PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 27 JUN 2020 6:28PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

ಕೋವಿಡ್ -19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ಡೇಟ್: ಸಕ್ರಿಯ ಪ್ರಕರಣಗಳನ್ನು ಹಿಂದಿಕ್ಕಿದ ಚೇತರಿಕೆ ಪ್ರಕರಣಗಳ ಸಂಖ್ಯೆ; ಗುಣಮುಖರಾಗಿ ಚೇತರಿಸಿಕೊಂಡವರ ಮತ್ತು ಸಕ್ರಿಯ ಪ್ರಕರಣಗಳ ಅಂತರ ಸುಮಾರು 1 ಲಕ್ಷದಷ್ಟು.

ಕೋವಿಡ್ -19  ಪ್ರಕರಣಗಳಲ್ಲಿ  ಗುಣಮುಖರಾದವರ ಸಂಖ್ಯೆ ತ್ವರಿತವಾಗಿ ಏರುತ್ತಿದ್ದು, ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆಯನ್ನು ಹಿಂದಿಕ್ಕಿದೆ. ಗುಣಮುಖರಾದವರು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆಗಳ ನಡುವಣ ಅಂತರ  ಸುಮಾರು 1 ಲಕ್ಷದಷ್ಟಾಗಿದೆ. ಇಂದು ಸಕ್ರಿಯ ಪ್ರಕರಣಗಳ ಸಂಖ್ಯೆಗೆ ಹೋಲಿಸಿದಾಗ ಗುಣಮುಖರಾದವರ ಸಂಖ್ಯೆ 98,493 ರಷ್ಟು ಹೆಚ್ಚಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,97,387 ಆಗಿದ್ದರೆಗುಣಮುಖರಾದವರ ಸಂಖ್ಯೆ 2,95,880 ರಷ್ಟಾಗಿದೆ. ಇದು ಉತ್ತೇಜನಕಾರಿ ಸ್ಥಿತಿಯಾಗಿದ್ದು, ಕೋವಿಡ್ -19 ಗುಣಮುಖ ದರ  58.13 % ಆಗಿದೆ.

ಗುಣಮುಖ ದರದಲ್ಲಿ ಉನ್ನತ ಸ್ಥಾನದಲ್ಲಿರುವ 15 ರಾಜ್ಯಗಳು ಕೆಳಗಿನಂತಿವೆ:

Sr.

No.

State/UT

Recovery Rate

1

ಮೇಘಾಲಯ

89.1%

2

ರಾಜಸ್ಥಾನ

78.8%

3

ತ್ರಿಪುರಾ

78.6%

4

ಚಂಡೀಗಢ

77.8%

5

ಮಧ್ಯಪ್ರದೇಶ

76.4%

6

ಬಿಹಾರ

75.6%

7

ಅಂಡಮಾನ್ ಮತ್ತು ನಿಕೋಬಾರ್

72.9%

8

ಗುಜರಾತ್

72.8%

9

ಜಾರ್ಖಂಡ

70.9%

10

ಛತ್ತೀಸ್ ಗಢ

70.5%

11

ಒಡಿಶಾ

69.5%

12

ಉತ್ತರಾಖಂಡ

65.9%

13

ಪಂಜಾಬ್

65.7%

14

ಉತ್ತರ ಪ್ರದೇಶ

65.0%

15

ಪಶ್ಚಿಮ ಬಂಗಾಲ

65.0%

 

