ರೈಲ್ವೇ ಸಚಿವಾಲಯ
ಬೆಂಗಳೂರಿನ ನೆಲಮಂಗಲದಿಂದ ಸೋಲಾಪುರದ ಬೇಲ್ ವರೆಗಿನ ನೈರುತ್ಯ ರೈಲ್ವೆಯ ಮೊಟ್ಟಮೊದಲ ರೋರೊ ಸೇವೆಗೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಸಿ. ಅಂಗಡಿ ಅವರಿಂದ ಹಸಿರು ನಿಶಾನೆ
ಬಹುಹಂತದ ಸಂಪರ್ಕವನ್ನು ಖಾತ್ರಿಪಡಿಸಲು ರೈಲ್ವೆಯು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ
ಮುಂದಾಳತ್ವ ವಹಿಸಿದ್ದಕ್ಕಾಗಿ ಶ್ರೀ ಸುರೇಶ್ ಅಂಗಡಿ ಅವರನ್ನು ಅಭಿನಂದಿಸಿದ ಶ್ರೀ ಬಿ ಎಸ್ ಯಡಿಯೂರಪ್ಪ: ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರದ ಭರವಸೆ
"ಬಹುಹಂತದ ಸಂಪರ್ಕವು ಪ್ರಧಾನಿಯವರ ಕನಸು" ಶ್ರೀ ಸುರೇಶ್ ಅಂಗಡಿ
ರೋರೋ ಸೇವೆಯು ರಸ್ತೆ ಮತ್ತು ರೈಲು ಸಾರಿಗೆಯ ಅತ್ಯುತ್ತಮ ವೈಶಿಷ್ಟ್ಯಗಳ ಸಂಯೋಜನೆಯಾಗಿದ್ದು, ಸದೃಢ ಮತ್ತು ನೇರ ರೈಲು ಸಂಪರ್ಕದಿಂದ ಕನಿಷ್ಠ ನಿರ್ವಹಣೆಯೊಂದಿಗೆ ಮನೆ ಬಾಗಿಲಿಗೆ ಸೇವೆ: ರಸ್ತೆ ಸಾರಿಗೆಯಿಂದ ಮನೆ ಮನೆಗೆ ಸರಕುಗಳ ವಿತರಣೆ
प्रविष्टि तिथि:
30 AUG 2020 12:43PM by PIB Bengaluru
ಬೆಂಗಳೂರಿನ ನೆಲಮಂಗಲದಿಂದ ಸೋಲಾಪುರದ ಬೇಲ್ ವರೆಗಿನ ನೈರುತ್ಯ ರೈಲ್ವೆಯ ಮೊಟ್ಟಮೊದಲ ರೋರೊ ಸೇವೆಗೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಸಿ. ಅಂಗಡಿ ಅವರು ಇಂದು ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ, “ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬಹುಹಂತದ ಸಂಪರ್ಕಕ್ಕೆ ಒತ್ತು ನೀಡುತ್ತಿದ್ದಾರೆ. ಈ ಪ್ರದೇಶದ ಎಪಿಎಂಸಿ ಮಾರುಕಟ್ಟೆಗಳು ರೋರೊಗೆ ಅಪಾರ ಅವಕಾಶವನ್ನು ಒದಗಿಸುತ್ತವೆ.” ಎಂದರು. ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿ ಅವರು ಈ ಉಪಕ್ರಮದಲ್ಲಿ ಮುಂದಾಳತ್ವ ವಹಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದ ಶ್ರೀ ಯಡಿಯೂರಪ್ಪ, ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಸಿ.ಅಂಗಡಿ, “ಬಹುಹಂತದ ಸಂಪರ್ಕವು ಪ್ರಧಾನ ಮಂತ್ರಿಯವರ ಕನಸು. ಬೆಂಗಳೂರು ಮತ್ತು ಸೋಲಾಪುರ ನಡುವೆ ಸಾವಿರಾರು ಲಾರಿಗಳು ಸಂಚರಿಸುತ್ತಿವೆ. ರೋರೋ ಸೇವೆಯಿಂದಾಗಿ ಪ್ರಯಾಣದ ಅವಧಿ ಕೇವಲ 17 ಗಂಟೆಗಳಾಗುತ್ತದೆ. ರೋರೋ ಸೇವೆಯು ಈ ಪ್ರದೇಶದ ಅಭಿವೃದ್ಧಿಗೆ ವೇಗ ತರಲಿದೆ.” ಎಂದರು.
ಇಂದಿನ ರೋರೊ ಸೇವೆಯ ಗ್ರಾಹಕರನ್ನು ಅವರು ಅಭಿನಂದಿಸಿದರು. ಇಂತಹ ಬೃಹತ್ ಕೆಲಸದಲ್ಲಿ ತೊಡಗಿಸಿಕೊಂಡ ರೈಲ್ವೆ ಸಿಬ್ಬಂದಿಯನ್ನು ಸಚಿವರು ಅಭಿನಂದಿಸಿದರು.
ರೋಲ್ ಆನ್ ರೋಲ್ ಆಫ್ (ರೋರೊ) ಎಂಬುದು ಸರಕುಗಳನ್ನು ತುಂಬಿದ ಸಾರಿಗೆ ವಾಹನಗಳನ್ನು ತೆರೆದ ರೈಲ್ವೆ ವ್ಯಾಗನ್ಗಳಲ್ಲಿ ಸಾಗಿಸುವ ಪರಿಕಲ್ಪನೆಯಾಗಿದೆ. ಪ್ರಧಾನಿಯವರು ತಮ್ಮ ಇತ್ತೀಚಿನ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಭಾರತವನ್ನು ಮುಂದಿನ ಹಂತದ ಅಭಿವೃದ್ಧಿಗೆ ಕೊಂಡೊಯ್ಯಲು ಮಲ್ಟಿಮೋಡಲ್ ಸಂಪರ್ಕವನ್ನು ಕಲ್ಪಿಸುವುದಾಗಿ ಹೇಳಿದ್ದರು.
ರೋರೋ ಸೇವೆಯು ರಸ್ತೆ ಮತ್ತು ರೈಲು ಸಾರಿಗೆಯ ಅತ್ಯುತ್ತಮ ವೈಶಿಷ್ಟ್ಯಗಳ ಸಂಯೋಜನೆಯಾಗಿದ್ದು, ಸದೃಢ ಮತ್ತು ನೇರ ರೈಲು ಸಂಪರ್ಕದಿಂದ ಕನಿಷ್ಠ ನಿರ್ವಹಣೆಯೊಂದಿಗೆ ಮನೆ ಬಾಗಿಲಿಗೆ ಸೇವೆಯನ್ನು ನೀಡುತ್ತವೆ. ರಸ್ತೆ ಸಾರಿಗೆಯಿಂದ ಮನೆ ಮನೆಗೆ ಸರಕುಗಳನ್ನು ವಿತರಿಸುವ ಅನುಕೂಲವಿದ್ದರೂ, ರಸ್ತೆಗಳಲ್ಲಿ ದಟ್ಟಣೆ ಮತ್ತು ಪ್ರಯಾಣಿಕರ ವಾಹನಗಳ ವಿಳಂಬಕ್ಕೆ ಕಾರಣವಾಗಿದೆ. ಇದು ಅಸುರಕ್ಷಿತ ಪ್ರಯಾಣದ ಪರಿಸ್ಥಿತಿಗಳಿಗೂ ಕಾರಣವಾಗುತ್ತದೆ. ಅಲ್ಲದೆ, ವಿವಿಧ ದಾಖಲೆಗಳ ಪರಿಶೀಲನೆಯಿಂದಾಗಿ ಅಂತರರಾಜ್ಯ ಚೆಕ್ ಪೋಸ್ಟ್ಗಳಲ್ಲಿ ವಿಳಂಬವಾಗುವುದರಿಂದ ಪ್ರಯಾಣದ ಸಮಯವೂ ಹೆಚ್ಚಾಗುತ್ತದೆ.
