ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಇ-ವಾಣಿಜ್ಯ ವಹಿವಾಟಿನ ಮೇಲೆ ಕೋವಿಡ್-19 ಪರಿಣಾಮ
Posted On:
18 SEP 2020 3:09PM by PIB Bengaluru
ಅಂತರವನ್ನು ಕಾಯ್ದುಕೊಳ್ಳಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಕಾಲ ಕಾಲಕ್ಕೆ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಹಲವು ಬಗೆಯ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಈ ಅವಧಿಯಲ್ಲಿ ಆಹಾರ, ಫಾರ್ಮಸುಟಿಕಲ್ಸ್, ವೈದ್ಯಕೀಯ ಉಪಕರಣ ಸೇರಿ ಅತ್ಯವಶ್ಯಕ ವಸ್ತುಗಳನ್ನು ಇ-ವ್ಯಾಪಾರದ ರೂಪದಲ್ಲಿ ಉತ್ತೇಜಿಸಲಾಯಿತು. ಸದ್ಯ ಸಾಂಕ್ರಾಮಿಕ ಮುಂದುವರಿದಿದ್ದು, ಇ-ವಹಿವಾಟಿನ ಮೇಲೆ ಸಾಂಕ್ರಾಮಿಕದಿಂದಾಗಿರುವ ಪರಿಣಾಮಗಳನ್ನು ಅಂದಾಜು ಮಾಡಲು ಇದು ಸರಿಯಾದ ಸಮಯವಲ್ಲ, ತುಂಬಾ ಮುಂಚಿತವಾಗಿದೆ ಎಂದೆನಿಸುತ್ತಿದೆ.
ಇ-ವಾಣಿಜ್ಯ ಆಪರೇಟರ್ ಗಳು ಪೂರೈಕೆ ಮಾಡಿದ ವಸ್ತುಗಳ ಮೌಲ್ಯ ಎಷ್ಟೇ ಇದ್ದರೂ ಸಹ ಅವರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ವಿನಾಯ್ತಿಯ ಪ್ರಯೋಜನ ಇ-ವಾಣಿಜ್ಯ ಆಪರೇಟರ್ ಗಳಿಗೆ ಲಭ್ಯವಿರುವುದಿಲ್ಲ. ಕೆಲವೊಂದು ವರ್ಗದ ಸೇವೆಗಳಿಗೆ, ಎಲೆಕ್ಟ್ರಾನಿಕ್ ವಿದ್ಯುನ್ಮಾನ ವಾಣಿಜ್ಯ ಆಪರೇಟ್ ರ್ ನೀಡುವ ಸೇವೆಗಳಿಗೆ ಜಿ ಎಸ್ ಟಿ ಪಾವತಿಸಬೇಕಿರುತ್ತದೆ. ಇ-ವಾಣಿಜ್ಯ ಆಪರೇಟರ್ ಗಳು ಕೂಡ ತಮ್ಮ ಮೂಲಕ ಪೂರೈಕೆಯಾಗುವ ಒಟ್ಟು ಪದಾರ್ಥಗಳ ಮೌಲ್ಯದ ಶೇಕಡ 1ರಷ್ಟನ್ನು ಮೂಲದಲ್ಲೇ ತೆರಿಗೆ ಕಡಿತ(ಟಿಸಿಎಸ್) ಮಾಡಬೇಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಪೂರೈಕೆಯನ್ನು ಆಪರೇಟರ್ ಗಳು ಸಂಗ್ರಹಿಸುತ್ತಾರೆ. ಜಿಎಸ್ ಟಿ ಕಾಯ್ದೆಯಡಿ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯೂ ಸ್ವಯಂ ಅಂದಾಜು ಮಾಡಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ ಮತ್ತು ನಿಗದಿಯಂತೆ ಪ್ರತಿಯೊಂದು ತೆರಿಗೆ ಅವಧಿಗೆ ರಿಟರ್ನ್ಸ್ ಸಲ್ಲಿಸಬೇಕಿರುತ್ತದೆ. ಆದ್ದರಿಂದ ಇ-ವಾಣಿಜ್ಯ ಆಪರೇಟರ್ ಗಳು ಇತರ ಯಾವುದೇ ಸರಕು ಅಥವಾ ಸೇವೆಗಳನ್ನು ನೀಡುವ ಪೂರೈಕೆದಾರರಂತೆ ಜಿ ಎಸ್ ಟಿಯನ್ನು ಪಾವತಿಸಬೇಕಾಗಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ರಾಜ್ಯಸಭೆಗೆ ಇಂದು ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
***
(Release ID: 1656207)
Visitor Counter : 183