ಗೃಹ ವ್ಯವಹಾರಗಳ ಸಚಿವಾಲಯ

ನಾಗರಿಕ ಸೇವೆ ಸಾಮರ್ಥ್ಯವರ್ಧನೆಯ ರಾಷ್ಟ್ರೀಯ ಕಾರ್ಯಕ್ರಮ (ಎನ್.ಪಿ.ಸಿ.ಎಸ್.ಬಿ.) ಕರ್ಮಯೋಗಿ ಯೋಜನೆಗೆ ಸಂಪುಟದ ಅನುಮೋದನೆ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಶ್ಲಾಘನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದರ್ಶಿತ್ವದ ಸುಧಾರಣೆಗೆ ಧನ್ಯವಾದ ಅರ್ಪಿಸಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ

“ನಾಗರಿಕ ಸೇವೆಗಳಲ್ಲಿ ಪರಿವರ್ತನಾತ್ಮಕ ಬದಲಾವಣೆ ತರುವ ಗುರಿ ಹೊಂದಿರುವ ಕರ್ಮಯೋಗಿ ಯೋಜನೆ”

“ಈ ಸಮಗ್ರ ಯೋಜನೆ ವೈಯಕ್ತಿಕ ಮತ್ತು ಸಾಂಸ್ಥಿಕ ಸಾಮರ್ಥ್ಯವರ್ಧನೆಗೆ ಗಮನ ಹರಿಸುತ್ತದೆ”

“21ನೇ ಶತಮಾನಕ್ಕೆ ಇದು ಹೆಗ್ಗುರುತಿನ ಸುಧಾರಣೆಯಾಗಿದ್ದು, ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಸಂಸ್ಕೃತಿಗೆ ಕೊನೆ ಹಾಡಲಿದೆ ಮತ್ತು ಹೊಸ ಕಾರ್ಯಸಂಸ್ಕೃತಿ ತರಲಿದೆ”

“ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಖಾತ್ರಿಪಡಿಸಲು ಗುರಿ ಚಾಲಿತ ಮತ್ತು ನಿರಂತರ ತರಬೇತಿ ನಾಗರಿಕ ಸೇವಕರನ್ನು ಸಬಲೀಕರಿಸಿ, ಸಂವೇದನೆಗೊಳಿಸುತ್ತದೆ”

“ಈ ಸುಧಾರಣೆ ಸರ್ಕಾರಿ ಕರ್ಮಚಾರಿಗಳಿಗೆ ತಮ್ಮದೇ ಆದ ಕಾರ್ಯಕ್ಷಮತೆಯನ್ನು ಸುಧಾರಿಸಲು ವ್ಯವಸ್ಥೆಯನ್ನು ಒದಗಿಸುವುದು ಮಾತ್ರವಲ್ಲದೆ ನವಭಾರತದ ಆಕಾಂಕ್ಷೆಗಳನ್ನು ಪೂರೈಸಲು ಮತ್ತು ಅದರಂತೆ ಬದುಕಲು ಸಹಕಾರಿಯಾಗುತ್ತದೆ”

“ನವಭಾರತಕ್ಕಾಗಿ ನಾಗರಿಕ ಸೇವೆ’ಯ ಭವಿಷ್ಯದ ನಾಗರಿಕ ಸೇವಾವರ್ಧನೆಗೆ ಮೋದಿ ಸರ್ಕಾರ ಸಂಪೂರ್ಣ ಬದ್ಧವಾಗಿದೆ”

Posted On: 02 SEP 2020 7:31PM by PIB Bengaluru

ನಾಗರಿಕ ಸೇವೆಗಳ ಸಾಮರ್ಥ್ಯ ವರ್ಧನೆಯ ರಾಷ್ಟ್ರೀಯ ಕಾರ್ಯಕ್ರಮ (ಎನ್‌.ಪಿಸಿಎಸ್‌.ಸಿಬಿ) ಕರ್ಮಯೋಗಿ ಯೋಜನೆಗಿಂದು ಸಚಿವ ಸಂಪುಟ ಅನುಮೋದನೆ ನೀಡಿರುವುದಕ್ಕೆ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಶ್ಲಾಘಿಸಿದ್ದಾರೆ. ಇದನ್ನು "ನಾಗರಿಕ ಸೇವೆಗಳಲ್ಲಿ ಪರಿವರ್ತನಾತ್ಮಕ ಬದಲಾವಣೆಯನ್ನು" ತರುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.

