ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಿ ಮತ್ತು ರಷ್ಯಾ ಅಧ್ಯಕ್ಷರ ನಡುವೆ ದೂರವಾಣಿ ಮಾತುಕತೆ
Posted On:
17 SEP 2020 11:21PM by PIB Bengaluru
ರಷ್ಯಾ ಅಧ್ಯಕ್ಷ ಶ್ರೀ ವ್ಲಾದಿಮಿರ್ ಪುಟಿನ್ ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಇಂದು ದೂರವಾಣಿ ಕರೆ ಮಾಡಿದರು.
ರಷ್ಯಾ ಅಧ್ಯಕ್ಷರು ಪ್ರಧಾನಿಯವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು. ಪ್ರಧಾನ ಮಂತ್ರಿ ಮೋದಿ ಧನ್ಯವಾದ ತಿಳಿಸಿದರು.
ಭಾರತ ಮತ್ತು ರಷ್ಯಾ ನಡುವಿನ 'ವಿಶೇಷ ಕಾರ್ಯತಂತ್ರದ ಸಹಭಾಗಿತ್ವವನ್ನು' ಮತ್ತಷ್ಟು ಬಲಪಡಿಸುವ ಬಗ್ಗೆ ಉಭಯ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಕೋವಿಡ್ ಸಾಂಕ್ರಾಮಿಕ ರೋಗದ ನಡುವೆಯೂ ದ್ವಿಪಕ್ಷೀಯ ಸಂವಾದಗಳು ಮುಂದುವರಿದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ, ರಕ್ಷಣಾ ಸಚಿವರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಇತ್ತೀಚೆಗೆ ಮಾಸ್ಕೋಗೆ ನೀಡಿದ ಭೇಟಿಗಳನ್ನು ಅವರು ಉಲ್ಲೇಖಿಸಿದರು.
ಈ ವರ್ಷ ಎಸ್ಸಿಒ ಮತ್ತು ಬ್ರಿಕ್ಸ್ನ ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದ ರಷ್ಯಾಕ್ಕೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದರು. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಎಸ್ಸಿಒ ಮತ್ತು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದರು. ಜೊತೆಗೆ ಭಾರತವು ಆಯೋಜಿಸಲಿರುವ ಎಸ್ಸಿಒ ಮಂಡಳಿಯ ಸರ್ಕಾರದ ಮುಖ್ಯಸ್ಥರ ಶೃಂಗದಲ್ಲಿ ಭಾಗವಹಿಸಲು ಉತ್ಸುಕರಾಗಿರುವುದಾಗಿಯೂ ಹೇಳಿದರು.
ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಅಧ್ಯಕ್ಷ ಪುಟಿನ್ ಅವರು ತೋರುತ್ತಿರುವ ವೈಯಕ್ತಿಕ ಬದ್ಧತೆಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರು. ಮುಂದಿನ ದ್ವಿಪಕ್ಷೀಯ ಶೃಂಗಸಭೆಗೆ ಪರಸ್ಪರ ಅನುಕೂಲಕರ ದಿನಾಂಕದಂದು ಅಧ್ಯಕ್ಷ ಪುಟಿನ್ ಅವರನ್ನು ಭಾರತದಲ್ಲಿ ಸ್ವಾಗತಿಸಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು.
***
(Release ID: 1656050)
Visitor Counter : 272
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam