ರಕ್ಷಣಾ ಸಚಿವಾಲಯ

ರಾಜ್ಯಸಭೆಯಲ್ಲಿ ಸೆಪ್ಟೆಂಬರ್ 17ರಂದು ರಕ್ಷಣಾಮಂತ್ರಿ ಶ್ರೀ ರಾಜನಾಥ ಸಿಂಗ್ ಭಾಷಣ

Posted On: 17 SEP 2020 1:28PM by PIB Bengaluru

ಗೌರವಾನ್ವಿತ ಅಧ್ಯಕ್ಷರೇ,

  1. ಲಡಾಖ್ ಗಡಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದೀಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಗೌರವಾನ್ವಿತ ಸದನದ ಸದಸ್ಯರಿಗೆ ಇಂದು ನಾನು ವಿವರ ನೀಡಲು ಎದ್ದು ನಿಂತಿದ್ದೇನೆ. ನಮ್ಮ ಶ್ರೇಷ್ಠ ರಾಷ್ಟ್ರ ನಿರ್ಮಾಣಕ್ಕೆ ಅಸಂಖ್ಯಾತ ದೇಶವಾಸಿಗಳು ಬಲಿದಾನ ನೀಡಿದ್ದಾರೆ. ಸ್ವತಂತ್ರ ಭಾರತದ ಸಶಸ್ತ್ರ ಪಡೆಗಳು ನಮ್ಮ ಗಡಿಯನ್ನು ರಕ್ಷಿಸಲು ಅತ್ಯುನ್ನತ ಬಲಿದಾನಗಳನ್ನು ನೀಡಲು ಎಂದಿಗೂ ಹಿಂಜರಿದಿಲ್ಲ. ನಿಮಗೆಲ್ಲಾ ತಿಳಿದಿರಬಹುದು 2020 ಜೂನ್ 15ರಂದು ಕರ್ನಲ್ ಸಂತೋಷ್ ಬಾಬು ಮತ್ತು ಇತರ 19 ವೀರ ಯೋಧರು ಗಲ್ವಾನ್ ಕಣಿವೆಯಲ್ಲಿ ನಮ್ಮ ಮಾತೃಭೂಮಿಯನ್ನು ರಕ್ಷಿಸುವ ಸಲುವಾಗಿ ಹುತಾತ್ಮರಾದರು. ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರು ಸ್ವತಃ ಲಡಾಖ್ ಗೆ ಭೇಟಿ ನೀಡಿ, ನಮ್ಮ ವೀರಯೋಧರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದರು. ನಾನು ಕೂಡ ಅವರುಗಳನ್ನು ಭೇಟಿ ಮಾಡಿದಾಗ ಅವರಲ್ಲಿನ ಧೈರ್ಯ ಮತ್ತು ಶೌರ್ಯದ ಅನುಭವಗಳನ್ನು ಪಡೆದಿದ್ದೇನೆ. ಸದನ ಕೂಡ ಆರಂಭದ ದಿನ ಮೊದಲಿಗೆ ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಯೋಧರಿಗೆ ಎರಡು ನಿಮಿಷಗಳ ಕಾಲ ಶ್ರದ್ಧಾಂಜಲಿ ಸಲ್ಲಿಸಿದೆ.  
  2. ಚೀನಾದೊಂದಿಗಿನ ನಮ್ಮ ಗಡಿ ವಿವಾದದ ಕೆಲವು ವಿವರಗಳನ್ನು ಹಂಚಿಕೊಳ್ಳಲು ಮೊದಲಿಗೆ ನಾನು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಲು ಬಯಸುತ್ತೇನೆ. ಸದನಕ್ಕೆ ತಿಳಿದಿರುವಂತೆ ಭಾರತ ಮತ್ತು ಚೀನಾ ಇನ್ನೂ ಗಡಿ ಪ್ರಶ್ನೆಯನ್ನು ಇತ್ಯರ್ಥಪಡಿಸಿಕೊಂಡಿಲ್ಲ. ಚೀನಾ, ಭಾರತ ಮತ್ತು ಚೀನಾ ನಡುವಿನ ಗಡಿ ಕುರಿತು ಸಾಂಪ್ರದಾಯಿಕ ಮತ್ತು ಒಪ್ಪಿತ ನಕ್ಷೆಯನ್ನು ಸ್ವೀಕರಿಸುತ್ತಿಲ್ಲ. ನಕ್ಷೆ ಸ್ಥಾಪಿತ ಭೌಗೋಳಿಕ ತತ್ವಗಳನ್ನು ಆಧರಿಸಿದೆ ಮತ್ತು ಅದನ್ನು ಹಲವು ಒಪ್ಪಂದಗಳು ಹಾಗೂ ಒಡಂಬಡಿಕೆಗಳು ಸಹ ಖಚಿತಪಡಿಸಿವೆ. ಐತಿಹಾಸಿಕವಾಗಿ ಅದನ್ನು ಬಳಕೆ ಮಾಡಲಾಗುತ್ತಿದ್ದು, ಶತಮಾನಗಳಿಂದಲೂ ಅದು ಜನಪ್ರಿಯವಾಗಿದೆ. ಚೀನಾದ ಸ್ಥಾನ, ಎರಡೂ ದೇಶಗಳು ಇನ್ನೂ ಗಡಿಯನ್ನು ಇತ್ಯರ್ಥಪಡಿಸಿಕೊಂಡಿಲ್ಲ. ಆದರೆ ಸಾಂಪ್ರದಾಯಿಕ ರೇಖೆ ಇದ್ದು, ಅದರ ವ್ಯಾಪ್ತಿಯ ಕುರಿತು ಐತಿಹಾಸಿಕವಾಗಿ ಎರಡೂ ದೇಶಗಳು ಹಕ್ಕು ಮಂಡಿಸುತ್ತಿವೆ. ಸಾಂಪ್ರದಾಯಿಕ ರೇಖೆಯ ಸ್ಥಿತಿಗತಿಯ ಬಗ್ಗೆ ಎರಡೂ ದೇಶಗಳು ಭಿನ್ನ ರೀತಿಯಲ್ಲಿ ವಿಶ್ಲೇಷಿಸುತ್ತಿವೆ. ಎರಡೂ ದೇಶಗಳು 1950-60ರಿಂದ ಸಮಾಲೋಚನೆಗಳಲ್ಲಿ ತೊಡಗಿವೆ. ಆದರೆ ಪ್ರಯತ್ನಗಳು ಯಾವುದೇ ರೀತಿಯ ಪರಸ್ಪರ ಒಪ್ಪಿತ ಪರಿಹಾರಗಳನ್ನು ನೀಡುವಲ್ಲಿ ಯಶಸ್ವಿಯಾಗಿಲ್ಲ.  

