುತ್ತದೆ ಮತ್ತು ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕೀಕರಣದ ಗುರಿಗಳನ್ನು ಸಾಧಿಸಲು ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.


***



(Release ID: 1661832) Visitor Counter : 120