ನೀತಿ ಆಯೋಗ

ಬಹು ಆಯಾಮದ ಜಾಗತಿಕ ಬಡತನ ಸೂಚ್ಯಂಕ ಮತ್ತು ಭಾರತ ಕುರಿತ ಮಾಧ್ಯಮ ಪ್ರಕಟಣೆ

Posted On: 07 SEP 2020 4:07PM by PIB Bengaluru

1. ಸುಧಾರಣೆಗಳಿಗೆ ಚಾಲನೆ ನೀಡುವ ಸಲುವಾಗಿ, ಬಹು ಆಯಾಮದ ಜಾಗತಿಕ ಬಡತನ ಸೂಚ್ಯಂಕದ (ಎಂಪಿಐ) ಮೇಲ್ವಿಚಾರಣಾ ಕಾರ್ಯವಿಧಾನವನ್ನು ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿಯನ್ನು ನೋಡಲ್ ಏಜೆನ್ಸಿಯಾಗಿ ನೀತಿ ಆಯೋಗಕ್ಕೆ ವಹಿಸಲಾಗಿದೆ. 29 ಆಯ್ದ ಜಾಗತಿಕ ಸೂಚ್ಯಂಕಗಳಲ್ಲಿ ದೇಶದ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡುವ ಭಾರತ ಸರ್ಕಾರದ ನಿರ್ಧಾರದ ಭಾಗವಾಗಿ ಜಾಗತಿಕ ಬಡತನ ಸೂಚ್ಯಂಕ ಇದೆ. "ಜಾಗತಿಕ ಸೂಚ್ಯಂಕಗಳು ಸುಧಾರಣೆಗಳ ಚಾಲನೆ ಮತ್ತು ಬೆಳವಣಿಗೆ" ಉದ್ದೇಶವು ವಿವಿಧ ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ನಿಯತಾಂಕಗಳಲ್ಲಿ ಭಾರತದ ಕಾರ್ಯಕ್ಷಮತೆಯನ್ನು ಅಳೆಯುವ ಮತ್ತು ಮೇಲ್ವಿಚಾರಣೆ ಮಾಡುವ ಅಗತ್ಯವನ್ನು ಪೂರೈಸುವುದಾಗಿದೆ. ಮತ್ತು ಈ ಸೂಚ್ಯಂಕಗಳನ್ನು ಸ್ವಯಂ-ಸುಧಾರಣೆಯ ಸಾಧನಗಳಾಗಿ ಬಳಸುವುದನ್ನು ಶಕ್ತಗೊಳಿಸುವುದು, ನೀತಿಗಳ ಸುಧಾರಣೆ, ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಕೊನೆಯ ವ್ಯಕ್ತಿಯವರೆಗೂ ಸುಧಾರಿಸುವುದಾಗಿದೆ. ಸಂಪುಟ ಕಾರ್ಯದರ್ಶಿಯವರು ಜುಲೈನಲ್ಲಿ ಎಲ್ಲಾ ನೋಡಲ್ ಸಂಸ್ಥೆಗಳೊಂದಿಗೆ ಕಾರ್ಯಾಗಾರವನ್ನು ಆಯೋಜಿಸಿದ್ದರು, ಅಲ್ಲಿ ಅವರು ಪ್ರಕಾಶನ ಏಜೆನ್ಸಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರುವ ಅಗತ್ಯವನ್ನು ಒತ್ತಿ ಹೇಳಿದರು.