 

  1. ಸದನಕ್ಕೆ ತಿಳಿದಿರುವಂತೆ ಚೀನಾ, ಲಡಾಖ್ ಕೇಂದ್ರಾಡಳಿತ ಪ್ರದೇಶದ ಸುಮಾರು 38,000 ಚದರ ಕಿಲೋಮೀಟರ್ ಭೂಪ್ರದೇಶವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದೆ. ಅಲ್ಲದೆ ಚೀನಾ-ಪಾಕಿಸ್ತಾನ ಹೆಸರಿನಲ್ಲಿ 1963ರಲ್ಲಿ ಗಡಿ ಒಪ್ಪಂದದಂತೆ ಪಾಕಿಸ್ತಾನ ಅಕ್ರಮವಾಗಿ ಚೀನಾದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 5,180 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ ಚೀನಾ, ಅರುಣಾಚಲಪ್ರದೇಶದ ಭಾರತ-ಚೀನಾ ಗಡಿಯ ಪೂರ್ವ ವಲಯದಲ್ಲಿ ಅಂದಾಜು 90,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶ ತನಗೆ ಸೇರಿದ್ದು ಎಂದು ಚೀನಾ ಹಕ್ಕು ಮಂಡಿಸುತ್ತಿದೆ.
  2. ಭಾರತ ಮತ್ತು ಚೀನಾ ಎರಡೂ ದೇಶಗಳು ಗಡಿ ವಿಷಯ ಅತ್ಯಂತ ಸಂಕೀರ್ಣವಾದುದು ಎಂಬುದನ್ನು ಒಪ್ಪಿಕೊಂಡಿವೆ ಮತ್ತು ಅದಕ್ಕೆ ನ್ಯಾಯಯುತ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಸಂಯಮ ಅಗತ್ಯವಿದೆ ಮತ್ತು ಸಮಾಲೋಚನೆ ಹಾಗೂ ಶಾಂತಿಯುತ ಮಾತುಕತೆಗಳ ಮೂಲಕ ಮಾತ್ರವೇ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂಬುದನ್ನು ಒಪ್ಪಿಕೊಂಡಿದೆ. ಮಧ್ಯಂತರ ಕ್ರಮವಾಗಿ ಎರಡೂ ದೇಶಗಳು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದು ಒಪ್ಪಿಕೊಂಡಿವೆ ಹಾಗೂ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಅದು ಅತ್ಯವಶ್ಯಕ ಎಂದೂ ಸಹ ಒಪ್ಪಿವೆ.
  3. ನಾನು ಇಲ್ಲಿ ಉಲ್ಲೇಖಿಸಲು ಬಯಸುವುದೇನೆಂದರೆ, ಭಾರತ ಮತ್ತು ಚೀನಾ ನಡುವೆ ಗಡಿ ಪ್ರದೇಶದಲ್ಲಿ ಸಾಮಾನ್ಯವಾಗಿ ಗುರುತಿಸಿರುವ ಯಾವುದೇ ಗಡಿ ನಿಯಂತ್ರಣ ರೇಖೆ ಇಲ್ಲ ಮತ್ತು ಇಡೀ ಎಲ್ಎಸಿಯಲ್ಲಿ ಸಾಮಾನ್ಯ ಭಾವನೆ ಇಲ್ಲ. ಆದ್ದರಿಂದ ಗಡಿ ಪ್ರದೇಶದಲ್ಲಿ ವಿಶೇಷವಾಗಿ ಗಡಿ ನಿಯಂತ್ರಣ ರೇಖೆ(ಎಲ್ಎಸಿ)ಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಬೇಕಾದರೆ ಎರಡೂ ದೇಶಗಳು ಹಲವು ಒಪ್ಪಂದಗಳು ಮತ್ತು ಶಿಷ್ಟಾಚಾರಗಳನ್ನು ಪೂರ್ಣಗೊಳಿಸಬೇಕಾಗಿದೆ.
  4.  ಇಂತಹ ಸನ್ನಿವೇಶಗಳಲ್ಲಿ ಎರಡೂ ದೇಶಗಳು ಎಲ್ಎಸಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ಪರಸ್ಪರ ಒಪ್ಪಿವೆ. ಅಲ್ಲದೆ ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ಸದ್ಯದ ಎಲ್ಎಸಿಯನ್ನು ಒಪ್ಪಿಕೊಳ್ಳಲು ಸಮ್ಮತಿಸಿವೆ. ಇದೇ ಆಧಾರದ ಮೇಲೆ 1988ರಿಂದೀಚೆಗೆ ನಮ್ಮೆಲ್ಲಾ ಸಂಬಂಧಗಳು ಗಮನಾರ್ಹ ಪ್ರಗತಿ ಸಾಧಿಸಿವೆ. ಗಡಿ ಪ್ರಶ್ನೆ ಪರಿಹಾರಕ್ಕೆ ಸಂಬಂಧಿಸಿದಂತೆ ಪರ್ಯಾಯವಾಗಿ ಸಮಾಲೋಚನೆಗಳ ಜೊತೆ ದ್ವಿಪಕ್ಷೀಯ ಮಾತುಕತೆಗಳು ಮುಂದುವರಿಯಬೇಕು ಎಂಬುದು ಭಾರತದ ನಿಲುವಾಗಿದೆ. ಗಡಿ ಪ್ರದೇಶದ ಎಲ್ಎಸಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಯಾವುದೇ ರೀತಿಯ ಧಕ್ಕೆಯಾದರೆ ಅದರ ಪರಿಣಾಮಗಳು ನಮ್ಮ ಸಕಾರಾತ್ಮಕ ಸಂಬಂಧಗಳ ಮೇಲಾಗುತ್ತದೆ.