ಕೋವಿಡ್ -19 ಕುರಿತ ಸಚಿವರ ತಂಡದ 17 ನೇ ಸಭೆಯ ಅಧ್ಯಕ್ಷತೆ  ವಹಿಸಿದ ಡಾ. ಹರ್ಷವರ್ಧನ್

ಕೋವಿಡ್ -19 ಕುರಿತ ಉನ್ನತಾಧಿಕಾರದ ಸಚಿವರ ತಂಡದ (ಜಿ..ಎಂ.) 17 ನೇ ಸಭೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ಪ್ರಸ್ತುತ ಎಂಟು ರಾಜ್ಯಗಳು (ಮಹಾರಾಷ್ಟ್ರ , ತಮಿಳುನಾಡು, ದಿಲ್ಲಿ, ತೆಲಂಗಾಣ, ಗುಜರಾತ್, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಮತ್ತು ಪಶ್ಚಿಮ ಬಂಗಾಳ ) ಸಕ್ರಿಯ ಪ್ರಕರಣಗಳ 85.5 % ನಷ್ಟು ಒತ್ತಡವನ್ನು ಅನುಭವಿಸುತ್ತಿವೆ. ಮತ್ತು ಭಾರತದಲ್ಲಿ ಸಂಭವಿಸಿದ ಒಟ್ಟು ಸಾವುಗಳ ಪೈಕಿ 87 % ರಾಜ್ಯಗಳಲ್ಲಿ ಸಂಭವಿಸಿವೆ, ಎಂದು ಜಿ..ಎಂ.ಗೆ ತಿಳಿಸಲಾಯಿತು. .ಸಿ.ಎಂ.ಆರ್. ಮಹಾನಿರ್ದೇಶಕ ಡಾ. ಭಾರ್ಗವ ಅವರು ವಿವಿಧ ಪರೀಕ್ಷಾ ವಿಧಾನಗಳ ಮೂಲಕ ದೈನಿಕ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿರುವ ಕುರಿತು ವಿವರಿಸಿದರು. ಕಳೆದ 24 ಗಂಟೆಗಳಲ್ಲಿ ಪರೀಕ್ಷೆ ಮಾಡಲಾದ ಸ್ಯಾಂಪಲ್ ಗಳ ಸಂಖ್ಯೆ 2,20,479 ಕ್ಕೇರಿದೆ, ಇದರೊಂದಿಗೆ ಒಟ್ಟು ಪರೀಕ್ಷೆಗಳ ಸಂಖ್ಯೆ ಇಂದಿನವರೆಗೆ 79,96,707 ಆಗಿದೆ. ಭಾರತವು ಈಗ ಕೋವಿಡ್ -19  ಕ್ಕಾಗಿಯೇ ಇರುವ 1026 ರೋಗಪತ್ತೆ ಪ್ರಯೋಗಾಲಯಗಳನ್ನು ಹೊಂದಿದೆ. 2020 ಜೂನ್ 27 ರವರೆಗೆ ಕೋವಿಡ್ ಗಾಗಿಯೇ ಮೀಸಲಾಗಿರುವ 1039 ಆಸ್ಪತ್ರೆಗಳಿವೆ ಎಂಬುದಾಗಿ ಜಿ..ಎಂ.ಗೆ ತಿಳಿಸಲಾಯಿತು. ಅಲ್ಲಿ  1,76,275 ಐಸೋಲೇಶನ್ ಹಾಸಿಗೆಗಳಿವೆ. 22,940 .ಸಿ.ಯು. ಹಾಸಿಗೆಗಳಿವೆ. ಮತ್ತು 77,268 ಆಮ್ಲಜನಕ ಬೆಂಬಲಿತ ಹಾಸಿಗೆಗಳಿವೆ. 2,398 ಕೋವಿಡ್ ಗಾಗಿಯೇ ಪ್ರತ್ಯೇಕ ಆರೋಗ್ಯ ಕೇಂದ್ರಗಳಿವೆ ಮತ್ತು ಇವುಗಳಲ್ಲಿ 1,39,483 ಐಸೋಲೇಶನ್ ಹಾಸಿಗೆಗಳಿವೆ. 11,539 .ಸಿ.ಯು. ಹಾಸಿಗೆಗಳಿವೆ.ಮತ್ತು  51,321 ಆಮ್ಲಜನಕ ಬೆಂಬಲಿತ ಹಾಸಿಗೆಗಳಿವೆ. ಇವೆಲ್ಲವೂ ಕಾರ್ಯಾಚರಿಸುವ ಸ್ಥಿತಿಯಲ್ಲಿವೆಇವಲ್ಲದೆ 8,958 ಕೋವಿಡ್ ಶುಶ್ರೂಷಾ ಕೇಂದ್ರಗಳು 8,10,621 ಹಾಸಿಗೆಗಳನ್ನು ಹೊಂದಿದ್ದು, ದೇಶದಲ್ಲಿ ಕೋವಿಡ್ -19  ವಿರುದ್ದದ ಹೋರಾಟಕ್ಕೆ ಲಭ್ಯ ಇವೆ.

ದಿಲ್ಲಿಯಲ್ಲಿ ಕೋವಿಡ್ ನಿರ್ವಹಣೆ ಪ್ರಯತ್ನಗಳಿಗೆ  ಕೇಂದ್ರದ ಒತ್ತಾಸೆ

ಕೇಂದ್ರ ಸರಕಾರವು ದಿಲ್ಲಿಯ ಎನ್.ಸಿ.ಟಿ.ಗೆ ಸಾಕಷ್ಟು ಪೂರಕ ಬೆಂಬಲವನ್ನು ಕೋವಿಡ್ -19 ನಿಭಾವಣೆ ಮತ್ತು ನಿಯಂತ್ರಣಕ್ಕಾಗಿ ನೀಡುತ್ತಿದೆ. .ಸಿ.ಎಂ.ಆರ್. 4.7 ಲಕ್ಷ ಆರ್.ಟಿ-ಪಿ.ಸಿ.ಆರ್. ಪರೀಕ್ಷೆಗಳನ್ನು ನಡೆಸುವುದಕ್ಕೆ ರೋಗಪತ್ತೆ ಸಲಕರಣೆಗಳನ್ನು ಒದಗಿಸಿದೆ. ಅದು ಪರೀಕ್ಷೆ ನಡೆಸಲು ಅವಶ್ಯ ಇರುವ 1.57 ಲಕ್ಷ ಆರ್.ಎನ್..ಹೊರತೆಗೆಯುವಿಕೆ ಕಿಟ್ ಗಳನ್ನು ಮತ್ತು 2.48  ಲಕ್ಷ ವಿ.ಟಿ.ಎಂ. ಗಳನ್ನು ಮತ್ತು ಗಂಟಲು ದ್ರವ ಹೊರತೆಗೆಯುವ ವಸ್ತುಗಳನ್ನು ಕೋವಿಡ್ -19  ಸ್ಯಾಂಪಲ್ ಗಳ ಸಂಗ್ರಹಕ್ಕಾಗಿ ಪೂರೈಸಿದೆ.

