ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಮತ್ತು ಮೊಜಾಂಬಿಕ್ ಅಧ್ಯಕ್ಷ ಘನತೆವೆತ್ತ ಫಿಲಿಪಿ ಜಸಿಂಟೋ ನ್ಯೂಸಿ ಅವರ ನಡುವೆ ದೂರವಾಣಿ ಸಂಭಾಷಣೆ

Posted On: 03 JUN 2020 7:32PM by PIB Bengaluru

ಪ್ರಧಾನಮಂತ್ರಿ ಮತ್ತು ಮೊಜಾಂಬಿಕ್ ಅಧ್ಯಕ್ಷ ಘನತೆವೆತ್ತ ಫಿಲಿಪಿ ಜಸಿಂಟೋ ನ್ಯೂಸಿ ಅವರ ನಡುವೆ ದೂರವಾಣಿ ಸಂಭಾಷಣೆ

 

ಪ್ರಧಾನಮಂತ್ರಿ ಅವರಿಂದು ದೂರವಾಣಿಯ ಮೂಲಕ ಮೊಜಾಂಬಿಕ್ ಅಧ್ಯಕ್ಷ ಫಿಲಿಪಿ ಜಸಿಂಟೋ ನ್ಯೂಸಿ ಅವರೊಂದಿಗೆ ಸಂಭಾಷಣೆ ನಡೆಸಿದರು.

ಇಬ್ಬರೂ ನಾಯಕರು ಎರಡೂ ದೇಶಗಳಲ್ಲಿ ಮುಂದುವರಿದ ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಎದುರಾಗಿರುವ ಸವಾಲುಗಳ ಬಗ್ಗೆ ಚರ್ಚಿಸಿದರು. ಪ್ರಧಾನಮಂತ್ರಿಯವರು ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅಗತ್ಯ ಔಷಧಿಗಳು ಮತ್ತು ಉಪಕರಣಗಳನ್ನು ಒದಗಿಸುವುದೂ ಸೇರಿದಂತೆ.ಮೊಜಾಂಬಿಕ್ ಗೆ ಬೆಂಬಲ ನೀಡುವ ಭಾರತದ ಇಂಗಿತವನ್ನು ಪ್ರಧಾನಿ ವ್ಯಕ್ತಪಡಿಸಿದರು. ಅಧ್ಯಕ್ಷ ನ್ಯೂಸಿ ಅವರು ಆರೋಗ್ಯ ಮತ್ತು ಔಷಧ ಪೂರೈಕೆ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವಿನ ಆಪ್ತ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಬ್ಬರೂ ನಾಯಕರು, ಮೊಜಾಂಬಿಕ್ ನಲ್ಲಿ ಭಾರತದ ಹೂಡಿಕೆ ಮತ್ತು ಅಭಿವೃದ್ಧಿ ಯೋಜನೆ ಸೇರಿದಂತೆ ಇತರ ಮಹತ್ವದ ವಿಚಾರಗಳ ಬಗ್ಗೆಯೂ ಚರ್ಚಿಸಿದರು. ಮೊಜಾಂಬಿಕ್ ಆಫ್ರಿಕಾದೊಂದಿಗಿನ ಭಾರತದ ಒಟ್ಟಾರೆ ಸಹಭಾಗಿತ್ವದ ಪ್ರಮುಖ ಆಧಾರಸ್ತಂಭವಾಗಿದೆ ಎಂದು ಪ್ರಧಾನಿ ಗುರುತಿಸಿದರುಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲ ಕ್ಷೇತ್ರಗಳಲ್ಲಿ ಭಾರತೀಯ ಕಂಪನಿಗಳ ದೊಡ್ಡ ಬದ್ಧತೆಯನ್ನು ಗಮನಿಸಿದರು.

ರಕ್ಷಣೆ ಮತ್ತು ಭದ್ರತೆಯಲ್ಲಿ ದ್ವಿಪಕ್ಷೀಯ ಸಹಕಾರ ವೃದ್ಧಿಸುತ್ತಿರುವುದಕ್ಕೆ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು.  ಉತ್ತರ ಮೊಜಾಂಬಿಕ್ ನಲ್ಲಿನ ಭಯೋತ್ಪಾದಕ ಘಟನೆಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷ, ನ್ಯೂಸಿ ಅವರ ಕಳಕಳಿಯನ್ನು ಪ್ರಧಾನಿ ಹಂಚಿಕೊಂಡರು, ಮೊಜಾಂಬಿಕ್ ಪೊಲೀಸರು ಮತ್ತು ಭದ್ರತಾ ಪಡೆಗಳ ಸಾಮರ್ಥ್ಯವರ್ಧನೆ ಸೇರಿದಂತೆ ಎಲ್ಲ ಸಾಧ್ಯ ಬೆಂಬಲ ನೀಡುವುದಾಗಿ ತಿಳಿಸಿದರು.  

ಮೊಜಾಂಬಿಯಾದ ಪ್ರಾಧಿಕಾರಗಳು ಮೊಜಾಂಬಿಯಾದಲ್ಲಿರುವ ಭಾರತೀಯ ಮೂಲದವರ ಮತ್ತು ಭಾರತೀಯರ ಸುರಕ್ಷತೆ ಮತ್ತು ಭದ್ರತೆ ಖಾತ್ರಿ ಪಡಿಸಲು ಮಾಡಿರುವ ಪ್ರಯತ್ನಗಳಿಗೆ ಪ್ರಧಾನಿ ವಿಶೇಷ ಧನ್ಯವಾದ ಅರ್ಪಿಸಿದರು.

ಇಬ್ಬರೂ ನಾಯಕರು ಎರಡೂ ದೇಶಗಳ ಅಧಿಕಾರಿಗಳು ಪ್ರಸಕ್ತ ಸಾಂಕ್ರಾಮಿಕದ ಸಂದರ್ಭದಲ್ಲಿ ಮುಂದಿನ ಸಹಕಾರ ಮತ್ತು ಬೆಂಬಲದ ಮಾರ್ಗೋಪಾಯಗಳ ಕುರಿತಂತೆ ನಿರಂತರ ಸಂಪರ್ಕದಲ್ಲಿರಲು ಸಮ್ಮತಿಸಿದರು.

***


(Release ID: 1629544) Visitor Counter : 250