ಮತ್ತೊಂದೆಡೆ, ರೈಲ್ವೆಯು ಮಧ್ಯಮದಿಂದ ದೊಡ್ಡ ಪ್ರಮಾಣದ ಸರಕು ಸಾಗಣೆಗೆ ತೊಂದರೆಯಿಲ್ಲದ, ಪರಿಸರ ಸ್ನೇಹಿ ಸಾರಿಗೆಯನ್ನು ಒದಗಿಸುತ್ತದೆ. ರೈಲು ಸಾಗಣೆಯು ಎಲ್ಲಾ ಸಾರಿಗೆ ವಿಧಾನಗಳಿಗಿಂತ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ ಮತ್ತು ರಸ್ತೆ ಸಾರಿಗೆಗಿಂತ ಹೆಚ್ಚು ಸುರಕ್ಷಿತವಾಗಿದೆ.
ರೋರೋ ಪ್ರಯೋಜನಗಳು:
ರೋರೋ ಮಲ್ಟಿಮೋಡಲ್ ವಿತರಣಾ ಮಾದರಿಯಾಗಿದ್ದು, ಈ ಕೆಳಗಿನ ಅನುಕೂಲಗಳನ್ನು ಹೊಂದಿದೆ
- ಸರಕುಗಳು ಮತ್ತು ಅಗತ್ಯ ವಸ್ತುಗಳ ವೇಗದ ಚಲನೆ, ನಗರಗಳ ನಡುವಿನ ದಟ್ಟಣೆಯಿಂದಾಗಿ ಗುರಿ ತಲುಪಲು ಟ್ರಕ್ಗಳು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುತ್ತದೆ
- ರಸ್ತೆಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುತ್ತದೆ
- ಅಮೂಲ್ಯವಾದ ಇಂಧನವನ್ನು ಉಳಿಸುತ್ತದೆ
- ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುತ್ತದೆ
- ದೂರದ ಚಾಲನೆ ತಪ್ಪುವುದರಿಂದ ಟ್ರಕ್‌ನ ಸಿಬ್ಬಂದಿಗೆ ಪ್ರಯೋಜನ
- ಚೆಕ್ ಪೋಸ್ಟ್ಗಳು / ಟೋಲ್ ಗೇಟ್ಗಳ ತೊಂದರೆಗಳಿಲ್ಲ
- ಅಸ್ತಿತ್ವದಲ್ಲಿರುವ ಟ್ರ್ಯಾಕ್ನಲ್ಲಿ ರಸ್ತೆಮಾರ್ಗಗಳು ಮತ್ತು ರೈಲ್ವೆಗಳ ನಡುವೆ ತಡೆರಹಿತ ಅಂತರ-ಕಾರ್ಯಾಚರಣೆ-ಇಂಟರ್-ಮೋಡಲ್ ಸಾರಿಗೆ
- ಅಗತ್ಯ ವಸ್ತುಗಳ ನಿರಂತರ ಪೂರೈಕೆಯನ್ನು ಖಚಿತಪಡಿಸುವುದು
- ಲೋಡಿಂಗ್ / ಅನ್ ಲೋಡಿಂಗ್ ಗೆ 3 ಗಂಟೆಗಳ ಸಮಯ
- "ಸ್ಥಳೀಯತೆಗೆ ಆದ್ಯತೆ" ಗೆ ರೋರೋ ಬಲ ತುಂಬುತ್ತದೆ
- ಟ್ರಕ್ಗಳ ಮೂಲಕ ತುಂಡು / ವಿಕೇಂದ್ರೀಕೃತ ಲೋಡಿಂಗ್ ಅನ್ನು ಪ್ರೋತ್ಸಾಹಿಸುವ ಮೂಲಕ ಸ್ಥಳೀಯ ಎಂಎಸ್ಎಂಇ ಘಟಕಗಳಿಗೆ ಉತ್ತೇಜನ ನೀಡುತ್ತದೆ.
- TOP (ಟೊಮೆಟೊ, ಆಲೂಗಡ್ಡೆ ಮತ್ತು ಈರುಳ್ಳಿ) ಬೆಲೆಗಳನ್ನು ಸ್ಥಿರಗೊಳಿಸಲು "ಆಪರೇಷನ್ ಗ್ರೀನ್" ನಂತಹ ಸರ್ಕಾರದ ಉಪಕ್ರಮಗಳಿಗೆ RO-RO ಸಹಾಯ ಮಾಡುತ್ತದೆ.
- ಕೃಷಿ ಉತ್ಪಾದನೆಯ ಪ್ರದೇಶಗಳು ಮತ್ತು ಕೃಷಿ ಉತ್ಪನ್ನ ಬಳಕೆ ಕೇಂದ್ರಗಳ ನಡುವೆ ಸಂಪರ್ಕ ಒದಗಿಸುತ್ತದೆ
- ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಸೂಕ್ತ ಬೆಲೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ
- ಸರಕುಗಳ ಕೊರತೆ ಮತ್ತು ಹೆಚ್ಚುವರಿ ಮಾರುಕಟ್ಟೆಗಳನ್ನು ಸಮತೋಲನಗೊಳಿಸುತ್ತದೆ
.

ರೋರೋ ರೈಲು ಸೇವೆಗಳನ್ನು ಮೊದಲ ಬಾರಿಗೆ 1999 ರಲ್ಲಿ ಕೊಂಕಣ ರೈಲ್ವೆಯಲ್ಲಿ ಪರಿಚಯಿಸಲಾಯಿತು ಅಂದಿನಿಂದ ಅದು ಯಶಸ್ವಿಯಾಗಿ ಚಾಲನೆಯಲ್ಲಿದೆ.
ದೇಶದಲ್ಲಿ ಕೋವಿಡ್ -19 ಲಾಕ್‌ಡೌನ್ ಸಂದರ್ಭದಲ್ಲಿ, ರೋರೋ ಮಾದರಿಯು ಅನೇಕ ಸಾಗಣೆದಾರರಿಗೆ ರಕ್ಷಣೆಗೆ ನೆರವಾಯಿತು.
ಸೋಲಾಪುರ ಮೂಲದ ಸಂಸ್ಥೆ, ಮೆ / ಜಿತೇಂದ್ರ ರಿಯಾಲ್ಟಿ ಮತ್ತು ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪನಿ (ಜೆಆರ್ಪಿಎಲ್) ಸೋಲಾಪುರ ಮತ್ತು ಬೆಂಗಳೂರು ನಡುವಿನ ರೋರೋ ರೈಲು ಸೇವೆಗಳ ವಾಣಿಜ್ಯ ಕಾರ್ಯಸಾಧ್ಯತೆಯ ಬಗ್ಗೆ ಪರಿಶೋಧಿಸಿತು. ದಕ್ಷಿಣ ಮಧ್ಯ ಮತ್ತು ನೈಋತ್ಯ ರೈಲ್ವೆ ಶಿಫಾರಸು ಮಾಡಿದ ಕೇಂದ್ರ ರೈಲ್ವೆ ಸಲ್ಲಿಸಿದ ಕಾರ್ಯಸಾಧ್ಯತಾ ವರದಿಯ ಆಧಾರದ ಮೇಲೆ, ರೈಲ್ವೆ ಮಂಡಳಿಯು 2020 ರ ಏಪ್ರಿಲ್‌ನಲ್ಲಿ ಎರಡು ವಾಣಿಜ್ಯ ಕೇಂದ್ರಗಳಾದ ನೆಲಮಂಗಲ (ಬೆಂಗಳೂರು ಬಳಿ) ಮತ್ತು ಬೇಲ್ (ಸೋಲಾಪುರ ಬಳಿ) ನಡುವಿನ ರೋರೋ ಸೇವೆಗೆ ಅನುಮೋದನೆ ನೀಡಿದೆ.
ಕೃಷಿ ಉತ್ಪನ್ನಗಳಿಂದ ಸಮೃದ್ಧವಾಗಿರುವ ಬೆಂಗಳೂರು ಮತ್ತು ಸೋಲಾಪುರ ನಗರಗಳು ವ್ಯಾಪಾರ ಕೇಂದ್ರಗಳಾಗಿವೆ. ಹೆಚ್ಚಿನ ಸಂಖ್ಯೆಯ ಸರಕು ಸಾಗಣೆ ಈ ಎರಡು ನಗರಗಳ ನಡುವೆ ನಡೆಯುತ್ತದೆ. ಈ ಎರಡು ನಗರಗಳ ನಡುವಿನ ರೋರೋ ರೈಲು ಸೇವೆಗಳ ಮಾರ್ಗವು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರಗಳ ರಾಜ್ಯಗಳ ಮೂಲಕ ಹಾದುಹೋಗಲು ನಿರ್ಧರಿಸಲಾಯಿತು.
ಬೆಂಗಳೂರು-ಸೋಲಾಪುರ ರೋರೊ ಸೇವೆಯು ಭಾರತೀಯ ರೈಲ್ವೆಯಲ್ಲಿ ಖಾಸಗಿಯಾಗಿ ಕಾರ್ಯನಿರ್ವಹಿಸುವ ಏಕೈಕ ರೋರೋ ರೈಲು ಸೇವೆಯಾಗಿದೆ. ಇದು ಸೋಲಾಪುರ ಮತ್ತು ಬೆಂಗಳೂರಿನ ಎರಡು ಪ್ರಮುಖ ಮಾರುಕಟ್ಟೆಗಳಿಗೆ ಸಹಾಯ ಮಾಡುತ್ತದೆ ಮತ್ತು ಹೆದ್ದಾರಿಯಲ್ಲಿನ ದಟ್ಟಣೆಯನ್ನು ಸರಾಗಗೊಳಿಸುತ್ತದೆ ಮತ್ತು ಈ ಮಾರ್ಗದಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಪ್ರಯೋಜನ ನೀಡುತ್ತದೆ.
ಬೆಂಗಳೂರಿನಿಂದ ನಿರೀಕ್ಷಿಸುವ ಪ್ರಮುಖ ಸರಕುಗಳೆಂದರೆ ಮಸಾಲೆಗಳು, ಒಣ ಹಣ್ಣುಗಳು, ತೆಂಗಿನಕಾಯಿ, ಕಾಫಿ, ಪೌಷ್ಠಿಕ ಬೀಜಗಳು ಆಗಿದ್ದರೆ, ಸೋಲಾಪುರದಿಂದ ಕೃಷಿ ಉತ್ಪನ್ನಗಳಾದ ಈರುಳ್ಳಿ, ಬೇಳೆಕಾಳು, ಹಣ್ಣುಗಳು ಇತ್ಯಾದಿಗಳನ್ನು ಲೋಡ್ ಮಾಡುವ ಸಾಧ್ಯತೆಯಿದೆ. ಫೆಬ್ರವರಿ 2020 ರ ನಂತರ ಕೃಷಿ ಉತ್ಪನ್ನಗಳ ಸಾಗಣೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಪ್ರಯೋಜನ ಪಡೆಯುವ ಕ್ಷೇತ್ರಗಳು
|
1
|
ಕೃಷಿ
|
ಎಪಿಎಂಸಿ ತರಕಾರಿ ಮಾರುಕಟ್ಟೆ, ದಕ್ಷಿಣ ಭಾರತದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿದೆ
ನೆಲಮಂಗಲದಿಂದ ಸುಮಾರು 9 ಕಿ.ಮೀ ನಲ್ಲಿ 500 ಕ್ಕೂ ಹೆಚ್ಚು ಅಂಗಡಿಗಳು. ತುಮಕೂರು, ದಾಬಸ್ ಪೇಟೆ, ತಿಪಟೂರು, ಇತ್ಯಾದಿಗಳಿಂದ ತೆಂಗಿನಕಾಯಿ ಬೆಳೆಗಾರರಿಗೆ ಸೇವೆ ಸಲ್ಲಿಸುತ್ತಿವೆ
