ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಗ್ರಾಮೀಣ ಭಾರತದಲ್ಲಿ ಸಣ್ಣ ಕೈಗಾರೀಕರಣ ಪ್ರಕ್ರಿಯೆ ಕ್ರಿಯಾಶೀಲಗೊಳಿಸಿದ ಎಂಎಸ್ಎಂಇ ಸಚಿವಾಲಯ


ತಳಮಟ್ಟದಲ್ಲಿ ಆರ್ಥಿಕತೆ ಪುನಶ್ಚೇತನಕ್ಕೆ ಸಚಿವಾಲಯದಿಂದ ಫಲಾನುಭವಿ ಆಧಾರಿತ ಸ್ವಯಂ ಉದ್ಯೋಗ ಯೋಜನೆಯ ಪರಿಷ್ಕೃತ ಹೊಸ ಆವೃತ್ತಿಗಳ ಪ್ರಕಟ

ಅಗರಬತ್ತಿ ನಂತರ ಕುಂಬಾರಿಕೆ ಮತ್ತು ಜೇನುಸಾಕಾಣಿಕೆಗೆ ಹೊಸ ಯೋಜನೆಗಳ ಪ್ರಕಟ; 2020-21ನೇ ಸಾಲಿನಲ್ಲಿ ಸುಮಾರು 8000 ಫಲಾನುಭವಿಗಳಿಗೆ 130 ಕೋಟಿ ರೂ. ನೆರವು

ಈ ಉತ್ಪನ್ನಗಳಿಗೆ ಸಾಮಾನ್ಯ ಸೌಕರ್ಯಗಳಿರುವ ಕ್ಲಸ್ಟರ್ ಗಳನ್ನು ಫಲಾನುಭವಿಗಳ ನೆರವಿಗಾಗಿ ಅಭಿವೃದ್ಧಿ, ಆನಂತರ ಜೇಷ್ಠತಾ ಕೇಂದ್ರಗಳ ಸ್ಥಾಪನೆ ಉದ್ದೇಶ
ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಈ ಯೋಜನೆಗಳ ವಿಸ್ತರಣೆ ನೆರವು ನೀಡುವ ಗುರಿ

Posted On: 17 SEP 2020 1:05PM by PIB Bengaluru

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾಗಿಕೆಗಳ ಸಚಿವಾಲಯ(ಎಂಎಸ್ಎಂಇ) ಕೆಲವು ದಿನಗಳ ಹಿಂದೆ ಅಗರಬತ್ತಿ ಉತ್ಪಾದನೆಯಲ್ಲಿ ಆಸಕ್ತಿ ಹೊಂದಿರುವ ಕರಕುಶಲಕರ್ಮಿಗಳಿಗೆ ಬೆಂಬಲ ನೀಡುವುದನ್ನು ದುಪ್ಪಟ್ಟುಗೊಳಿಸುವ ಹಾಗೂ ವಿಸ್ತರಣೆಗೊಳಿಸುವ ಯೋಜನೆಯನ್ನು ಪ್ರಕಟಿಸಿತ್ತು. ಆ ಪ್ರಯತ್ನಗಳನ್ನು ಮತ್ತಷ್ಟು ಮುಂದುವರಿಸಿರುವ ಸಚಿವಾಲಯ, ಇದೀಗ ‘ಕುಂಬಾರಿಕೆ’ ಮತ್ತು ‘ಜೇನುಸಾಕಾಣಿಕೆ’ ಎರಡಕ್ಕೂ ಹೊಸ ಯೋಜನೆಗಳನ್ನು ಮತ್ತು ಮಾರ್ಗಸೂಚಿಗಳನ್ನು ಪ್ರಕಟಿಸಿದೆ

ಸಚಿವಾಲಯದ ಈ ಉಪಕ್ರಮಗಳಿಂದ ಸ್ವಯಂ ಉದ್ಯೋಗ ಆಧಾರಿತ ಫಲಾನುಭವಿಗಳಿಗೆ ನೆರವಾಗಲಿದೆ ಮತ್ತು ಆತ್ಮನಿರ್ಭರ ಭಾರತ ಅಭಿಯಾನದಡಿ ಗ್ರಾಮೀಣ ಆರ್ಥಿಕತೆ ಪುನರುಜ್ಜೀವನಗೊಳಿಸುವ ಗುರಿ ಹೊಂದಲಾಗಿದೆ.

ಸರ್ಕಾರ ಕುಂಬಾರಿಕೆ ಚಟುವಟಿಕೆಗೆ ಚಕ್ರ, ಜೇಡಿಮಣ್ಣಿನ ಬ್ಲಂಗರ್, ಕಣಕಣವಾವಗಿ ವಿಂಗಡಿಸುವುದು( ಗ್ರಾನುಲೇಟರ್) ಮತ್ತಿತರ ನೆರವು ಒದಗಿಸಲಿದೆ. ಅಲ್ಲದೆ ಸಾಂಪ್ರದಾಯಿಕ ಕುಂಬಾರಿಕೆ ಕರಕುಶಲಕರ್ಮಿಗಳಿಂದ ಚಕ್ರ ತಿರುಗಿಸಿ ಮಡಿಕೆ ಮಾಡುವ ಕುರಿತು ತರಬೇತಿ ನೀಡಲಾಗುವುದು ಮತ್ತು ಸ್ವಸಹಾಯ ಗುಂಪುಗಳ ಮೂಲಕ ಕುಂಬಾರಿಕೆ ಹೊರತುಪಡಿಸಿದ ಕರಕುಶಲಕರ್ಮಿಗಳಿಗೆ ಯಂತ್ರಗಳನ್ನು ಒತ್ತುವ ಮೂಲಕ ಮಡಿಕೆಗಳನ್ನು ಮಾಡುವುದರ ಬಗ್ಗೆ ತರಬೇತಿ ನೀಡಲಾಗುವುದು. ಸ್ವಸಹಾಯ ಗುಂಪುಗಳಲ್ಲಿ ಕುಂಬಾರಿಕೆ ಮತ್ತು ಕುಂಬಾರಿಕೆ ಮಾಡದ ಕರಕುಶಲಕರ್ಮಿಗಳಿಗೆ ಜಿಗ್ಗರ್-ಜಾಲಿ ತರಬೇತಿಯನ್ನು ಸಹ ನೀಡಲಾಗುವುದು. ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗುವುದು:

  • ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಕುಂಬಾರಿಕೆ ಕರಕುಶಲಕರ್ಮಿಗಳಿಗೆ ತಾಂತ್ರಿಕತೆಯ ಬಗ್ಗೆ ತಿಳಿಸಿಕೊಡಲಾಗುವುದು ಮತ್ತು ಕಡಿಮೆ ವೆಚ್ಚದಲ್ಲಿ ಹೊಸ ಉತ್ಪನ್ನಗಳ ಅಭಿವೃದ್ಧಿಗೆ ನೆರವಾಗುವುದು.
  • ಕುಂಬಾರಿಕೆ ಮಾಡುವ ಕರಕುಶಲಕರ್ಮಿಗಳ ಆದಾಯವನ್ನು ವೃದ್ಧಿಸಲು ತರಬೇತಿ ಮತ್ತು ಆಧುನಿಕ ಸ್ವಯಂಚಾಲಿತ ಉಪಕರಣವನ್ನು ಒದಗಿಸಲಾಗುವುದು.
  • ಸ್ವಸಹಾಯ ಗುಂಪುಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲು ಕುಂಬಾರಿಕೆ ಕರಕುಶಲಕರ್ಮಿಗಳನ್ನು ಬಳಸಿಕೊಳ್ಳಲಾಗುವುದು, ಆ ಮೂಲಕ ಹೊಸ ವಿನ್ಯಾಸದ ಆಕರ್ಷಕ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡಲಾಗುವುದು.
  • ಪಿಎಂಇಜಿಪಿ ಯೋಜನೆಯಡಿ ಘಟಕ ಸ್ಥಾಪಿಸಿ ಯಶಸ್ವಿ ಸಾಂಪ್ರದಾಯಿಕ ಕುಂಬಾರರಾಗುವುದನ್ನು ಉತ್ತೇಜಿಸುವುದು.
  • ದೊಡ್ಡ  ಖರೀದಿ ಕೇಂದ್ರಗಳು ಮತ್ತು ರಫ್ತು ಜಾಲದ ಜೊತೆ ಸಂಪರ್ಕ ಸಾಧಿಸಿ ಅಗತ್ಯ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವುದು.
  • ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುಂಬಾರಿಕೆಯನ್ನು ಉತ್ತೇಜಿಸಲು ಹೊಸ ಬಗೆಯ ಉತ್ಪನ್ನಗಳು ಮತ್ತು ಕಚ್ಚಾ ಸಾಮಗ್ರಿಗಳ ಆವಿಷ್ಕಾರಕ್ಕೆ ಒತ್ತು ನೀಡುವುದು.
  • ಕುಂಬಾರಿಕೆಯಿಂದ ಪಿಂಗಾಣಿ ವಸ್ತುಗಳವರೆಗೆ (ಪಾಟರಿ ಟು ಕ್ರಾಕರಿ) ಹಲವು ಉತ್ಪನ್ನಗಳನ್ನು ತಯಾರಿಸುವ ಪದವೀಧರರನ್ನು ಸಜ್ಜುಗೊಳಿಸುವುದು ಮತ್ತು
  • ಪ್ರಧಾನ ತರಬೇತುದಾರರಾಗಿ ಕೆಲಸ ಮಾಡಲು ಇಚ್ಛಿಸುವ ಕೌಶಲ್ಯಹೊಂದಿದ ಕುಂಬಾರಿಕೆ ಕರಕುಶಲಕರ್ಮಿಗಳಿಗೆ ತರಬೇತುದಾರರ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು.

ಕುಂಬಾರಿಕೆ ಸುಧಾರಣೆಗೆ ಯೋಜನೆಗಳಲ್ಲಿ ಈ ಅಂಶಗಳು ಸೇರಿವೆ:

  1. ಉದ್ಯಾನವನದ ಕುಂಡಗಳು, ಅಡುಗೆಗೆ ಬಳಸುವ ಮಡಿಕೆಗಳು, ಕುಲ್ಲಡ್, ಹೂಜಿಗಳು, ಆಕರ್ಷಕ ಉತ್ಪನ್ನಗಳು ಇತ್ಯಾದಿಗಳ ಉತ್ಪಾದನೆ ಅಗತ್ಯ ಕೌಶಲ್ಯ ತರಬೇತಿಯನ್ನು ನೀಡುವುದು, ಸ್ವಸಹಾಯ ಗುಂಪುಗಳ ಮೂಲಕ ಕುಂಬಾರಿಕೆ ಕರಕುಶಲಕರ್ಮಿಗಳನ್ನು ಪರಿಚಯಿಸುವುದು.
  2. ಉತ್ಪಾದನೆ ಹೆಚ್ಚಳ ಮಾಡಲು ಕುಂಬಾರಿಕೆಯಲ್ಲಿ ತೊಡಗಿರುವವರಿಗೆ ತಾಂತ್ರಿಕವಾಗಿ ತಿಳಿಸಿ ಕೊಡುವುದು ಮತ್ತು ಅವರ ದಕ್ಷತೆ ಹೆಚ್ಚಳಕ್ಕೆ ಹಾಗೂ ಉತ್ಪಾದನಾ ವೆಚ್ಚ ತಗ್ಗಿಸಲು ಹೊಸ ಯೋಜನೆಯಲ್ಲಿ ಒತ್ತು ನೀಡಲಾಗುವುದು.
  3. ದೊಡ್ಡ ಪ್ರಮಾಣದ ಖರೀದಿ ಕೇಂದ್ರಗಳು ಮತ್ತು ರಫ್ತುದಾರರೊಂದಿಗೆ ಕೈಜೋಡಿಸಿ, ಅಗತ್ಯ ಮಾರುಕಟ್ಟೆ ಅಭಿವೃದ್ಧಿಗೆ ಪ್ರಯತ್ನಗಳನ್ನು ನಡೆಸುವುದು.

ಈ ಯೋಜನೆಯಿಂದ ಒಟ್ಟು 6075 ಸಾಂಪ್ರದಾಯಿಕ ಮತ್ತು ಇತರ(ಸಾಂಪ್ರದಾಯಿಕೇತರ) ಕುಂಬಾರಿಕೆ ಕರಕುಶಲಕರ್ಮಿಗಳು/ಗ್ರಾಮೀಣ ನಿರುದ್ಯೋಗಿ ಯುವಕರು/ವಲಸೆ ಕಾರ್ಮಿಕರಿಗೆ ಪ್ರಯೋಜನವಾಗಲಿದೆ.