2. ಜಾಗತಿಕ ಬಡತನ ಸೂಚ್ಯಂಕವು 107 ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಳಗೊಂಡ ಬಹು ಆಯಾಮದ ಬಡತನದ ಅಂತರರಾಷ್ಟ್ರೀಯ ಮಾಪನವಾಗಿದೆ. ಇದನ್ನು ಆಕ್ಸ್‌ಫರ್ಡ್ ಬಡತನ ಮತ್ತು ಮಾನವಾಭಿವೃದ್ಧಿ ಉಪ ಕ್ರಮ (ಒಪಿಹೆಚ್‌ಐ) ಮತ್ತು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ  (ಯುಎನ್‌ಡಿಪಿ) ಮೊದಲ ಬಾರಿಗೆ 2010 ರಲ್ಲಿ ಯುಎನ್‌ಡಿಪಿಯ ಮಾನವ ಅಭಿವೃದ್ಧಿ ವರದಿಗಳಿಗಾಗಿ ಅಭಿವೃದ್ಧಿಪಡಿಸಿತು. ಜಾಗತಿಕ ಬಡತನ ಸೂಚ್ಯಂಕವನ್ನು ಪ್ರತಿವರ್ಷ ಜುಲೈನಲ್ಲಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಕುರಿತ ಉನ್ನತ ಮಟ್ಟದ ರಾಜಕೀಯ ವೇದಿಕೆಯಲ್ಲಿ (ಎಚ್‌ಎಲ್‌ಪಿಎಫ್) ಬಿಡುಗಡೆ ಮಾಡಲಾಗುತ್ತದೆ.

3. ಪೌಷ್ಠಿಕಾಂಶ, ಮಕ್ಕಳ ಮರಣ, ಶಾಲಾ ವರ್ಷಗಳು, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ ಮತ್ತು ಕುಟುಂಬ ಆಸ್ತಿಗಳ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗುತ್ತದೆ. ಸಮೀಕ್ಷೆಯಲ್ಲಿ  ಪ್ರತಿ ಮನೆಯನ್ನೂ 10 ನಿಯತಾಂಕಗಳ ಅಂಕಗಳ ಮೂಲಕ ಜಾಗತಿಕ ಬಡತನ ಸೂಚ್ಯಂಕವನ್ನು ಲೆಕ್ಕಹಾಕಲಾಗುತ್ತದೆ. ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಜನಸಂಖ್ಯಾ ವಿಜ್ಞಾನದ ಅಂತರರಾಷ್ಟ್ರೀಯ ಸಂಸ್ಥೆ (ಐಐಪಿಎಸ್) ಆಶ್ರಯದಲ್ಲಿ ನಡೆಸುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಹೆಚ್ಎಸ್) ಯನ್ನು ಬಳಸುತ್ತದೆ. ಜಾಗತಿಕ ಬಡತನ ಸೂಚ್ಯಂಕ 2020 ರ ಪ್ರಕಾರ, ಎನ್‌ಎಫ್‌ಹೆಚ್ಎಸ್ 4 (2015/16) ದತ್ತಾಂಶದ ಆಧಾರದ ಮೇಲೆ ಎಂಪಿಐ ಸ್ಕೋರ್ 0.123 ಮತ್ತು ಶೇ.27.91 ತಲೆ ಎಣಿಕೆ ಅನುಪಾತ ಹೊಂದಿರುವ 107 ದೇಶಗಳಲ್ಲಿ ಭಾರತ 62 ನೇ ಸ್ಥಾನದಲ್ಲಿದೆ. ನೆರೆಯ ರಾಷ್ಟ್ರಗಳಾದ ಶ್ರೀಲಂಕಾ (25 ನೇ ಸ್ಥಾನ), ಭೂತಾನ್ (68 ನೇ ಸ್ಥಾನ), ನೇಪಾಳ (65 ನೇ ಸ್ಥಾನ), ಬಾಂಗ್ಲಾದೇಶ (58 ನೇ ಸ್ಥಾನ), ಚೀನಾ (30 ನೇ ಸ್ಥಾನ), ಮ್ಯಾನ್ಮಾರ್ (69 ನೇ ಸ್ಥಾನ) ಮತ್ತು ಪಾಕಿಸ್ತಾನ (73 ನೇ ಸ್ಥಾನ) ಈ ಸೂಚ್ಯಂಕದಲ್ಲಿ ಸ್ಥಾನ ಪಡೆದಿವೆ. ಇತ್ತೀಚಿನ ಎನ್‌ಎಫ್‌ಹೆಚ್‌ಎಸ್ 5 (2019/20) ಎನ್‌ಎಫ್‌ಎಚ್‌ಎಸ್ 4 ರಿಂದೀಚೆಗೆ ಈ ನಿಯತಾಂಕಗಳಲ್ಲಿ ಕೇಂದ್ರೀಕೃತ ಯೋಜನೆಗಳು ಮತ್ತು ಕ್ರಮಗಳಿಂದ ವಿಶೇಷವಾಗಿ ನೈರ್ಮಲ್ಯ, ಅಡುಗೆ ಇಂಧನ, ವಸತಿ, ಕುಡಿಯುವ ನೀರು ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಗಮನಾರ್ಹ ರಾಷ್ಟ್ರೀಯ ಸುಧಾರಣೆಯನ್ನು ಕಾಣಲು ಸಜ್ಜಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸಮೀಕ್ಷೆಯನ್ನು ನಿಲ್ಲಿಸಲಾಗಿದೆ.

