ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
ಕೋವಿಡ್-19 ನಂತರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬದಲಾವಣೆ
Posted On:
18 SEP 2020 12:39PM by PIB Bengaluru
ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್ಎಸ್ಡಿಸಿ)ದ ಮೂಲಕ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು (ಎಂಎಸ್ಡಿಇ) ಕೋವಿಡ್-19 ಲಾಕ್ಡೌನ್ ಮಧ್ಯೆ ‘ಇ-ಸ್ಕಿಲ್ ಇಂಡಿಯಾ’ಪ್ಲಾಟ್ಫಾರ್ಮ್ ಮೂಲಕ ಆನ್ಲೈನ್ ಕೌಶಲ್ಯವನ್ನು ನೀಡುತ್ತಿದೆ. 2020 ರ ಸೆಪ್ಟೆಂಬರ್ 21 ರಿಂದ ಕೌಶಲ್ಯ ತರಬೇತಿ ಕಾರ್ಯಕ್ರಮಗಳ ತರಗತಿಗಳನ್ನು ನಡೆಸಲು ಗೃಹ ಸಚಿವಾಲಯ ಅನುಮತಿ ನೀಡಿದೆ. ಅದರಂತೆ, ತರಬೇತಿಯನ್ನು ಪುನರಾರಂಭಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್.ಓ.ಪಿ) ಗಳನ್ನು ನೀಡಿದೆ.
ಪಿಎಂಕೆವಿವೈ ಅಡಿಯಲ್ಲಿ, 17.03.2020 ರಂತೆ, ಅಲ್ಪಾವಧಿಯ ತರಬೇತಿ (ಎಸ್ಟಿಟಿ) ಕೋರ್ಸ್ಗಳ ಅಡಿಯಲ್ಲಿ ಕ್ರಮವಾಗಿ 42.02 ಲಕ್ಷ ಮತ್ತು 33.66 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ಮತ್ತು ಪ್ರಮಾಣ ಪತ್ರಗಳನ್ನು ಕೊಡಲಾಗಿದೆ. ಈ ಪ್ರಮಾಣೀಕೃತ ಅಭ್ಯರ್ಥಿಗಳ ಪೈಕಿ 17.54 ಲಕ್ಷ ಅಭ್ಯರ್ಥಿಗಳನ್ನು ನಿಯೋಜಿಸಲಾಯಿತು. ಅಲ್ಲದೆ, ಈಗಾಗಲೇ ಅನೌಪಚಾರಿಕ ಕೌಶಲ್ಯಗಳನ್ನು ಹೊಂದಿರುವ ಆದರೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿನ ಬದಲಾವಣೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್ಎಸ್ಡಿಸಿ) ಮೂಲಕ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು (ಎಂಎಸ್ಡಿಇ) ಕೋವಿಡ್-19 ಲಾಕ್ಡೌನ್ ಮಧ್ಯೆ ‘ಇ-ಸ್ಕಿಲ್ ಇಂಡಿಯಾ’ ಪ್ಲಾಟ್ಫಾರ್ಮ್ ಮೂಲಕ ಆನ್ಲೈನ್ ಕೌಶಲ್ಯದ ತರಬೇತಿ ನೀಡುತ್ತಿದೆ. ಇದಲ್ಲದೆ, 2020 ರ ಸೆಪ್ಟೆಂಬರ್ 21 ರಿಂದ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಗೃಹ ಸಚಿವಾಲಯ ಅನುಮತಿ ನೀಡಿದೆ. ಅದರಂತೆ, ತರಬೇತಿಯನ್ನು ಪುನರಾರಂಭಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್.ಓ.ಪಿ ಗಳನ್ನು ನೀಡಿದೆ.
ಪಿಎಂಕೆವಿವೈ ಅಡಿಯಲ್ಲಿ, 17.03.2020 ರಂತೆ, ಅಲ್ಪಾವಧಿಯ ತರಬೇತಿ (ಎಸ್ಟಿಟಿ) ಕೋರ್ಸ್ಗಳ ಅಡಿಯಲ್ಲಿ ಕ್ರಮವಾಗಿ 42.02 ಲಕ್ಷ ಮತ್ತು 33.66 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಈ ಪ್ರಮಾಣೀಕೃತ ಅಭ್ಯರ್ಥಿಗಳ ಪೈಕಿ 17.54 ಲಕ್ಷ ಅಭ್ಯರ್ಥಿಗಳನ್ನು ನಿಯೋಜನೆ ನೀಡಲಾಗಿದೆ. ಅಲ್ಲದೆ, ಈಗಾಗಲೇ ಅನೌಪಚಾರಿಕ ಕೌಶಲ್ಯಗಳನ್ನು ಹೊಂದಿರುವ ಆದರೆ ಔಪಚಾರಿಕವಾಗಿ ಪ್ರಮಾಣೀಕರಿಸದ 49.12 ಲಕ್ಷ ಅಭ್ಯರ್ಥಿಗಳು ಯೋಜನೆಯ ಗುರುತಿಸುವಿಕೆ ಪೂರ್ವ ಕಲಿಕೆ (ಆರ್ಪಿಎಲ್) ಘಟಕದ ಅಡಿಯಲ್ಲಿ ತರಬೇತಿ ನೀಡಲಾಗಿದೆ.
ಪ್ರಮಾಣೀಕೃತ ಅಭ್ಯರ್ಥಿಗಳ ಸ್ಥಾನವನ್ನು ಹೆಚ್ಚಿಸಲು ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲವು ಪ್ರಮುಖ ಉಪಕ್ರಮಗಳು ಹೀಗಿವೆ:
- ತರಬೇತಿ ನೀಡುವವರು / ತರಬೇತಿ ಕೇಂದ್ರಗಳು (ಟಿಪಿಗಳು / ಟಿಸಿಗಳು) ವಲಯ ಕೌಶಲ್ಯ ಮಂಡಳಿಗಳ ಬೆಂಬಲದೊಂದಿಗೆ ಉದ್ಯೋಗ ಮೇಳಗಳನ್ನು ಆಯೋಜಿಸಬೇಕು;
- ಟಿಪಿಗಳು/ ಟಿಸಿಗಳಿಗೆ ಪಾವತಿಸುವ ಕೊನೆಯ ಅವಧಿ (ಅಂದರೆ ಒಟ್ಟು ತರಬೇತಿ ನಿಧಿಯ 20%) ಪ್ರಮಾಣೀಕೃತ ಅಭ್ಯರ್ಥಿಗಳ ನಿಯೋಜನೆಯನ್ನು ಆಧರಿಸಿದೆ;
- ಅಭ್ಯರ್ಥಿಗಳನ್ನು ಕನಿಷ್ಠ ಅಗತ್ಯ ಮಟ್ಟಕ್ಕಿಂತ ಮೇಲಿರಿಸಲು ಟಿಪಿಗಳು / ಟಿಸಿಗಳಿಗೆ ಹೆಚ್ಚುವರಿ ಪ್ರೋತ್ಸಾಹ ನೀಡಲಾಗುತ್ತದೆ;
- ಟಿಪಿಗಳು / ಟಿಸಿಗಳಿಗೆ ಹೊಸ ಗುರಿಗಳ ಹಂಚಿಕೆ ಅವುಗಳ ನಿಯೋಜನೆ ಕಾರ್ಯಕ್ಷಮತೆಯನ್ನು ಆಧರಿಸಿದೆ.
ಈ ಮಾಹಿತಿಯನ್ನು ರಾಜ್ಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಶ್ರೀ ಆರ್.ಕೆ. ಸಿಂಗ್ ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.
***
(Release ID: 1656340)
Visitor Counter : 160