2020-21ನೇ ಸಾಲಿಗೆ ಆರ್ಥಿಕ ಬೆಂಬಲವಾಗಿ 19.50 ಕೋಟಿ ರೂ.ಗಳನ್ನು 6075 ಕರಕುಶಲಕರ್ಮಿಗಳಿಗೆ ವಿಸ್ತರಿಸಲಾಗುವುದು. ಅವರುಗಳಿಗೆ ಜೇಷ್ಠತಾ ಕೇಂದ್ರಗಳು, ಎಂಜಿಐಆರ್ ಐ, ವಾರ್ಧಾ, ಸಿಜಿಸಿಆರ್ ಐ, ಖುರ್ಜಾ, ವಿಎನ್ ಐಟಿ, ನಾಗ್ಪುರ ಮತ್ತು ಸೂಕ್ತವಾದ  ಐಐಟಿ/ಎನ್ಐಡಿ/ಎನ್ ಐ ಎಫ್ ಟಿ ಇತ್ಯಾದಿಗಳೊಂದಿಗೆ ಸೇರಿ, ಉತ್ಪನ್ನಗಳ ಅಭಿವೃದ್ಧಿ, ಆಧುನಿಕ ಕೌಶಲ್ಯ ಕಾರ್ಯಕ್ರಮ ಮತ್ತು ಗುಣಮಟ್ಟ ಪ್ರಾಮಾಣೀಕರಿಸಿದ ಉತ್ಪನ್ನಗಳಿಗೆ ಒತ್ತು ನೀಡಲಾಗುವುದು.

ಅಲ್ಲದೆ ಹೆಚ್ಚುವರಿಯಾಗಿ 50 ಕೋಟಿ ರೂಪಾಯಿ ಮೊತ್ತವನ್ನು ಸಚಿವಾಲಯದ ಎಸ್ ಎಫ್ ಯು ಆರ್ ಟಿ ಐ ಅಡಿಯಲ್ಲಿ ಟೆರ್ರಾಕೋಟಾ, ಕೆಂಪು ಮಣ್ಣಿನ ಮಡಿಕೆ ಮತ್ತು ಇತರ ಮೌಲ್ಯವರ್ಧಿತ ಉತ್ಪನ್ನಗಳನ್ನು ಕುಂಬಾರಿಕೆಯಿಂದ  ಪಿಂಗಾಣಿ ಉತ್ಪನ್ನಗಳವರೆಗೆ (ಪಾಟರಿಯಿಂದ ಕ್ರಾಕರಿವರೆಗೆ) ಟೈಲ್ಸ್  ಉತ್ಪಾದನೆ ಸಾಮರ್ಥ್ಯದ ವರೆಗೆ ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುವುದು.

ಸರ್ಕಾರದ ‘ಜೇನುಸಾಕಾಣಿಕೆ’ ಯೋಜನೆಗೆ ಜೇನು ಪೆಟ್ಟಿಗೆಗಳು, ಉಪಕರಣಗಳ ಕಿಟ್ ಇತ್ಯಾದಿ ನೆರವನ್ನು ನೀಡಲಾಗುವುದು. ಈ ಯೋಜನೆಯಡಿ ಜೇನು ಪೆಟ್ಟಿಗೆಗಳು ಮತ್ತು ಜೇನು ಕಾಲೋನಿಗಳನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ(ಪಿಎಂಜಿಕೆಆರ್ ಎ)ದ ಅಡಿ ಜಿಲ್ಲೆಗಳಲ್ಲಿ ವಿತರಿಸಲಾಗುವುದು. ಫಲಾನುಭವಿಗಳಿಗೆ ನಾನಾ ತರಬೇತಿ ಕೇಂದ್ರಗಳು/ರಾಜ್ಯ ಜೇನು ಸಾಕಾಣಿಕೆ ವಿಸ್ತರಣಾ ಕೇಂದ್ರಗಳು/ಪ್ರಧಾನ ತರಬೇತುದಾರರಿಂದ ನಿಗದಿತ ಪಠ್ಯಕ್ರಮದಂತೆ ಐದು ದಿನಗಳ ಜೇನು ಸಾಕಾಣಿಕೆ ತರಬೇತಿ ನೀಡಲಾಗುವುದು.