ದಿಲ್ಲಿಯ ಎನ್.ಸಿ.ಟಿ. ಯಲ್ಲಿ ಕೋವಿಡ್ ಹರಡುವಿಕೆ ನಿಯಂತ್ರಣ ಕ್ರಮಗಳನ್ನು  ಉತ್ತೇಜಿಸುವುದಕ್ಕಾಗಿ ದಿಲ್ಲಿಯ ಛತ್ತಾರ್ ಪುರದಲ್ಲಿರುವ ರಾಧಾ ಸೋಮಿ ಸತ್ಸಂಗ ಬಿಯಾಸ್ ನಲ್ಲಿ 10,000  ಹಾಸಿಗೆಗಳ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರವನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಕೇಂದ್ರದ ಎಲ್ಲಾ ಕಾರ್ಯಾಚರಣಾ ಅವಶ್ಯಕತೆಗಳ ಹೊಣೆಗಾರಿಕೆಯನ್ನು  , ಅವಶ್ಯ ಸಂಖ್ಯೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳ ಒದಗಣೆಯನ್ನು ಸಹಿತವಾಗಿ ಕೇಂದ್ರೀಯ ಸಶಸ್ತ್ರ ಪಡೆಗಳಿಗೆ (ಸಿ..ಪಿ.ಎಫ್.ಗಳಿಗೆ ) ನೀಡಲಾಗಿದೆ. ಇದರಲ್ಲಿ ಭಾರತ ಟಿಬೇಟ್ ಗಡಿ ಪೊಲೀಸ್  (.ಟಿ.ಬಿ.ಪಿ.) ಮುಂಚೂಣಿ  ಪಾತ್ರವನ್ನು ವಹಿಸಲಿದೆ. ಸುಮಾರು 2,000  ಹಾಸಿಗೆಗಳನ್ನು ಕಾರ್ಯಾಚರಣಾ ಸ್ಥಿತಿಯಲ್ಲಿಡಲಾಗಿದೆ. ಡಿ.ಆರ್.ಡಿ.. 1000  ಹಾಸಿಗೆಗಳ ಹೊಸ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದು, ಸೇನೆಯ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು ಇದನ್ನು ನಿರ್ವಹಿಸಲಿದ್ದಾರೆ. ಧೌಲಕೌನ್ ಬಳಿಯಲ್ಲಿ ಇದು ಮುಂದಿನ ವಾರದಿಂದ ಕಾರ್ಯಾರಂಭ ಮಾಡಲಿದೆ. ಭಾರತ ಸರಕಾರವು ಕೇಂದ್ರ ಮಟ್ಟದಲ್ಲಿ 11.11 ಲಕ್ಷ ಎನ್-95 ಮುಖಗವಸುಗಳನ್ನು, 6.81 ಲಕ್ಷ ಪಿ.ಪಿ.. ಕಿಟ್ ಗಳು, 44.80  ಲಕ್ಷ ಎಚ್.ಸಿ.ಕ್ಯು. ಮಾತ್ರೆಗಳನ್ನು ದಿಲ್ಲಿಯಲ್ಲಿ ಖರೀದಿ ಮಾಡಿ ವಿತರಣೆ ಮಾಡಿದೆ.  ದಿಲ್ಲಿಗೆ 425 ವೆಂಟಿಲೇಟರುಗಳನ್ನು ಮಂಜೂರು ಮಾಡಲಾಗಿದ್ದು, ಎಲ್ಲವನ್ನೂ ಜಿ.ಎನ್.ಸಿ.ಟಿ. ವಿವಿಧ  ಆಸ್ಪತ್ರೆಗಳಿಗೆ  ಪೂರೈಕೆ ಮಾಡಲಾಗಿದೆ. ದಿಲ್ಲಿಯಲ್ಲಿ ಕೋವಿಡ್ -19 ಕ್ಕಾಗಿಯೇ 34 ಆಸ್ಪತ್ರೆಗಳು ( ಡಿ.ಸಿ.ಎಚ್.) , 4 ಕೋವಿಡ್ ಗಾಗಿಯೇ ಇರುವ ಕೋವಿಡ್ ಆರೋಗ್ಯ ಕೇಂದ್ರಗಳು ( ಡಿ.ಸಿ.ಎಚ್.ಸಿ..) , 24 ಕೋವಿಡ್ ಕೇಂದ್ರಗಳು (ಡಿ.ಸಿ.ಸಿ.ಸಿ.) ಗಳು ಕೋವಿಡ್ -19  ರೋಗಿಗಳನ್ನು ಅವರ ಪರಿಸ್ಥಿತಿಗೆ ಅನುಗುಣವಾಗಿ ಚಿಕಿತ್ಸೆ ನೀಡುವುದಕ್ಕಾಗಿ ಇವೆ.

ಕೋವಿಡ್ -19 ಪ್ರಕರಣಗಳ ನಿರ್ವಹಣೆಗೆ ಸಕಾಲಿಕಗೊಳಿಸಿದ ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರವನ್ನು ಹೊರಡಿಸಿದ ಕೇಂದ್ರ ಆರೋಗ್ಯ ಸಚಿವಾಲಯ.

ಕೋವಿಡ್-19 ಕ್ಕೆ ಸಂಬಂಧಿಸಿ ಲಭ್ಯವಾಗುತ್ತಿರುವ ಮಾಹಿತಿಗಳ ವೇಗವನ್ನು ಅನುಸರಿಸಿಕೊಂಡು ಅದರಲ್ಲೂ ಪರಿಣಾಮಕಾರಿ ಔಷಧಿಯ ವಿಷಯಗಳನ್ನು ಗಮನಕ್ಕೆ ತೆಗೆದುಕೊಂಡು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಕೋವಿಡ್ -19 ಪ್ರಕರಣಗಳ ನಿರ್ವಹಣೆಗಾಗಿ ಸಕಾಲಿಕಗೊಳಿಸಿದ ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರಗಳನ್ನು ಬಿಡುಗಡೆ ಮಾಡಿದೆ. ಸಕಾಲಿಕಗೊಳಿಸಿದ ಶಿಷ್ಟಾಚಾರಗಳು ಸಾಮಾನ್ಯ ಮತ್ತು ಗಂಭೀರ ಕೋವಿಡ್ -19 ಪ್ರಕರಣಗಳನ್ನು ನಿಭಾಯಿಸಲು ಮಿಥೈಲ್ ಪ್ರೆಡ್ ನಿಸೊಲೋನ್ ಗೆ ಪರ್ಯಾಯವಾಗಿ ಡೆಕ್ಸಾಮಿಥಾಸೋನ್ ಬಳಕೆಗೆ ಸಲಹೆ ಮಾಡಿರುವುದನ್ನೂ ಒಳಗೊಂಡಿವೆ. ಇತ್ತೀಚಿನ ಲಭ್ಯ ಸಾಕ್ಷಾಧಾರಗಳು ಮತ್ತು ತಜ್ಞರ ಸಲಹೆಗಳ ಮೇರೆಗೆ ಬದಲಾವಣೆಯನ್ನು ಮಾಡಲಾಗಿದೆ.

ರೆವೆರೆಂಡ್ ಡಾ. ಜೋಸೆಫ್ ಮಾರ್ ಥೋಮಾ ಮೆಟ್ರೋಪಾಲಿಟನ್ ಅವರ 90 ನೇ ಜನ್ಮವರ್ಷಾಚರಣೆಯನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ: ಕೊರೋನಾ ವಾರಿಯರ್ಸ್ ಗಳ ಬೆಂಬಲದಿಂದ  ಭಾರತವು ಕೋವಿಡ್ -19 ವಿರುದ್ದ ದೃಢವಾಗಿ ಹೋರಾಡುತ್ತಿದೆ , ಎಂದು ಪ್ರಧಾನಿ ಹೇಳಿಕೆ

ಭಾರತವು ಸದಾ ಹಲವು ಮೂಲಗಳಿಂದ ಆಧ್ಯಾತ್ಮಿಕ ಪ್ರಭಾವವನ್ನು ಮುಕ್ತವಾಗಿ ಸ್ವೀಕರಿಸಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಡಾ. ಜೋಸೆಫ್ ಮಾರ್ ಥೋಮಾ ಅವರ ವಿನಯ ಎಂಬುದು ಉತ್ಕೃಷ್ಟ ಮೌಲ್ಯ, ಅದು ಸದಾ ಉತ್ತಮ ಕಾರ್ಯಗಳ ಫಲವನ್ನು ಒದಗಿಸುತ್ತದೆಎಂಬ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು ವಿನಯದ ಸ್ಪೂರ್ತಿಯೊಂದಿಗೆ ಮಾರ್ ಥೋಮಾ ಚರ್ಚ್ ನಮ್ಮ ಭಾರತೀಯ ಸಹಚರರ ಬದುಕಿನಲ್ಲಿ ಮತ್ತು ಅದರಲ್ಲೂ ವಿಶೇಷವಾಗಿ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ವಲಯದಲ್ಲಿ ಧನಾತ್ಮಕ ಬದಲಾವಣೆಯನ್ನು ತರಲು ಕಾರಣಕರ್ತವಾಗಿದೆ ಎಂದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಾರ್ ಥೋಮಾ ಚರ್ಚ್ ಪ್ರಮುಖ ಪಾತ್ರವನ್ನು ವಹಿಸಿದೆ ಮತ್ತು ಅದು ರಾಷ್ಟ್ರೀಯ ಸಮಗ್ರತೆಯ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದೆ ಎಂದರು. ಕೋವಿಡ್ -19  ಬರೇ ದೈಹಿಕ ಖಾಯಿಲೆ ಮಾತ್ರವಲ್ಲ, ಅದು ಜನತೆಯ ಜೀವನಕ್ಕೆ ಬೆದರಿಕೆ ಮತ್ತು ಅದು ನಮ್ಮ ಅನಾರೋಗ್ಯಕರ ಜೀವನ ವಿಧಾನದತ್ತ ನಮ್ಮ  ಗಮನವನ್ನು ಸೆಳೆಯುತ್ತದೆ ಎಂದರು. ಜಾಗತಿಕ ಸಾಂಕ್ರಾಮಿಕವು ಇಡೀ ಮಾನವ ಕುಲಕ್ಕೆ ಚೇತರಿಕೆ ಅವಶ್ಯ ಎಂಬ ಅಭಿಪ್ರಾಯವನ್ನು ನೀಡುತ್ತದೆ  ಎಂದರಲ್ಲದೆ ನಮ್ಮ ಭೂಗ್ರಹದಲ್ಲಿ  ಸಂತೋಷ ಮತ್ತು ಸೌಹಾರ್ದತೆಯನ್ನು ಇನ್ನಷ್ಟು ವಿಸ್ತರಿಸಲು ಅವಶ್ಯವಾದ ಎಲ್ಲವನ್ನೂ ಮಾಡಲು ಸಭಿಕರಿಗೆ ಕರೆ ನೀಡಿದರು. ಕೊರೋನಾ ವಾರಿಯರ್ಸ್ ಗಳ ಶ್ರಮ ಮತ್ತು ಬೆಂಬಲದಿಂದಾಗಿ ಭಾರತವು ಕೋವಿಡ್ -19  ವಿರುದ್ದ ದೃಢ ಹೋರಾಟ ಮಾಡುತ್ತಿದೆ ಎಂದೂ ಅವರು ಹೇಳಿದರು.

ಸಂಕೀರ್ಣ ಮಹತ್ವದ 200  ರೈಲ್ವೇ ನಿರ್ವಹಣಾ ಯೋಜನೆಗಳು ಕೋವಿಡ್ -19 ಲಾಕ್ ಡೌನ್ ಅವಧಿಯಲ್ಲಿ ಪೂರ್ಣ

ಭಾರತೀಯ ರೈಲ್ವೇಯ ಹಿನ್ನೆಲೆಯಲ್ಲಿ ದುಡಿಯುತ್ತಿರುವ ವಾರಿಯರ್ ಗಳು ಕೋವಿಡ್ -19  ಜಾಗತಿಕ ಸಾಂಕ್ರಾಮಿಕದ ಕಾರಣದಿಂದಾಗಿ ಪ್ರಯಾಣಿಕ ರೈಲುಗಳ ಸಂಚಾರ ಸ್ಥಗಿತಗೊಂಡ ಅವಧಿಯನ್ನು ಅವಕಾಶವಾಗಿ ಬಳಸಿಕೊಂಡು ಯಾರ್ಡ್ ಮರು ನವೀಕರಣ, ದುರಸ್ತಿ ಮತ್ತು ಹಳೆಯ ಸೇತುವೆಗಳ ಗರ್ಡರ್ ಗಳ ಮರುಜೋಡಣೆ, ದ್ವಿಪಥಗೊಳಿಸುವಿಕೆ ಮತ್ತು ರೈಲು ಮಾರ್ಗಗಳ ವಿದ್ಯುದ್ದೀಕರಣ ಮತ್ತು ಕತ್ತರಿ ಜೋಡಣೆಗಳ ಮರುನವೀಕರಣ ಸಹಿತ ಬಾಕಿಯುಳಿದಿದ್ದ ವಿವಿಧ ಸುಮಾರು 200 ಕ್ಕೂ ಅಧಿಕ ನಿರ್ವಹಣಾ ಕಾಮಗಾರಿಗಳನ್ನು ಯಶಸ್ವಿಯಾಗಿ ಅನುಷ್ಟಾನ ಮಾಡಿದರು. ಪೂರ್ಣಗೊಳ್ಳದೆ ಬಾಕಿಯಾಗಿದ್ದಂತಹ  ಇಂತಹ ಹಲವಾರು ಯೋಜನೆಗಳು ಭಾರತೀಯ ರೈಲ್ವೇಗೆ ಬಹಳ ಅಡ್ಡಿಯುಂಟು ಮಾಡುತ್ತಿದ್ದವು.