" ದೂರದರ್ಶಿತ್ವದ ಸುಧಾರಣೆಗೆ" ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಶ್ರೀ ಅಮಿತ್ ಶಾ ಕೃತಜ್ಞತೆ ಸಲ್ಲಿಸಿದ್ದಾರೆ. " ಸಮಗ್ರ ಮತ್ತು ಆಮೂಲಾಗ್ರ ಯೋಜನೆಯು ವೈಯಕ್ತಿಕ ಮತ್ತು ಸಾಂಸ್ಥಿಕ ಸಾಮರ್ಥ್ಯ ವರ್ಧನೆಯ ಮೇಲೆ ಕೇಂದ್ರೀಕರಿಸುತ್ತದೆ" ಎಂದು ಅವರು ಹೇಳಿದ್ದಾರೆ.

ಇದು 21 ನೇ ಶತಮಾನದ ಒಂದು ಹೆಗ್ಗುರುತಿನ ಸುಧಾರಣೆಯಾಗಿದ್ದು, ಇದು ಪ್ರತ್ಯೇಕವಾಗಿ ಕೆಲಸ ಮಾಡುವ ಸಂಸ್ಕೃತಿಯನ್ನು ಕೊನೆಗೊಳಿಸಿ, ಹೊಸ ಕಾರ್ಯ ಸಂಸ್ಕೃತಿಯನ್ನು ರೂಪಿಸುತ್ತದೆ. ಗುರಿ ಚಾಲಿತ ಮತ್ತು ನಿರಂತರ ತರಬೇತಿಯು ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸಲು ನಾಗರಿಕ ಸೇವಕರಿಗೆ ಅಧಿಕಾರ ಮತ್ತು ಸಂವೇದನೆಯನ್ನು ನೀಡುತ್ತದೆಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

" ಸುಧಾರಣೆಯು ಸರ್ಕಾರಿ ಕರ್ಮಚಾರಿಗಳಿಗೆ ತಮ್ಮದೇ ಆದ ಕಾರ್ಯಕ್ಷಮತೆಯನ್ನು ಸುಧಾರಿಸಲು ವ್ಯವಸ್ಥೆಯನ್ನು ಒದಗಿಸುವುದು ಮಾತ್ರವಲ್ಲದೆ ನವ ಭಾರತದ ಆಕಾಂಕ್ಷೆಗಳನ್ನು ಪೂರೈಸಲು ಮತ್ತು ಅದರಂತೆ ಬದುಕಲು ಸಹಕಾರಿಯಾಗುತ್ತದೆ."ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

ನವ ಭಾರತಕ್ಕೆ ನಾಗರಿಕ ಸೇವೆಭವಿಷ್ಯಕ್ಕೆ ಸನ್ನದ್ಧವಾದ ನಾಗರಿಕ ಸೇವೆಯನ್ನು ರೂಪಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಸಂಪೂರ್ಣ ಬದ್ಧವಾಗಿದೆ,” ಎಂದು ಅವರು ಹೇಳಿದ್ದಾರೆ.

ನಾಗರಿಕ ಸೇವಕರ ಸಾಮರ್ಥ್ಯವರ್ಧನೆಗೆ ಬುನಾದಿ ಹಾಕಲು ಎನ್.ಪಿ.ಸಿ.ಎಸ್.ಸಿ.ಬಿಯನ್ನು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ, ಆದ್ದರಿಂದ ಅವರು ಭಾರತೀಯ ಸಂಸ್ಕೃತಿ ಮತ್ತು ಸಂವೇದನೆಗಳಲ್ಲಿ ಭದ್ರವಾಗಿರುತ್ತಾರೆ ಮತ್ತು ಪ್ರಪಂಚದಾದ್ಯಂತದ ಅತ್ಯುತ್ತಮ ಸಂಸ್ಥೆಗಳು ಮತ್ತು ಅಭ್ಯಾಸಗಳಿಂದ ಕಲಿಯುವಾಗ ಅವರ ಮೂಲಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಸಮಗ್ರ ಸರ್ಕಾರಿ ಆನ್ಲೈನ್ ತರಬೇತಿ ವೇದಿಕೆ, “ ಜಿಓಟಿ ಕರ್ಮಯೋಗಿಅನ್ನು ಸ್ಥಾಪಿಸುವ ಮೂಲಕ ಕಾರ್ಯಕ್ರಮವನ್ನು ಕಾರ್ಯಾನುಷ್ಠಾನ ಮಾಡಲಾಗುವುದು. 46 ಲಕ್ಷ ಕೇಂದ್ರ ಸರ್ಕಾರಿ ನೌಕರರನ್ನು ವ್ಯಾಪ್ತಿಗೆ ತರಲು 510.86 ಕೋಟಿ ರೂ.ಗಳನ್ನು 2020-21ರಿಂದ 2024-25 ಐದು ವರ್ಷಗಳಲ್ಲಿ ವೆಚ್ಚಮಾಡಲಾಗುತ್ತಿದೆ.

***


(Release ID: 1650781) Visitor Counter : 226