ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ನಗರ ವಲಸಿಗರು/ ಬಡವರಿಗೆ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳ ಅಭಿವೃದ್ಧಿಗೆ ಸಂಪುಟ ಅಂಗೀಕಾರ

Posted On: 08 JUL 2020 4:28PM by PIB Bengaluru

ನಗರ ವಲಸಿಗರು/ ಬಡವರಿಗೆ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳ ಅಭಿವೃದ್ಧಿಗೆ ಸಂಪುಟ ಅಂಗೀಕಾರ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ನಗರ ವಲಸಿಗರು/ ಬಡವರಿಗೆ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳನ್ನು (ಎಎಚ್ಆರ್ಸಿ) ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ.

  1.  ಅಸ್ತಿತ್ವದಲ್ಲಿರುವ ಖಾಲಿ ಇರುವ ಸರ್ಕಾರಿ ಅನುದಾನಿತ ವಸತಿ ಸಂಕೀರ್ಣಗಳನ್ನು ರಿಯಾಯಿತಿ ಒಪ್ಪಂದಗಳ ಮೂಲಕ 25 ವರ್ಷಗಳವರೆಗೆ ಎಆರ್ಎಚ್ಸಿಗಳಾಗಿ ಪರಿವರ್ತಿಸಲಾಗುತ್ತದೆ. ಕೊಠಡಿಗಳ ದುರಸ್ತಿ / ರೆಟ್ರೊಫಿಟ್ ಮತ್ತು ನಿರ್ವಹಣೆ, ನೀರು, ಒಳಚರಂಡಿ, ನೈರ್ಮಲ್ಯ, ರಸ್ತೆ ಮುಂತಾದ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಒಪ್ಪಂದ ಮಾಡಿಕೊಂಡವರು ಸಂಕೀರ್ಣಗಳನ್ನು ವಾಸಯೋಗ್ಯವಾಗಿ ಮಾಡುತ್ತಾರೆ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪಾರದರ್ಶಕ ಬಿಡ್ಡಿಂಗ್ ಮೂಲಕ ಒಪ್ಪಂದ ಮಾಡಿಕೊಳ್ಳುವವರನ್ನು ಆಯ್ಕೆ ಮಾಡುತ್ತವೆ. ಮತ್ತೊಂದು ಅವಧಿಗೆ ಮುಂದುವರೆಯಲು ಅಥವಾ ಸ್ವಂತವಾಗಿ ಮುಂದುವರೆಯಲು ಸಂಕೀರ್ಣಗಳು 25 ವರ್ಷಗಳ ನಂತರ ಮತ್ತೆ ಯುಎಲ್ಬಿಗಳಾಗಿ ಪರಿವರ್ತಿತವಾಗುತ್ತವೆ.
  2. ಬಳಕೆಯ ಅನುಮತಿ, ಶೇ.50 ಹೆಚ್ಚುವರಿ ಎಫ್ಎಆರ್ / ಎಫ್ಎಸ್, ಆದ್ಯತೆಯ ವಲಯದ ಸಾಲ ದರದಲ್ಲಿ ರಿಯಾಯಿತಿ ಸಾಲ, ಕೈಗೆಟುಕುವ ವಸತಿಗಳಿಗೆ ಸಮನಾಗಿ ತೆರಿಗೆ ವಿನಾಯಿತಿ ಮುಂತಾದ ವಿಶೇಷ ಪ್ರೋತ್ಸಾಹಗಳನ್ನು ಖಾಸಗಿ / ಸಾರ್ವಜನಿಕ ಸಂಸ್ಥೆಗಳಿಗೆ 25 ವರ್ಷಗಳ ಕಾಲ ತಮ್ಮದೇ ಖಾಲಿ ಭೂಮಿಯಲ್ಲಿ ಎಆರ್ಎಚ್ಸಿಗಳನ್ನು ಅಭಿವೃದ್ಧಿಪಡಿಸಲು ನೀಡಲಾಗುವುದು.

ತಯಾರಿಕಾ ಉದ್ಯಮದ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು, ಆತಿಥ್ಯ, ಆರೋಗ್ಯ, ದೇಶೀಯ / ವಾಣಿಜ್ಯ ಸಂಸ್ಥೆಗಳು, ಮತ್ತು ನಿರ್ಮಾಣ ಅಥವಾ ಇತರ ಕ್ಷೇತ್ರಗಳ ಸೇವಾ ಪೂರೈಕೆದಾರರು, ಉತ್ತಮ ಅವಕಾಶಗಳನ್ನು ಅರಸಿ ಗ್ರಾಮೀಣ ಪ್ರದೇಶಗಳಿಂದ ಅಥವಾ ಸಣ್ಣ ಪಟ್ಟಣಗಳಿಂದ ಬರುವ ಕಾರ್ಮಿಕರು, ವಿದ್ಯಾರ್ಥಿಗಳು ಎಆರ್ಎಚ್ಸಿಗಳ ಫಲಾನುಭವಿಗಳಾಗಿರುತ್ತಾರೆ .