ಎಲ್ಲಾ ಅವಶ್ಯಕ ಸಾಮಗ್ರಿಗಳನ್ನು ಪೂರೈಸಲು ಪಾರ್ಸೆಲ್ ರೈಲು ಮತ್ತು ಸರಕು ಸಾಗಾಣಿಕೆ ರೈಲುಗಳ ಓಡಾಟ ಇದ್ದಾಗ್ಯೂ , ಪ್ರಯಾಣಿಕ ರೈಲುಗಳ ಓಡಾಟ ಇಲ್ಲದ ಲಾಕ್ ಡೌನ್ ಅವಧಿಯನ್ನು ಭಾರತೀಯ ರೈಲ್ವೇಯು ಧೀರ್ಘ ಕಾಲದಿಂದ ಬಾಕಿಯಾಗಿದ್ದ ನಿರ್ವಹಣಾ ಕಾಮಗಾರಿಗಳನ್ನು ಅನುಷ್ಟಾನಿಸಲು ಬಳಸಿಕೊಂಡಿತು.

ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯಿಂದ ಕೃಷಿ ಸುಧಾರಣೆಗಳು, ವ್ಯೂಹಾತ್ಮಕ ನೀತಿಗಳ ಸ್ಥಳಾಂತರ ಮತ್ತು ಹೂಡಿಕೆ ಅವಕಾಶಗಳನ್ನು ಕುರಿತ ವೆಬಿನಾರ್ ಆಯೋಜನೆ

ವೆಬಿನಾರ್ ಉದ್ದೇಶಿಸಿ ಮಾತನಾಡಿದ ಕೃಷಿ ಮತ್ತು ರೈತರ ಕಲ್ಯಾಣ ಕಾರ್ಯದರ್ಶಿ ಶ್ರೀ ಸಂಜಯ್ ಅಗರ್ವಾಲ್ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಉಂಟು ಮಾಡಿರುವ ಬಿಕ್ಕಟ್ಟಿನ ಸಮಯದಲ್ಲಿ ಭಾರತ ಸರಕಾರವು ಕೃಷಿ ವಲಯಕ್ಕೆ ಮತ್ತು ರೈತರ ಕಲ್ಯಾಣಕ್ಕೆ  ಸಂಬಂಧಿಸಿ ಕೈಗೊಂಡ ಕ್ರಾಂತಿಕಾರಿ , ಮತ್ತು ಉತ್ತಮ ಭವಿಷ್ಯವನ್ನು ರೂಪಿಸುವಂತಹ ಕಾರ್ಯಕ್ರಮಗಳನ್ನು ಕೊಂಡಾಡಿದರು. ಬಿಕ್ಕಟ್ಟಿನ ಅವಧಿಯಲ್ಲಿ  ಭಾರತೀಯ ರೈತರ ಸಾಮರ್ಥ್ಯ ಮತ್ತು ಉದ್ಯಮದ ಪ್ರಯತ್ನಗಳ ಫಲವಾಗಿ ಖಾರೀಫ್ ಬಿತ್ತನೆ ವರ್ಷ 316 ಲಕ್ಷ ಹೆಕ್ಟೇರ್ ಆಗಿದೆ, ಕಳೆದ ವರ್ಷ 154 ಲಕ್ಷ ಹೆಕ್ಟೇರ್  ಬಿತ್ತನೆ ಆಗಿತ್ತು. ಕಳೆದ ಐದು ವರ್ಷಗಳ ಸರಾಸರಿ 187 ಲಕ್ಷ ಹೆಕ್ಟೇರ್ ಎಂದರು. ಪಶುಸಂಗೋಪನೆಯಿಂದ ಹಿಡಿದು .ಟಿ.ಎಂ. ವರೆಗೆ ಹೋಲಿಕೆ ಮಾಡಿದ ಪಶು ಸಂಗೋಪನೆ ಮತ್ತು ಹೈನುಗಾರಿಕಾ ಕಾರ್ಯದರ್ಶಿ ಶ್ರೀ ಅತುಲ್ ಚತುರ್ವೇದಿ ಚಿಲ್ಲರೆ ಮಾರಾಟದಲ್ಲಿ ಹಾಲಿನಷ್ಟು ತ್ವರಿತವಾಗಿ ಮಾರಾಟವಾಗುವ ಉತ್ಪನ್ನ ಬೇರೆ ಇಲ್ಲ ಎಂದರು.

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ .

  • ಚಂಡೀಗಢ: ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಸಲಹೆಗಾರರು ಸಾಮಾಜಿಕ ಅಂತರ ಪಾಲನೆ ಮತ್ತು ಮುಖಗವಸುಗಳನ್ನು ಧರಿಸುವುದಕ್ಕೆ ಸಂಬಂಧಿಸಿ ಕಟ್ಟು ನಿಟ್ಟಿನ ಅನುಷ್ಟಾನ ಕ್ರಮಗಳನ್ನು ಕೈಗೊಳ್ಳಲು ಪೊಲೀಸು ಮತ್ತು ಇತರ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ. ಸುಖ್ನಾ ಸಹಿತ ಎಲ್ಲಾ ಮಾರುಕಟ್ಟೆ ಪ್ರದೇಶಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಧಿಡೀರ್ ತಪಾಸಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
  • ರಿಯಾ: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ್ ಚಿಂತನೆಯನ್ನು ಅನುಷ್ಟಾನ ಮಾಡುವ ನಿಟ್ಟಿನಲ್ಲಿ ಮುಂದಡಿ ಇಡುವ ಅಂಗವಾಗಿ ಹರ್ಯಾಣಾ ಸರಕಾರ ಪಾಣಿಪತ್ ನಲ್ಲಿ ಬೃಹತ್ ಔಷಧಿ ಪಾರ್ಕ್ ನಿರ್ಮಾಣ ಮಾಡಲು ಕ್ರಮ ವಹಿಸುತ್ತಿದೆ. 1000 ಎಕರೆ ಅಭಿವೃದ್ದಿಪಡಿಸಿದ ಕೈಗಾರಿಕಾ ಭೂಮಿಯನ್ನು ಭಾರತ ಸರಕಾರದ ಯೋಜನೆಯಾದ ಬೃಹತ್ ಔಷಧಿ ಪಾರ್ಕ್ ಗಳಿಗೆ ಉತ್ತೇಜನ ನೀಡುವುದಕ್ಕಾಗಿ ಅದು ಒದಗಿಸಲಿದೆ . ಪಾಣಿಪತ್ ನಲ್ಲಿಯ ಬೃಹತ್ ಔಷಧಿ ಪಾರ್ಕ್ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಔಷಧಿ ಉತ್ಪಾದನೆಯ ವೆಚ್ಚವನ್ನು ಕಡಿತ ಮಾಡಲಿದೆ ಮತ್ತು ಔಷಧಿಗಳಿಗೆ ಇತರ ರಾಷ್ಟ್ರಗಳ ಅವಲಂಬನೆಯನ್ನು ಕಡಿಮೆ ಮಾಡಲಿದೆ.
  • ಮಹಾರಾಷ್ಟ್ರ: ರಾಜ್ಯವು ಒಂದೇ ದಿನದಲ್ಲಿ 5,024 ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1.5 ಲಕ್ಷ ದಾಟಿ 1,52,765 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 65,829. ಮುಂಬಯಿಯಲ್ಲಿ 1,297 ಹೊಸ ಪ್ರಕರಣಗಳು ವರದಿಯಾಗಿವೆ. ಬಿ.ಎಂ.ಸಿ. ಯು ಮುಂಬಯಿ ಮಹಾನಗರದಲ್ಲಿ ಕೊರೊನಾವೈರಸ್ ಹರಡುವಿಕೆ ವ್ಯಾಪ್ತಿಯನ್ನು ತಿಳಿದುಕೊಳ್ಳಲು ಮೂರು ವಾರ್ಡ್ ಗಳಲ್ಲಿ ಸೀರೋ ಸಮೀಕ್ಷೆಯನ್ನು ಶೀಘ್ರವೇ ನಡೆಸಲಿದೆ. ಸಮೀಕ್ಷೆಯನ್ನು ನೀತಿ ಆಯೋಗ , ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ ಮತ್ತು ಇತರ ಕೆಲವು ಸಂಸ್ಥೆಗಳ ಸಹಾಯದೊಂದಿಗೆ ನಡೆಸಲಾಗುವುದು. ಕೊಳೆಗೇರಿ ಮತ್ತು ಕೊಳೆಗೇರಿ ರಹಿತ ಪ್ರದೇಶಗಳಿಂದ ಯಾದೃಚ್ಚಿಕವಾಗಿ ಸಂಗ್ರಹಿಸಿದ 10,000 ರಕ್ತದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲುವ್ ಅಗರ್ವಾಲ್ ನೇತೃತ್ವದಲ್ಲಿ ಕೇಂದ್ರೀಯ ತಂಡ ಇಂದು ಥಾಣೆಗೆ ಭೇಟಿ ನೀಡಿ ಅಲ್ಲಿ ಕೋವಿಡ್ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿತು.  
  • ಗುಜರಾತ್: ಇತ್ತೀಚಿನ ವರದಿಗಳ ಪ್ರಕಾರ ಗುಜರಾತಿನಲ್ಲಿ 590 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ಮತ್ತು 18 ಸಾವುಗಳು ಸಂಭವಿಸಿವೆ. ರಾಜ್ಯದಲ್ಲಿ ಒಟ್ಟು 30,158  ಕೋವಿಡ್ -19 ಪಾಸಿಟಿವ್ ಪ್ರಕರಣಗಳು ಇವೆ ಮತ್ತು ಸಾವಿನ ಸಂಖ್ಯೆ ಇದುವರೆಗೆ 1,722.
  • ರಾಜಸ್ಥಾನ: ಇಂದು 127 ಹೊಸ ಪ್ರಕರಣಗಳು ಮತ್ತು 9 ಸಾವುಗಳು ಸಂಭವಿಸುವುದರೊಂದಿಗೆ ರಾಜ್ಯದಲ್ಲಿ ಕೋವಿಡ್ -19 ಒಟ್ಟು ಸಂಖ್ಯೆ 16,787 ಕೇರಿದೆ. 13149 ರೋಗಿಗಳು ಗುಣಮುಖರಾಗಿದ್ದಾರೆ, ಇದುವರೆಗೆ 389 ಸಾವುಗಳು ಸಂಭವಿಸಿವೆ. ರಾಜ್ಯದಲ್ಲಿ ಪ್ರಸ್ತುತ 3249 ಸಕ್ರಿಯ ಪ್ರಕರಣಗಳಿವೆ.
  • ಮಧ್ಯ ಪ್ರದೇಶ: ರಾಜ್ಯದಲ್ಲಿ 203 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಕೋವಿಡ್ -19 ಪೀಡಿತರ ಸಂಖ್ಯೆ 12,798 ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,448.
