ಪ್ರಧಾನ ಮಂತ್ರಿಯವರ ಕಛೇರಿ
ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ
ಡಾ ಎಸ್ ರಾಧಾಕೃಷ್ಣನ್ ಅವರಿಗೆ ಗೌರವ ನಮನ
ಪ್ರಕಟಣಾ ದಿನಾಂಕ:
05 SEP 2020 9:57AM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಮತ್ತು ಡಾ ಎಸ್ ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
“ಮನಸ್ಸುಗಳನ್ನು ರೂಪಿಸಲು ಮತ್ತು ನಮ್ಮ ರಾಷ್ಟ್ರವನ್ನು ನಿರ್ಮಿಸಲು ನೀಡುತ್ತಿರುವ ಕೊಡುಗೆಗಳಿಗಾಗಿ, ಕಷ್ಟಪಟ್ಟು ದುಡಿಯುವ ಶಿಕ್ಷಕರಿಗೆ ನಾವು ಕೃತಜ್ಞರಾಗಿರುತ್ತೇವೆ. ಶಿಕ್ಷಕರ ದಿನದಂದು, ಅವರಿಗೆ ನಮ್ಮ ಕೃತಜ್ಞತೆಗಳು. ಡಾ.ಎಸ್.ರಾಧಾಕೃಷ್ಣನ್ ಅವರಿಗೆ ಅವರ ಜಯಂತಿಯಂದು ನಮ್ಮ ಗೌರವ ನಮನಗಳು.” ಎಂದು ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ.
"ನಮ್ಮ ರಾಷ್ಟ್ರದ ಭವ್ಯ ಇತಿಹಾಸದೊಂದಿಗೆ ನಮ್ಮನ್ನು ಬೆಸೆಯಲು ಜ್ಞಾನಿಗಳಾದ ನಮ್ಮ ಶಿಕ್ಷಕರಿಗಿಂತ ಉತ್ತಮರು ಬೇರೆ ಯಾರಿದ್ದಾರೆ. ಇತ್ತೀಚಿನ ನನ್ನ #MannKiBaat ನಲ್ಲಿ, ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟದಲ್ಲಿ ತೆರೆಮರೆಗೆ ಸರಿದಿರುವವರ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸುವಂತೆ ಶಿಕ್ಷಕರೊಂದಿಗೆ ನನ್ನ ಆಲೋಚನೆಯನ್ನು ಹಂಚಿಕೊಂಡಿದ್ದೇನೆ. ” ಎಂದು ಪ್ರಧಾನಿಯವರು ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
***
(ಪ್ರಕಟಣೆ ಐ.ಡಿ.: 1651547)
ವಿಸಿಟರ್ ಕೌಂಟರ್ : 230
ಪ್ರಕಟಣೆಯನ್ನು ಇದರಲ್ಲಿ ಓದಿ:
Punjabi
,
English
,
Urdu
,
हिन्दी
,
Marathi
,
Manipuri
,
Bengali
,
Assamese
,
Gujarati
,
Odia
,
Tamil
,
Telugu
,
Malayalam