ಚುನಾವಣಾ ಆಯೋಗ
ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಚುನಾವಣಾ ಆಯೋಗ ತೀವ್ರ ಶೋಕ
Posted On:
31 AUG 2020 6:41PM by PIB Bengaluru
ಭಾರತೀಯ ಚುನಾವಣಾ ಆಯೋಗ, ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಸುನಿಲ್ ಅರೋರ ತೀವ್ರ ಸಂತಾಪ ಸೂಚಿಸಿ “ಪ್ರಣಬ್ ಅವರ ನಿಧನದಿಂದ ದೇಶದಲ್ಲಿ ಅತ್ಯಂತ ಗೌರವಿಸುವ ಸಾವಂತರು ಮತ್ತು ರಾಜಋಷಿ, ಆರ್ಥಿಕ, ಸಾಂವಿಧಾನಿಕ ಮತ್ತು ಐತಿಹಾಸಿಕ ವ್ಯವಹಾರಗಳ ಬಗ್ಗೆ ಆಪಾರ ಜ್ಞಾನಕಣಜವಾಗಿದ್ದರು’’ ಎಂದು ಹೇಳಿದ್ದಾರೆ.
ಪ್ರಣಬ್ ಮುಖರ್ಜಿ ಅವರು, ಭಾರತೀಯ ಚುನಾವಣಾ ಆಯೋಗದೊಂದಿಗೆ ಹೊಂದಿದ್ದ ನಿಕಟ ಬಾಂಧವ್ಯವನ್ನು ನೆನಪಿಸಿಕೊಂಡಿರುವ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಅರೋರಾ ಅವರು, ಅನಾರೋಗ್ಯದ ನಡುವೆಯೂ ಶ್ರೀ ಪ್ರಣಬ್ ಮುಖರ್ಜಿ ಅವರು 2020ರ ಜನವರಿ 23ರಂದು ಸುಕುಮಾರ್ ಸೇನ್ ಸ್ಮಾರಕ ಉಪನ್ಯಾಸದ ಮೊದಲ ಕಾರ್ಯಕ್ರಮದಲ್ಲಿ ಇಸಿಐ ಆಹ್ವಾನವನ್ನು ಒಪ್ಪಿ ಬಂದು ಉಪನ್ಯಾಸವನ್ನು ನೀಡಿದ್ದರು ಎಂದು ಹೇಳಿದ್ದಾರೆ. ಶ್ರೀ ಮುಖರ್ಜಿ ಅವರು ರಾಷ್ಟ್ರಪತಿಗಳಾಗಿ 2016 ಹಾಗೂ 2017, ಎರಡು ವರ್ಷವೂ ಭಾರತೀಯ ಚುನಾವಣಾ ಆಯೋಗದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.
“ದೇವರು ಅವರ ಕುಟುಂಬಕ್ಕೆ ಆಗಿರುವ ಅಪಾರ ನಷ್ಟವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ’’ಎಂದು ಶ್ರೀ ಅರೋರಾ ಹೇಳಿದ್ದಾರೆ.
***
(Release ID: 1650206)
Visitor Counter : 161