  • ಛತ್ತೀಸ್ ಗಢ: ಛತ್ತೀಸ್ ಗಢದಲ್ಲಿ 89 ಹೊಸ ಪ್ರಕರಣಗಳು ಗುರುತಿಸಲ್ಪಟ್ಟಿವೆ. ರಾಜ್ಯ ರಾಜಧಾನಿ ರಾಯ್ಪುರದಲ್ಲಿ 39 ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 647.
  • ಗೋವಾ: ಶುಕ್ರವಾರ ರಾಜ್ಯದಲ್ಲಿ 44 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 1039 ಕ್ಕೇರಿದೆ. ರಾಜ್ಯದಲ್ಲಿ 667 ಸಕ್ರಿಯ ಪ್ರಕರಣಗಳಿವೆ
  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶ ಮುಖ್ಯಕಾರ್ಯದರ್ಶಿ ಅವರು ಕೋವಿಡ್ -19 ಕ್ಕೆ  ಸಂಬಂಧಿಸಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕೃಷಿ ಭೂಮಿ ಗುಂಪು/ ಪೋಷಕಾಂಶ ಗಾರ್ಡನ್ ಯೋಜನೆ , ಸ್ವಚ್ಚ ಹಸಿರು ಅರುಣಾಚಲ ಆಂದೋಲನ, ಜಿಲ್ಲೆಗಳಲ್ಲಿ ಸ್ವಚ್ಚತೆ ಮತ್ತು ಇತರ ವಿಷಯಗಳು ಚರ್ಚೆಯಾದವು.
  • ಅಸ್ಸಾಂ: ಪಲಾಸ್ ಬರಿಯ ಮಿರ್ಜಾದಲ್ಲಿರುವ ಪತಂಜಲಿ ಯೋಗಪೀಠದ ಕ್ವಾರಂಟೈನ್ ಕೇಂದ್ರವನ್ನು 250 ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಸರ್ಮಾ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
  • ಮಣಿಪುರ: ಕೋವಿಡ್ ಆಸ್ಪತ್ರೆಗಳು ಮತ್ತು ಶುಶ್ರೂಷಾ ಕೇಂದ್ರಗಳ ಸಮರ್ಪಕ ನಿರ್ವಹಣೆ ಕುರಿತಂತೆ ಕೋವಿಡ್ -19 ಕ್ಕಾಗಿರುವ ಮಣಿಪುರ ಸಲಹಾ ಸಮಿತಿಯ ಸಭೆ ಇಂದು  ನಡೆಯಿತು.
  • ಮಿಜೋರಾಂ: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಲಾಕ್ ಡೌನ್ ನಲ್ಲಿ ಮಿಜೋರಾಂ ಸರಕಾರ ಕೆಲವು ರಿಯಾಯತಿಗಳನ್ನು ಒದಗಿಸಿದೆ. ವಿಪಕ್ಷ ಝಡ್ .ಪಿ.ಎಂ. ಮಿಜೋರಾಂ ಸರಕಾರಕ್ಕೆ ಲಾಕ್ ಡೌನೋತ್ತರ ಯೋಜನೆಯನ್ನು ರೂಪಿಸುವಂತೆ ಕೋರಿದೆ.
  • ನಾಗಾಲ್ಯಾಂಡ್: ಅಂತಾರಾಷ್ಟ್ರೀಯ ಸಂಘಟನೆ , ..ಸಿ.ಡಿ. ಯು ಟಿ.ವಿ. , ರೇಡಿಯೋ ಮತ್ತು ಅಂತರ್ಜಾಲದ ಮೂಲಕ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಶಿಕ್ಷಣವನ್ನು ಖಾತ್ರಿಗೊಳಿಸಿದುದಕ್ಕಾಗಿ ನಾಗಾಲ್ಯಾಂಡನ್ನು ಶ್ಲಾಘಿಸಿದೆ. ನಾಗಾಲ್ಯಾಂಡಿನಲ್ಲಿ 12 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಎಲ್ಲಾ ಪ್ರಕರಣಗಳೂ ಮೋನ್ ಕ್ವಾರಂಟೈನ್ ಕೇಂದ್ರದಿಂದ ವರದಿಯಾದಂತಹವು.
  • ಕೇರಳ: ಕೇರಳ ಸರಕಾರವು ಭಾನುವಾರದ ಲಾಕ್ ಡೌನ್ ಜಾರಿಯನ್ನು ಹಿಂಪಡೆದಿದೆ. ಭಾನುವಾರದ ಸಂಪೂರ್ಣ ಲಾಕ್ ಡೌನ್ ನಿಂದಾಗಿ ವಿದೇಶಗಳಿಂದ ಮರಳುವ ಮತ್ತು ಹೊರರಾಜ್ಯಗಳಿಂದ ಆಗಮಿಸುವ ಜನರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ನಿರ್ಧಾರಕ್ಕೆ ಬರಲಾಗಿದೆ. ಆದರೆ ರಾತ್ರಿ ನಿರ್ಬಂಧಗಳು ಮುಂದುವರೆಯುತ್ತವೆ. ಮತ್ತು ರಾಜ್ಯದ ಕಂಟೈನ್ ಮೆಂಟ್ ವಲಯಗಳಲ್ಲಿ ಕಠಿಣ ನಿರ್ಬಂಧಗಳನ್ನು ಪೊಲೀಸರು ಜಾರಿ ಮಾಡಲಿದ್ದಾರೆ. ರಾಜ್ಯದಲ್ಲಿ ನಿನ್ನೆ 150 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1540 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