ಈ ಕೆಳಗಿನ ಕೆಲಸಗಳನ್ನು ಮಾಡಲಾಗುವುದು:

  • ಜೇನುಸಾಕಾಣಿಕೆದಾರರು/ರೈತರಿಗೆ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕ್ರಮ ಕೈಗೊಳ್ಳಲಾಗುವುದು.
  • ಜೇನುಸಾಕಾಣಿಕೆದಾರರು/ರೈತರಿಗೆ ಪೂರಕ ಆದಾಯ ಸೃಷ್ಟಿಗೆ ಕ್ರಮ.
  • ಜೇನು ಮತ್ತು ಇತರೆ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸುವುದು ಜೇನು ಸಾಕಾಣಿಕೆದಾರರು ವೈಜ್ಞಾನಿಕ ರೀತಿಯಲ್ಲಿ ಜೇನುಸಾಕಾಣೆ ಮಾಡುವುದು ಮತ್ತು ನಿರ್ವಹಣಾ ಪದ್ಧತಿಯನ್ನು ಅಳವಡಿಸಿಕೊಳ್ಳಲು ನೆರವು ನೀಡುವುದು.
  • ಜೇನು ಸಾಕಾಣಿಕೆಯಲ್ಲಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು.
  • ಪರಾಗಸ್ಪರ್ಶದ ಮೂಲಕ ಜೇನುಸಾಕಾಣಿಕೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದು.

ಈ ಉದ್ಯೋಗಾವಕಾಶಗಳ ಮೂಲಕ ಹೆಚ್ಚುವರಿ ಆದಾಯ ಮೂಲಗಳನ್ನು ಸೃಷ್ಟಿಸುವುದೇ ಅಲ್ಲದೆ, ಭಾರತವನ್ನು ಈ ಉತ್ಪನ್ನಗಳ ವಲಯದಲ್ಲಿ ಸ್ವಾವಲಂಬನೆ ಮಾಡುವುದು ಮತ್ತು ರಫ್ತು ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ನೆರವಾಗಲಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಜೇನು ಸಾಕಾಣಿಕೆ ಯೋಜನೆಯಿಂದ ಈ ಕೆಳಗಿನ ಸುಧಾರಣೆಗಳನ್ನು ತರಬಹುದು

  • ಜೇನುಸಾಕಾಣಿಕೆದಾರರ ಆದಾಯಗಳಿಕೆ ಹೆಚ್ಚಳವಾಗಲಿದೆ, ಜೇನು ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವುದು
  • ವೈಜ್ಞಾನಿಕ ರೀತಿಯಲ್ಲಿ ಜೇನುಸಾಕಾಣಿಕೆ ಮತ್ತು ನಿರ್ವಹಣಾ ಪದ್ಧತಿಗಳ ಅಳವಡಿಕೆಗೆ ನೆರವು ನೀಡುವುದು.
  • ಜೇನು ಆಧಾರಿತ ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಸಹಾಯ ನೀಡುವ ಗುರಿ ಇದೆ.

ಆರಂಭದಲ್ಲಿ ಈ ಯೋಜನೆಯಡಿ 2020-21ನೇ ಸಾಲಿನಲ್ಲಿ ಒಟ್ಟು 2050 ಜೇನುಸಾಕಾಣಿಕೆದಾರರು, ಉದ್ಯಮಿಗಳು, ರೈತರು, ನಿರುದ್ಯೋಗಿ ಯುವಕರು, ಆದಿವಾಸಿಗಳು ಇದರಿಂದ ಪ್ರಯೋಜನ ಪಡೆಯಲಿದ್ದಾರೆ. ಈ ಉದ್ದೇಶಕ್ಕಾಗಿ 2020-21ನೇ ಸಾಲಿನಲ್ಲಿ 13 ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು ನಿಗದಿಪಡಿಸಲಾಗಿದ್ದು, ಅದರಿಂದ 2050 ಜೇನುಸಾಕಾಣಿಕೆದಾರರಿಗೆ(1250 ಮಂದಿ ಸ್ವಸಹಾಯ ಗುಂಪುಗಳ ಕಾರ್ಯಕರ್ತರು ಮತ್ತು 800 ವಲಸೆ ಕಾರ್ಮಿಕರು) ಇವರಿಗೆ ಸಿಎಸ್ಐಆರ್/ಐಐಟಿಯ ಜೇಷ್ಠತಾ ಕೇಂದ್ರಗಳು ಅಥವಾ ವಿಶ್ವದರ್ಜೆಯ ಸಂಸ್ಥೆಗಳಿಂದ ಜೇನು ಆಧಾರಿತ ಹೊಸ ಉತ್ಪನ್ನಗಳ ಅಭಿವೃದ್ಧಿ ಬಗ್ಗೆ ತರಬೇತಿ ನೀಡಲಾಗುವುದು.

