ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್ಎಂಇ)ಗಳಿಗೆ ಸಕಾಲದಲ್ಲಿ ಪಾವತಿ ಖಾತ್ರಿಗೆ ಕೇಂದ್ರ ಸರ್ಕಾರದಿಂದ ಹಲವು ಐತಿಹಾಸಿಕ ಮಧ್ಯಪ್ರವೇಶ ಕ್ರಮಗಳು


ಎಂಎಸ್ಎಂಇಗಳಿಗೆ ಬಾಕಿ ಇರುವ ಆರ್ಥಿಕ ಸಹಾಯ ಬಿಡುಗಡೆ ನೇತೃತ್ವ ವಹಿಸಿದ ಎಂಎಸ್ಎಂಇ ಸಚಿವಾಲಯ

ಎಂಎಸ್ಎಂಇಗಳು ನೋಂದಣಿ ಹೆಸರಿನಲ್ಲಿ ಶುಲ್ಕ ವಸೂಲು ಮಾಡುವ ನಕಲಿ ವೆಬ್ ಸೈಟ್ ಗಳ ಬಗ್ಗೆ ಜಾಗೃತವಾಗಿರುವಂತೆ ಎಂಎಸ್ಎಂಇ ಸಚಿವಾಲಯ ಎಚ್ಚರಿಕೆ; ಸರ್ಕಾರದ ವೆಬ್ ಸೈಟ್ ನಲ್ಲಿ ಮಾತ್ರ ನೋಂದಣಿ ಮಾಡುವಂತೆ ಪುನರುಚ್ಛಾರ

Posted On: 02 SEP 2020 3:52PM by PIB Bengaluru

ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ(ಎಂಎಸ್ಎಂಇ) ದೀರ್ಘಕಾಲದ ಸಮಸ್ಯೆಗಳ ಪರಿಹಾರಕ್ಕೆ ಭಾರತ ಸರ್ಕಾರ ಇತ್ತೀಚೆಗೆ ಹಲವು ಸರಣಿ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಹಣಕಾಸು ಸಚಿವಾಲಯ, ಆತ್ಮನಿರ್ಭರ ಭಾರತ ಪ್ಯಾಕೇಜ್ ಭಾಗವಾಗಿ ಸರ್ಕಾರಿ ಸಂಸ್ಥೆಗಳು 45 ದಿನಗಳಲ್ಲಿ ಪಾವತಿಸಬೇಕಾಗಿರುವ ಬಾಕಿ ಹಣವನ್ನು ಎಂಎಸ್ ಎಂಇಗಳಿಗೆ ಪಾವತಿಸುವಂತೆ ಪ್ರಕಟಿಸಿದೆ.

ಘೋಷಣೆ ಬೆನ್ನಲ್ಲೇ ಎಂಎಸ್ಎಂಇ ಸಚಿವಾಲಯ, ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಕೇಂದ್ರದ ಎಲ್ಲ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳು(ಸಿಪಿಎಸ್ಇ) ಮತ್ತು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಮಾಲೋಚನೆ ನಡೆಸಿದೆ. ವಿಶೇಷವಾಗಿ ಸಿಪಿಎಸ್ಇಗಳ ಮುಖ್ಯಸ್ಥರೊಂದಿಗೆ ವಿಚಾರದೊಂದಿಗೆ ಸತತ ಸಮಾಲೋಚನೆ ಮಾಡಲಾಗಿದೆ.

ಇನ್ನೂ ಕೆಲವು ಮಧ್ಯ ಪ್ರದೇಶದ ಕ್ರಮಗಳನ್ನು ಪ್ರಮುಖವಾಗಿ ಇಲ್ಲಿ ಉಲ್ಲೇಖಿಸಲೇಬೇಕಾಗಿದೆ:

ವರದಿಗಳನ್ನು ಸಲ್ಲಿಸುವುದನ್ನು ಸುಲಭ ಮತ್ತು ಸರಳೀಕರಣಗೊಳಿಸುವುದು ಹಾಗೂ ನಿರಂತರವಾಗಿ ಯಾವುದೇ ಅಡೆತಡೆ ಇಲ್ಲದೆ ವರದಿಗಳನ್ನು ಸಲ್ಲಿಸಲು ನಿರ್ದಿಷ್ಟ ಆನ್ ಲೈನ್ ವರದಿ ಸಲ್ಲಿಸುವಿಕೆ ನಮೂನೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಅದರಲ್ಲಿ ತಿಂಗಳ ಪಾವತಿ ಮತ್ತು ತಿಂಗಳ ಬಾಕಿ ವಿವರಗಳನ್ನು ಸಲ್ಲಿಸಬಹುದಾಗಿದೆ. ಕಳೆದ ಮೂರು ತಿಂಗಳಲ್ಲಿ ಎಲ್ಲ ಸಚಿವಾಲಯಗಳು ಮತ್ತು ಸಿಪಿಎಸ್ಇಗಳು ಸುಮಾರು 6800 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಪಾವತಿಸಿರುವುದು ವರದಿಯಾಗಿದೆ. ಬಹುತೇಕ ಕೇಂದ್ರ ಸಚಿವಾಲಯಗಳು ಮತ್ತು ಸಿಪಿಎಸ್ಇಗಳು ತಿಂಗಳ ಬಾಕಿಯ ನಾಲ್ಕನೇ ಮೂರರಷ್ಟು ಅದೇ ತಿಂಗಳು ಪಾವತಿ ಮಾಡಿರುವುದು ಸಹ ನಡೆದಿದೆ. ಬಾಕಿ ಮೊತ್ತವನ್ನು ವ್ಯಾಪಾರದ ದೈನಂದಿನ ಪ್ರಗತಿಯಲ್ಲಿ ಮತ್ತು 45 ದಿನಗಳೊಳಗೆ ಪಾವತಿಸುವುದನ್ನು ನಿರೀಕ್ಷಿಸಲಾಗಿದೆ.  

ಬಾಕಿ ಪಾವತಿ ಮತ್ತು ನಿರಂತರ ವರದಿಗಳನ್ನು ಸಲ್ಲಿಸುವ ಕುರಿತು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಮಾಲೋಚನೆ ನಡೆಸಲಾಗಿದೆ. ಅದೇ ರೀತಿ ಆನ್ ಲೈನ್ ರಿಪೋರ್ಟಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ ಮತ್ತು ರಾಜ್ಯಗಳ ವರದಿ ಸಲ್ಲಿಸಲು ಸಹ ಅದೇ ವ್ಯವಸ್ಥೆ ಅಳವಡಿಸಲಾಗಿದೆ.

ಮತ್ತೊಂದು ಪ್ರಮುಖ ಮಧ್ಯಪ್ರವೇಶ ಕ್ರಮವೆಂದರೆ, ವೆಚ್ಚ ಇಲಾಖೆ ಅಧಿಕೃತ ಕಚೇರಿ ಜ್ಞಾಪನಾ ಪತ್ರವನ್ನು ಹೊರಡಿಸಿ, ಖರೀದಿ ಸಂಸ್ಥೆ ನಿಗದಿತ ಗಡುವಿನೊಳಗೆ ಹಣ ಪಾವತಿಸದೆ ವಿಳಂಬ ಮಾಡಿದರೆ ಯಾವಾಗ ಹಣ ಪಾವತಿಸಲಾಗುತ್ತದೆಯೋ ಅವಧಿಯವರೆಗೆ  ಪ್ರತಿ ತಿಂಗಳಿಗೆ ಶೇಕಡ 1 ರಷ್ಟು ಬಡ್ಡಿ ಪಾವತಿಸುವಂತೆ ಸೂಚಿಸಲಾಗಿದೆ.