  5. 1993 ಮತ್ತು 1996 ಎರಡೂ ಒಪ್ಪಂದಗಳ ಪ್ರಮುಖ ಅಂಶವೆಂದರೆ ಉಭಯ ದೇಶಗಳು ಗಡಿನಿಯಂತ್ರಣ ರೇಖೆಯ ಪ್ರದೇಶದಲ್ಲಿ ಕನಿಷ್ಠ ಮಟ್ಟದಲ್ಲಿ ಮಿಲಿಟರಿಯನ್ನು ಸೇರಿಸಬೇಕು ಎಂಬುದಾಗಿದೆ. ಒಪ್ಪಂದಗಳ ಪ್ರಕಾರ ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ಅಂತಿಮ ಪರಿಹಾರವನ್ನು ಕಂಡುಕೊಳ್ಳುವವರೆಗೆ ಉಭಯ ದೇಶಗಳು ಗಡಿ ನಿಯಂತ್ರಣ ರೇಖೆಯನ್ನು ಪಾಲಿಸಬೇಕು ಮತ್ತು ಅದನ್ನು ಕಟ್ಟುನಿಟ್ಟಾಗಿ ಅನ್ವಯಿಸಬೇಕು ಎಂದು ಒಪ್ಪಿಕೊಳ್ಳಲಾಗಿತ್ತು. ಅಲ್ಲದೆ ಒಪ್ಪಂದಗಳಿಗೆ ಭಾರತ ಮತ್ತು ಚೀನಾ ಬದ್ಧವಾಗಿದ್ದು, ಗಡಿ ನಿಯಂತ್ರಣ ರೇಖೆಯ ಬಗ್ಗೆ ಎರಡು ದೇಶಗಳು ಸ್ಪಷ್ಟನೆ ಮೂಲಕ ಖಚಿತಪಡಿಸಿವೆ. ಆದರೆ 1990 ನಂತರದಲ್ಲಿ ಹಾಗೂ 2003 ವರೆಗೆ ಉಭಯ ದೇಶಗಳು ಎಲ್ಎಸಿಯನ್ನು ಒಪ್ಪಿ, ಸ್ಪಷ್ಟತೆಯನ್ನು ಪಾಲಿಸುತ್ತಿದ್ದವು. ಆನಂತರ ಚೀನಾ ಕಡೆಯಿಂದ ಎಲ್ಎಸಿ ಪಾಲನೆ ಮಾಡುವ ಬಗ್ಗೆ ಯಾವುದೇ ಇಂಗಿತ ವ್ಯಕ್ತವಾಗಲಿಲ್ಲ, ಅದರ ಪರಿಣಾಮ ಕೆಲವು ಪ್ರದೇಶಗಳಲ್ಲಿ ಚೀನಾ ಮತ್ತು ಭಾರತೀಯ ಪಡೆಗಳು ಹಿಡಿತಸಾಧಿಸಿವೆ. ಪ್ರದೇಶಗಳಲ್ಲಿ ಎರಡೂ ಕಡೆಯ ಸೇನಾ ಪಡೆಗಳು ಜಮಾಯಿಸಿರುವುದು ಸಂಘರ್ಷ ಆಗುವಂತಹ ವಾತಾವರಣಗಳು ನಿರ್ಮಾಣವಾಗಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲಾಗುತ್ತಿಲ್ಲ.
  6. ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಸದನಕ್ಕೆ ತಿಳಿಸುವ ಮುನ್ನ, ಸರ್ಕಾರ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಹಾಗೂ ಮೂರು ಸಶಸ್ತ್ರ ಪಡೆಗಳ ಗುಪ್ತಚರ ಘಟಕಗಳು ಸೇರಿದಂತೆ ನಾನಾ ಗುಪ್ತಚರ ಸಂಸ್ಥೆಗಳಿಂದ ಸಮನ್ವಯದ ಕಾರ್ಯತಂತ್ರದೊಂದಿಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದು ತಿಳಿಸಲು ಬಯಸುತ್ತೇನೆ. ತಾಂತ್ರಿಕ ಮತ್ತು ಗುಪ್ತಚರ ದಳ ನಿರಂತರವಾಗಿ ಮಾಹಿತಿ ಸಂಗ್ರಹ ಮಾಡಿ, ಅತ್ಯುತ್ತಮ ರೀತಿಯಲ್ಲಿ ಸಮನ್ವಯ ನಡೆಸುತ್ತಿವೆ. ಮಾಹಿತಿಯನ್ನು ಸಶಸ್ತ್ರ ಪಡೆಗಳು ವಿನಿಮಯ ಮಾಡಿಕೊಂಡು ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲು ಸಹಕಾರಿಯಾಗಿವೆ.
  7. ಇದೀಗ ವರ್ಷದ ಬೆಳವಣಿಗೆಗಳ ಬಗ್ಗೆ ನಾನು ಸದನಕ್ಕೆ ತಿಳಿಸಲು ಬಯಸುತ್ತೇನೆ. ಏಪ್ರಿಲ್ ನಿಂದೀಚೆಗೆ ಪೂರ್ವ ಲಡಾಖ್ ಗೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ಚೈನಾದ ಕಡೆಯಿಂದ ಭಾರೀ ಪ್ರಮಾಣದಲ್ಲಿ ಸೇನೆಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಲಾಗುತ್ತಿದೆ. ಮೇ ತಿಂಗಳ ಆರಂಭದಲ್ಲಿ ಗಲ್ವಾನ್ ಕಣಿವೆ ಪ್ರಾಂತ್ಯದಲ್ಲಿ ನಮ್ಮ ಪಡೆಗಳು ಸಾಂಪ್ರದಾಯಿಕ ಪಹರೆ ನಡೆಸಲು ಚೀನಾ ಪಡೆಗಳು ಅಡ್ಡಿಪಡಿಸಿದವು. ಇದರಿಂದಾಗಿ ಘರ್ಷಣೆ ಏರ್ಪಟ್ಟಿತ್ತು. ಸಂದರ್ಭದಲ್ಲಿ ದ್ವಿಪಕ್ಷೀಯ ಒಪ್ಪಂದ ಮತ್ತು ಶಿಷ್ಟಾಚಾರದಂತೆ ಕಮಾಂಡರ್ ಗಳು ಮಾತನಾಡಿದರು ಮತ್ತು  ಮೇ ತಿಂಗಳ ಮಧ್ಯ ಭಾಗದಲ್ಲಿ ಚೀನಾ ಪಡೆಗಳು ಪಶ್ಚಿಮ ವಲಯದ ಎಲ್ಎಸಿ ಭಾಗದ ಪ್ರದೇಶವನ್ನು ದಾಟುವ ಪ್ರಯತ್ನಗಳನ್ನು ನಡೆಸಿದವು. ಇದರಲ್ಲಿ ಕೊನ್ಗಾಕಾ ಲಾ, ಗೋಗ್ರಾ ಮತ್ತು ಪಂಗಾಂಗ್ ಸಮುದ್ರದ ಉತ್ತರ ದಂಡೆಗಳು ಸೇರಿವೆ. ಪ್ರಯತ್ನಗಳನ್ನು ಬಹುಬೇಗನೆ ಗುರುತಿಸಿ, ನಮ್ಮ ಸಶಸ್ತ್ರ ಪಡೆಗಳು ಸೂಕ್ತ ರೀತಿಯಲ್ಲಿ ಪ್ರತಿಸ್ಪಂದನೆ ನೀಡಿದವು. ನಾವು ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಚೀನಾ ಪಡೆಗಳಿಗೆ ಅಂತಹ ಪ್ರಯತ್ನಗಳನ್ನು ಏಕಪಕ್ಷೀಯವಾಗಿ ಕೈಗೊಳ್ಳಬಾರದು, ಅದು ಯಥಾಸ್ಥಿತಿ ಕಾಯ್ದುಕೊಳ್ಳಲು ತೊಂದರೆಯಾಗುತ್ತದೆ ಎಂದು ಸ್ಪಷ್ಟಪಡಿಸಲಾಯಿತು. ಇಂತಹ ಕ್ರಮಗಳನ್ನು ಒಪ್ಪಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಲಾಯಿತು.  
  8. ಎಲ್ಎಸಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವಂತೆ 2020 ಜೂನ್ 6 ರಂದು ಉಭಯ ದೇಶಗಳ ಹಿರಿಯ ಕಮಾಂಡರ್ ಗಳು ಸಮಾಲೋಚನೆ ನಡೆಸಿ, ಸೇನೆ ಜಮಾವಣೆ ಪ್ರಕ್ರಿಯೆ ವಾಪಸ್ ಪಡೆಯಲು ಪರಸ್ಪರ ಒಪ್ಪಿದ್ದವು. ಉಭಯ ದೇಶಗಳು ಎಲ್ಎಸಿಯನ್ನು ಒಪ್ಪಲು ಹಾಗೂ ಗೌರವಿಸಲು ಒಪ್ಪಿದವು ಮತ್ತು ಯಥಾಸ್ಥಿತಿಯಲ್ಲಿ ಯಾವುದೇ ಬದಲಾವಣೆ ಮಾಡದಿರುವಂತಹ ನಿರ್ಣಯವನ್ನು ಕೈಗೊಂಡಿದ್ದರು. ಆದರೂ ಗಲ್ವಾನ್ ನಲ್ಲಿ ಜೂನ್ 15ರಂದು ಚೀನಾದ ಕಡೆಯಿಂದ ಹಿಂಸಾತ್ಮಕ ಕೃತ್ಯಗಳು ನಡೆದವುನಮ್ಮ ವೀರ ಯೋಧರು ತಮ್ಮ ಪ್ರಾಣ ತ್ಯಾಗ ಮಾಡಿದರು ಮತ್ತು ಚೀನಾದ ಕಡೆಯೂ ಸಹ ಹಲವು ಸಾವನ್ನಪ್ಪಿದರು.
  9. ಎಲ್ಲ ಘಟನೆಗಳುದ್ದಕ್ಕೂ ನಮ್ಮ ಸೇನಾ ಪಡೆಗಳುಸಂಯಮವನ್ನು ಕಾಯ್ದುಕೊಂಡವು ಮತ್ತು ಅಗತ್ಯಬಿದ್ದಾಗ ಭಾರತದ ಭೌಗೋಳಿಕ ಸಾರ್ವಭೌಮತೆಯನ್ನು ರಕ್ಷಿಸಲು ಸಮಾನವಾಗಿಶೌರ್ಯವನ್ನು ಪ್ರದರ್ಶಿಸಿದವು. ನಮ್ಮ ಯೋಧರ ಧೈರ್ಯ ಮತ್ತು ಪರಾಕ್ರಮವನ್ನು ಸದನ ಮೆಚ್ಚುಗೆ ವ್ಯಕ್ತಪಡಿಸಬೇಕು. ನಮ್ಮನ್ನು ಸುರಕ್ಷಿತ ಮತ್ತು ಭದ್ರತೆಯಿಂದ ರಕ್ಷಿಸಲು ಅತ್ಯಂತ ಕಷ್ಟಕರ ಸನ್ನಿವೇಶದಲ್ಲೂ ಅವರು ಕಠಿಣ ಹೋರಾಟ ನಡೆಸುತ್ತಿದ್ದಾರೆ.
  10. ನಮ್ಮ ಗಡಿ ಸುರಕ್ಷತೆ ವಿಚಾರದಲ್ಲಿ ಯಾರೊಬ್ಬರೂ ನಮ್ಮ ಬದ್ಧತೆಯ ಬಗ್ಗೆ ಅನುಮಾನ ಪಡಬೇಕಿಲ್ಲ. ಪರಸ್ಪರ ಗೌರವ ಮತ್ತು ಪರಸ್ಪರ ಸೂಕ್ಷ್ಮ ರೀತಿಯಲ್ಲಿ ನೆರೆಹೊರೆಯವರೊಂದಿಗೆ ಶಾಂತಿಯುತ ಸಂಬಂಧ ಹೊಂದಬೇಕು ಎಂಬುದರಲ್ಲಿ ಭಾರತ ನಂಬಿಕೆ ಇರಿಸಿಕೊಂಡಿದೆ. ಪ್ರಸಕ್ತ ಸ್ಥಿತಿಯನ್ನು ನಾವು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಬಯಸುತ್ತಿದ್ದೇವೆ. ನಾವು ಚೀನಾದ ಜೊತೆಗೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆ ಮಾರ್ಗಗಳನ್ನು ಕಾಯ್ದುಕೊಂಡಿದ್ದೇವೆ. ಸಮಾಲೋಚನೆಗಳಲ್ಲಿ ನಾವು ಮೂರು ಪ್ರಮುಖ ಅಂಶಗಳನ್ನು ಗಮನದಲ್ಲಿರಿಸಿಕೊಂಡಿದ್ದು, ಅವು ನಮ್ಮ ಧೋರಣೆಯನ್ನು ವ್ಯಕ್ತಪಡಿಸಿದ್ದೇವೆ. (i)  ಉಭಯ ದೇಶಗಳು ಕಟ್ಟುನಿಟ್ಟಾಗಿ ಎಲ್ಎಸಿಯನ್ನು ಪಾಲಿಸಬೇಕು ಮತ್ತು ಗೌರವಿಸಬೇಕು. (ii) ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸುವಂತಹ ಯಾವುದೇ ಪ್ರಯತ್ನಗಳನ್ನು ಉಭಯ ದೇಶಗಳು ಮಾಡಬಾರದು ಮತ್ತು (iii) ಎರಡೂ ದೇಶಗಳ ನಡುವೆ ಮಾಡಿಕೊಂಡಿರುವ ಎಲ್ಲ ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. ಚೈನಾದ ಕಡೆಯಿಂದ ಜವಾಬ್ದಾರಿಯುತವಾಗಿ ಪರಿಸ್ಥಿತಿಯನ್ನು ನಿರ್ವಹಿಸಬೇಕು ಮತ್ತು ದ್ವಿಪಕ್ಷೀಯ ಒಪ್ಪಂದ ಮತ್ತು ಶಿಷ್ಟಾಚಾರದಂತೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಬೇಕು ಎಂಬುದು ಭಾರತದ ನಿಲುವಾಗಿದೆ. ಆದರೆ ಚೀನಾ ಕೂಡ   ಮಾತನ್ನು ಹೇಳುತ್ತಿದೆ. ಆದರೆ ಅದರ ಮಾತಿಗೂ ಮತ್ತು ಕ್ರಿಯೆಯ ನಡುವೆ ಸಾಮ್ಯತೆ ಇಲ್ಲ. ಸಮಾಲೋಚನೆಗಳು ನಡೆಯುತ್ತಿರುವುದರ ಮಧ್ಯೆಯೇ ಚೀನಾದ ಕಡೆಯಿಂದ ಮತ್ತೆ ಆಗಸ್ಟ್ 29 ಹಾಗೂ 31ರಂದು ರಾತ್ರಿ ಪ್ರಚೋದನಾತ್ಮಕ ರೀತಿಯಲ್ಲಿ ಮಿಲಿಟರಿ ಪಡೆಗಳು ಪಾಂಗಾಂಗ್ ಸಮುದ್ರ ಪ್ರದೇಶದ ದಕ್ಷಿಣ ದಂಡೆಯಲ್ಲಿ ಯಥಾಸ್ಥಿತಿ ಬದಲಾವಣೆಗೆ ಪ್ರಯತ್ನ ನಡೆಸಿವೆ. ಆದರೆ ನಮ್ಮ ಸಶಸ್ತ್ರ ಪಡೆಗಳ ಸಕಾಲಿಕ ಮತ್ತು ದೃಢ ಕ್ರಿಯೆಗಳಿಂದಾಗಿ ಅಂತಹ ಪ್ರಯತ್ನಗಳನ್ನು ಎಲ್ಎಸಿಯಲ್ಲಿ ನಿಯಂತ್ರಿಸಲಾಗಿದೆ.  
  11.   ಘಟನೆಗಳಿಂದ ಚೀನಾದ ಕ್ರಿಯೆಗಳು ನಮ್ಮ ದ್ವಿಪಕ್ಷೀಯ ಒಪ್ಪಂದಗಳಿಗೆ ವಿರುದ್ಧವಾಗಿದೆ ಎಂಬುದು ಸ್ಪಷ್ಟವಾಗಿದೆ. ಸೇನೆಯನ್ನು ಚೈನಾ ಜಮಾವಣೆ ಮಾಡುತ್ತಿರುವುದು 1993 ಮತ್ತು 1996 ಒಪ್ಪಂದಗಳ ವಿರುದ್ಧವಾಗಿದೆ. ಗಡಿ ನಿಯಂತ್ರಣ ರೇಖೆಯನ್ನು ಪಾಲಿಸುವುದು ಮತ್ತು ಗೌರವಿಸುವುದು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಯ್ದುಕೊಳ್ಳಲು ಆಧಾರವಾಗಿದೆ ಮತ್ತು 1993 ಹಾಗೂ 1996 ಎರಡೂ ಒಪ್ಪಂದಗಳಲ್ಲೂ ಅಂಶಗಳನ್ನು ವಿಶೇಷವಾಗಿ ಗುರುತಿಸಲಾಗಿದೆ. ನಮ್ಮ ಸಶಸ್ತ್ರ ಪಡೆಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆ. ಆದರೆ ಚೀನಾದ ಕಡೆಯಿಂದ ಅದು ಪಾಲನೆಯಾಗುತ್ತಿಲ್ಲ. ಅದರ ಕ್ರಿಯೆಗಳಿಂದಾಗಿ ಎಲ್ಎಸಿಯಲ್ಲಿ ಆಗಾಗ್ಗೆ ಉದ್ವಿಗ್ನತೆ, ಘರ್ಷಣೆ ಹಾಗೂ ಬಿಕ್ಕಟ್ಟುಗಳು ಏರ್ಪಡುತ್ತಿವೆ. ಮೊದಲೇ ಉಲ್ಲೇಖಿಸಿದ್ದಂತೆ ಘರ್ಷಣೆ ಸಂದರ್ಭಗಳನ್ನು ಎದುರಿಸಲು ವಿವರವಾದ ನಿಯಮಗಳನ್ನು ಒಪ್ಪಂದಗಳಲ್ಲಿ ರೂಪಿಸಲಾಗಿದೆ. ಆದರೆ ವರ್ಷದ ಇತ್ತೀಚಿನ ಘಟನೆಗಳು ಚೀನಾ ಪಡೆಗಳ ಹಿಂಸಾತ್ಮಕ ವರ್ತನೆ, ಪರಸ್ಪರ ಒಪ್ಪಿತ ಎಲ್ಲ ನಿಯಮಗಳಿಗೆ ಸಂಪೂರ್ಣ ಉಲ್ಲಂಘನೆಯಾಗಿದೆ. ಈವರೆಗೆ ಎಲ್ಎಸಿಯ ಕಡಿದಾದ ಪ್ರದೇಶಗಳಲ್ಲಿ ಚೀನಾ ಭಾರೀ ಪ್ರಮಾಣದ ಸಶಸ್ತ್ರ ಪಡೆಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಿದೆ. ಪೂರ್ವ ಲಡಾಖ್ ನಲ್ಲಿ ಗೋಗ್ರಾ, ಕೋಂಗ್ ಲಾ ಮತ್ತು ಪಾಂಗಾಂಗ್ ಕಣಿವೆಯ ದಕ್ಷಿಣ ಹಾಗೂ ಉತ್ತರ ದಂಡೆಗಳಲ್ಲಿ ಸೇರಿ ಹಲವು ಸಂಘರ್ಷ ಪ್ರದೇಶಗಳಿವೆ. ಚೀನಾದ ಕ್ರಮಗಳಿಗೆ ಪ್ರತಿಯಾಗಿ ನಮ್ಮ ಸಶಸ್ತ್ರ ಪಡೆಗಳು ತಕ್ಕ ಪ್ರತ್ಯುತ್ತರವನ್ನು ನೀಡುತ್ತಿದ್ದು, ಭಾರತದ ಗಡಿಯನ್ನು ಸಂಪೂರ್ಣವಾಗಿ ರಕ್ಷಿಸಿಕೊಳ್ಳಲು ಸೇನೆ ಜಮಾವಣೆ ಮಾಡುತ್ತಿದೆ. ಸದನ ನಮ್ಮ ಸಶಸ್ತ್ರ ಪಡೆಗಳ ಮೇಲೆ ಸಂಪೂರ್ಣ ವಿಶ್ವಾಸ ಇಡಬೇಕು, ನಮ್ಮ ಪಡೆಗಳು ಯಾವುದೇ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲಿವೆ ಮತ್ತು ನಮ್ಮೆಲ್ಲರಿಗೂ ಹೆಮ್ಮೆ ತರಲಿವೆ. ಇದು ಪ್ರಸಕ್ತ ಸ್ಥಿತಿಗತಿ. ಇದು ಖಂಡಿತ ಸೂಕ್ಷ್ಮ ಕಾರ್ಯಾಚರಣೆ ವಿಷಯಗಳನ್ನು ಒಳಗೊಂಡಿದೆ. ಆದ್ದರಿಂದ ನಾನು ಸಾರ್ವಜನಿಕವಾಗಿ ಹೆಚ್ಚಿನ ವಿವರಗಳನ್ನು ನೀಡಲಾಗದು. ಆದರೆ ಸಂಬಂಧ ಸದನ ಕೂಡ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಿದೆ ಎಂಬ ವಿಶ್ವಾಸ ನನಗಿದೆ.
  12. ಐಟಿಬಿಪಿ ಸೇರಿದಂತೆ ನಮ್ಮ ಸಶಸ್ತ್ರ ಪಡೆಗಳನ್ನು ಕ್ಷಿಪ್ರವಾಗಿ ನಿಯೋಜಿಸುವ ಕಾರ್ಯ, ಕೋವಿಡ್-19 ಸವಾಲಿನ ಸಮಯದಲ್ಲಿ ನಡೆದಿದೆ. ಅವರ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕಾಗಿದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಗಡಿಯಲ್ಲಿ ಮೂಲಸೌಕರ್ಯವೃದ್ಧಿಗೆ ಸರ್ಕಾರ ಅಗ್ರ ಆದ್ಯತೆ ನೀಡಿರುವುದರಿಂದ ಇದು ಸಾಧ್ಯವಾಗಿದೆ. ಕಳೆದ ಕೆಲವು ದಶಕಗಳಿಂದೀಚೆಗೆ ಚೀನಾ ಕೂಡ ಗಡಿ ಪ್ರದೇಶದಲ್ಲಿ ತನ್ನ ಸೇನಾ ನಿಯೋಜನಾ ಸಾಮರ್ಥ್ಯವೃದ್ಧಿಗೆ ಮಹತ್ವದ ಮೂಲಸೌಕರ್ಯ ನಿರ್ಮಾಣ ಚಟುವಟಿಕೆಗಳನ್ನು ಕೈಗೊಂಡಿರುವ ವಿಚಾರ ಸದನಕ್ಕೂ ತಿಳಿದಿದೆ. ಆದರೆ ಅದಕ್ಕೆ ಪ್ರತಿಯಾಗಿ ನಮ್ಮ ಸರ್ಕಾರ ಕೂಡ ಗಡಿ ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್ ಅನುದಾನವನ್ನು ಹೆಚ್ಚಿಸಿದೆ. ಹಿಂದಿನ ಅವಧಿಗಳಿಗೆ ಹೋಲಿಸಿದರೆ ಅದು ಬಹುತೇಕ ದುಪ್ಪಟ್ಟಾಗಿದೆ. ಅದರ ಪರಿಣಾಮ ಹೆಚ್ಚಿನ ರಸ್ತೆಗಳು ಮತ್ತು ಸೇತುವೆಗಳನ್ನು ಗಡಿ ಪ್ರದೇಶದಲ್ಲಿ ನಿರ್ಮಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಅವುಗಳಿಂದ ಸ್ಥಳೀಯ ಜನರಿಗೆ ತೀರಾ ಅಗತ್ಯವಿದ್ದ ಸಂಪರ್ಕ ಒದಗಿಸಿರುವುದು ಮಾತ್ರವಲ್ಲದೆ, ನಮ್ಮ ಸಶಸ್ತ್ರ ಪಡೆಗಳಿಗೆ ಸುಗಮ ಸಂಚಾರಕ್ಕೆ ಬೆಂಬಲ ದೊರಕಿದೆ ಮತ್ತು ಅಗತ್ಯಬಿದ್ದಾಗ ಪರಿಣಾಮಕಾರಿಯಾಗಿ ಸ್ಪಂದಿಸಲು ಹಾಗೂ ಗಡಿ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಜಾಗ್ರತೆಯಿಂದ ಇರಲು ನೆರವಾಗಿದೆ. ಮುಂಬರುವ ವರ್ಷಗಳಲ್ಲೂ ಸಹ ಸರ್ಕಾರ ಉದ್ದೇಶಕ್ಕೆ ಬದ್ಧವಾಗಿದೆ. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಎಂತಹುದೇ ಕಠಿಣ ನಿರ್ಧಾರವನ್ನು, ಮಹತ್ವದ ಹೆಜ್ಜೆಯನ್ನು ಇಡಲು ಸಿದ್ಧವಿದ್ದು, ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯಿಲ್ಲ.

ಗೌರವಾನ್ವಿತ ಅಧ್ಯಕ್ಷರೇ,

  1. ನಮ್ಮ ಗಡಿ ವಿಚಾರಗಳನ್ನು ಶಾಂತಿಯುತ ಮಾತುಕತೆ ಮತ್ತು ಸಮಾಲೋಚನೆಗಳ ಮೂಲಕ ಪ್ರಸಕ್ತ ವಿಚಾರಗಳನ್ನು ಬಗೆಹರಿಸಿಕೊಳ್ಳಲು ಭಾರತ ಬದ್ಧವಿದೆ ಎಂದು ನಾನು ಮತ್ತೊಮ್ಮೆ ಪುನರುಚ್ಛರಿಸಲು ಬಯಸುತ್ತೇನೆ. ಅದೇ ಉದ್ದೇಶದಿಂದ ನಾನು ಮಾಸ್ಕೋದಲ್ಲಿ ಸೆಪ್ಟೆಂಬರ್ 4ರಂದು ನಮ್ಮ ಚೀನಾದ ಸಹವರ್ತಿಯನ್ನು ಭೇಟಿ ಮಾಡಿದ್ದೆ ಮತ್ತು ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಅವರೊಂದಿಗೆ ಸಮಗ್ರ ಸಮಾಲೋಚನೆ ನಡೆಸಿದ್ದೆ. ಚೀನಾದ ಕಡೆಯಿಂದ ಆಗುತ್ತಿರುವ ಭಾರೀ ಪ್ರಮಾಣದ ಸೇನೆಗಳನ್ನು ಜಮಾವಣೆ ಮಾಡುವುದು, ಆಕ್ರಮಣಕಾರಿ ನಡವಳಿಕೆ ಹಾಗೂ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲೇಖಿಸಿ ಯಥಾಸ್ಥಿತಿಯಲ್ಲಿ ಏಕಾಏಕಿ ಬದಲಾವಣೆ ಮಾಡುವ ಕ್ರಮಗಳ ಬಗ್ಗೆ ನಾವು ನಮ್ಮ ಆತಂಕಗಳನ್ನು ಸ್ಪಷ್ಟವಾಗಿ ಹೇಳಿದ್ದೇವೆ. ವಿಚಾರವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ನಾವು ಬಯಸುತ್ತೇವೆ ಮತ್ತು ಜೊತೆಯಾಗಿ ಕಾರ್ಯನಿರ್ವಹಿಸಲು ನಾವು ಚೀನಾದೊಂದಿಗೆ ಸಿದ್ಧವಿದ್ದೇವೆ ಎಂದು ಸ್ಪಷ್ಟಪಡಿಸಿದ್ದೇವೆ. ಅಲ್ಲದೆ ನಮ್ಮ ಭೌಗೋಳಿಕ ಸಮಗ್ರತೆ ಮತ್ತು ಭಾರತೀಯ ಸಾರ್ವಭೌಮತೆಯನ್ನು ರಕ್ಷಿಸುವಲ್ಲಿ ಯಾವುದೇ ಸಂದೇಹ ಬೇಡ. ನನ್ನ ಸಹೋದ್ಯೋಗಿ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಜೈ ಶಂಕರ್, ಸೆಪ್ಟೆಂಬರ್ 10ರಂದು ಮಾಸ್ಕೋದಲ್ಲಿ ಚೀನಾದ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದ್ದರು. ಅವರಿಬ್ಬರೂ ಒಂದು ಒಪ್ಪಂದಕ್ಕೆ ಬಂದಿದ್ದಾರೆ. ಅದನ್ನು ಚೀನಾ ವಿಶ್ವಾಸಾರ್ಹವಾಗಿ ಮತ್ತು ಪ್ರಾಮಾಣಿಕತೆಯಿಂದ ಅನುಷ್ಠಾನಗೊಳಿಸಿದರೆ ಅದರಿಂದ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಮರುಸ್ಥಾಪನೆಯಾಗಲಿದೆ ಹಾಗೂ ಸೇನೆ ವಾಪಸಾತಿ ಸಂಪೂರ್ಣವಾಗಿ ನಡೆಯಲಿದೆ.
  2. ಎಲ್ಲ ಸದಸ್ಯರಿಗೂ ತಿಳಿದಿರುವಂತೆ ಹಿಂದೆಯೂ ಕೂಡ ಗಡಿ ಪ್ರದೇಶದಲ್ಲಿ ದೀರ್ಘಾವಧಿಯವರೆಗೆ ಬಿಕ್ಕಟ್ಟು ಪರಿಸ್ಥಿತಿಗಳು ಮುಂದುವರಿದಿದ್ದವು ಮತ್ತು ಅವುಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲಾಗಿತ್ತು. ವರ್ಷ ಪರಿಸ್ಥಿತಿ ಸೇನೆ ಜಮಾವಣೆ ಒಳಗೊಂಡಿರುವುದು ಹಾಗೂ ಘರ್ಷಣೆಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಪರಿಸ್ಥಿತಿ ಭಿನ್ನವಾಗಿದೆ ಎನಿಸಿದರೂ ಪ್ರಸಕ್ತ ಸ್ಥಿತಿಯನ್ನು ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳಲು ನಾವೂ ಕೂಡ ಬದ್ಧವಾಗಿದ್ದೇವೆ.

ನಾನು ಸದನದ ಮೂಲಕ ನಾನು ದೇಶದ 130 ಕೋಟಿ ಜನರಿಗೆ ಭರವಸೆ ನೀಡುವುದೆಂದರೆ ನಾವು ದೇಶವನ್ನು ತಲೆತಗ್ಗಿಸಲು ಬಿಡುವುದಿಲ್ಲ, ಇದು ದೇಶದ ಬಗೆಗಿನ ನಮ್ಮ ದೃಢ ಸಂಕಲ್ಪವಾಗಿದೆ.

