ಪ್ರಧಾನ ಮಂತ್ರಿಯವರ ಕಛೇರಿ

ಐತಿಹಾಸಿಕ ಕೋಸಿ ರೈಲು ಸೇತುವೆ ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಿ


ಬಿಹಾರದಲ್ಲಿ ಹೊಸ ರೈಲು ಮಾರ್ಗಗಳು ಮತ್ತು ವಿದ್ಯುದ್ದೀಕರಣ ಯೋಜನೆಗಳನ್ನು ಉದ್ಘಾಟಿಸಲಿರುವ ಪ್ರಧಾನ ಮಂತ್ರಿ

Posted On: 16 SEP 2020 6:00PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2020 ರ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 12 ಗಂಟೆಗೆ ವಿಡಿಯೋ-ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಐತಿಹಾಸಿಕ ಕೋಸಿ ರೈಲು ಮಹಾ ಸೇತುವೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಇದಲ್ಲದೆ ಬಿಹಾರದ ಪ್ರಯಾಣಿಕರ ಸೌಲಭ್ಯಗಳಿಗೆ ಸಂಬಂಧಿಸಿದ 12 ರೈಲು ಯೋಜನೆಗಳನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ. ಕಿಯುಲ್ ನದಿಯ ಹೊಸ ರೈಲ್ವೆ ಸೇತುವೆ, ಎರಡು ಹೊಸ ರೈಲ್ವೆ ಮಾರ್ಗಗಳು, 5 ವಿದ್ಯುದ್ದೀಕರಣ ಯೋಜನೆಗಳು, ಒಂದು ಎಲೆಕ್ಟ್ರಿಕ್ ಲೋಕೋಮೋಟಿವ್ ಶೆಡ್ ಮತ್ತು ಬಾರ್ಹ್-ಭಕ್ತಿಯಾರ್ ಪುರದ ನಡುವಿನ 3 ನೇ ಮಾರ್ಗದ ಯೋಜನೆ ಇವುಗಳಲ್ಲಿ ಸೇರಿವೆ.

ಕೋಸಿ ರೈಲು ಮಹಾಸೇತುವೆಯ ಉದ್ಘಾಟನೆಯು ಬಿಹಾರ ಇತಿಹಾಸದಲ್ಲಿ ಮತ್ತು ಇಡೀ ಪ್ರದೇಶವನ್ನು ಈಶಾನ್ಯಕ್ಕೆ ಸಂಪರ್ಕಿಸುವ ಒಂದು ಮಹತ್ವದ ಕ್ಷಣವಾಗಿದೆ.

1887 ರಲ್ಲಿ ನಿರ್ಮಲಿ ಮತ್ತು ಭಪ್ತಿಯಾಹಿ (ಸಾರೈಗಢ್) ನಡುವೆ ಮೀಟರ್ ಗೇಜ್ ಲಿಂಕ್ ನಿರ್ಮಿಸಲಾಯಿತು. 1934 ರಲ್ಲಿ ಭಾರಿ ಪ್ರವಾಹ ಮತ್ತು ಭಾರತ ನೇಪಾಳದಲ್ಲಿ ಸಂಭವಿಸಿದ  ತೀವ್ರ ಭೂಕಂಪದಿಂದಾಗಿ ಈ ರೈಲು ಮಾರ್ಗ ಕೊಚ್ಚಹೋಗಿತ್ತು. ಕೊಸಿ ನದಿಯ ರೌದ್ರಾವತಾರದ ಕಾರಣದಿಂದಾಗಿ ಈ ರೈಲು ಸಂಪರ್ಕವನ್ನು ಪುನಃಸ್ಥಾಪಿಸಲು ದೀರ್ಘಕಾಲದವರೆಗೆ ಯಾವುದೇ ಪ್ರಯತ್ನ ಮಾಡಲಿಲ್ಲ.

ಕೋಸಿ ಮಹಾ ಸೇತುವೆ ಯೋಜನೆಯನ್ನು 2003-04ರ ಅವಧಿಯಲ್ಲಿ ಭಾರತ ಸರ್ಕಾರ ಮಂಜೂರು ಮಾಡಿತು. ಕೋಸಿ ರೈಲು ಮಹಾಸೇತುವೆಯ ಉದ್ದ 1.9 ಕಿ.ಮೀ ಮತ್ತು ಅದರ ನಿರ್ಮಾಣ ವೆಚ್ಚ 516 ಕೋಟಿ ರೂ.ಗಳು. ಈ ಸೇತುವೆ ಭಾರತ-ನೇಪಾಳ ಗಡಿಯಲ್ಲಿ ಆಯಕಟ್ಟಿನ ಜಾಗದಲ್ಲಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಈ ಯೋಜನೆಯು ಪೂರ್ಣಗೊಂಡಿತು. ವಲಸೆ ಕಾರ್ಮಿಕರು ಸಹ ಇದರ ಕಾಮಗಾರಿ ಪೂರ್ಣಗೊಳಿಸಲು ಸೇರಿಕೊಂಡರು.

ಈ ಯೋಜನೆಯ ಸಮರ್ಪಣೆಯಿಂದಾಗಿ 86 ವರ್ಷದ ಕನಸು ನನಸಾಗುತ್ತಿದೆ ಮತ್ತು ಈ ಪ್ರದೇಶದ ಜನರ ಬಹು ಕಾಲದ ನಿರೀಕ್ಷೆಯನ್ನು ಈಡೇರಿಸುತ್ತಿದೆ. ಮಹಾ ಸೇತುವೆಯ ಸಮರ್ಪಣೆಯ ಜೊತೆಗೆ, ಪ್ರಧಾನ ಮಂತ್ರಿಯವರು ಸಹರ್ಸಾ- ಅಸಾನ್ಪುರ್ ಕುಫಾ ಡೆಮೊ ರೈಲಿಗೆ ಸುಪೌಲ್ ನಿಲ್ದಾಣದಿಂದ ಹಸಿರು ನಿಶಾನೆ ತೋರಲಿದ್ದಾರೆ. ನಿಯಮಿತ ರೈಲು ಸೇವೆ ಪ್ರಾರಂಭವಾದ ನಂತರ, ಇದು ಸುಪೌಲ್, ಅರಾರಿಯಾ ಮತ್ತು ಸಹರ್ಸಾ ಜಿಲ್ಲೆಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಈ ಪ್ರದೇಶದ ಜನರಿಗೆ ಕೋಲ್ಕತಾ, ದೆಹಲಿ ಮತ್ತು ಮುಂಬೈ ಪ್ರಯಾಣವನ್ನು ಸುಲಭಗೊಳಿಸುತ್ತದೆ.

ಹಾಜಿಪುರ-ಘೋಸ್ವರ್-ವೈಶಾಲಿ ಮತ್ತು ಇಸ್ಲಾಂಪುರ-ನಟೇಶರ್ ಎರಡು ಹೊಸ ಮಾರ್ಗಗಳನ್ನು ಉದ್ಘಾಟಿಸಲಿದ್ದಾರೆ. ಕರ್ನೌತಿ-ಭಕ್ತಿಯಾರ್ಪುರ್ ಲಿಂಕ್ ಬೈಪಾಸ್ ಮತ್ತು ಬರ್ಹ್- ಭಕ್ತಿಯಾರ್ಪುರ್ ನಡುವಿನ 3 ನೇ ಮಾರ್ಗದ ಉದ್ಘಾಟನೆಯನ್ನು ಸಹ ಪ್ರಧಾನಿಯವರು ನೆರವೇರಿಸಲಿದ್ದಾರೆ.

*****



(Release ID: 1655557) Visitor Counter : 189