ಮತ್ತೊಂದು ಮಹತ್ವದ ಮಧ್ಯಪ್ರವೇಶದಲ್ಲಿ, ಎಂಎಸ್ಎಂಇ ಸಚಿವಾಲಯದ ಮನವಿ ಮೇರೆಗೆ ಸರ್ಕಾರದ ಹಣಕಾಸು ಸಚಿವಾಲಯ ಟ್ರೆಡ್ಸ್ ಫ್ಲಾಟ್ ಫಾರಂನಲ್ಲಿ ಆನ್-ಬೋರ್ಡಿಂಗ್ ಶುಲ್ಕವನ್ನು ಮನ್ನಾ ಮಾಡಿದೆ.   ವೇದಿಕೆಯನ್ನು ಎಂಎಸ್ಎಂಇಗಳಿಗೆ ತಮಗೆ ಬರಬೇಕಿರುವ ಪಾವತಿಗಳ ವಿರುದ್ಧ ಬಿಲ್ ನಲ್ಲಿ ವಿನಾಯಿತಿ ನೀಡಲಾಗುವುದು. ಮೊದಲು ಎಂಎಸ್ಎಂಇಗಳು ಟ್ರೆಡ್ಸ್ ಕಾರ್ಯತಂತ್ರದ ಭಾಗವಾಗಿ ಸಂಬಂಧಿಸಿದ ವಿನಿಮಯಕ್ಕೆ ಹತ್ತು ಸಾವಿರ ರೂಪಾಯಿ ಆನ್ -ಬೋರ್ಡಿಂಗ್ ಶುಲ್ಕವನ್ನು ಪಾವತಿಸಬೇಕಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು. ಸರ್ಕಾರ ಇದೀಗ 2021 ಮಾರ್ಚ್ ವರೆಗೆ ಎಂಎಸ್ಎಂಇಗಳಿಗೆ ಆನ್-ಬೋರ್ಡಿಂಗ್ ಶುಲ್ಕ ಮನ್ನಾ ಮಾಡಲಾಗಿದೆ. ಬಹುತೇಕ ಸಿಪಿಎಸ್ಇಗಳು ಮತ್ತು ಹಲವು ಖಾಸಗಿ ಕಂಪನಿಗಳು ಈಗಾಗಲೇ ಟ್ರೆಡ್ಸ್ ಕಾರ್ಯತಂತ್ರದ ವೇದಿಕೆಯಲ್ಲಿವೆ. ಎಂಎಸ್ಎಂಇ ಸಚಿವಾಲಯ ಇದನ್ನು ಅನುಸರಿಸುವಂತೆ ಮನವಿ ಮಾಡಿದೆ.

ತ್ವರಿತವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಎಂಎಸ್ಎಂಇಗಳಿಗೆ ಟ್ರೆಡ್ಸ್ ಕುರಿತಂತೆ ಎಸ್ಐಡಿಬಿಐನ ಕೈಪಿಡಿಗೆ ಇಲ್ಲಿ ಕ್ಲಿಕ್ ಮಾಡಿ

Click here to see the SIDBI Brochure on TReDS which enables MSME suppliers to get quick access to low-cost-finance

ಎಂಎಸ್ಎಂಇಗಳ ವಹಿವಾಟಿಗೆ ಪೂರಕ ವಾತಾವರಣ ನಿರ್ಮಿಸಲು ಸಚಿವಾಲಯ ಹೊಸ ನೋಂದಣಿ ಪೋರ್ಟಲ್ ಉದ್ಯಮ್ (https://udyamregistration.gov.in/) ಅನ್ನು ಆರಂಭಿಸಿದ್ದು, ಅದನ್ನು ಟ್ರೆಡ್ಸ್ ಮತ್ತು ಜಿಇಎಂನಡಿ ಸಂಯೋಜಿಸಲಾಗಿದೆ. ಆದ್ದರಿಂದ ಎಂಎಸ್ಎಂಇಗಳು ಸರ್ಕಾರದ ಪೋರ್ಟಲ್ ನಲ್ಲಿ ನೋಂದಣಿ ಮಾಡುವುದು ಸುಲಭ ಮತ್ತು ಅತ್ಯಂತ ಉಪಯುಕ್ತವಾಗಿದೆ. ಟ್ರೆಡ್ಸ್ ಮತ್ತು ಜಿಇಎಂ ಕಾರ್ಯತಂತ್ರಗಳು ಸಹಜ ರೀತಿಯಲ್ಲಿ ಸಂಯೋಜನೆಗೊಳ್ಳಲಿವೆ. ಎಂಎಸ್ಎಂಇ/ಉದ್ಯಮ್ ನಲ್ಲಿ ನೋಂದಣಿಗೆ ಯಾವುದೇ ಶುಲ್ಕವಿಲ್ಲ, ಅದು ಸಂಪೂರ್ಣ ಉಚಿತವಾಗಿದೆ ಎಂದು ಪುನರುಚ್ಚರಿಸಲಾಗಿದೆ ಮತ್ತು ಅದು ಕಾಗದರಹಿತ ಹಾಗೂ ಸಂಪೂರ್ಣ ಸ್ವಯಂ ದೃಢೀಕರಣದ್ದಾಗಿದೆ. ಯಾವುದೇ ಸಾಕ್ಷ್ಯ ಅಥವಾ ದಾಖಲೆಗಳ ಅಗತ್ಯವಿಲ್ಲ.