ಸಚಿವಾಲಯದ ಎಸ್ ಎಫ್ ಯು ಆರ್ ಟಿ ಐ ಯೋಜನೆಯಡಿ, ಜೇನುಸಾಕಾಣಿಕೆ ಕ್ಲಸ್ಟರ್ ಗಳ ಅಭಿವೃದ್ಧಿಗೆ ಹೆಚ್ಚುವರಿಯಾಗಿ 50 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ.

ಈ ಯೋಜನೆಗಳ ಕುರಿತ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಸಮಗ್ರ ಮಾರ್ಗಸೂಚಿಗಳನ್ನು ಸಚಿವಾಲಯದ ವೆಬ್ ಸೈಟ್ ನಲ್ಲಿ ಹಾಕಲಾಗಿದೆ. ಅಲ್ಲದೆ ಯೋಜನೆಗಳ ವಿವರಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕವೂ ಪ್ರಸಾರ ಮಾಡಲಾಗುತ್ತಿದೆ.

 

ಕೆಲವು ದಿನಗಳ ಹಿಂದೆ ತಳಮಟ್ಟದಲ್ಲಿ ಅಗರಬತ್ತಿ ಉತ್ಪಾದನೆ ಪುನರುಜ್ಜೀವನಕ್ಕೆ ಕೆಲವು ಕ್ರಮಗಳನ್ನು ಪ್ರಕಟಿಸಿದ್ದನ್ನು ಸ್ಮರಿಸಿಕೊಳ್ಳಬಹುದು, ಅದು ಭಾರತವನ್ನು ಆತ್ಮನಿರ್ಭರಗೊಳಿಸುವ ನಿಟ್ಟಿನಲ್ಲಿ ಮತ್ತು ಗೃಹ ಬಳಕೆಗೆ ಅಗತ್ಯವಾದ ಉತ್ಪನ್ನ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯಾಗಿದೆ. ಕರಕುಶಲಕರ್ಮಿಗಳಿಗೆ ತರಬೇತಿ, ಕಚ್ಚಾ ಸಾಮಗ್ರಿ ಒದಗಿಸುವುದು, ಸುವಾಸನೆ ಮತ್ತು ಪ್ಯಾಕಿಂಗ್ ನಲ್ಲಿ ಹೊಸ ವಿಧಾನಗಳ ಅಳವಡಿಕೆ, ಹೊಸ ಬಗೆಯ ಮತ್ತು ಪರ್ಯಾಯ ಕಚ್ಚಾ ಸಾಮಗ್ರಿಗಳ ಬಳಕೆ, ಮಾರುಕಟ್ಟೆ ಮತ್ತು ಆರ್ಥಿಕ ನೆರವು ನೀಡುವ ಮೂಲಕ ಹಲವು ನೆರವಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ರಮ ತಕ್ಷಣಕ್ಕೆ 1500 ಕರಕುಶಲಕರ್ಮಿಗಳಿಗೆ ನೆರವಾಗಲಿದೆ. ಅವರಿಗೆ ಸುಸ್ಥಿರ ಉದ್ಯೋಗದ ಜೊತೆಗೆ ಆದಾಯಗಳಿಕೆ ಹೆಚ್ಚಳಕ್ಕೂ ನೆರವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕರಕುಶಲಕರ್ಮಿಗಳು, ಸ್ವಸಹಾಯ ಗುಂಪುಗಳು
(ಎಸ್ ಎಚ್ ಜಿ ಎಸ್) ಮತ್ತು ವಲಸೆ ಕಾರ್ಮಿಕರಿಗೆ ವಿಶೇಷವಾಗಿ ಈ ಕಾರ್ಯಕ್ರಮದಿಂದ ಪ್ರಯೋಜನವಾಗಲಿದೆ. ಅಲ್ಲದೆ ಸ್ಥಳೀಯವಾಗಿ ಉದ್ಯೋಗಾವಕಾಶಗಳು ವೃದ್ಧಿಯಾಗಲಿವೆ, ಅಲ್ಲದೆ ಈ ಕಾರ್ಯಕ್ರಮ ಅಂತಹ ಉತ್ಪನ್ನಗಳಿಗೆ ರಫ್ತು ಮಾರುಕಟ್ಟೆ ವಶಪಡಿಸಿಕೊಳ್ಳಲು ನೆರವು ನೀಡಲಿದೆ.

*********



(Release ID: 1655606) Visitor Counter : 428