  1. ಗೌರವಾನ್ವಿತ ಅಧ್ಯಕ್ಷರೇ, ಸದನದಲ್ಲಿ ದೇಶ ಯಾವುದೇ ಸವಾಲುಗಳನ್ನು ಎದುರಿಸುವಂತಹ ಸಂದರ್ಭ ಬಂದಾಗಲೂ ಸದನ ಒಗ್ಗಟ್ಟಿನಿಂದ ಸಾಮರ್ಥ್ಯವನ್ನು ಪ್ರದರ್ಶಿಸಿದ ವೈಭವದ ಸಂಪ್ರದಾಯವಿದೆ ಮತ್ತು ನಮ್ಮ ಸಶಸ್ತ್ರ ಪಡೆಗಳಿಗೆ ಬದ್ಧತೆ ಮತ್ತು ಸಂಕಲ್ಪದ ಧೈರ್ಯ ತುಂಬಬೇಕಾಗಿದೆ. ಸದನ ಗಡಿಯಲ್ಲಿ ನಿಯೋಜಿಸಲ್ಪಟ್ಟಿರುವ ನಮ್ಮ ಸಶಸ್ತ್ರ ಪಡೆಗಳ ಶೌರ್ಯ, ಪರಾಕ್ರಮ, ಅದಮ್ಯ ಉತ್ಸಾಹದ ಮೇಲೆ ಸದನ ಸಂಪೂರ್ಣ ವಿಶ್ವಾಸ ಇಡಬೇಕಿದೆ.
  2. ಮಾನ್ಯರೇ, ನಿಮ್ಮ ಮೂಲಕ ನಾನು ದೇಶದ ಜನತೆಗೆ ನೀಡುವ ಭರವಸೆ ಎಂದರೆ ನಮ್ಮ ಸಶಸ್ತ್ರ ಪಡೆಗಳ ನೈತಿಕ ಮತ್ತು ಉತ್ತೇಜನ ಅತ್ಯುತ್ತಮವಾಗಿದ್ದು, ನಮ್ಮ ಯೋಧರು ಯಾವುದೇ ಬಗೆಯ ಸವಾಲು ಎದುರಾದರೂ ಅದರಿಂದ ಹೊರಬರುವ ಬದ್ಧತೆ ಹೊಂದಿದ್ದಾರೆ. ಈಗಲೂ ಕೂಡ ನಮ್ಮ ಯೋಧರು ಆಕ್ರಮಣಕ್ಕಿಂತ ಧೈರ್ಯ ಮತ್ತು ತಾಳ್ಮೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗೊಂದು ಮಾತಿದೆ.-“‘साहस खल श्र वसत’” ಅದರ ಅರ್ಥಗೆಲುವು ಶೌರ್ಯದಲ್ಲಿ ಅಡಗಿದೆ”. ನಮ್ಮ ಯೋಧರು ಸಂಯಮ, ಶೌರ್ಯ ಮತ್ತು ಪರಾಕ್ರಮದ ಸಂಕೇತವಾಗಿದ್ದಾರೆ. ಮಾನ್ಯರೇ, ನಮ್ಮ ಪ್ರಧಾನಮಂತ್ರಿಯವರ ಭರವಸೆಯ ಭೇಟಿ ದೇಶದ 130 ಕೋಟಿ ಭಾರತೀಯರು ನಮ್ಮ ಕಮಾಂಡರ್ ಗಳು ಮತ್ತು ಯೋಧರ ಬೆನ್ನಿಗಿದ್ದಾರೆ ಎಂಬ ಸಂದೇಶ ನೀಡಿದೆ. ವಿಶೇಷ ಬೆಚ್ಚನೆಯ ಉಡುಪುಗಳು, ವಾಸಿಸಲು ವಿಶೇಷ ಶಿಬಿರಗಳು ಮತ್ತು ಅಗತ್ಯ ಶಸ್ತ್ರಾಸ್ತ್ರಗಳನ್ನು ಯೋಧರಿಗೆ ನೀಡಲಾಗಿದೆ, ಪ್ರತಿಕೂಲ ಹವಾಮಾನಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಅವರನ್ನು ಸಜ್ಜುಗೊಳಿಸಲಾಗಿದೆ. ನಮ್ಮ ಯೋಧರ ಧೈರ್ಯ ಅತ್ಯುತ್ತಮ ಮಟ್ಟದಲ್ಲಿದೆ. ಅವರು ಆಕ್ಸಿಜನ್ ಕೊರತೆ ನಡುವೆಯೂ ಮುಂಚೂಣಿ ಪ್ರದೇಶಗಳಲ್ಲಿ ತೀವ್ರ ಶೀತ ಹವಾಗುಣದಲ್ಲೂ ಹೋರಾಡುವ ಧೈರ್ಯವನ್ನು ಹೊಂದಿದ್ದಾರೆ. ಸಿಯಾಚಿನ್ ಮತ್ತು ಕಾರ್ಗಿಲ್ ಗಳಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಅವರು ಶ್ರಮಿಸುತ್ತಿದ್ದಾರೆ.
  3. ಗೌರವಾನ್ವಿತ ಅಧ್ಯಕ್ಷರೇ, ಲಡಾಖ್ ನಲ್ಲಿ ನಾವು ಸವಾಲನ್ನು ಎದುರಿಸುತ್ತಿದ್ದೇವೆ ಎಂಬುದು ನಿಜ. ಆದರೆ ನಮ್ಮ ದೇಶ ಮತ್ತು ನಮ್ಮ ವೀರ ಯೋಧರು ಯಾವುದೇ ಸವಾಲುಗಳನ್ನು ಹತ್ತಿಕ್ಕುವ ವಿಶ್ವಾಸ ನನಗಿದೆ. ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸಾಹಸಗಳ ಬಗ್ಗೆ ಸದನ ಅವಿರೋಧವಾಗಿ ಗೌರವಿಸಲಿದೆ. ಐಕ್ಯತೆ ಸಂದೇಶ ಮತ್ತು ಯೋಧರ ಬಗೆಗಿನ ಸಂಪೂರ್ಣ ವಿಶ್ವಾಸದಿಂದಾಗಿ ದೇಶಾದ್ಯಂತ ಇರುವುದು ಮಾತ್ರವಲ್ಲದೆ, ಇಡೀ ಜಗತ್ತಿನಲ್ಲಿಯೇ ವಿಶ್ವಾಸವಿದೆಇದು ನಮ್ಮ ಸಶಸ್ತ್ರ ಪಡೆಗಳ ಅತ್ಯುತ್ಸಾಹಕ್ಕೆ ಹೊಸ ಶಕ್ತಿ ಮತ್ತು ಹೊಸ ವಿಶ್ವಾಸವನ್ನು ತುಂಬಲಿದೆ.

ಜೈ ಹಿಂದ್

***


(Release ID: 1656018) Visitor Counter : 582