  • ತಮಿಳುನಾಡು: ಸಿಬ್ಬಂದಿಗಳು ಕೋವಿಡ್ ಪಾಸಿಟಿವ್ ಆದ ಪರಿಣಾಮವಾಗಿ ಪುದುಚೇರಿ ಸಿ.ಎಂ.. ವನ್ನು ಎರಡು ದಿನಗಳ ಕಾಲ ಮುಚ್ಚಲಾಗಿದೆ. ಪುದುಚೇರಿಯಲ್ಲಿ ಇಂದು ಓರ್ವರು ಮೃತಪಟ್ಟಿದ್ದಾರೆ ಮತ್ತು 87 ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಕೋವಿಡ್ ನಿಂದಾಗಿ ರಾಜ್ಯದ ಹಣಕಾಸು ಕೊರತೆ 85,000 ಕೋ.ರೂ,ಗಳಷ್ಟಾಗಬಹುದು ಎಂದು ತಮಿಳುನಾಡು ಮುಖ್ಯಮಂತ್ರಿ ಅಂದಾಜಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಇಂದು ಬಿಡುಗಡೆಯಾದ ೧೮ ಮಂದಿ ಸಹಿತ ಒಟ್ಟು 221 ಮಂದಿ ರೋಗಿಗಳು ಗುಣಮುಖರಾಗಿದ್ದಾರೆ. ಡಿ.ಎಂ.ಕೆ. ಇನ್ನೋರ್ವ ಶಾಸಕರು ಕೊರೊನಾವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ನಿನ್ನೆ 46 ಮಂದಿ ಮೃತಪಟ್ಟಿದ್ದಾರೆ. 1348 ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ. ಮತ್ತು 3645 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು : 74622, ಸಕ್ರಿಯ ಪ್ರಕರಣಗಳು: 32305, ಸಾವುಗಳು: 957, ಚೆನ್ನೈಯಲ್ಲಿ ಸಕ್ರಿಯ ಪ್ರಕರಣಗಳು: 20136
  • ಕರ್ನಾಟಕ: ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳದಿಂದಾಗಿ , ಬರಲಿರುವ ದಿನಗಳಲ್ಲಿ ಹಾಸಿಗೆಗಳ ಆವಶ್ಯಕತೆಯ ಬಗ್ಗೆ ನೀಲನಕ್ಷೆಯನ್ನು ತಯಾರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ತಜ್ಞರ ಸಮಿತಿಯು ಕೋವಿಡ್ ಮರಣ ಪ್ರಮಾಣವನ್ನು ತಗ್ಗಿಸಲು ಕೋವಿಡ್ ಮಾರ್ಗದರ್ಶಿಗಳನ್ನು ಪರಿಷ್ಕರಿಸಲು ಸರಕಾರಕ್ಕೆ ಸಲಹೆ  ನೀಡಿದೆ. ನಿನ್ನೆ  10 ಮಂದಿ ಮೃತಪಟ್ಟಿದ್ದಾರೆ, 246 ಮಂದಿ ಬಿಡುಗಡೆಯಾಗಿದ್ದಾರೆ, 445 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ : 11005, ಸಕ್ರಿಯ ಪ್ರಕರಣಗಳ ಸಂಖ್ಯೆ : 3905, ಸಾವುಗಳು: 180, ಬಿಡುಗಡೆಯಾದವರು: 6916.
  • ಆಂಧ್ರ ಪ್ರದೇಶ: ಒಂದು ವಾರದ ಅಂತರದಲ್ಲಿ ಆಡಳಿತ ಪಕ್ಷದ ಇಬ್ಬರು ಶಾಸಕರು ಕೊರೊನಾವೈರಸ್ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನಪ್ರತಿನಿಧಿಗಳು ಜನರನ್ನು ಭೇಟಿಯಾಗುವ ಸಂದರ್ಭದಲ್ಲಿ ಜಾಗೃತಿ ವಹಿಸುತ್ತಿದ್ದಾರೆ. ದೇವಾಲಯಗಳ ನಗರಿ ಶ್ರೀ ಕಾಳಹಸ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಹೆಚ್ಚಳದಿಂದಾಗಿ ಮುನ್ಸಿಪಲ್ ಅಧಿಕಾರಿಗಳು ಭಾನುವಾರದಿಂದ ಮತ್ತೆ ಲಾಕ್ ಡೌನ್ ಅನುಷ್ಟಾನಿಸುವಂತಾಗಿದೆ ಮತ್ತು ವ್ಯಾಪಾರದ ಸಮಯವನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಎಂದು ನಿಗದಿ ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ 24,458 ಸ್ಯಾಂಪಲ್ ಗಳ ಪರೀಕ್ಷೆಯ ಬಳಿಕ 796 ಹೊಸ ಪ್ರಕರಣಗಳು.  263 ಮಂದಿ ಗುಣಮುಖರಾಗಿ ಬಿಡುಗಡೆಯಾದ  ಪ್ರಕರಣಗಳು ಮತ್ತು 11 ಸಾವುಗಳು ವರದಿಯಾಗಿವೆ. 796 ಪ್ರಕರಣಗಳಲ್ಲಿ 51 ಪ್ರಕರಣಗಳು ಅಂತಾರಾಜ್ಯ ಪ್ರಕರಣಗಳು. ಮತ್ತು ಐದು ಪ್ರಕರಣಗಳು ವಿದೇಶದಿಂದ ಬಂದಂತಹವು. ಒಟ್ಟು ಪ್ರಕರಣಗಳು : 12,285,  ಸಕ್ರಿಯ ಪ್ರಕರಣಗಳು : 6648, ಗುಣಮುಖರಾದವರು; 5480, ಸಾವುಗಳು: 157.
  • ತೆಲಂಗಾಣ: ರಾಜ್ಯ ಸರಕಾರವು ತರಗತಿಗಳನ್ನು ನಡೆಸದಂತೆ, ಆನ್ ಲೈನ್ ತರಗತಿಗಳನ್ನು ಕೂಡಾ ನಡೆಸದಂತೆ ಮತ್ತು ಶುಲ್ಕವನ್ನು ಸಂಗ್ರಹಿಸದಂತೆ ಶಾಲೆಗಳಿಗೆ ಸೂಚನೆ ನೀಡಿದೆ. ತೆಲಂಗಾಣ ಶಾಲಾ ಶಿಕ್ಷಣ ಇಲಾಖೆ 2020-21 ಶೈಕ್ಷಣಿಕ ವರ್ಷ ಮತ್ತು ಆನ್ ಲೈನ್ ಶಿಕ್ಷಣ ತರಗತಿಗಳಿಗೆ ಸಂಬಂಧಿಸಿ ಇನ್ನಷ್ಟೇ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿದೆ. ಇದುವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ : 12349, ಸಕ್ರಿಯ ಪ್ರಕರಣಗಳು: 7436, ಗುಣಮುಖರಾದವರು 4766.

ವಾಸ್ತವ ಪರಿಶೀಲನೆ

***

 



(Release ID: 1636017) Visitor Counter : 176