ನಾವು ಎಂಎಸ್ಎಂಇಗಳು ಉದ್ಯಮ್ ನೋಂದಣಿ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳುವುದನ್ನು ಉತ್ತೇಜಿಸುತ್ತಿದ್ದೇವೆ. ಸೆಪ್ಟೆಂಬರ್ 1 ವರೆಗೆ ಸುಮಾರು 4 ಲಕ್ಷ ನೋಂದಣಿಗಳು ಈಗಾಗಲೇ ಆಗಿದ್ದು, ಕಳೆದ ಜುಲೈನಲ್ಲಿ ಹೊಸ ವ್ಯವಸ್ಥೆ ಆರಂಭಿಸಿದ ನಂತರ ಅದಕ್ಕೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ.

ನೋಂದಣಿ ಹೆಸರಿನಲ್ಲಿ ಕೆಲವು ನಕಲಿ ವೆಬ್ ಸೈಟ್ ಗಳು ಶುಲ್ಕವನ್ನು ವಿಧಿಸುತ್ತಿದ್ದು, ಬಗ್ಗೆ ಉದ್ಯಮಗಳು ಮತ್ತು ಉದ್ದಿಮೆದಾರರು ಜಾಗೃತರಾಗಿರಬೇಕು ಎಂದು ಎಂಎಸ್ಎಂಇ ಸಚಿವಾಲಯ  ಪುನರುಚ್ಚರಿಸಿದೆ. ನೋಂದಣಿಯನ್ನು ಕೇವಲ ಸರ್ಕಾರದ ವೆಬ್ ಸೈಟ್ ನಲ್ಲಿ ಮಾತ್ರವೇ ಮಾಡಬಹುದು ಎಂದು ಮನವಿ ಮಾಡಿದೆ.

ಎಂಎಸ್ಎಂಇ ಅಭಿವೃದ್ಧಿ ಕಾಯ್ದೆ 2006 ಪ್ರಕಾರ ಯಾವುದೇ ಬಾಕಿಯನ್ನು 45 ದಿನಗಳೊಳಗೆ ಪಾವತಿಸಬೇಕು. ಆದರೆ ಎಂಎಸ್ಎಂಇಗಳಿಗೆ ಸರಕು ಮತ್ತು ಸೇವೆಗಳನ್ನು ಪೂರೈಸುತ್ತಿರುವವರು ನಿರ್ದಿಷ್ಟ ಸಮಯದಲ್ಲಿ ತಮ್ಮ ಬಾಕಿಗಳನ್ನು ಪಡೆಯುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ಕೂಡ ಮಿತಿಯನ್ನು ದಾಟುತ್ತಿವೆ. ಆದ್ದರಿಂದ ಎಂಎಸ್ಎಂಇಗಳು ಸಂಕಷ್ಟಗಳನ್ನು ಎದುರಿಸುವ ಸ್ಥಿತಿ ಎದುರಾಗಿತ್ತು.

***


(Release ID: 1650700) Visitor Counter : 582