600 ಕೋಟಿ ರೂ.ಗಳ ವೆಚ್ಚವನ್ನು ತಾಂತ್ರಿಕ ನಾವೀನ್ಯತೆ ಅನುದಾನ ರೂಪದಲ್ಲಿ ಅಂದಾಜಿಸಲಾಗಿದೆ, ಇದನ್ನು ನಿರ್ಮಾಣಕ್ಕೆ ಗುರುತಿಸಲಾದ ನವೀನ ತಂತ್ರಜ್ಞಾನಗಳನ್ನು ಬಳಸುವ ಯೋಜನೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಆರಂಭದಲ್ಲಿ ಸುಮಾರು ಮೂರು ಲಕ್ಷ ಫಲಾನುಭವಿಗಳನ್ನು ಎಆರ್ಎಚ್ಸಿ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ.

ಎಆರ್ಎಚ್ಸಿಗಳು ನಗರ ಪ್ರದೇಶಗಳಲ್ಲಿ ಹೊಸ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲಿದ್ದು, ಕೆಲಸದ ಸ್ಥಳಕ್ಕೆ ಹತ್ತಿರವಿರುವ ಕೈಗೆಟುಕುವ ಬಾಡಿಗೆಗೆ ವಸತಿ ಲಭ್ಯವಾಗುವಂತೆ ಮಾಡುತ್ತವೆ. ಎಆರ್ಎಚ್ಸಿಗಳ ಅಡಿಯಲ್ಲಿ ಹೂಡಿಕೆ ಮಾಡುವುದರಿಂದ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಎಆರ್ಎಚ್ಸಿಗಳು ಅನಗತ್ಯ ಪ್ರಯಾಣ, ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ಕಡಿಮೆಮಾಡುತ್ತವೆ.

ಸರ್ಕಾರದ ಅನುದಾನಿತ ಖಾಲಿ ವಸತಿಗಳನ್ನು ಆರ್ಥಿಕ ಉತ್ಪಾದನೆಗಾಗಿ ಎಆರ್ಎಚ್ಸಿಗಳಾಗಿ ಪರಿವರ್ತಿಸಲಾಗುತ್ತದೆ. ಯೋಜನೆಯು ಸಂಸ್ಥೆಗಳು ತಮ್ಮ ಖಾಲಿ ಭೂಮಿಯಲ್ಲಿ ಎಎಚ್ಆರ್ಸಿಗಳನ್ನು ಅಭಿವೃದ್ಧಿಪಡಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ, ಇದು ಹೊಸ ಹೂಡಿಕೆ ಅವಕಾಶಗಳನ್ನು ಮತ್ತು ಬಾಡಿಗೆ ವಸತಿ ವಲಯದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ.

ಹಿನ್ನೆಲೆ:

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು (MoHUA) ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ ಉಪ-ಯೋಜನೆಯಾಗಿ ನಗರ ವಲಸಿಗರು / ಬಡವರಿಗೆ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳನ್ನು (ARHC) ಯೋಜಿಸಿದೆ. ಯೋಜನೆಯನ್ನು ಹಣಕಾಸು ಸಚಿವರು 2020 ಮೇ 14 ರಂದು ಘೋಷಿಸಿದ್ದರು. ಯೋಜನೆಯು 'ಆತ್ಮನಿರ್ಭರ ಭಾರತ್' ದೃಷ್ಟಿಕೋನವನ್ನು ಈಡೇರಿಸಲಿದೆ.

ಕೋವಿಡ್-19 ಸಾಂಕ್ರಾಮಿಕ ರೋಗವು, ಗ್ರಾಮೀಣ ಪ್ರದೇಶಗಳಿಂದ ಅಥವಾ ಸಣ್ಣ ಪಟ್ಟಣಗಳಿಂದ ನಗರ ಪ್ರದೇಶಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಹುಡುಕಿ ಬಂದ ಕಾರ್ಮಿಕರು / ನಗರ ಬಡವರ ಬೃಹತ್ ಹಿಮ್ಮುಖ ವಲಸೆಗೆ ಕಾರಣವಾಗಿದೆ. ಸಾಮಾನ್ಯವಾಗಿ, ವಲಸಿಗರು ಕಡಿಮೆ ಬಾಡಿಗೆಗಾಗಿ ಕೊಳೆಗೇರಿಗಳು, ಅನೌಪಚಾರಿಕ / ಅನಧಿಕೃತ ಕಾಲೊನಿಗಳು ಅಥವಾ ನಗರದ ಹೊರ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಅವರು ತಮ್ಮ ಕೆಲಸದ ಸ್ಥಳಗಳಿಗೆ ನಡೆದು ಅಥವಾ ಸೈಕಲ್ ತುಳಿದು ಹೋಗುವುದರಿಂದ ರಸ್ತೆಗಳಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಖರ್ಚುಗಳನ್ನು ಕಡಿಮೆ ಮಾಡಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ.

***


(Release ID: 1637330) Visitor Counter : 261