ಪ್ರಧಾನ ಮಂತ್ರಿಯವರ ಕಛೇರಿ

ಸೆಪ್ಟೆಂಬರ್ 9 ರಂದು ಮಧ್ಯಪ್ರದೇಶದ ಬೀದಿ ಬದಿ ವ್ಯಾಪಾರಿಗಳೊಂದಿಗೆ ‘ಸ್ವನಿಧಿ ಸಂವಾದ’ ನಡೆಸಲಿರುವ ಪ್ರಧಾನಿ

Posted On: 08 SEP 2020 2:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020 ಸೆಪ್ಟೆಂಬರ್ 9 ರಂದು ಮಧ್ಯಪ್ರದೇಶದ ಬೀದಿ ಬದಿ ವ್ಯಾಪಾರಿಗಳೊಂದಿಗೆ ಸ್ವನಿಧಿ ಸಂವಾದ ನಡೆಸಲಿದ್ದಾರೆ.

ಭಾರತ ಸರ್ಕಾರ, ಕೋವಿಡ್ -19ರಿಂದ ಬಾಧಿತರಾಗಿದ್ದ ಬಡ ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗಲು, ಅವರು ಮತ್ತೆ ತಮ್ಮ ಜೀವನೋಪಾಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು 2020 ಜೂನ್ 1ರಂದು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಆರಂಭಿಸಿತು.

4.5 ಲಕ್ಷ ಬೀದಿ ಬದಿ ವ್ಯಾಪಾರಿಗಳು ಮಧ್ಯಪ್ರದೇಶದಲ್ಲಿ ನೋಂದಾಯಿಸಿಕೊಂಡಿದ್ದು, 4 ಲಕ್ಷ ವ್ಯಾಪಾರಿಗಳಿಗೆ ಗುರುತಿನ ಮತ್ತು ವ್ಯಾಪಾರಿ ಪ್ರಮಾಣ ಪತ್ರ ನೀಡಲಾಗಿದೆ. 2.45 ಲಕ್ಷ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಪೋರ್ಟಲ್ ಮೂಲಕ ಬ್ಯಾಂಕ್ ಗಳಿಗೆ ಸಲ್ಲಿಸಲಾಗಿದ್ದು, ಪೈಕಿ 1.4 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ 140 ಕೋಟಿ ರೂ. ಮೌಲ್ಯದ ಮೊತ್ತಕ್ಕೆ ಸಮ್ಮತಿ ನೀಡಲಾಗಿದೆ. ಮಧ್ಯಪ್ರದೇಶ ರಾಜ್ಯ ಒಟ್ಟು ಅರ್ಜಿಗಳನ್ನು ಅಂಗೀಕರಿಸಿರುವುದರಲ್ಲಿ ಮೊದಲ ಸ್ಥಾನದಲ್ಲಿದೆ. ಶೇ.47ರಷ್ಟು ಅರ್ಜಿಗಳು ರಾಜ್ಯವೊಂದರಿಂದಲೇ ಬಂದಿವೆ.

ರಾಜ್ಯದ ಯೋಜನೆಯ ಫಲಾನುಭವಿಗಳಿಗೆ ಕಾರ್ಯಕ್ರಮವನ್ನು ಸಾರ್ವಜನಿಕ ಸ್ಥಳಗಳಲ್ಲಿ ವೀಕ್ಷಿಸಲು 378 ಪುರಸಭೆಗಳಲ್ಲಿ ಎಲ್‌.ಇಡಿ ಪರದೆಗಳ ಮೂಲಕ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮವು ವೆಬ್ ಕಾಸ್ಟ್ ಮೂಲಕವೂ ಬಿತ್ತರವಾಗಲಿದೆ, ಇದಕ್ಕಾಗಿ ಮೈಗೌನಲ್ಲಿನ https://pmevents.ncog.gov.in/ಸಂಪರ್ಕದ ಮೂಲಕ ಮೊದಲೇ ನೋಂದಾಯಿಸಿಕೊಳ್ಳಬೇಕು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚವ್ಹಾಣ್ ಅವರು ಕೂಡ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗಿಯಾಗಲಿದ್ದಾರೆ.

ಪ್ರಧಾನಮಂತ್ರಿ ಅವರು ಮೂವರು ಫಲಾನುಭವಿಗಳೊಂದಿಗೆ ಅವರು ವ್ಯಾಪಾರ ಮಾಡುವ ಸ್ಥಳದಿಂದಲೇ ವರ್ಚುವಲ್ ಮೂಲಕ ಸಂವಾದ ನಡೆಸಲಿದ್ದಾರೆ

***


(Release ID: 1652301) Visitor Counter : 260