4. ಬಡತನ ಸೂಚ್ಯಂಕದ ನೋಡಲ್ ಏಜೆನ್ಸಿಯಾಗಿ, ನೀತಿ ಆಯೋಗ ಬಹು ಆಯಾಮದ ಬಡತನ ಸೂಚ್ಯಂಕ ಸಮನ್ವಯ ಸಮಿತಿಯನ್ನು (ಎಂಪಿಐಸಿಸಿ) ರಚಿಸಿದೆ. ಎಸ್‌ಡಿಜಿ ಸಲಹೆಗಾರ ಎಂ.ಎಸ್.ಸನ್ಯುಕ್ತ ಸಮದ್ದರ್ ಅವರ ಅಧ್ಯಕ್ಷತೆಯಲ್ಲಿರುವ ಎಂಪಿಐಸಿಸಿ, ಸಂಬಂಧಿತ ಸಚಿವಾಲಯಗಳು ಮತ್ತು ಇಲಾಖೆಗಳ ಸದಸ್ಯರನ್ನು ಹೊಂದಿದೆ.  ಅವುಗಳೆಂದರೆ  ವಿದ್ಯುತ್ ಇಲಾಖೆ, ಡಬ್ಲ್ಯುಸಿಡಿ, ದೂರಸಂಪರ್ಕ, ಎಂಒಎಸ್ಪಿಐ, ಗ್ರಾಮೀಣಾಭಿವೃದ್ಧಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ವಸತಿ ಮತ್ತು ನಗರ ವ್ಯವಹಾರಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಹಣಕಾಸು ಸೇವೆಗಳು. ಈ ಸಚಿವಾಲಯಗಳು / ಇಲಾಖೆಗಳನ್ನು ಸೂಚ್ಯಂಕದ ಹತ್ತು ನಿಯತಾಂಕಗಳಿಗೆ ಮ್ಯಾಪ್ ಮಾಡಲಾಗಿದೆ. ಒಪಿಹೆಚ್ಐ ಮತ್ತು ಯುಎನ್‌ಡಿಪಿಯ ತಜ್ಞರು, ಪ್ರಕಾಶನ ಏಜೆನ್ಸಿಯಾಗಿ, ಅವರ ತಾಂತ್ರಿಕ ಪರಿಣತಿಗಾಗಿ ಸಮಿತಿಯಲ್ಲಿದ್ದಾರೆ. ಎಂಪಿಐಸಿಸಿಯ ಮೊದಲ ಸಭೆ 2020 ರ ಸೆಪ್ಟೆಂಬರ್ 2 ರಂದು ನಡೆಯಿತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಶ್ರೇಣೀಕರಿಸಲು ಎಂಪಿಐ ಪ್ಯಾರಾಮೀಟರ್ ಡ್ಯಾಶ್‌ಬೋರ್ಡ್ ಸಿದ್ಧಪಡಿಸುವುದು ಮತ್ತು ರಾಜ್ಯ ಸುಧಾರಣಾ ಕ್ರಿಯಾ ಯೋಜನೆ (ಎಸ್‌ಆರ್‌ಎಪಿ) ಪ್ರಗತಿಯ ಹಂತದಲ್ಲಿದೆ. ಎಂಪಿಐಸಿಸಿಯು ಎಸ್‌ಆರ್‌ಪಿಯ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳೊಂದಿಗೆ ಕಾರ್ಯಾಗಾರವನ್ನು ಆಯೋಜಿಸಲಿದೆ.

***



(Release ID: 1652151) Visitor Counter : 2022