ಬೆಂಗಳೂರು ಗ್ರಾಮೀಣ ಪ್ರದೇಶಗಳಿಂದ ಅನಾನಸ್ ಬೆಳೆಗಾರರು
ಬೆಂಗಳೂರು ಗ್ರಾಮೀಣ ಪ್ರದೇಶದ ಸಪೋಟಾ ಬೆಳೆಗಾರರು
ಸೇಲಂನ ಸಾಬುದಾನ ತಯಾರಕರು
ಕರ್ನಾಟಕ ಗ್ರಾಮೀಣ ಪ್ರದೇಶಗಳ ಮಸಾಲೆ (ಒಣ ಮೆಣಸಿನಕಾಯಿ ಮತ್ತು ಇತರರು) ಬೆಳೆಗಾರರು
ನೆಲಮಂಗಲ ಮತ್ತು ನೆರೆಯ ಪ್ರದೇಶಗಳ ಬೇಗ ಹಾಳಾಗುವ ತರಕಾರಿಗಳು
|
|
2
|
ಕೈಗಾರಿಕೆಗಳು
|
ಯುನಿಬಿಕ್, ಡೆಂಜೊ, ಕಿರ್ಲೋಸ್ಕರ್, ಜಿಂದಾಲ್, ಕೆಮ್ವೆಲ್, ಪವರಿಕಾ ಮತ್ತು ನೆಲಮಂಗಲದಿಂದ 15 ಕಿ.ಮೀ.ನೊಳಗೆ ಇರುವ ಅನೇಕ ಫಾರ್ಮಾ ಇಂಡಸ್ಟ್ರಿಗಳು
|
|
3
|
ಸಾರಿಗೆ
|
ಪ್ರಮುಖ ಸಾರಿಗೆ ಕೇಂದ್ರ- ನೆಲಮಂಗಲದಿಂದ 15 ಕಿ.ಮೀ.ನಲ್ಲಿ ಪ್ರಮುಖ ಸಾರಿಗೆ ಸೇವೆಗಳು ಕಾರ್ಯನಿರ್ವಹಿಸುತ್ತಿವೆ
ಮೆ. ಟಿಸಿಐ, ಅಸೋಸಿಯೇಟೆಡ್ ಕ್ಯಾರಿಯರ್ಸ್, ಎಬಿಟಿ, ಪ್ರಕಾಶ್ ರೋಡ್ಲೈನ್ಸ್, ಡಿಡಿಟಿಸಿ ಇತ್ಯಾದಿ
ಪೀಣ್ಯ ಕೈಗಾರಿಕಾ ಪ್ರದೇಶ - ನೆಲಮಂಗಲದಿಂದ 20 ಕಿ.ಮೀ.
ದಾಬಸ್ ಪೇಟೆ ಕೈಗಾರಿಕಾ ಪ್ರದೇಶ - ನೆಲಮಂಗಲದಿಂದ 25 ಕಿ.ಮೀ.
ಹಿರೇಹಳ್ಳಿ ಕೈಗಾರಿಕಾ ಪ್ರದೇಶ - ನೆಲಮಂಗಲದಿಂದ 35 ಕಿ.ಮೀ.
|
|
4
|
ನಿರೀಕ್ಷಿತ ಸರಕುಗಳು
|
ಕೃಷಿ ಉತ್ಪಾದನೆ, ಕೈಗಾರಿಕಾ ಸರಕುಗಳು, ರಾಸಾಯನಿಕಗಳು, ಇತ್ಯಾದಿ.
|
ರೋರೋ ಸೇವೆಯ ಅನುಕೂಲಗಳು ಮತ್ತು ಅವಕಾಶಗಳಿಂದಾಗಿ ರಾಜ್ಯಸರ್ಕಾರವು ರೋರೋಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದೆ. ತೊಂದರೆಯಿಲ್ಲದ ರೋರೋ ಸೇವೆಯಿಂದ, ಎರಡೂ ತುದಿಗಳ ಕೃಷಿ ಮತ್ತು ಕೈಗಾರಿಕೆಗಳು ಅಪಾರ ಪ್ರಯೋಜನವನ್ನು ಪಡೆಯುತ್ತವೆ, ಇದು ಎಲ್ಲಾ ಪಾಲುದಾರರಿಗೆ ಗೆಲುವಿನ ಸನ್ನಿವೇಶವಾಗಿರುತ್ತದೆ.
***
(रिलीज़ आईडी: 1649851)
आगंतुक पटल : 300